ಮೈಸೂರು

ಸದ್ಯ, ಮೈಸೂರಿನತ್ತ ಮುಖ ಮಾಡುತ್ತಿದ್ದಾರೆ ಪ್ರವಾಸಿಗರು!

December 9, 2020

ಮೈಸೂರು, ಡಿ.8(ಆರ್‍ಕೆ)-ಇಡೀ ವಿಶ್ವ ವನ್ನೇ ತಲ್ಲಣಗೊಳಿಸಿರುವ ಕೋವಿಡ್-19 ಮಹಾಮಾರಿ ಸೋಂಕಿನಿಂದಾಗಿ ಕಳೆದ 10 ತಿಂಗಳಿಂದ ನೆಲಕಚ್ಚಿದ್ದ ಮೈಸೂರಿನ ಪ್ರವಾಸೋದ್ಯಮವು ಇದೀಗ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ.

ಕೋವಿಡ್-19 ನಿರ್ಬಂಧ ಸಡಿಲ ಮಾಡಿದ ನಂತರ ಕೊರೊನಾ ಸೋಂಕಿನ ಪ್ರಮಾಣ ಹೆಚ್ಚಾಗುತ್ತಿರುವುದರಿಂದ ಜನ ಜೀವನ ಸಹಜ ಸ್ಥಿತಿಗೆ ಬಾರದ ಕಾರಣ ಪ್ರವಾಸೋದ್ಯಮ ಚೇತರಿಸಿಕೊಂಡಿರಲಿಲ್ಲ. ಇದೀಗ ಕಳೆದ 15 ದಿನಗಳಿಂದ ಮೈಸೂ ರಲ್ಲಿ ಕೋವಿಡ್ ಪಾಸಿಟಿವ್ ಪ್ರಕರಣ ಮತ್ತು ಸಾವಿನ ಸಂಖ್ಯೆ ಇಳಿಮುಖವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರವಾಸಿಗರು ಈಗ ಮೈಸೂ ರಿನತ್ತ ಮುಖ ಮಾಡಿದ್ದಾರೆ.

ಸಾಮಾನ್ಯವಾಗಿ ದಸರಾ ಮಹೋತ್ಸವದ ಸಂದರ್ಭ ಸುಮಾರು ಎರಡು ತಿಂಗಳು ಮೈಸೂರಿನ ಹೋಟೆಲ್, ರೆಸ್ಟೋರೆಂಟ್, ವಸತಿ ಗೃಹಗಳು ಹಾಗೂ ಪ್ರವಾಸಿ ತಾಣ ಗಳಲ್ಲಿ ಪ್ರವಾಸಿಗರಿಂದ ಅಧಿಕ ಆದಾಯ ಬರುತ್ತಿತ್ತು. ರೈಲು, ರಸ್ತೆ ಹಾಗೂ ವಾಯು ಸಾರಿಗೆಯಲ್ಲೂ ಹೆಚ್ಚಿನ ಬೇಡಿಕೆ ಇರುತ್ತಿತ್ತು. ಆದರೆ ಈ ಬಾರಿ ಸರಳ ಹಾಗೂ ಸಾಂಪ್ರ ದಾಯಿಕವಾಗಿ ದಸರಾ ಆಚರಿಸಿದ್ದರಿಂದಾಗಿ ಯಾವ ಉದ್ದಿಮೆಗೂ ವರಮಾನ ಬರಲಿಲ್ಲ.

ಕಳೆದ ಮಾರ್ಚ್ ತಿಂಗಳಿಂದ ಬಿಕೋ ಎನ್ನುತ್ತಿದ್ದ ಮೈಸೂರಿನ ಅಂಬಾವಿಲಾಸ ಅರಮನೆ, ಜಗನ್ಮೋಹನ ಅರಮನೆ, ಮೃಗಾ ಲಯ, ಕಾರಂಜಿ ಕೆರೆ ಉದ್ಯಾನ, ಚಾಮುಂಡಿ ಬೆಟ್ಟ, ನಂಜನಗೂಡಿನ ಶ್ರೀ ನಂಜುಂ ಡೇಶ್ವರ ದೇವಸ್ಥಾನಗಳಿಗೆ ಭಕ್ತಾದಿಗಳು ಹಾಗೂ ಪ್ರವಾಸಿಗರು ಭೇಟಿ ನೀಡ ಲಾರಂಭಿಸಿರುವುದು ಪ್ರವಾಸೋದ್ಯಮ ದಲ್ಲಿ ವಿಶ್ವಾಸ ಮೂಡಿಸಿದೆ.

ಪೂರ್ಣ ಪ್ರಮಾಣದಲ್ಲಿ ರೈಲು, ಬಸ್, ವಿಮಾನಗಳು ಓಡಾಡಲಾರಂಭಿಸಿದರೆ, ಟೂರ್ಸ್ ಅಂಡ್ ಟ್ರಾವೆಲ್ಸ್ ಉದ್ಯಮ ಸಕ್ರಿಯ ವಾದಲ್ಲಿ ಪ್ರವಾಸಿಗರು ಹೆಚ್ಚಿನ ಸಂಖ್ಯೆ ಯಲ್ಲಿ ಆಗಮಿಸುವ ನಿರೀಕ್ಷೆ ಇದೆ. ವಾರಾಂ ತ್ಯದ ಶನಿವಾರ ಮತ್ತು ಭಾನುವಾರ ಗಳಂದು ಮೈಸೂರಿಗೆ ಪ್ರವಾಸಿಗರು ಬರ ಲಾರಂಭಿಸಿದ್ದಾರೆ. ಅರಮನೆ, ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡುವವರ ಸಂಖ್ಯೆ ಗಣ ನೀಯವಾಗಿ ಹೆಚ್ಚಳವಾಗಿದೆ.

ಅದೇ ರೀತಿ ಮೃಗಾಲಯ, ನಂಜನ ಗೂಡಿನ ಶ್ರೀ ನಂಜುಂಡೇಶ್ವರ ದೇವಸ್ಥಾನ, ಉತ್ತನಹಳ್ಳಿಯ ಶ್ರೀ ತ್ರಿಪುರಸುಂದರಿ ಅಮ್ಮ ನವರ ದೇವಸ್ಥಾನ, ತಲಕಾಡು, ಮುಡುಕು ತೊರೆ ಕ್ಷೇತ್ರಗಳಿಗೂ ಕಳೆದ ಒಂದು ವಾರ ದಿಂದ ಪ್ರವಾಸಿಗರ ಸಂಖ್ಯೆ ಹೆಚ್ಚಳವಾಗಿದೆ.

ಸುತ್ತಲಿನ ಪ್ರವಾಸಿ ಕೇಂದ್ರವಾದ ಕೆಆರ್‍ಎಸ್, ರಂಗನತಿಟ್ಟು ಪಕ್ಷಿಧಾಮ, ಶ್ರೀರಂಗಪಟ್ಟಣದ ಶ್ರೀ ರಂಗನಾಥಸ್ವಾಮಿ ದೇವಾಲಯ, ಟಿಪ್ಪು ಸುಲ್ತಾನ, ದರಿಯಾ ದೌಲತ್, ಗಂಜಾಂನ ಶ್ರೀ ನಿಮಿಷಾಂಬ ದೇವಸ್ಥಾನ, ಬೆಳಗೊಳದ ಬಲಮುರಿ ಕ್ಷೇತ್ರ ಗಳಿಗೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿ ಗರು ಭೇಟಿ ನೀಡಲಾರಂಭಿಸಿರುವುದ ರಿಂದ ಅಲ್ಲಿನ ಚಟುವಟಿಕೆ, ವ್ಯಾಪಾರ-ವಹಿವಾಟುಗಳು ಗರಿಗೆದರಿವೆ.

ಪ್ರವಾಸೋದ್ಯಮವನ್ನೇ ಅವ ಲಂಬಿಸಿರುವ ಹೋಟೆಲ್ ಉದ್ಯಮ ಸಹ ಚೇತರಿಸಿಕೊಳುತ್ತಿದ್ದು, ಇದೀಗ ಹೋಟೆಲ್ ಮಾಲೀಕರಲ್ಲಿ ಆಶಾಭಾವನೆ ಮೂಡ ತೊಡಗಿದೆ. ಸ್ಥಳೀಯ ಪ್ರವಾಸಿ ಟ್ಯಾಕ್ಸಿಗಳು, ಪ್ರವಾಸಿ ಮಾರ್ಗದರ್ಶಿಗಳು, ಟೂರ್ಸ್ ಅಂಡ್ ಟ್ರಾವೆಲ್ಸ್ ಏಜೆನ್ಸಿಗಳೂ ಇದೀಗ ತಮ್ಮ ವೃತ್ತಿಯಲ್ಲಿ ಅಲ್ಪ-ಸ್ವಲ್ಪ ಆದಾಯ ಕಾಣಲಾರಂಭಿಸಿವೆ.

Translate »