ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ ಲಂಡನ್ ಬಿಗ್ ಬಸ್ ಮಾದರಿ ಡಬಲ್ ಡೆಕರ್ ತೆರೆದ ಬಸ್ ವ್ಯವಸ್ಥೆ
ಮೈಸೂರು

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ ಲಂಡನ್ ಬಿಗ್ ಬಸ್ ಮಾದರಿ ಡಬಲ್ ಡೆಕರ್ ತೆರೆದ ಬಸ್ ವ್ಯವಸ್ಥೆ

February 9, 2019

ಬೆಂಗಳೂರು: ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಲಂಡನ್ ಬಿಗ್ ಬಸ್ ಮಾದರಿಯ ಆರು ಡಬಲ್ ಡೆಕರ್ ತೆರೆದ ಬಸ್‍ಗಳನ್ನು ಕೆಎಸ್‍ಟಿಡಿಸಿಯಿಂದ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ.

ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ ಒಂದು ಕೋಟಿ, ಅಲ್ಲಿನ ಕ್ರೀಡಾಂಗ ಣಕ್ಕೆ ಮೂಲಸೌಕರ್ಯ ಕಲ್ಪಿಸಲು ಮತ್ತೊಂದು ಕೋಟಿ ರೂ. ನೀಡಿ ದ್ದಾರೆ. ಮಂಡ್ಯ ಕಬ್ಬು ಬೆಳೆಗಾರರ ಹಿತವನ್ನು ಗಮನದಲ್ಲಿಟ್ಟು ಕೊಂಡು ಮೈಶುಗರ್ ಕಾರ್ಖಾನೆ ಪುನರ್ ನಿರ್ಮಾಣಕ್ಕೆ 100 ಕೋಟಿ ರೂ. ಅನುದಾನ ನೀಡಿದ್ದಾರೆ. ಹೊಸದಾಗಿ
ಕಾರ್ಖಾನೆ ನಿರ್ಮಿಸಿ, ಅಲ್ಲಿ ಡಿಸ್ಟಲರಿ, ಸಕ್ಕರೆ ಘಟಕಗಳನ್ನು, ಬಾಯಲಿಂಗ್ ಹೌಸ್ ದುರಸ್ಥಿ ಮತ್ತು ಎಥನಾಲ್ ಯಂತ್ರೋಪ ಕರಣಗಳು, ಮೊಲಾಸಿಸ್ ಟ್ಯಾಂಕ್‍ಗಳನ್ನು ಅಳವಡಿಸಲು ಈ ಹಣ ಬಳಕೆ ಮಾಡಿಕೊಳ್ಳುವುದಾಗಿ ತಿಳಿಸಿದ್ದಾರೆ.

ಪ್ರಸಕ್ತ ಸಾಲಿನ ಆಯವ್ಯಯದಲ್ಲಿ ಚಾಮರಾಜನಗರದಲ್ಲಿರುವ ರೇಷ್ಮೆ ಕಾರ್ಖಾನೆಯನ್ನು ಪುನಶ್ಚೇತನಗೊಳಿಸುವುದಾಗಿ ಐದು ಕೋಟಿ ರೂ.ಗಳನ್ನು ನೀಡಿರುವುದಾಗಿ ತಿಳಿಸಿರುವ ಅವರು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿರುವ ಚನ್ನಪಟ್ಟಣ ಸಮೀಪ ಹತ್ತು ಕೋಟಿ ರೂ. ವೆಚ್ಚದಲ್ಲಿ ಕರ್ನಾಟಕ ರೇಷ್ಮೆ ಎಂಪೋ ರಿಯಂ ಸ್ಥಾಪಿಸುವುದಾಗಿ ತಿಳಿಸಿದ್ದಾರೆ. ಕಬಿನಿ ನದಿಯಿಂದ ನುಗು ಜಲಾಶಯದ ಮೂಲಕ ನಂಜನಗೂಡು ತಾಲೂಕಿನ ಕೆರೆಗಳಿಗೆ ನೀರು ತುಂಬಿಸಲು 80 ಕೋಟಿ ರೂ. ಮೀಸಲಿರಿಸಿದ್ದಾರೆ.

ಲಕ್ಷ್ಮತೀರ್ಥ ನದಿಯಿಂದ ಮರದೂರು ಗ್ರಾಮದ ಬಳಿ ಇರುವ ಲಿಫ್ಟ್ ಮುಖೇನ ನೀರನ್ನೆತ್ತಿ ಹುಣಸೂರು ಮತ್ತು ಹೆಚ್.ಡಿ. ಕೋಟೆ ತಾಲೂಕಿನ 49 ಕೆರೆಗಳನ್ನು ತುಂಬಿಸಲು 50 ಕೋಟಿ ರೂ. ಪ್ರತ್ಯೇಕವಾಗಿ ಕೊಟ್ಟಿದ್ದಾರೆ. ಅರಕೆರೆ ಕೆರೆಯಿಂದ ಶ್ರೀರಂಗಪಟ್ಟ ಣದ 12 ಕೆರೆಗಳನ್ನು ತುಂಬಿಸಲು 15 ಕೋಟಿ ರೂ. ನೀಡಿ ದ್ದಾರೆ. 25 ಕೋಟಿ ರೂ. ವೆಚ್ಚದಲ್ಲಿ ಮದ್ದೂರು ತಾಲೂಕಿನ ಸುಳೇಕೆರೆ ಸಮಗ್ರ ಅಭಿವೃದ್ಧಿಗೆ ಮೀಸಲಿರಿಸಿದ್ದಾರೆ.

ಮಳವಳ್ಳಿ ತಾಲೂಕಿನ ಹಲಗೂರು ವ್ಯಾಪ್ತಿಯಲ್ಲಿನ ಅಚ್ಚು ಕಟ್ಟು ಪ್ರದೇಶಕ್ಕೆ ನೀರಾವರಿ ಒದಗಿಸಲು 200 ಕೋಟಿ ರೂ., ಟಿ.ನರಸೀಪುರ ತಾಲೂಕಿನ ಬೆಟ್ಟಹಳ್ಳಿ ಗ್ರಾಮದ ನೀರಾವರಿ ಪ್ರದೇಶಕ್ಕೆ ನೀರು ಹರಿಸಲು 50 ಕೋಟಿ ರೂ., ಕೆ.ಆರ್.ಪೇಟೆ ತಾಲೂಕಿನ ವ್ಯಾಪ್ತಿಯಲ್ಲಿ ಹೇಮಾವತಿ ಎಡದಂಡೆ ನಾಲೆ 54 ಹಾಗೂ 64ರ ಆಧುನೀಕರಣಕ್ಕೆ 50 ಕೋಟಿ ರೂ., ಹೇಮಾವತಿ ಎಡದಂಡೆ ನಾಲೆ ಮತ್ತು ನಾಗಮಂಗಲ ಶಾಖಾ ನಾಲೆಗಳ ಅಭಿವೃದ್ಧಿಗೆ 80 ಕೋಟಿ ರೂ. ಹಾರಂಗಿ ಬಲದಂಡೆ ನಾಲೆ ಅಭಿವೃದ್ಧಿಗೆ 40 ಕೋಟಿ ರೂ. ನೀಡಿದ್ದಾರೆ.

ಮೈಸೂರು, ಮಂಡ್ಯದ ಶ್ರೀರಂಗಪಟ್ಟಣ, ಪಾಂಡವಪುರ, ಮದ್ದೂರು, ಮಳವಳ್ಳಿ ಹಾಗೂ ಟಿ. ನರಸೀಪುರದ ವ್ಯಾಪ್ತಿಯಲ್ಲಿ ಬರುವ ವಿಶ್ವೇಶ್ವರಯ್ಯ ನಾಲಾ ಜಾಲದ ಒಂದನೇ ಘಟಕದ ಆಧುನೀಕರಣಕ್ಕೆ 400 ಕೋಟಿ ರೂ. ನೀಡಿದ್ದಾರೆ. ಕಬಿನಿ ಬಲದಂಡೆ ವಿತರಣಾ ಕಾಲುವೆ ಆಧುನೀಕರಣಕ್ಕೆ 20 ಕೋಟಿ ರೂ., ಹಾರಂಗಿ ಬಲದಂಡೆ ನಾಲೆಯ ಕೆ.ಆರ್. ನಗರ ಶಾಖಾ ನಾಲೆ ಲೈನಿಂಗ್‍ಗೆ 40 ಕೋಟಿ ರೂ. ಮೀಸಲಿರಿಸಿದ್ದಾರೆ.

Translate »