Tag: CM H.D. Kumaraswamy

ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ಸಿಗರ ಅಗತ್ಯ ನನಗಿಲ್ಲ: ಕುಮಾರಸ್ವಾಮಿ
ಮೈಸೂರು

ಬೆನ್ನಿಗೆ ಚೂರಿ ಹಾಕುವ ಕಾಂಗ್ರೆಸ್ಸಿಗರ ಅಗತ್ಯ ನನಗಿಲ್ಲ: ಕುಮಾರಸ್ವಾಮಿ

ಬೆಂಗಳೂರು: ಮಂಡ್ಯದಲ್ಲಿ ಕೆಲ ಕಾಂಗ್ರೆಸ್ ಮುಖಂಡರು ನಮ್ಮ ಬೆನ್ನಿಗೆ ಚೂರಿ ಹಾಕುತ್ತಿದ್ದು, ಅಂತಹವರ ಅವಶ್ಯ ಕತೆ ನನಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು. ಪದ್ಮನಾಭನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಲ ಕಾಂಗ್ರೆಸ್ಸಿ ಗರು ನಿಖಿಲ್‍ಗೆ ಆಶೀರ್ವಾದ ಮಾಡಿದ್ದಾರೆ. ಆದರೆ ಹಿಂಬಾಗಿಲಿನಿಂದ ಬಂದವರು ಬಹಳ ಮುಂದುವರೆದಿದ್ದಾರೆ ಎಂದು ಎನ್. ಚೆಲುವರಾಯಸ್ವಾಮಿ ಮತ್ತು ರಮೇಶ್ ಬಂಡಿಸಿದ್ದೇಗೌಡ ಅವರ ಹೆಸರು ಹೇಳದೇ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಚುನಾವಣೆ ಎದುರಿಸಲು ನಮ್ಮ ಕಾರ್ಯ ಕರ್ತರೇ ಸಮರ್ಥರಿದ್ದಾರೆ. ನಮ್ಮ ಬೆನ್ನಿಗೆ ಚೂರಿ ಹಾಕುತ್ತಿರುವ ಕಾಂಗ್ರೆಸ್…

ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ
ಮೈಸೂರು

ವಿಜಯಶ್ರೀಪುರ, ಕೆ.ಆರ್.ಮಿಲ್ ನಿವಾಸಿಗಳು, ಫಾಲ್ಕನ್ ಟೈರ್ಸ್ ಉದ್ಯೋಗಿಗಳ ಸಮಸ್ಯೆ ಪರಿಹಾರ

ಮೈಸೂರು: ಮೈಸೂರಿನ ವಿಜಯಶ್ರೀಪುರ, ಕೆ.ಆರ್. ಮಿಲ್ ಕಾಲೋನಿ ನಿವಾಸಿಗಳು ಹಾಗೂ ಫಾಲ್ಕನ್ ಟೈರ್ಸ್ ಕಾರ್ಖಾನೆ ಕಾರ್ಮಿಕರ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಶುಕ್ರವಾರ ನಡೆದ ಸಮಾ ರಂಭದಲ್ಲಿ ಮೈಸೂರು ಜಿಲ್ಲೆಯ ಜನತೆ ಪರವಾಗಿ ನಾಗರಿಕ ಸನ್ಮಾನ ಸ್ವೀಕರಿಸಿ ಮಾತ ನಾಡುವ ಸಂದರ್ಭದಲ್ಲಿ ವಿಜಯಶ್ರೀಪುರ ಹಾಗೂ ಕೆ.ಆರ್.ಮಿಲ್ ಕಾಲೋನಿ ನಿವಾಸಿ ಗಳು ತಮ್ಮ ಸಮಸ್ಯೆ ಬಗ್ಗೆ ಗಮನ ಸೆಳೆ ದರು. ಇದಕ್ಕೆ ಪ್ರತಿಕ್ರಿಯಿಸಿದ…

ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…
ಮೈಸೂರು

ಮೈಸೂರು ಮೈತ್ರಿ ಅಭ್ಯರ್ಥಿ ದೇವೇಗೌಡರೋ ಇಲ್ಲ ನಿಖಿಲ್ ನಿಲ್ತಾರೋ…

ಮೈಸೂರು: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರ ಪುತ್ರ, ನಟ ನಿಖಿಲ್‍ಕುಮಾರ್ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಭಾವ್ಯ ಅಭ್ಯರ್ಥಿ ಎಂಬುದು ಇಂದು ಮೈಸೂರಿನಲ್ಲಿ ಬಹಿರಂಗವಾಗಿದೆ. ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ಉನ್ನತ ಶಿಕ್ಷಣ ಸಚಿವರೂ ಆದ ಮೈಸೂರು ಜಿಲ್ಲಾ ಉಸುವಾರಿ ಸಚಿವ ಜಿ.ಟಿ.ದೇವೇಗೌಡರು ಮಾತನಾಡಿ, ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಿಂದ ನೀವೇ ಸ್ಪರ್ಧಿಸಬೇಕೆಂದು ವರಿಷ್ಠರಾದ ಹೆಚ್.ಡಿ.ದೇವೇಗೌಡ ಅವರನ್ನು ಮನವಿ ಮಾಡಿಕೊಂಡೆವು. ಅದೇನೇ ಇರಲಿ ಯಾರೇ ಅಭ್ಯರ್ಥಿಯಾದರೂ ದೇವೇಗೌಡರು ಹಾಗೂ ಕುಮಾರಸ್ವಾಮಿ…

ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ
ಮೈಸೂರು

ದೋಸ್ತಿ ಬಟೆಜ್‍ನಲ್ಲಿ ರೈತರು, ಕಾರ್ಮಿಕರು, ಮಹಿಳೆಯರು, ಮಠಮಾನ್ಯಗಳಿಗೆ ಭರಪೂರ ಕೊಡುಗೆ

ಮದ್ಯ ವ್ಯಸನಿಗಳು, ನೋಂದಣಿ ಮೇಲೆ ಅಧಿಕ ಶುಲ್ಕ ಹಾಲು ಉತ್ಪಾದಕರ ಪ್ರೋತ್ಸಾಹದನ 6 ರೂ.ಗೆ ಹೆಚ್ಚಳ ಶಾಲಾ, ಅಂಗನವಾಡಿ ಮಕ್ಕಳಿಗೆ ಉಚಿತ ಹಾಲು ಸಣ್ಣ, ಅತೀ ಸಣ್ಣ ರೈತರಿಗೆ ಒಲಿಯಲಿದ್ದಾಳೆ ‘ಗೃಹಲಕ್ಷ್ಮಿ’ ಕೇರಳ ಮಾದರಿ `ಸಾಲ ಪರಿಹಾರ ಆಯೋಗ’ ರಚನೆ ನದಿಗಳಿಂದ ಹಳ್ಳಿಗಳಿಗೆ ಕುಡಿಯುವ ನೀರಿನ ‘ಜಲಧಾರೆ’ ವರ್ಗಾವಣೆಗೆ ಕೌನ್ಸಿಲಿಂಗ್ ಪದ್ಧತಿ, ಇ ಆಫೀಸ್ ವ್ಯವಸ್ಥೆ ಒಂದು ಸಾವಿರ ಆಂಗ್ಲ ಮಾಧ್ಯಮ ಶಾಲೆಗಳ ಆರಂಭ ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆ ಗಮನದಲ್ಲಿಟ್ಟುಕೊಂಡು ಹಣಕಾಸು ಇಲಾಖೆ ಹೊಣೆ ಹೊತ್ತಿರುವ…

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ ಲಂಡನ್ ಬಿಗ್ ಬಸ್ ಮಾದರಿ ಡಬಲ್ ಡೆಕರ್ ತೆರೆದ ಬಸ್ ವ್ಯವಸ್ಥೆ
ಮೈಸೂರು

ಮೈಸೂರು ಪ್ರವಾಸಿ ತಾಣ ವೀಕ್ಷಣೆಗೆ ಲಂಡನ್ ಬಿಗ್ ಬಸ್ ಮಾದರಿ ಡಬಲ್ ಡೆಕರ್ ತೆರೆದ ಬಸ್ ವ್ಯವಸ್ಥೆ

ಬೆಂಗಳೂರು: ಮೈಸೂರಿನ ಪ್ರವಾಸಿ ತಾಣಗಳ ವೀಕ್ಷಣೆಗಾಗಿ ಲಂಡನ್ ಬಿಗ್ ಬಸ್ ಮಾದರಿಯ ಆರು ಡಬಲ್ ಡೆಕರ್ ತೆರೆದ ಬಸ್‍ಗಳನ್ನು ಕೆಎಸ್‍ಟಿಡಿಸಿಯಿಂದ ಪ್ರಾರಂಭಿಸುವುದಾಗಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಪ್ರಕಟಿಸಿದ್ದಾರೆ. ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಆವರಣದಲ್ಲಿ 100 ಕೋಟಿ ರೂ. ವೆಚ್ಚದಲ್ಲಿ 450 ಹಾಸಿಗೆ ಸಾಮಥ್ರ್ಯದ ಆಸ್ಪತ್ರೆ ಪ್ರಾರಂಭಿಸುವುದಾಗಿ ತಿಳಿಸಿದ್ದಾರೆ. ಮಂಡ್ಯದ ಕರ್ನಾಟಕ ಸಂಘದ ಅಭಿವೃದ್ಧಿಗೆ ಒಂದು ಕೋಟಿ, ಅಲ್ಲಿನ ಕ್ರೀಡಾಂಗ ಣಕ್ಕೆ ಮೂಲಸೌಕರ್ಯ ಕಲ್ಪಿಸಲು ಮತ್ತೊಂದು ಕೋಟಿ ರೂ. ನೀಡಿ ದ್ದಾರೆ. ಮಂಡ್ಯ ಕಬ್ಬು ಬೆಳೆಗಾರರ…

ರಾಜ್ಯ ಬಜೆಟ್: ಕೊಡಗು ಜಿಲ್ಲೆಗೆ ನೀಡದ ವಿಶೇಷ ಅನುದಾನ
ಕೊಡಗು

ರಾಜ್ಯ ಬಜೆಟ್: ಕೊಡಗು ಜಿಲ್ಲೆಗೆ ನೀಡದ ವಿಶೇಷ ಅನುದಾನ

ಕೊಡಗಿನಾದ್ಯಂತ ಸಾರ್ವಜನಿಕರ ಅಸಮಾಧಾನ 450 ಹಾಸಿಗೆಗಳ ಆಸ್ಪತ್ರೆ ನಿರ್ಮಾಣಕ್ಕೆ 100 ಕೋಟಿ ರೂ. ಹಾರಂಗಿ ಜಲಾನಯನ ಪುನಶ್ಚೇತನಕ್ಕೆ 75 ಕೋಟಿ ರೂ. ಮಡಿಕೇರಿ: ರಾಜ್ಯ ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಮಂಡಿಸಿದ ರಾಜ್ಯ ಬಜೆಟ್ ನಲ್ಲಿ ಕೊಡಗಿನ ಪ್ರಕೃತಿ ವಿಕೋಪಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರಸ್ತಾಪ ಮಾಡದಿರುವ ಕ್ರಮಕ್ಕೆ ಸಾರ್ವಜನಿಕ ವಲಯದಿಂದ ಅಸಮಾಧಾನ ವ್ಯಕ್ತಗೊಂಡಿದೆ. ಕೊಡಗು ಪುನರ್ ನಿರ್ಮಾಣ ಪ್ರಾಧಿಕಾರದ ದೈನಂದಿನ ಕಾರ್ಯ ಚಟುವಟಿಕೆಗಳಿಗೆ ಮಾತ್ರವೇ 2 ಕೋಟಿ. ರೂ.ಗಳನ್ನು ಮೀಸಲಿರಿಸಲಾ ಗಿದೆ. ಸಂತ್ರಸ್ತರ ಮನೆಗಳ…

ಬಜೆಟ್‍ನಲ್ಲಿ ಚಾಮರಾಜನಗರ ಜಿಲ್ಲೆಗೆ ದಕ್ಕಿದ್ದು 8.5 ಕೋಟಿ ರೂ. ಮಾತ್ರ
ಚಾಮರಾಜನಗರ

ಬಜೆಟ್‍ನಲ್ಲಿ ಚಾಮರಾಜನಗರ ಜಿಲ್ಲೆಗೆ ದಕ್ಕಿದ್ದು 8.5 ಕೋಟಿ ರೂ. ಮಾತ್ರ

ಚಾಮರಾಜನಗರ: ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಶುಕ್ರವಾರ ಮಂಡಿಸಿದ 2,34,153 ಕೋಟಿ ರೂ. ಬಜೆಟ್‍ನಲ್ಲಿ ಜಿಲ್ಲೆಗೆ ನಿಗದಿಪಡಿಸಿ ನೀಡಿರುವುದು ಕೇವಲ 8.5 ಕೋಟಿ ಮಾತ್ರ. ಇದು ಜಿಲ್ಲೆಯ ಜನರಲ್ಲಿ ನಿರಾಶೆ ಮೂಡಿಸಿದೆ. ಜಿಲ್ಲಾ ಕೇಂದ್ರವಾದ ಚಾಮರಾಜನಗರ ದಲ್ಲಿ ಈಗಾಗಲೇ ಮುಚ್ಚಿ ಹೋಗಿರುವ ರೇಷ್ಮೆ ಕಾರ್ಖಾನೆಯ ಪುನಶ್ಚೇತನಕ್ಕಾಗಿ 5 ಕೋಟಿ ರೂ. ಮತ್ತು ಸಂತೇಮರಹಳ್ಳಿ ರೇಷ್ಮೆ ಕಾರ್ಖಾನೆ ಆಧುನೀಕರಣ ಹಾಗೂ ಯುವಕರಿಗೆ ತರಬೇತಿ ನೀಡಲು 2 ಕೋಟಿ ರೂ.ಗಳ ಅನುದಾನವನ್ನು ಬಜೆಟ್‍ನಲ್ಲಿ ಮೀಸಲಿರಿಸಲಾಗಿದೆ. ಇದಲ್ಲದೇ ಚಾಮ ರಾಜನಗರ ಜಿಲ್ಲೆ ಸೇರಿದಂತೆ 10…

ವಿಶ್ವಾಸ ಮತಯಾಚನೆ ಪರಿಸ್ಥಿತಿ ಎದುರಾಗಿಲ್ಲ
ಮೈಸೂರು

ವಿಶ್ವಾಸ ಮತಯಾಚನೆ ಪರಿಸ್ಥಿತಿ ಎದುರಾಗಿಲ್ಲ

ಬೆಂಗಳೂರು: ವಿಧಾನ ಮಂಡಲದಲ್ಲಿ ವಿಶ್ವಾಸಮತ ಯಾಚನೆ ಮಾಡುವ ಪರಿಸ್ಥಿತಿ ಎದುರಾಗಿಲ್ಲ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ವಿಧಾನಸಭೆಯಲ್ಲಿ ತಮಗೆ ಪೂರ್ಣ ಬಹುಮತವಿದೆ. ಅಷ್ಟೇ ಅಲ್ಲ ಆಡಳಿತ ಮತ್ತು ಮೈತ್ರಿ ಪಕ್ಷದಲ್ಲಿ ಯಾವುದೇ ಗೊಂದಲಗಳಿಲ್ಲ. ಇಂತಹ ಸನ್ನಿವೇಶದಲ್ಲಿ ನಾನಾಗಿಯೇ ಏತಕ್ಕೆ ವಿಶ್ವಾಸಮತ ಮಂಡಿಸಲಿ ಎಂದು ಪ್ರಶ್ನಿಸಿದ್ದಾರೆ. ಆರು ತಿಂಗಳ ಮುಂಚೆ ವಿಶ್ವಾಸಮತಯಾಚನೆ ಮಾಡಿ, ಏಳು ತಿಂಗಳ ಕಾಲ ಸುಭದ್ರ ಸರ್ಕಾರ ನೀಡಿದ್ದೇನೆ. ಒಂದು ವೇಳೆ ಪ್ರತಿಪಕ್ಷ ಬಿಜೆಪಿ ಅವಿಶ್ವಾಸ ತಂದಲ್ಲಿ ಅದನ್ನು ಎದುರಿಸಲು ಸಿದ್ಧ ಎಂದರು….

ಬಿಜೆಪಿ ಫ್ಯೂಸ್ ಕಿತ್ತಾಕಿದ್ದೇನೆ…!
ಮೈಸೂರು

ಬಿಜೆಪಿ ಫ್ಯೂಸ್ ಕಿತ್ತಾಕಿದ್ದೇನೆ…!

ನಮ್ಮ ಸರ್ಕಾರ ಅಸ್ಥಿರಗೊಳಿಸಲು ಬಿಜೆಪಿ ನಾಯಕರಿಗೆ ಛಾನ್ಸೇ ಇಲ್ಲ: ಸಿಎಂ ಕುಮಾರಸ್ವಾಮಿ ನಿಶ್ಚಿಂತೆ ಮಾತು ಬೆಂಗಳೂರು: ಭಾರತೀಯ ಜನತಾ ಪಕ್ಷ ಏನೇ ಪ್ರಯತ್ನ ಮಾಡಿದರೂ, ಸರ್ಕಾರ ಅಸ್ಥಿರಗೊಳಿಸಲು ಸಾಧ್ಯವಿಲ್ಲ. ಈಗಾಗಲೇ ಅವರ `ಫ್ಯೂಸ್’ ಕಿತ್ತು ಹಾಕಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಇಂದಿಲ್ಲಿ ತಿಳಿಸಿದ್ದಾರೆ. ಬಜೆಟ್ ಅಧಿವೇಶನಕ್ಕೂ ಮುನ್ನ ಪತ್ರಿಕಾ ಸಂಪಾದಕರ ಜೊತೆ ಅನೌಪಚಾರಿಕವಾಗಿ ಮಾತನಾಡುವ ಸಂದರ್ಭದಲ್ಲಿ ಪ್ರತಿ ಬಾರಿ ಸರ್ಕಾರ ಉರುಳಿಸುವ ಪ್ರಯತ್ನದಲ್ಲಿದ್ದಾಗ ಬಿಜೆಪಿ ಮುಖಂಡರು ಮತ್ತು ಶಾಸಕರೇ ನನ್ನ ನೆರವಿಗೆ ನಿಂತಿದ್ದಾರೆ. ಬಿಜೆಪಿ ರಾಜ್ಯಾಧ್ಯಕ್ಷ…

ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆ ಖಚಿತಪಡಿಸಿದ ಸಿಎಂ
ಮಂಡ್ಯ, ಮೈಸೂರು

ಮಂಡ್ಯದಿಂದ ಪುತ್ರ ನಿಖಿಲ್ ಸ್ಪರ್ಧೆ ಖಚಿತಪಡಿಸಿದ ಸಿಎಂ

ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ತಮ್ಮ ಪುತ್ರ ನಿಖಿಲ್ ಕುಮಾರಸ್ವಾಮಿ ಕಣಕ್ಕಿಳಿಯುವುದನ್ನು ಸಿಎಂ ಕುಮಾರಸ್ವಾಮಿ ಇಂದಿಲ್ಲಿ ಪರೋಕ್ಷವಾಗಿ ತಿಳಿಸಿದ್ದಾರೆ. ಈ ಕ್ಷೇತ್ರದಲ್ಲಿ ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ. ಜೆಡಿಎಸ್ ಅಭ್ಯರ್ಥಿಯೇ ಇಲ್ಲಿ ಕಣಕ್ಕಿಳಿಯುತ್ತಾರೆ ಎಂದಿದ್ದಾರೆ. ಸಂಪಾದಕರೊಟ್ಟಿಗೆ ಅನೌಪಚಾರಿಕ ವಾಗಿ ಮಾತನಾಡುವ ಸಂದರ್ಭದಲ್ಲಿ ಅವರಿಗೆ ಕೇಳಿ ಬಂದ ಪ್ರಶ್ನೆಗೆ ತಮ್ಮ ಪುತ್ರನ ಬಗ್ಗೆ ವ್ಯಾಖ್ಯಾನ ಮಾಡುವ ಮೂಲಕ ಆತನೇ ಅಭ್ಯರ್ಥಿ ಎಂಬ ಇಂಗಿತ ವ್ಯಕ್ತಪಡಿಸಿದ್ದಾರೆ. ನಿಖಿಲ್ ಮಂಡ್ಯ ಲೋಕಸಭಾ ಕ್ಷೇತ್ರ ದಿಂದ ಸ್ಪರ್ಧಿಸುತ್ತಾರಾ ಎಂಬ ಪ್ರಶ್ನೆಗೆ ಡಾಕ್ಟರ್…

1 2 3 6