ಸೋಷಿಯಲ್ ಮೀಡಿಯಾದಲ್ಲಿ ನಕಲಿ ರಾಜೀನಾಮೆ ಪತ್ರ ವೈರಲ್!
ಮೈಸೂರು

ಸೋಷಿಯಲ್ ಮೀಡಿಯಾದಲ್ಲಿ ನಕಲಿ ರಾಜೀನಾಮೆ ಪತ್ರ ವೈರಲ್!

July 23, 2019

ಬೆಂಗಳೂರು: ಇದು ಅಪ್ಪಟ ಸುಳ್ಳು ಸುದ್ದಿ… ಸಂವಿಧಾನಾತ್ಮಕವಾಗಿ ರುವ ಸಿಎಂ ಹುದ್ದೆಗೆ ಅದರದ್ದೇ ಆದ ಗೌರವ ಇದೆ. ಆದರೆ ನಮ್ಮ ಸೋಷಿ ಯಲ್ ಮೀಡಿಯಾ ಎಲ್ಲಿಗೆ ಬಂದಿದೆ ಎಂದರೆ ರಾಜಕೀಯ ಗೊಂದಲಗಳು ನಡೆಯುತ್ತಿರುವುದರಲ್ಲಿಯೂ ಕಿಡಿಗೇಡಿ ತನ ಮಾಡಿದೆ. ಕಳೆದ 5 ದಿನಗಳಿಂದ ವಿಶ್ವಾಸಮತದ ಚರ್ಚೆ ನಡೆಯುತ್ತಿ ದ್ದರೂ ಸದನ ಯಾವುದೇ ತೀರ್ಮಾ ನಕ್ಕೆ ಸದನ ಬಂದಿಲ್ಲ. ಇದೆಲ್ಲದರ ನಡುವೆ ಸಿಎಂ ಕುಮಾರಸ್ವಾಮಿ ರಾಜೀ ನಾಮೆ ಕೊಟ್ಟಿದ್ದಾರೆ ಎಂಬ ರೀತಿಯ ಪತ್ರ ಸೃಷ್ಟಿ ಮಾಡಿ ಹರಿಯಬಿಡಲಾಗಿದೆ. ಸಿಎಂ ಕುಮಾರಸ್ವಾಮಿ ರಾಜ್ಯಪಾಲ ವಿ.ಆರ್.ವಾಲಾ ಉಲ್ಲೇಖಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡುತ್ತಿದ್ದೇನೆ ಎಂದು ಬರೆದಿರುವ ಪತ್ರ ವೈರಲ್ ಆಗಿದೆ. ಸ್ವತಃ ಕುಮಾರಸ್ವಾಮಿ ಅವರ ಕೈಗೆ ಈ ಪತ್ರ ಬಂದು ತಲುಪಿದ್ದು ಅವರನ್ನೇ ಬೆಚ್ಚಿ ಬೀಳಿಸಿದೆ. ಸೋಷಿಯಲ್ ಮೀಡಿಯಾ ಅದು ಯಾವ ಪರಿ ಕುಲಗೆಟ್ಟು ಹೋಗಿದೆ ಎನ್ನುವುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಇನ್ನೊಂದು ಬೇಕಿಲ್ಲ. ಜನರನ್ನು ದಿಕ್ಕು ತಪ್ಪಿಸುವ ಅಥವಾ ಈ ರೀತಿ ಕಿಡಿಗೇಡಿತನ ಮಾಡುವ ಸುದ್ದಿಗಳನ್ನು ಬಹಳ ಜಾಗರೂಕತೆಯಿಂದ ನಿರ್ವಹಿಸಬೇಕು.

Translate »