ಜ್ಯೋತಿಷ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ವಿತರಣೆ
ಮೈಸೂರು

ಜ್ಯೋತಿಷ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಪ್ರಮಾಣ ಪತ್ರ ವಿತರಣೆ

July 23, 2019

ಮೈಸೂರು: ಭಾರತೀಯ ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ 2018-19ನೇ ಶೈಕ್ಷಣಿಕ ವರ್ಷದ ಜ್ಯೋತಿಷ್ಯ ಪರೀಕ್ಷೆಗಳಲ್ಲಿ ತೇರ್ಗಡೆಯಾದ 200ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಪ್ರದಾನ ವಿತರಿಸಲಾಯಿತು.

ಮೈಸೂರಿನ ಜೆಎಲ್‍ಬಿ ರಸ್ತೆಯಲ್ಲಿರುವ ಆರಾಧ್ಯ ಮಹಾಸಭಾದಲ್ಲಿ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ಧಾರವಾಡದ `ಚಿದಂಬರ’ ಪಂಚಾಂಗ ಕರ್ತ ಚಿದಂಬರ ಭಟ್ ರಾ.ಜೋಷಿ ಅವರು ಪ್ರಮಾಣ ಪತ್ರಗಳನ್ನು ವಿತರಿಸಿದರು.

ಮೈಸೂರು, ಚಾಮರಾಜನಗರ, ಕುಣಿ ಗಲ್, ತುಮಕೂರು ಸೇರಿದಂತೆ ಅಡಗೂರಿನ ಶ್ರೀ ಗುರುಸಿದ್ಧನಂಜ ಶಿವಯೋಗಿ ಮಠ, ಶಿವಯೋಗಾನಂದಾಶ್ರಮ ಗುಡ್ಡದಹಳ್ಳಿ (ಆಂಧ್ರಪ್ರದೇಶ), ಬೆಂಗಳೂರು, ಕೊಪ್ಪಳ, ತುಮಕೂರು ಜಿಲ್ಲೆ ಅಂಕನಹಳ್ಳಿಯ ಶ್ರೀ ಫಿರಂಗಿ ಸ್ವಾಮಿ ಗುರುಕುಲಾಶ್ರಮ ವಿದ್ಯಾ ಪೀಠ, ಮೈಸೂರಿನ ಆರಾಧ್ಯ ಮಹಾಸಭಾ ದಲ್ಲಿರುವ ಕೇಂದ್ರದ ಶಾಖಾ ಕೇಂದ್ರಗಳ ಲ್ಲಿವೆ. ಈ ಕೇಂದ್ರಗಳಲ್ಲಿ ವಿವಿಧ ಜ್ಯೋತಿಷ್ಯ ಶಾಸ್ತ್ರ ವಿಷಯಗಳ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಪ್ರಮಾಣ ಪತ್ರ ವಿತರಿಸಲಾಯಿತು.

ಜ್ಯೋತಿರ್ವಿಜ್ಞಾನ ಸಂಶೋಧನಾ ಕೇಂದ್ರದ ಅಧ್ಯಕ್ಷ ಡಾ.ಕೆ.ಜಿ.ಪುಟ್ಟಹೊನ್ನಯ್ಯ ಮಾತನಾಡಿ, ಸುಮಾರು 35 ವರ್ಷ ಗಳಿಂದ ಪ್ರತಿವರ್ಷ ಈ ಕಾರ್ಯಕ್ರಮ ನಡೆಸಿ ಕೊಂಡು ಬರುತ್ತಿದ್ದೇವೆ. ಜ್ಯೋತಿಷ್ಯ ಕಲಿ ಯಲು ಎಲ್ಲಾ ಕ್ಷೇತ್ರಗಳಲ್ಲಿರುವವರೂ ಆಸಕ್ತಿ ಯಿಂದ ಬರುತ್ತಾರೆ. ಇವರೆಲ್ಲರಿಗೂ ಉಚಿತ ವಾಗಿ ಶಿಕ್ಷಣ ನೀಡುವ ಮೂಲಕ ಜ್ಯೋತಿಷ್ಯ ಶಾಸ್ತ್ರವನ್ನು ಪ್ರಚಾರ ಮಾಡುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.

 

ವಾರ್ಷಿಕ ಪರೀಕ್ಷೆಗೆ ನಾವೇ ಪಠ್ಯಗಳನ್ನು ಸಿದ್ಧಪಡಿಸುತ್ತೇವೆ. ವರ್ಷಕ್ಕೆ ನೂರಾರು ಮಂದಿ ಇಲ್ಲಿ ಜ್ಯೋತಿಷ್ಯ ಕಲಿತು ಬೇರೆ ಬೇರೆ ಕಡೆಗಳಿಗೆ ತೆರಳಿ ಮತ್ತೊಬ್ಬರಿಗೆ ಜ್ಯೋತಿಷ್ಯ ವನ್ನು ಕಲಿಸುವ ಕಾರ್ಯ ಮಾಡುತ್ತಿದ್ದಾರೆ ಎಂದು ಹರ್ಷ ವ್ಯಕ್ತಪಡಿಸಿದರು.

ಇದೇ ವೇಳೆ ಸಂಸ್ಕøತದ ನಿವೃತ್ತ ಪ್ರಾಧ್ಯಾ ಪಕರೂ ಆದ ಮೈಸೂರು ಅರಮನೆ ಹಿರಿಯ ಪುರೋಹಿತ ಪ್ರೊ.ಆರ್.ಎಸ್. ಜನಾರ್ಧನ್ ಸೇರಿದಂತೆ ಅನೇಕ ವಿದ್ವಾಂಸ ರನ್ನು ಸನ್ಮಾನಿಸಲಾಯಿತು. ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾ ನಿಲಯದ ಕುಲಪತಿ ಡಾ.ಬಿ.ಜಿ.ಸಂಗಮೇ ಶ್ವರ ಉದ್ಘಾಟನೆ ನೆರವೇರಿಸಿದರು.

ತುಮಕೂರು ಶ್ರೀ ಹಿರೇಮಠದ ಮಠಾ ಧೀಶ ಶ್ರೀ ಡಾ.ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ಬೆಂಗ ಳೂರಿನ ದಿವ್ಯಜ್ಯೋತಿ ಜ್ಯೋತಿಷ್ಯ ಮಹಾ ವಿದ್ಯಾಲಯ ಸಂಸ್ಥಾಪಕ ಪ್ರೊ.ಎಸ್.ಚಂದ್ರ ಶೇಖರ್, ಆರಾಧ್ಯ ಮಹಾಸಭಾ ಅಧ್ಯಕ್ಷ ಪಿ.ನಾಗಭೂಷಣಾರಾಧ್ಯ ಸೇರಿದಂತೆ ಮತ್ತಿತರರು ಹಾಜರಿದ್ದರು.

Translate »