ಮಾದಕ ವ್ಯಸನದ ದುಷ್ಪರಿಣಾಮ ಅನಾವರಣಗೊಳಿಸಿದ ವಿದ್ಯಾರ್ಥಿಗಳು
ಮೈಸೂರು

ಮಾದಕ ವ್ಯಸನದ ದುಷ್ಪರಿಣಾಮ ಅನಾವರಣಗೊಳಿಸಿದ ವಿದ್ಯಾರ್ಥಿಗಳು

July 23, 2019

ಮೈಸೂರು: ಮಾದಕ ವ್ಯಸನ ತ್ಯಜಿಸಿ, ಆರೋಗ್ಯ ಹೆಚ್ಚಿಸಿ… ಧೂಮ ಪಾನ ತ್ಯಜಿಸಿ, ಸುಖ ಬಾಳ್ವೆ ನಡೆಸಿ… ಹೆಂಡ-ಸಾರಾಯಿ ಸಹವಾಸ ಹೆಂಡತಿ ಮಕ್ಕಳ ಉಪ ವಾಸ… ಇಂತಹ ಹಲವು ಘೋಷ ವಾಕ್ಯಗಳ ಫಲಕ ಗಳನ್ನಿಡಿದು ಕಾಲೇಜು ವಿದ್ಯಾರ್ಥಿಗಳು ಮಾದಕ ವಸ್ತುಗಳ ದುಷ್ಪರಿಣಾಮದ ಭೀಕರ ತೆಯನ್ನು ಅನಾವರಣಗೊಳಿಸಿದರು.

`ವಿಶ್ವ ಮಾದಕ ವಸ್ತುಗಳ ಸೇವನೆ ಹಾಗೂ ಕಳ್ಳ ಸಾಗಾಣಿಕೆ ವಿರೋಧಿ ದಿನಾಚರಣೆ’ ಅಂಗವಾಗಿ ಜಾಥಾ ನಡೆಸಿದ ಮೈಸೂರಿನ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ವಿದ್ಯಾರ್ಥಿ ಗಳು, ದುಶ್ಚಟಗಳಿಂದ ದೂರವಿರುವಂತೆ ಸಂದೇಶ ನೀಡಿದರು. ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮಾನ ಸಿಕ ಆರೋಗ್ಯ ಕಾರ್ಯಕ್ರಮ ವಿಭಾಗ ಹಾಗೂ ಸಿಪಿಸಿ ಪಾಲಿಟೆಕ್ನಿಕ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಜಾಥಾಕ್ಕೆ ಎನ್‍ಆರ್ ಮೊಹಲ್ಲಾದ ಕಾಲೇಜು ಆವರಣದಲ್ಲಿ ಚಾಲನೆ ನೀಡಲಾಯಿತು. ಅಶೋಕ ರಸ್ತೆ, ಫೌಂಟೇನ್ ವೃತ್ತ, ಡಾ. ಅಂಬೇಡ್ಕರ್ ವೃತ್ತ ಸೇರಿದಂತೆ ಮತ್ತಿತರ ರಸ್ತೆಗಳಲ್ಲಿ ಸಂಚರಿಸಿದ ಜಾಥಾವು ಮತ್ತೆ ಕಾಲೇಜು ಆವರಣ ತಲುಪಿತು.

ಜಿಲ್ಲೆಯಲ್ಲಿ 10 ಸಾವಿರ ವ್ಯಸನಿಗಳು: 2018-19ನೇ ಸಾಲಿನಲ್ಲಿ ಮೈಸೂರು ಜಿಲ್ಲೆ ಯಾದ್ಯಂತ 10 ಸಾವಿರಕ್ಕೂ ಹೆಚ್ಚು ಮದ್ಯಪಾನ ಮತ್ತು ಮಾದಕ ವ್ಯಸನ ಪ್ರಕರಣಗಳು ವರದಿ ಯಾಗಿವೆ ಎಂದು ಕಾರ್ಯಕ್ರಮದ ಅಂಗ ವಾಗಿ ಹೊರಡಿಸಿರುವ ಪ್ರಕಟಣೆಯಲ್ಲಿ ತಿಳಿಸಲಾಗಿದೆ. ಮದ್ಯಪಾನ ಹಾಗೂ ಇತರ ಮಾದಕ ವಸ್ತುಗಳ ಸೇವನೆಯಿಂದ ಭಾರತದಲ್ಲಿ ಯುವ ಜನತೆ ಆರೋಗ್ಯ ಹದಗೆಡು ತ್ತಿದೆ. ರಾತ್ರಿ ಸಂದ ರ್ಭದ ರಸ್ತೆ ಅಪಘಾತ ಗಳು ಶೇ.33ರಷ್ಟು ಮದ್ಯ ಪಾನ ಸೇವನೆ ಕಾರಣ ದಿಂದ ಸಂಭವಿಸುತ್ತಿವೆ. ಶೇ.25ರಷ್ಟು ಮಕ್ಕಳು ಮತ್ತು ಸ್ತ್ರೀಯರ ಮೇಲೆ ದೌರ್ಜನ್ಯ ಪ್ರಕ ರಣಗಳು ಮದ್ಯವ್ಯಸನದ ಪರಿಣಾಮದಿಂದ ನಡೆಯುತ್ತಿದೆ. ಜಿಲ್ಲೆಯಾದ್ಯಂತ ಎಲ್ಲಾ ಆರೋಗ್ಯ ಕೇಂದ್ರ, ತಾಲೂಕು ಆಸ್ಪತ್ರೆ, ಕೆಆರ್ ಆಸ್ಪತ್ರೆ ಹಾಗೂ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯ ಕ್ರಮ ತಂಡದಿಂದ ಮಾದಕ ವ್ಯಸನದಿಂದ ಮುಕ್ತಗೊಳ್ಳಲು ಅಗತ್ಯ ಸಮಾಲೋಚನೆ, ಸಲಹೆ ಮತ್ತು ಚಿಕಿತ್ಸೆಯನ್ನು ಉಚಿತವಾಗಿ ನೀಡಲಾಗುತ್ತಿದೆ. ಮಾದಕ ವಸ್ತುಗಳ ವ್ಯಸನ ದಿಂದ ಆಗುವ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಸಮಸ್ಯೆಗಳ ಅರಿವಿನ ಕೊರತೆ ಯುವ ಜನಾಂಗದಲ್ಲಿ ಇದೆ. ಆದ್ದರಿಂದ ಮಾದಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿ ಸಮಾಜವನ್ನು ಮಾದಕ ವಸ್ತುಗಳ ಸೇವನೆಯಿಂದ ಮತ್ತು ಅಕ್ರಮ ಕಳ್ಳ ಸಾಗಾಣಿಕೆಯಿಂದ ಮುಕ್ತಗೊಳಿಸುವುದು ನಮ್ಮೆಲ್ಲರ ಗುರಿಯಾಗಬೇಕಿದೆ. ಲಷ್ಕರ್ ಪೊಲೀಸ್ ಠಾಣೆ ಇನ್ಸ್ ಪೆಕ್ಟರ್ ಎಂ. ಮುನಿಯಪ್ಪ ಜಾಥಾಗೆ ಚಾಲನೆ ನೀಡಿ ದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಬಿ. ಬಸವ ರಾಜು, ಕಾಲೇಜು ಪ್ರಾಂಶುಪಾಲ ಹೆಚ್.ವಿ. ಶಿವಸ್ವಾಮಿ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮಾಧಿಕಾರಿ ಡಾ.ವಿ.ಸಂತೋಷ್ ಮತ್ತಿತರರು ಹಾಜರಿದ್ದರು.

Translate »