ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಟ್ರೈನಿಂಗ್
ಮೈಸೂರು

ಡಿಪ್ಲೊಮಾ ವಿದ್ಯಾರ್ಥಿಗಳಿಗೆ ಅಪ್ರೆಂಟಿಸ್ ಟ್ರೈನಿಂಗ್

July 23, 2019

ಮೈಸೂರು: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ (ಲಿ) ಟೆಕ್ನಿಕಲ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್ ವತಿಯಿಂದ ಡಿಪ್ಲೋಮ ಇನ್ ಏರೋನ್ಯಾಟಿಕಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಮೆಕಾನಿಕಲ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಎಲೆಕ್ಟ್ರಿಕಲ್ ಅಂಡ್ ಕಮ್ಯೂನಿಕೇಷನ್ ಇಂಜಿನಿಯರಿಂಗ್, ಡಿಪ್ಲೋಮ ಇನ್ ಸಿವಿಲ್ ಇಂಜಿನಿಯರಿಂಗ್, ಡಿಪ್ಲೊಮ ಇನ್ ಕಂಪ್ಯೂ ಟರ್ ಸೈನ್ಸ್ ಅಂಡ್ ಇಂಜಿನಿಯರಿಂಗ್ ಅಥವಾ ಇನ್ಫರ್ಮೇಷನ್ ಸೈನ್ಸ್ ಅಂಡ್ ಇಂಜಿನಿಯ ರಿಂಗ್, ಡಿಪ್ಲೋಮ ಇನ್ ಮೇಟಲಾರ್ಜಿ ಇಂಜಿನಿಯರಿಂಗ್, ಡಿಪ್ಲೋಮ ಇನ್ ಕಮರ್ಷಿ ಯಲ್ ಪ್ರಾಕ್ಟೀಸ್ ಈ ಎಲ್ಲಾ ಟ್ರೇಡ್‍ಗಳಲ್ಲಿ 3 ವರ್ಷ ಡಿಪ್ಲೋಮದಲ್ಲಿ ತೇರ್ಗಡೆಯಾದ ಅಭ್ಯರ್ಥಿಗಳಿಗೆ 1 ವರ್ಷದ ಫುಲ್ ಟರ್ಮ್ ಅಪ್ರೆಂಟಿಸ್ ಟ್ರೈನಿಂಗ್ ತರಬೇತಿ ನೀಡುತ್ತಿದೆ. ಆಸಕ್ತರು ಸಹಾಯಕ ನಿರ್ದೇಶಕರು, ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರ, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ ಆವರಣ, ಎನ್.ಆರ್. ಮೊಹಲ್ಲಾ ಮೈಸೂರು ಈ ಕಚೇರಿಯಲ್ಲಿ ಅರ್ಜಿ ಸಲ್ಲಿಸಬಹುದು. ಮಾಹಿತಿಗೆ ದೂ.ಸಂ.: 0821-2489972 ಸಂಪರ್ಕಿಸಬಹುದು.

Translate »