ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲದಿಂದ ಬಡವರು ಋಣಮುಕ್ತ
ಮೈಸೂರು

ಖಾಸಗಿ ಲೇವಾದೇವಿದಾರರಿಂದ ಪಡೆದ ಸಾಲದಿಂದ ಬಡವರು ಋಣಮುಕ್ತ

July 25, 2019

ಬೆಂಗಳೂರು: ಬಡತನ ರೇಖೆಗಿಂತ ಕೆಳಗಿನ ಕುಟುಂಬದವರು ಪಾನ್ ಬ್ರೋಕರ್ ಇಲ್ಲವೆ ಲೇವಾದೇವಿದಾರರಿಂದ ಕೈಸಾಲ ಪಡೆದಿದ್ದರೆ, ಅಂತಹವರನ್ನು ಸಾಲ ದಿಂದ ಪಾರು ಮಾಡುವ ಋಣಮುಕ್ತ ಕಾಯ್ದೆಯನ್ನು ಹಂಗಾಮಿ ಮುಖ್ಯಮಂತ್ರಿ ಕುಮಾರಸ್ವಾಮಿ ಜಾರಿಗೊಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಮುಖ್ಯಮಂತ್ರಿಯವರು, ಮೈತ್ರಿ ಸರ್ಕಾರ ತಂದಿದ್ದ ಈ ಮಹತ್ವದ ಕಾಯ್ದೆಗೆ ರಾಷ್ಟ್ರಪತಿ ಗಳಿಂದ ಅಂಗೀಕಾರ ದೊರೆತಿದ್ದು, ನಿನ್ನೆ ನಾನು ಸರ್ಕಾರದ ಈ ಕೊನೆಯ ಆದೇಶಕ್ಕೆ ಸಹಿ ಹಾಕಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಆದೇಶ ಹೊರಡಿಸಿದ್ದೇನೆ.

ವಾರ್ಷಿಕ 1.20 ಲಕ್ಷ ರೂ ಆದಾಯ ಕ್ಕಿಂತ ಕಡಿಮೆ ಇರುವ ಆರ್ಥಿಕ ದುರ್ಬ ಲರು, ಸಾಮಾನ್ಯ ನಾಗರಿಕರು, ಎರಡು ಹೆಕ್ಟೇರ್‍ಗಿಂತ ಕಡಿಮೆ ಭೂಮಿ ಹೊಂದಿರು ವವರು ಹಾಗೂ ಕೃಷಿ ಕಾರ್ಮಿಕರಿಗೆ ಇದು ಅನ್ವಯವಾಗಲಿದೆ.

ಇಂತಹವರು ಖಾಸಗಿ ವ್ಯಕ್ತಿಗಳಿಂದ,ಪಾನ್‍ಬ್ರೋಕರ್‍ಗಳಿಂದ ಮಾಡಿದ ಸಾಲವನ್ನು ಮನ್ನಾ ಮಾಡುವ ಋಣ ವಿಮೋಚನಾ ಕಾಯ್ದೆಗೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿದ್ದು, ನಿರ್ಗಮನದ ಸಂದರ್ಭದಲ್ಲಿ ಈ ವರ್ಗಗಳಿಗೆ ನಾನು ಕೊಡುಗೆ ನೀಡಿದಂತಾ ಗಿದೆ ಎಂದು ಹರ್ಷವ್ಯಕ್ತಪಡಿಸಿದರು. ಕಾಯ್ದೆ ನಿನ್ನೆಯಿಂದಲೇ ಜಾರಿಗೊಂಡಿದ್ದು, ಕಾಯ್ದೆ ಅನುಷ್ಠಾನಕ್ಕೂ ಮೊದಲು ಈ ವರ್ಗದ ಜನತೆ ಎಷ್ಟೇ ಸಾಲ ಪಡೆದಿದ್ದರೂ, ಅವರು ಅದರಿಂದ ಋಣ ಮುಕ್ತರಾಗುತ್ತಾರೆ. ಮುಂದಿನ 90 ದಿನದೊಳಗಾಗಿ ತಾವು ಸಾಲ ಪಡೆದ ಮಾಹಿತಿ ತಮ್ಮಲ್ಲಿರುವ ದಾಖಲೆಗಳನ್ನು ಸಂಬಂಧಪಟ್ಟ ಉಪವಿಭಾಗಾಧಿಕಾರಿಗಳಿಗೆ ಸಲ್ಲಿಸಿದರೆ, ನೀವು ಋಣಮುಕ್ತರಾಗುತ್ತೀರಿ. ನಾನು ಅಧಿಕಾರಕ್ಕೆ ಬಂದ ನಂತರ ರೈತರು ಪಡೆದ ಕೃಷಿ ಸಾಲ ಮನ್ನಾ ಮಾಡಿದ ಸಂದರ್ಭದಲ್ಲೇ ಉಳಿದ ಬಡವರನ್ನು ಸಾಲದಿಂದ ಋಣಮುಕ್ತ ಮಾಡ ಬೇಕೆಂದು ಕಾಯ್ದೆ ತಂದಿದ್ದೆ. ಆದರೆ ರಾಷ್ಟ್ರ ಪತಿಯವರು ಈಗ ಅಂಗೀಕಾರ ನೀಡಿದ್ದರಿಂದ ನಿನ್ನೆಯೇ ಆದೇಶ ಹೊರಡಿಸಿ, ಮಾಧ್ಯಮಗಳಲ್ಲಿ ಜಾಹೀರಾತು ನೀಡುವಂತೆ ಅಧಿಕಾರಿ ಗಳಿಗೆ ಸೂಚಿಸಿದ್ದೇನೆ ಎಂದರು.

ಚಿನ್ನ, ಬೆಳ್ಳಿ, ಭೂಮಿ ಸೇರಿದಂತೆ ಏನನ್ನಾದರೂ ಅಡ ವಿಟ್ಟು ಸಾಲ ಪಡೆದ ಬಡವರಿಗೂ ಇದರ ಲಾಭ ದೊರೆಯುತ್ತದೆ. ಋಣ ವಿಮೋಚನಾ ಕಾಯ್ದೆ ಒಂದು ಸಲಕ್ಕೆ ಅನ್ವಯವಾಗಲಿದೆ. ಈ ವಿಷಯದಲ್ಲಿ ಸಾಲ ಪಡೆದವರಿಗೆ ಸಾಲ ನೀಡಿದವರು ಯಾವುದೇ ರೀತಿಯ ತೊಂದರೆ ನೀಡದಂತೆ ಉಪವಿಭಾಗಾಧಿಕಾರಿಗಳು ರಕ್ಷಣೆ ನೀಡಲಿದ್ದಾರೆ ಎಂದರು. ಖಾಸಗಿ ಲೇವಾ ದೇವಿಗಾರರಾದರೂ ರಿಸರ್ವ್ ಬ್ಯಾಂಕಿನಿಂದ ಅನುಮತಿ ಪಡೆದು ವ್ಯವಹಾರ ಮಾಡುತ್ತಿದ್ದರೆ ಅಂತಹವರಿಂದ ಪಡೆದ ಸಾಲಕ್ಕೆ ಈ ಯೋಜನೆ ಅನ್ವಯವಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಅಧಿಕಾರದಿಂದ ನಿರ್ಗಮಿಸುತ್ತಿರುವ ಈ ಕಾಲದಲ್ಲಿ ತಮಗೆ ಋಣ ವಿಮೋಚನಾ ಕಾಯ್ದೆಗೆ ರಾಷ್ಟ್ರಪತಿಗಳ ಅಂಗೀಕಾರ ದೊರೆತಿರುವುದು ಮತ್ತು ಆ ಸಂಬಂಧ ಅಧಿಕೃತ ಆದೇಶ ಹೊರಟಿರುವುದು ಆತ್ಮ ತೃಪ್ತಿ ತಂದಿದೆ ಎಂದು ವಿವರಿಸಿದರು. ರಾಜ್ಯ ರಾಜಕೀಯದಲ್ಲಿ ಅರಾಜಕತೆ ಮುಂದು ವರಿಯಲಿದೆ ಎಂದು ಸೂಚ್ಯವಾಗಿ ನುಡಿದ ಅವರು, ಸಮ್ಮಿಶ್ರ ಸರ್ಕಾರ ಪತನಗೊಂಡ ಹಿನ್ನೆಲೆಯಲ್ಲಿ ಇದು ಸಹಜ.ಆದರೆ ಅಧಿಕಾರಿಗಳು ಜನಸಾಮಾನ್ಯರಿಗೆ ತೊಂದರೆಯಾಗದಂತೆ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿರುವುದಾಗಿ ನುಡಿದರು.

Translate »