ಯಡಿಯೂರಪ್ಪ ಬೆಂಗಳೂರು `ಧವಳಗಿರಿ’ ನಿವಾಸದಲ್ಲಿ ಸಂಭ್ರಮದ ವಾತಾವರಣ
ಮೈಸೂರು

ಯಡಿಯೂರಪ್ಪ ಬೆಂಗಳೂರು `ಧವಳಗಿರಿ’ ನಿವಾಸದಲ್ಲಿ ಸಂಭ್ರಮದ ವಾತಾವರಣ

July 25, 2019

ಜೊತೆ ಜೊತೆಗೆ ಬಿರುಸಿನ ರಾಜಕೀಯ ಚಟುವಟಿಕೆಗಳು

ಮೈಸೂರು: ರಾಜ್ಯದಲ್ಲಿ ನೂತನ ಸರ್ಕಾರ ರಚಿಸಲು ತುದಿ ಗಾಲಲ್ಲಿ ನಿಂತಿರುವ ಮಾಜಿ ಮುಖ್ಯ ಮಂತ್ರಿಗಳೂ ಆದ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ನಿವಾಸ ದಲ್ಲಿ ಈಗ ಸಂತಸ ಮನೆ ಮಾಡಿದೆ. ಕಿಕ್ಕಿರಿದ ಜನವೋ ಜನ. ಜೊತೆ ಜೊತೆಗೆ ಬಿರುಸಿನ ರಾಜಕೀಯ ಚಟುವಟಿಕೆ ಗಳು ನಡೆದಿವೆ.

ಬೆಂಗಳೂರಿನ ಪ್ರತಿಷ್ಠಿತ ಡಾಲರ್ಸ್ ಕಾಲೋನಿಯಲ್ಲಿರುವ ಧವಳಗಿರಿ ನಿವಾಸ ದಲ್ಲಿ ಹಬ್ಬದ ವಾತಾವರಣ ಕಂಡು ಬರುತ್ತಿದೆ. ಬೆಳಿಗ್ಗೆಯಿಂದಲೇ ಬಿಜೆಪಿ ಶಾಸಕರು, ಮುಖಂಡರು, ಹಿತೈಷಿಗಳು, ಅಭಿಮಾನಿಗಳು, ಪದಾಧಿಕಾರಿಗಳು ಸೇರಿದಂತೆ ಅಪಾರ ಸಂಖ್ಯೆಯಲ್ಲಿ ಜನ ಆಗಮಿಸುತ್ತಿದ್ದಾರೆ. ಬಂದವರೆ, ಯಡಿ ಯೂರಪ್ಪನವರಿಗೆ ಅಭಿನಂದನೆಯ ಮಹಾಪೂರವನ್ನೇ ಹರಿಸುತ್ತಿದ್ದಾರೆ.

ಹೀಗೆ ಬಂದಂತಹ ರಾಜಕೀಯ ನಾಯಕರು, ಹಿತೈಷಿಗಳು ಹಾಗೂ ಅಭಿಮಾನಿಗಳು ಕೈಯ್ಯಲ್ಲಿ ಹೂಗುಚ್ಛ ಇಲ್ಲವೇ ಹಾರವನ್ನು ತಂದು ಯಡಿಯೂರಪ್ಪನವರಿಗೆ ಸಲ್ಲಿಸಿ ಹಸ್ತಲಾಘವ ಮಾಡಿ ಅಭಿನಂದಿಸುತ್ತಿದ್ದರೆ, ಮತ್ತೆ ಕೆಲವರು ಭಾರೀ ಗಾತ್ರದ ನಾನಾ ವಿಧದ ಹೂವಿನ ಹಾರ ಹಾಕಿ, ಕಾಲಿಗೆ ಬಿದ್ದು ಆಶೀರ್ವಾದವನ್ನು ಪಡೆಯುತ್ತಿರು ವುದು ಸರ್ವೇಸಾಮಾನ್ಯ ದೃಶ್ಯವಾಗಿದೆ.

ಭಾರತೀಯ ಜನತಾ ಪಕ್ಷದ ಶಾಸಕರೂ ಹಾಗೂ ಮುಖಂಡರು ತಮ್ಮ ನಾಯಕನಿಗೆ ಅಭಿನಂದನೆ ಸಲ್ಲಿಸುವುದರ ಜೊತೆಗೆ ಮುಂದಿನ ರಾಜಕೀಯ ಕಾರ್ಯತಂತ್ರಗಳ ಬಗ್ಗೆ ಲಘು ಚರ್ಚೆ ನಡೆಸುತ್ತಿದ್ದಾರೆ. ಸಮಾಜದ ವಿವಿಧ ಕ್ಷೇತ್ರದ ಗಣ್ಯರೂ ಸಹ ಬಹು ಸಂಖ್ಯೆಯಲ್ಲಿ ಆಗಮಿಸಿ, ಅಭಿನಂದನೆ ಸಲ್ಲಿಸಿ, ಶುಭ ಕೋರುತ್ತಿದ್ದಾರೆ. ಮಹಿಳಾ ಕಾರ್ಯಕರ್ತರೂ ಹಾಗೂ ಪದಾಧಿಕಾರಿ ಗಳೂ ಬಂದವರೆ, ಯಡಿಯೂರಪ್ಪನ ವರಿಗೆ ಸಿಹಿ ತಿನ್ನಿಸಿ, ಅಭಿನಂದಿಸಿ ಕೆಲ ವರು ಆಶೀರ್ವಾದವನ್ನು ಪಡೆಯುತ್ತಿದ್ದಾರೆ.

ಯಡಿಯೂರಪ್ಪನವರ ನಿವಾಸದ ಸುತ್ತಮುತ್ತ ಪಕ್ಷದ ಬ್ಯಾನರ್ ಮತ್ತು ಬಂಟಿಂಗ್ಸ್ ಗಳು ರಾರಾಜಿಸುತ್ತಿವೆ. ಸ್ವತಃ ಯಡಿಯೂರಪ್ಪ ನವರ ಧವಳಗಿರಿ ನಿವಾಸದ ಮೇಲೆಯೇ ಪಕ್ಷದ ಬಾವುಟ ಹಾರಾಡುತ್ತಿದೆ. ಬೆಳಿಗ್ಗೆ ಯಿಂದಲೇ ಅಪಾರ ಸಂಖ್ಯೆಯಲ್ಲಿ ಜನರು ಜಮಾಯಿಸುತ್ತಿದ್ದ ಹಿನ್ನೆಲೆಯಲ್ಲಿ, ಜನ ಹಾಗೂ ವಾಹನ ಸಂಚಾರವನ್ನು ನಿಯಂತ್ರಿ ಸುವ ಸಲುವಾಗಿ ಪೊಲೀಸರು ಬ್ಯಾರಿಕೇಡ್ ಗಳನ್ನು ಹಾಕಿದ್ದಾರೆ. ಜೊತೆಗೆ ಭಾರೀ ಪ್ರಮಾಣದಲ್ಲಿ ಪೊಲೀಸ್ ಸಿಬ್ಬಂದಿ ಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ರಾಜ್ಯದ ಮೂಲೆ ಮೂಲೆಗಳಿಂದ ಬಿಜೆಪಿ ಕಾರ್ಯಕರ್ತರು, ಮುಖಂಡರು ನಾನಾ ವಾಹನಗಳಿಂದ ಆಗಮಿಸುತ್ತಿರುವು ದರಿಂದ ಧವಳಗಿರಿ ಸುತ್ತಮುತ್ತಲ ರಸ್ತೆಗಳಲ್ಲಿ ಭಾರೀ ವಾಹನ ದಟ್ಟಣೆ ಉಂಟಾಗಿದೆ. ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿ ಕೊಡಲು ಸಂಚಾರ ಪೊಲೀಸರು ಹರ ಸಾಹಸ ಪಡುತ್ತಿದ್ದಾರೆ.

ಮಾಧ್ಯಮದವರಂತೂ ಭಾರೀ ಸಂಖ್ಯೆಯಲ್ಲಿ ಮನೆಯ ಮುಂದೆ ಠಿಕಾಣಿ ಹೂಡಿದ್ದಾರೆ. ಬಹಳಷ್ಟು ರಾಷ್ಟ್ರೀಯ, ಅಂತಾರಾಷ್ಟ್ರೀಯ ಹಾಗೂ ಸ್ಥಳೀಯ ಸುದ್ದಿವಾಹಿನಿಗಳ ವರದಿಗಾರರು ಹಾಗೂ ಕ್ಯಾಮರಾಮನ್‍ಗಳು, ಪತ್ರಕರ್ತರು ಇಲ್ಲಿನ ಕ್ಷಣಕ್ಷಣದ ರಾಜಕೀಯ ಬೆಳವಣಿಗೆಗಳನ್ನು ನೇರ ವರದಿ ಮಾಡಲು ಸಜ್ಜಾಗಿ ನಿಂತಿ ದ್ದಾರೆ. ಇದಕ್ಕೆ ಅನುಕೂಲವಾಗುವಂತೆ ಧವಳಗಿರಿ ನಿವಾಸದ ಮುಂದೆ ಸೂಕ್ತ ವ್ಯವಸ್ಥೆ ಯನ್ನು ಅವರಿಗೆ ಮಾಡಿಕೊಡಲಾಗಿದೆ.

ವಿಜಯೋತ್ಸವ: ಮನೆ ಮುಂದೆ ಬಿಜೆಪಿ ಕಾರ್ಯಕರ್ತರು ಹಾಗೂ ಯಡಿಯೂ ರಪ್ಪ ಅಭಿಮಾನಿಗಳು ಸಿಹಿ ಹಂಚಿ ಸಂಭ್ರಮ ಆಚರಿಸುತ್ತಿರುವುದು ಹಬ್ಬದ ವಾತಾವರಣ ದಂತೆ ಕಳೆ ಕಟ್ಟಿದೆ. ಪಟಾಕಿ ಸಿಡಿಸುವುದು, ಬಿಡಿ ಹೂ ಎರಚುವುದು, ಪರಸ್ಪರ ಸಿಹಿ ವಿನಿಮಯ ಮಾಡಿಕೊಳ್ಳುವುದು, ಯಡಿ ಯೂರಪ್ಪ ಮತ್ತು ಬಿಜೆಪಿಗೆ ಜಯಕಾರ ಹಾಕುವುದು, ಮುಂದುವರೆದು ಪ್ರಧಾನ ಮಂತ್ರಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ಜಯಘೋಷ ಕೂಗುವುದು ಹೀಗೆ ಸಂಭ್ರಮ ಮನೆ ಮಾಡಿದೆ.

Translate »