ಮೈಸೂರು ವೃತ್ತದ ನೂತನ ಸಿಸಿಎಫ್ ಆಗಿ ಟಿ.ಹೀರಾಲಾಲ್ ಅಧಿಕಾರ ಸ್ವೀಕಾರ
ಮೈಸೂರು

ಮೈಸೂರು ವೃತ್ತದ ನೂತನ ಸಿಸಿಎಫ್ ಆಗಿ ಟಿ.ಹೀರಾಲಾಲ್ ಅಧಿಕಾರ ಸ್ವೀಕಾರ

July 23, 2019

ಮೈಸೂರು; ಅರಣ್ಯ ಇಲಾಖೆಯ ಮೈಸೂರು ವೃತ್ತದ ನೂತನ ಸಿಸಿಎಫ್ ಆಗಿ ಟಿ.ಹೀರಾಲಾಲ್ ಅಧಿಕಾರ ಸ್ವೀಕರಿಸಿದರು.

ಮೈಸೂರಿನ ಅಶೋಕಪುರಂನಲ್ಲಿರುವ ಅರಣ್ಯ ಭವನದಲ್ಲಿ ಎಪಿಸಿಸಿಎಫ್ ಜಗತ್ ರಾಮ್ ಅವರಿಂದ ಟಿ.ಹೀರಾಲಾಲ್ ಅಧಿಕಾರ ಸ್ವೀಕರಿಸಿದರು. 2002ರ ಬ್ಯಾಚ್‍ನ ಐಎಫ್‍ಎಸ್ ಅಧಿಕಾರಿಯಾಗಿರುವ ಟಿ.ಹೀರಾಲಾಲ್ ಅವರು ಹಳಿಯಾಳದಲ್ಲಿ ಪ್ರೊಬೆಷನರಿ ಕರ್ತವ್ಯ ಮುಗಿಸಿ ಹನೂರಿನಲ್ಲಿ ಎಸಿಎಫ್ ಆಗಿ ಕಾರ್ಯ ನಿರ್ವ ಹಿಸಿದ್ದರು. ನಂತರ ಡಿಸಿಎಫ್ ಆಗಿ ಬಡ್ತಿ ಪಡೆದು ಬೀದರ್, ಶಿರಸಿ, ಭದ್ರಾವತಿ, ದಾವಣಗೆರೆ, ಗೋಕಾಕ್, ಕಾರವಾರದಲ್ಲಿ ಸೇವೆ ಸಲ್ಲಿಸಿದ್ದರು.

2016ರಲ್ಲಿ ಬಡ್ತಿ ಪಡೆದು ಸಿಎಫ್ ಆಗಿ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸಿದ್ದರು. ನಂತರ ತಾಂಡ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದೀಗ ಸಿಸಿಎಫ್ ಆಗಿ ಬಡ್ತಿ ಪಡೆದು ಮೈಸೂರು ವೃತ್ತÀದ ಸಿಸಿಎಫ್ ಆಗಿ ಅವರು ನಿಯೋಜನೆಗೊಂಡಿದ್ದಾರೆ.

ಮೂಲತಃ ದಾವಣಗೆರೆ ಜಿಲ್ಲೆಯ ಚಿಕ್ಕಾಲಿವನ ನಿವಾಸಿಯಾಗಿರುವ ಟಿ.ಹೀರಾಲಾಲ್ ದಕ್ಷ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದು, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹಲವು ಸುಧಾರಣೆ ತಂದಿದ್ದರು. ಅಲ್ಲದೆ ಕಳ್ಳಬೇಟೆಗಾರರಿಗೆ ದುಸ್ವಪ್ನ ಎನಿಸಿದ್ದರು. ಇದೀಗ ಮೈಸೂರು ವೃತ್ತದ ಸಿಸಿಎಫ್ ಆಗಿ ಸೇವೆ ಆರಂಭಿಸಿದ್ದಾರೆ. ಮೈಸೂರು ಮತ್ತು ಮಂಡ್ಯ ಜಿಲ್ಲೆ ಇವರ ವ್ಯಾಪ್ತಿಗೆ ಒಳಪಡುತ್ತದೆ.

Translate »