Tag: Congress-JDS

ಮೈಮುಲ್ ಚುನಾವಣೆಯಲ್ಲೂ ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲ
ಮೈಸೂರು

ಮೈಮುಲ್ ಚುನಾವಣೆಯಲ್ಲೂ ಜೆಡಿಎಸ್‍ನೊಂದಿಗೆ ಮೈತ್ರಿ ಇಲ್ಲ

March 15, 2021

ಮೈಸೂರು, ಮಾ.14(ಎಸ್‍ಪಿಎನ್)- ಮೈಮುಲ್ ಚುನಾವಣೆ ಸೇರಿದಂತೆ ಯಾವುದೇ ಚುನಾವಣೆಯಲ್ಲೂ ಜೆಡಿಎಸ್‍ನೊಂದಿಗೆ ಕಾಂಗ್ರೆಸ್ ಮೈತ್ರಿ ಮಾಡಿಕೊಳ್ಳುವು ದಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಘೋಷಿಸಿದರು. ಮೈಸೂರು ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೈಮುಲ್ ವಿಚಾರವಾಗಲಿ, ಬೇರೆ ಯಾವುದೇ ರಾಜಕೀಯ ವಿಚಾರ ವಾಗಲಿ ಜೆಡಿಎಸ್‍ನೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಸ್ಥಳೀಯ ಚುನಾವಣೆಗಳು ಯಾವುದೇ ಪಕ್ಷದ ಚಿಹ್ನೆ ಮೇಲೆ ನಡೆಯುವುದಿಲ್ಲ. ಸ್ಥಳೀಯ ಹೊಂದಾಣಿಕೆ ಮೇಲೆ ಈ ಚುನಾವಣೆ ಗಳು ನಡೆಯಲಿವೆ. ಹಾಗಿದ್ದರೂ ನಮ್ಮ ಕಡೆಯಿಂದ ಜೆಡಿಎಸ್‍ಗೆ ಯಾವುದೇ…

ಮೈತ್ರಿ ಸರ್ಕಾರ ಪತನ
ಮೈಸೂರು

ಮೈತ್ರಿ ಸರ್ಕಾರ ಪತನ

July 24, 2019

ಬೆಂಗಳೂರು: ಕಾಂಗ್ರೆಸ್-ಜೆಡಿಎಸ್‍ನ 20 ಶಾಸಕರಲ್ಲಿ ಐವರ ಗೈರು ಹಾಗೂ 15 ಮಂದಿಯ ರಾಜೀನಾಮೆಯಿಂದ ಅಸ್ಥಿರಗೊಂಡಿದ್ದ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಕೊನೆಗೂ ಪತನವಾಗಿದೆ. ಮುಖ್ಯಮಂತ್ರಿ ಕುಮಾರಸ್ವಾಮಿ ಮಂಡಿಸಿದ್ದ ವಿಶ್ವಾಸಮತದ ನಿರ್ಣಯವನ್ನು ಇಂದು ರಾತ್ರಿ ಏಳು ಇಪ್ಪತ್ತಕ್ಕೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಮತಕ್ಕೆ ಹಾಕಿದಾಗ, ಅದರ ಪರವಾಗಿ 99 ಮತಗಳು ಬಿದ್ದರೆ, ಅದರ ವಿರುದ್ಧ 105 ಮತಗಳು ಬಿದ್ದವು. 6 ಮತಗಳಿಂದ 14 ತಿಂಗಳ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಪತನಗೊಂಡಿತು….

ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಗೆಲುವು: ಬಿಎಸ್‍ವೈ
ಮೈಸೂರು

ಪ್ರಜಾಪ್ರಭುತ್ವಕ್ಕೆ ಸಿಕ್ಕ ದೊಡ್ಡ ಗೆಲುವು: ಬಿಎಸ್‍ವೈ

July 24, 2019

ಬೆಂಗಳೂರು: ಹೆಚ್.ಡಿ.ಕುಮಾರಸ್ವಾಮಿ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರಕ್ಕೆ ವಿಶ್ವಾಸಮತಯಾಚನೆ ಯಲ್ಲಿ ಸೋಲುಂಟಾಗಿರುವುದು ಪ್ರಜಾಪ್ರಭುತ್ವದ ಗೆಲುವು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಹೇಳಿದ್ದಾರೆ. ವಿಶ್ವಾಸಮತಯಾಚನೆ ಪ್ರಕ್ರಿಯೆ ಪೂರ್ಣಗೊಂಡು ಫಲಿತಾಂಶ ಬಂದ ನಂತರ ವಿಧಾನಸೌಧದಲ್ಲಿ ಮೊದಲ ಪ್ರತಿಕ್ರಿಯೆ ನೀಡಿರುವ ಯಡಿಯೂರಪ್ಪ, ರಾಜ್ಯದಲ್ಲಿ ಅಭಿವೃದ್ಧಿ ಪರ್ವ ಆರಂಭವಾಗ ಲಿದೆ. ಮೈತ್ರಿ ಸರ್ಕಾರ ಬಹುಮತ ಕಳೆದುಕೊಂಡಿರುವುದು ಪ್ರಜಾಪ್ರಭುತ್ವದ ವ್ಯವಸ್ಥೆಗೆ ಸಿಕ್ಕ ಅತಿ ದೊಡ್ಡ ಗೆಲುವು, ರೈತರ ಸಮಸ್ಯೆಗಳನ್ನು ಬಗೆಹರಿಸಬೇಕಿದೆ. ಬಿಜೆಪಿ ಸರ್ಕಾರ ಬರ ಪರಿಹಾರ ಕಾರ್ಯಗಳಿಗೆ ಆದ್ಯತೆ ನೀಡಲಿದೆ, ರಾಜ್ಯಕ್ಕೆ ಸ್ಥಿರ ಸರ್ಕಾರ…

ಇಂದು ಸಂಜೆ 6ಕ್ಕೆ ಡೆಡ್‍ಲೈನ್ ಫಿಕ್ಸ್
ಮೈಸೂರು

ಇಂದು ಸಂಜೆ 6ಕ್ಕೆ ಡೆಡ್‍ಲೈನ್ ಫಿಕ್ಸ್

July 23, 2019

ಬೆಂಗಳೂರು: ಅನಗತ್ಯವಾದ ಭಾಷಣ… ಗದ್ದಲ… ವಿತಂಡವಾದಗಳಿಂದ ಇಡೀ ದಿನ ಕಾಲಹರಣ ಮಾಡಿ ವಿಶ್ವಾಸ ಮತ ಕಲಾಪವನ್ನು ನಾಳೆಗೆ ಮುಂದೂಡಿ ಸುವ ಮೂಲಕ ಒಂದು ದಿನ ಕಾಲಾವಕಾಶ ಪಡೆಯುವಲ್ಲಿ ಕಾಂಗ್ರೆಸ್-ಜೆಡಿಎಸ್ ಶಾಸಕರು ಯಶಸ್ವಿಯಾದರು. ನಾಳೆ ಸಂಜೆ 6 ಗಂಟೆಗೆ ವಿಶ್ವಾಸಮತ ಯಾಚನೆ ಪ್ರಕ್ರಿಯೆ ಪೂರ್ಣ ಗೊಳಿಸುವುದಾಗಿ ಆಡಳಿತ ಪಕ್ಷಗಳ ಸದಸ್ಯರೇ ಸ್ವಯಂ ಡೆಡ್‍ಲೈನ್ ನಿಗದಿಪಡಿಸಿದ್ದಾರೆ. ಸೋಮವಾರದಂದು ವಿಶ್ವಾಸಮತ ಪ್ರಕ್ರಿಯೆ ಮುಕ್ತಾಯಗೊಳಿಸುತ್ತೇವೆ ಎಂದು ಸದನದಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಶುಕ್ರವಾರ ನೀಡಿದ್ದ…

ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಜೊತೆ ಬಿರಿಯಾನಿ ತಿಂದಿಲ್ಲ, ಖರ್ಜೂರ ಮಾತ್ರ ತಿಂದೆ
ಮೈಸೂರು

ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಜೊತೆ ಬಿರಿಯಾನಿ ತಿಂದಿಲ್ಲ, ಖರ್ಜೂರ ಮಾತ್ರ ತಿಂದೆ

July 23, 2019

ಬೆಂಗಳೂರು: ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ಅವರ ಜತೆ ತಾವು ಬಿರಿಯಾನಿ ತಿಂದಿಲ್ಲ, ಖರ್ಜೂರವನ್ನಷ್ಟೇ ತಿಂದಿದ್ದೇನೆ ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಬಿರಿಯಾನಿ ಕಥೆ ಯನ್ನು ಬಿಚ್ಚಿಟ್ಟರು. ಆತನ ಜೊತೆ ಕುಳಿತು ತಾವು ಬಿರಿಯಾನಿ ತಿಂದಿದ್ದಾಗಿ ಮಾಧ್ಯಮ ಗಳಲ್ಲಿ ವರದಿಯಾಗಿದೆ. ಸದನದಲ್ಲೂ ತಮ್ಮನ್ನೇ ಉದ್ದೇಶಿಸಿ ಬಿಜೆಪಿ ಸದಸ್ಯ ಸಿ.ಟಿ. ರವಿ ಟೀಕೆ ಮಾಡಿದ್ದಾರೆ. ಆತ ಐಎಂಎ ಮುಖ್ಯ ಸ್ಥರು ಎಂಬುದೇ ಗೊತ್ತಿರಲಿಲ್ಲ. ರಂಜಾನ್ ಹಬ್ಬದ ಸಂದರ್ಭದಲ್ಲಿ ತಮ್ಮನ್ನು ಬಲ ವಂತ ಮಾಡಿ ಶಾಸಕರೊಬ್ಬರು ಕರೆದೊಯ್ದಿದ್ದರು. ಹೃದಯ…

ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..?
ಮೈಸೂರು

ಸ್ವಾಭಿಮಾನವಿದ್ದರೇ ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು..?

July 23, 2019

ಬೆಂಗಳೂರು: ರಾಜೀನಾಮೆ ನೀಡಿ ಮುಂಬೈಗೆ ತೆರಳಿರುವ 15 ಮಂದಿ ಅತೃಪ್ತ ಶಾಸಕರು ನಾವು ಯಾವುದೇ ಆಸೆ ಆಮಿಷಕ್ಕೆ ಒಳಗಾಗಿಲ್ಲ. ಸ್ವಾಭಿಮಾನದಿಂದ ರಾಜೀ ನಾಮೆ ಕೊಟ್ಟಿದ್ದೇವೆ ಎಂದಿದ್ದಾರೆ. ಆಗಾದರೇ ಸ್ವಾಭಿಮಾನ ವಿದ್ದಿದ್ದರೇ ಅವರು ರಾಜ್ಯ ಬಿಟ್ಟು ಯಾಕೆ ಹೋಗಬೇಕಿತ್ತು ಎಂದು ಜೆಡಿಎಸ್ ಶಾಸಕ ಎ.ಟಿ.ರಾಮಸ್ವಾಮಿ ಪ್ರಶ್ನಿಸಿದರು. ವಿಧಾನಸಭೆ ಕಲಾಪದಲ್ಲಿ ವಿಶ್ವಾಸಮತ ಯಾಚನೆ ಪ್ರಸ್ತಾಪದ ಮೇಲಿನ ಚರ್ಚೆ ವೇಳೆ ಮಾತನಾಡಿದ ಶಾಸಕ ಎ.ಟಿ.ರಾಮಸ್ವಾಮಿ, ಈಗ ಎಲ್ಲಾ ಕಡೆ ಪ್ರಜಾಪ್ರಭುತ್ವ ಮೌಲ್ಯಗಳು ಇಲ್ಲ. ವಿರೋಧ ನೈತಿಕ ಮೌಲ್ಯ ಸಿದ್ಧಾಂತದ ಮೇಲೆ ನಿರ್ಣಯ…

ಶಾಸಕಾಂಗ ಪಕ್ಷದ ನಾಯಕ ಶಾಸಕರಿಗೆ ವಿಪ್ ನೀಡಬಹುದು
ಮೈಸೂರು

ಶಾಸಕಾಂಗ ಪಕ್ಷದ ನಾಯಕ ಶಾಸಕರಿಗೆ ವಿಪ್ ನೀಡಬಹುದು

July 23, 2019

ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರುಗಳು ತಮ್ಮ ಸದಸ್ಯರನ್ನು ಕಡ್ಡಾಯವಾಗಿ ಸದನದ ಕಲಾಪಗಳಲ್ಲಿ ಭಾಗವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಕ್ರಿಯಾಲೋಪದ ಪ್ರಸ್ತಾವಕ್ಕೆ ಇಂದು ತೀರ್ಪು ನೀಡಿದ ಅವರು, ಸುಪ್ರೀಂಕೋರ್ಟ್ ಯಾವ ಅರ್ಥದಲ್ಲಿ ರಾಜೀನಾಮೆ ನೀಡಿರುವ ಸದಸ್ಯರು ಸದನಕ್ಕೆ ಹೋಗುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿರುವುದು ತಿಳಿದಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರ ಹಕ್ಕು ಮತ್ತು ರಕ್ಷಣೆ…

ಸೋಷಿಯಲ್ ಮೀಡಿಯಾದಲ್ಲಿ ನಕಲಿ ರಾಜೀನಾಮೆ ಪತ್ರ ವೈರಲ್!
ಮೈಸೂರು

ಸೋಷಿಯಲ್ ಮೀಡಿಯಾದಲ್ಲಿ ನಕಲಿ ರಾಜೀನಾಮೆ ಪತ್ರ ವೈರಲ್!

July 23, 2019

ಬೆಂಗಳೂರು: ಇದು ಅಪ್ಪಟ ಸುಳ್ಳು ಸುದ್ದಿ… ಸಂವಿಧಾನಾತ್ಮಕವಾಗಿ ರುವ ಸಿಎಂ ಹುದ್ದೆಗೆ ಅದರದ್ದೇ ಆದ ಗೌರವ ಇದೆ. ಆದರೆ ನಮ್ಮ ಸೋಷಿ ಯಲ್ ಮೀಡಿಯಾ ಎಲ್ಲಿಗೆ ಬಂದಿದೆ ಎಂದರೆ ರಾಜಕೀಯ ಗೊಂದಲಗಳು ನಡೆಯುತ್ತಿರುವುದರಲ್ಲಿಯೂ ಕಿಡಿಗೇಡಿ ತನ ಮಾಡಿದೆ. ಕಳೆದ 5 ದಿನಗಳಿಂದ ವಿಶ್ವಾಸಮತದ ಚರ್ಚೆ ನಡೆಯುತ್ತಿ ದ್ದರೂ ಸದನ ಯಾವುದೇ ತೀರ್ಮಾ ನಕ್ಕೆ ಸದನ ಬಂದಿಲ್ಲ. ಇದೆಲ್ಲದರ ನಡುವೆ ಸಿಎಂ ಕುಮಾರಸ್ವಾಮಿ ರಾಜೀ ನಾಮೆ ಕೊಟ್ಟಿದ್ದಾರೆ ಎಂಬ ರೀತಿಯ ಪತ್ರ ಸೃಷ್ಟಿ ಮಾಡಿ ಹರಿಯಬಿಡಲಾಗಿದೆ. ಸಿಎಂ ಕುಮಾರಸ್ವಾಮಿ…

ದೋಸ್ತಿ ಕ್ಲೈಮ್ಯಾಕ್ಸ್: ಕೊನೆ ಘಳಿಗೆ ಪ್ರಯತ್ನ ಪವಾಡ ಸದೃಶ ಫಲ ನೀಡಬಹುದೇ…!?
ಮೈಸೂರು

ದೋಸ್ತಿ ಕ್ಲೈಮ್ಯಾಕ್ಸ್: ಕೊನೆ ಘಳಿಗೆ ಪ್ರಯತ್ನ ಪವಾಡ ಸದೃಶ ಫಲ ನೀಡಬಹುದೇ…!?

July 18, 2019

ಬೆಂಗಳೂರು: ಶಾಸಕರ ರಾಜೀ ನಾಮೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಮಹತ್ವದ ಆದೇಶ ನೀಡಿರುವ ಸುಪ್ರೀಂಕೋರ್ಟ್, ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಹಾಜರಾಗುವಂತೆ ಶಾಸಕರನ್ನು ಒತ್ತಾಯಿಸುವಂತಿಲ್ಲ ಎಂದು ಆದೇಶ ನೀಡುವ ಮೂಲಕ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಪತನದ ಅಂಚಿಗೆ ಬಂದು ನಿಂತಿದೆ. ಶಾಸಕರ ರಾಜೀನಾಮೆಯನ್ನು ಅಂಗೀಕರಿಸಬೇಕೋ ಅನರ್ಹಗೊಳಿಸಬೇಕೋ ಎಂಬ ಕುರಿತು ನಿಮ್ಮ ಕಾಲಮಿತಿ ಯಲ್ಲಿ ನೀವು ನಿರ್ಧಾರ ತೆಗೆದುಕೊಳ್ಳಿ. ಆದರೆ ವಿಶ್ವಾಸ ಮತ ಯಾಚನೆಯ ಸಂದರ್ಭದಲ್ಲಿ ಸದನಕ್ಕೆ ಹಾಜರಾಗ ಬೇಕೆಂದು ಒತ್ತಾಯಿಸಬೇಡಿ ಎಂದು ಸ್ಪೀಕರ್ ಅವರಿಗೆ ಸುಪ್ರೀಂಕೋರ್ಟ್…

ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮತ್ತೊಮ್ಮೆ ವಿಪ್
ಮೈಸೂರು

ಕಾಂಗ್ರೆಸ್, ಜೆಡಿಎಸ್ ಶಾಸಕರಿಗೆ ಮತ್ತೊಮ್ಮೆ ವಿಪ್

July 18, 2019

ಬೆಂಗಳೂರು: ವಿಧಾನ ಮಂಡಲ ಅಧಿವೇಶನ ಆರಂಭಕ್ಕೂ ಮುನ್ನ ಸದನದಲ್ಲಿ ಭಾಗವಹಿಸುವಂತೆ ಅತೃಪ್ತ ಶಾಸಕರಿಗೆ ವಿಪ್ ಜಾರಿಯಾಗಿತ್ತು. ಈಗ ವಿಶ್ವಾಸ ಮತ ಯಾಚನೆ ಹಿನ್ನೆಲೆಯಲ್ಲಿ ಗುರುವಾರ ಕಲಾಪದಲ್ಲಿ ಭಾಗಿಯಾಗುವಂತೆ ಮತ್ತೊಮ್ಮೆ ವ್ಹಿಪ್ ಜಾರಿ ಮಾಡಲಾ ಗಿದೆ ಎಂದು ವಿಧಾನಸಭೆ ಆಡಳಿತಪಕ್ಷದ ಮುಖ್ಯ ಸಚೇತಕ ಗಣೇಶ್ ಹುಕ್ಕೇರಿ ಹೇಳಿದ್ದಾರೆ. ಪ್ರಕೃತಿ ರೆಸಾರ್ಟ್ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಕ್ಷದ ಎಲ್ಲಾ ನಾಯಕರ ಜೊತೆ ಚರ್ಚಿಸಿ ಶಾಸಕರಿಗೆ ವ್ಹಿಪ್ ಜಾರಿ ಮಾಡಲಾಗಿದ್ದು, ಶಾಸಕರ ಮನೆಗಳಿಗೆ ವಿಪ್ ತಲುಪಿಸಲಾಗುತ್ತದೆ. ನಾಳೆ ಸದನದಲ್ಲಿ ಏನಾಗಲಿದೆ…

1 2 3 4
Translate »