ಶಾಸಕಾಂಗ ಪಕ್ಷದ ನಾಯಕ ಶಾಸಕರಿಗೆ ವಿಪ್ ನೀಡಬಹುದು
ಮೈಸೂರು

ಶಾಸಕಾಂಗ ಪಕ್ಷದ ನಾಯಕ ಶಾಸಕರಿಗೆ ವಿಪ್ ನೀಡಬಹುದು

July 23, 2019

ಬೆಂಗಳೂರು: ಶಾಸಕಾಂಗ ಪಕ್ಷದ ನಾಯಕರುಗಳು ತಮ್ಮ ಸದಸ್ಯರನ್ನು ಕಡ್ಡಾಯವಾಗಿ ಸದನದ ಕಲಾಪಗಳಲ್ಲಿ ಭಾಗವಹಿಸಬೇಕೆಂದು ಕಟ್ಟುನಿಟ್ಟಿನ ಸೂಚನೆ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ ಎಂದು ಸಭಾಧ್ಯಕ್ಷ ರಮೇಶ್‍ಕುಮಾರ್ ವಿಧಾನಸಭೆಯಲ್ಲಿಂದು ಸ್ಪಷ್ಟಪಡಿಸಿದ್ದಾರೆ.

ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ಕ್ರಿಯಾಲೋಪದ ಪ್ರಸ್ತಾವಕ್ಕೆ ಇಂದು ತೀರ್ಪು ನೀಡಿದ ಅವರು, ಸುಪ್ರೀಂಕೋರ್ಟ್ ಯಾವ ಅರ್ಥದಲ್ಲಿ ರಾಜೀನಾಮೆ ನೀಡಿರುವ ಸದಸ್ಯರು ಸದನಕ್ಕೆ ಹೋಗುವುದು ಅವರ ವಿವೇಚನೆಗೆ ಬಿಟ್ಟಿದ್ದು ಎಂದು ಹೇಳಿರುವುದು ತಿಳಿದಿಲ್ಲ. ನ್ಯಾಯಾಲಯದ ಆದೇಶದ ಪ್ರಕಾರ ರಾಜೀನಾಮೆ ನೀಡಿರುವ ಎಲ್ಲಾ ಶಾಸಕರ ಹಕ್ಕು ಮತ್ತು ರಕ್ಷಣೆ ನೀಡುವುದು ನನ್ನ ಕರ್ತವ್ಯ. ಅವರು ನನಗೆ ಮನವಿ ಮಾಡಿದರೆ ಅವರಿಗೆ ರಕ್ಷಣೆ ನೀಡುತ್ತೇನೆ. ಈ ನಿಟ್ಟಿನಲ್ಲಿ ನ್ಯಾಯಾಲಯ ಪ್ರಸ್ತಾಪ ಮಾಡಿರಬಹುದು ಎಂದು ಭಾವಿಸಿದ್ದೇನೆ. ಸಂವಿಧಾನದ 10ನೇ ಷೆಡ್ಯೂಲ್ ಪ್ರಕಾರ ನಿಮ್ಮ ಪಕ್ಷದ ಶಾಸಕರಿಗೆ ವಿಪ್ ನೀಡುವುದರಲ್ಲಿ ಯಾವುದೇ ತಪ್ಪಿಲ್ಲ. ನಿಮ್ಮ ಹಕ್ಕನ್ನು ರಾಜೀನಾಮೆ ನೀಡಿರುವ ಸದಸ್ಯರಿಗೂ ನೀಡಬಹುದೆಂದು ಸಭಾಧ್ಯಕ್ಷರು ಸ್ಷಷ್ಟಪಡಿಸಿದರು. ಅತೃಪ್ತ ಶಾಸಕರಿಗೆ ರಕ್ಷಣೆ ಕೊಡುವ ಜವಾಬ್ದಾರಿ ನನ್ನ ಮೇಲಿದೆ. ಅವರು ಸದನದಲ್ಲಿ ಭಾಗವಹಿಸಬಹುದು, ಅಥವಾ ಭಾಗವಹಿಸ ದಿರಬಹುದು, ಅವರ ಮೇಲೆ ಯಾವುದೇ ಒತ್ತಡ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು. ನನ್ನ ಯಾವುದೇ ಹಕ್ಕು ಉಲ್ಲಂಘನೆಯಾಗಿಲ್ಲ. ನನ್ನ ಯಾವುದೇ ಹಕ್ಕನ್ನು ಸುಪ್ರೀಂ ಕೋರ್ಟ್ ಉಲ್ಲಂಘಿಸಿಲ್ಲ ಎಂದು ಸ್ಪೀಕರ್ ರಮೇಶ್‍ಕುಮಾರ್ ಸ್ಪಷ್ಟಪಡಿಸಿದರು.

Translate »