ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಜೆಡಿಎಸ್  ಸೋತು ಸಿದ್ದರಾಮಯ್ಯ ಗೆಲ್ಲಲು ಜಿಟಿಡಿ ಕಾರಣ
ಮೈಸೂರು

ಚಾಮುಂಡೇಶ್ವರಿ ಉಪಚುನಾವಣೆಯಲ್ಲಿ ಜೆಡಿಎಸ್ ಸೋತು ಸಿದ್ದರಾಮಯ್ಯ ಗೆಲ್ಲಲು ಜಿಟಿಡಿ ಕಾರಣ

March 15, 2021

ಮೈಸೂರು,ಮಾ.14(ಎಂಟಿವೈ)-2006 ರಲ್ಲಿ ನಡೆದ ಚಾಮುಂಡೇಶ್ವರಿ ಕ್ಷೇತ್ರದ ಉಪ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡರು ದೂರವುಳಿದ ಕಾರಣ ನಮ್ಮ ಪಕ್ಷದ ಅಭ್ಯ ರ್ಥಿಗೆ ಸೋಲುಂಟಾಗಿ ಸಿದ್ದರಾಮಯ್ಯ ಗೆದ್ದರು ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಆರೋಪಿಸಿದರು.

ಮೈಸೂರಲ್ಲಿ ಭಾನುವಾರ ಪತ್ರಕರ್ತ ರೊಂದಿಗೆ ಮಾತನಾಡಿದ ಅವರು, ಜಿ.ಟಿ. ದೇವೇಗೌಡರಿಂದ ಪಕ್ಷಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಲೇ ಬಂದಿದೆ. ಅವರಿಂದ ಪಕ್ಷಕ್ಕೆ ಆಗುತ್ತಿರುವ ದ್ರೋಹ ಹೊಸದೇನು ಅಲ್ಲ. 2006ರಲ್ಲಿ ನಡೆದ ಚಾಮುಂಡೇಶ್ವರಿ ವಿಧಾನಸಭಾ ಉಪ ಚುನಾವಣೆಯಲ್ಲಿ ಸಿದ್ದ ರಾಮಯ್ಯ ವಿರುದ್ಧ ಜೆಡಿಎಸ್ ಅಭ್ಯರ್ಥಿ ಸೋಲು ಅನುಭವಿಸಲು ಜಿ.ಟಿ.ದೇವೇಗೌಡ ಕಾರಣ. ಚುನಾವಣೆಯ ಮುನ್ನಾ ದಿನ ನನಗೆ ಜ್ವರ ಕಾಣಿಸಿಕೊಂಡಿತ್ತು. ಭುಗತಗಳ್ಳಿ ಬಳಿ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯು ತ್ತಿದ್ದೆ. ಅಲ್ಲದೆ, ಚುನಾವಣಾ ಉಸ್ತುವಾರಿ ವಹಿಸಿಕೊಂಡಿದ್ದ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದ ಹೆಚ್.ಡಿ.ದೇವೇಗೌಡರು, ಸಾ.ರಾ.ಮಹೇಶ್ ಮನೆಯಲ್ಲಿದ್ದುಕೊಂಡು ನಿರ್ವಹಣೆ ಮಾಡು ತ್ತಿದ್ದರು. ಆ ಸಂದರ್ಭ ಚುನಾವಣೆಯ ಆರ್ಥಿಕ ಉಸ್ತುವಾರಿ ನೀಡಲಿಲ್ಲ ಎಂದು ಜಿ.ಟಿ. ದೇವೇಗೌಡ ಮುನಿಸಿಕೊಂಡು ಚುನಾವಣೆ ಯಿಂದ ದೂರ ಉಳಿದುಕೊಂಡರು. ಹೀಗಾಗಿ ನಾವು ಚುನಾವಣೆಯಲ್ಲಿ ಸೋಲು ಅನು ಭವಿಸಬೇಕಾಯಿತು. ಅವರು ಚುನಾವಣೆ ಯಿಂದ ದೂರ ಉಳಿಯದಿದ್ದರೇ ಆ ಚುನಾ ವಣೆಯನ್ನು ನಾವು 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಿದ್ದೆವು. ಅಂದೇ ನಾವು ಅವರನ್ನು ಅರ್ಥ ಮಾಡಿಕೊಂಡು ದೂರ ಇಡಬೇಕಾಗಿತ್ತು. ಆದರೆ ಮತ್ತೆ ಮತ್ತೆ ಅವಕಾಶ ಕೊಡುತ್ತಾ ಬಂದೆವು. ಇದೇ ನಮಗೆ ಮುಳುವಾಯಿತು. ಎಷ್ಟು ಬಾರಿ ದ್ರೋಹ ಸಹಿಸಿಕೊಳ್ಳಲು ಆಗುತ್ತದೆ ನೀವೇ ಹೇಳಿ? ಎಂದು ಪ್ರಶ್ನಿಸಿದರು.

ನನ್ನ ಎದುರಿಗೆ ಮಾತನಾಡಲು ಆಗ ದವರು ಹೆಚ್.ಡಿ.ದೇವೇಗೌಡರ ಬಳಿ ಹೋಗಿ ಜಿ.ಟಿ.ದೇವೇಗೌಡರ ಕುರಿತು ಕೆಲವು ವಿಚಾರ ಗಳೊಂದಿಗೆ ಬಲಿಷ್ಠ ನಾಯಕ ಎಂದು ಹೇಳಿ ದ್ದಾರೆ. ಇದರಿಂದಾಗಿಯೇ ಅವರಿಗೆ ಇವರ (ಜಿಟಿಡಿ) ಮೇಲೆ ಮೃದು ಧೋರಣೆ ಇತ್ತು. ಇದೀಗ ನಾನು ವಿವರವಾಗಿ ದೇವೇಗೌಡರ ಗಮನಕ್ಕೆ ತಂದಿದ್ದೇನೆ. ಇವರ ಬಗ್ಗೆ ಇಷ್ಟೊಂದು ಮೃದು ಧೋರಣೆ ತಳೆದರೆ ನಿಷ್ಠಾ ವಂತ ಕಾರ್ಯಕರ್ತರನ್ನು ಕಳೆದುಕೊಳ್ಳ ಬೇಕಾಗುತ್ತದೆ. ಪಕ್ಷಕ್ಕೆ ಸ್ಲೋ ಪಾಯಿಸನ್ ಹಾಕಿ ಮುಂದೆ ಅಭ್ಯರ್ಥಿಗಳನ್ನು ಹಾಕಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣ ಮಾಡು ತ್ತಾರೆ. ಈಗಾಗಲೇ ಅವರು ಪಕ್ಷದಿಂದ ದೂರ ವಾಗಿದ್ದಾರೆ. ಮುಂದೆ ಯಾವುದೇ ಕಾರಣಕ್ಕೂ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸುವ ಪ್ರಶ್ನೆಯೇ ಇಲ್ಲ ಎಂದು ಕಿಡಿಕಾರಿದರು.

ಕೆಲವು ವಿಚಾರದಲ್ಲಿ ಶಾಸಕ ಸಾ.ರಾ. ಮಹೇಶ್ ಅವರೊಂದಿಗೆ ಮುನಿಸಿಕೊಂಡು ಜಿಟಿಡಿ ಪಕ್ಷದಿಂದ ದೂರವಾಗಿದ್ದಾರೆ. ಆದರೆ, ಸಾ.ರಾ.ಮಹೇಶ್ ಏನು ಮಾಡಿದ್ದಾರೋ ತಿಳಿಯದು. ನಾನು ಸಾ.ರಾ.ಮಹೇಶ್ ಮಾತನ್ನು ಮಾತ್ರ ಕೇಳುತ್ತೇನೆ ಅನ್ನುವುದು ಕೂಡ ತಪ್ಪು. ರಾಜಕೀಯ, ಸಹಕಾರಿ ಕ್ಷೇತ್ರದಲ್ಲಿ ಸಾಕಷ್ಟು ಎತ್ತರಕ್ಕೆ ಬೆಳೆದಿದ್ದೇನೆ ಎಂದು ಸ್ವತಃ ಶಾಸಕ ಜಿ.ಟಿ.ದೇವೇಗೌಡÀರೇ ಹೇಳಿಕೊಂಡಿ ದ್ದಾರೆ. ನಮಗೆ ಬೆಳೆದವರು ಬೇಡ, ಸಣ್ಣ ವರು ಸಾಕು. ಇಂಥವರನ್ನು ಪಕ್ಷದಿಂದ ದೂರ ಇಡುವುದು ಉತ್ತಮ. ನನ್ನ ರಾಜಕೀಯ ಜೀವನದಲ್ಲಿ ಬಹಳಷ್ಟು ಅನುಭವ ಆಗಿದೆ. ಎಲ್ಲಾ ಕಷ್ಟ-ಸುಖದಲ್ಲಿ ಭಾಗಿಯಾಗುತ್ತೇನೆ. ನಾನು ಭಾವನಾತ್ಮಕವಾಗಿ ಎಲ್ಲರೊಂದಿಗೆ ಬೆರೆಯುತ್ತೇನೆ. 2013ರಿಂದ 2018ರ ಅವಧಿ ಯಲ್ಲಿ ಏಳೆಂಟು ಜನ ಶಾಸಕರು ಬಿಟ್ಟು ಹೋದರು. ಯಾರನ್ನೂ ನಾನು ವಾಪಾಸ್ ಕರೆದಿಲ್ಲ. ಅದೇ ರೀತಿ ಜಿ.ಟಿ. ದೇವೇಗೌಡ ರನ್ನು ಮತ್ತೆ ಆಹ್ವಾನಿಸುವ ಪ್ರಶ್ನೆಯೇ ಇಲ್ಲ. ಒಡಹುಟ್ಟಿದವರಿಗಿಂತ ಚೆನ್ನಾಗಿದ್ದವರು ಸಹ ಬಿಟ್ಟು ಹೋಗಿದ್ದಾರೆ. ಅವರನ್ನು ವಾಪಾಸ್ ಕರೆಯಿಸಿಕೊಂಡಿಲ್ಲ. ಅದೇ ರೀತಿ ನಾನು ಜೆಡಿಎಸ್‍ನಲ್ಲಿ ಇರುವವರೆಗೆ ಜಿ.ಟಿ. ದೇವೇಗೌಡರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ಪ್ರಶ್ನೆ ಮತ್ತೆ ಉದ್ಭವಿಸುವುದಿಲ್ಲ ಎಂದು ಪುನರುಚ್ಚರಿಸಿದರು.

ಜೆಡಿಎಸ್ ಅಸ್ತಿತ್ವ ಉಳಿಸಿಕೊಳ್ಳಲು ಮೈಸೂರಿಗೆ ಆಗಮಿಸಿ ಮೈಮುಲ್ ಚುನಾ ವಣೆ ಎದುರಿಸುತ್ತಿದ್ದೇನೆ. ಇದರಲ್ಲಿ ಶಾಸಕ ಸಾ.ರಾ.ಮಹೇಶ್ ಅವರಿಗೆ ವೈಯಕ್ತಿಕ ಲಾಭ ವಿಲ್ಲ. ಪಕ್ಷದ ಹಿತದೃಷ್ಟಿಯಿಂದ ಚುನಾವಣೆ ಎದುರಿಸುತ್ತಿದ್ದೇವೆ. ಮೈಮುಲ್ ನೇಮಕಾತಿ ಯಲ್ಲಿ ದುಡ್ಡು ಹೊಡೆಯಲು ಸಾ.ರಾ. ಮಹೇಶ್ ಹೋಗುವುದಿಲ್ಲ. ಹೆಬ್ಬೆಟ್ಟು ಒತ್ತುವ ಅಧ್ಯಕ್ಷನ ನೇಮಕ ಮಾಡಿ ನಂತರ ಏನೆಲ್ಲ ನಡೆಯಿತು ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಪರೋಕ್ಷವಾಗಿ ಜಿ.ಟಿ. ದೇವೇಗೌಡರ ವಿರುದ್ಧ ಹರಿಹಾಯ್ದರು.

ಪಕ್ಷ ಬೆಳೆಸಿದ ಕಾರ್ಯಕರ್ತರಿಗೆ ಜಿ.ಟಿ. ದೇವೇಗೌಡ ನೋವು ಮಾಡಿ ಹೋಗಿದ್ದಾರೆ. ಜಿ.ಟಿ.ದೇವೇಗೌಡರಿಂದ ಜೆಡಿಎಸ್‍ಗೆ ಮತ್ತೊಂದು ಶಾಕ್ ಎಂದು ಮಾಧ್ಯಮ ಗಳಲ್ಲಿ ಪ್ರಕಟವಾಗುತ್ತದೆ. ಆದರೆ, ನನಗೆ ಅದೊಂದು ಶಾಕ್ ಅಲ್ಲ. ಶಾಕ್ ಹೊಡೆ ಯಲು ಅವರಲ್ಲಿ ಪವರೇ ಇಲ್ಲ. ನನ್ನ ಬೆಳೆಸಿದ ಕಾರ್ಯಕರ್ತರಿಗೆ ನೋವಾದಾಗ ಅವರು ಎಷ್ಟೇ ದೊಡ್ಡ ನಾಯಕರಾಗಿರಲಿ, ಅವರ ವಿರುದ್ಧ ಹೋರಾಟ ಮಾಡುತ್ತೇನೆ. ದೊಡ್ಡ ನಾಯಕರನ್ನು ನಂಬಿಕೊಂಡು ರಾಜಕಾರಣ ಮಾಡುವ ಅವಶ್ಯಕತೆ ಇಲ್ಲ ಎಂದು ಹೇಳಿದರು.

Translate »