ಜಿ.ಟಿ.ದೇವೇಗೌಡರ ಬಣ ಜಯಭೇರಿ
ಮೈಸೂರು

ಜಿ.ಟಿ.ದೇವೇಗೌಡರ ಬಣ ಜಯಭೇರಿ

March 29, 2021

ಮೈಸೂರು,ಮಾ.28(ಆರ್‍ಕೆಬಿ)- ಕರ್ನಾ ಟಕ ರಾಜ್ಯ ಸಹಕಾರ ಮಹಾಮಂಡಳದ 13 ನಿರ್ದೇಶಕ ಸ್ಥಾನಗಳಿಗೆ ಮುಂದಿನ 5 ವರ್ಷಗಳ ಅವಧಿಗೆ ಭಾನುವಾರ ನಡೆದ ಚುನಾವಣೆಯಲ್ಲಿ ಶಾಸಕ ಜಿ.ಟಿ.ದೇವೇ ಗೌಡರ ನೇತೃತ್ವದ ತಂಡದ ಎಲ್ಲಾ ಅಭ್ಯರ್ಥಿ ಗಳು ಜಯಭೇರಿ ಬಾರಿಸಿದ್ದಾರೆ. ಬೆಂಗ ಳೂರಿನ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ಆವರಣದಲ್ಲಿ ನಡೆದ ಚುನಾವಣೆ ಯಲ್ಲಿ 29 ಜಿಲ್ಲಾ ಯೂನಿಯನ್‍ಗಳಿಂದ 13 ಸ್ಥಾನಗಳಿಗೆ 26 ಅಭ್ಯರ್ಥಿಗಳು ಚುನಾ ವಣಾ ಕಣದಲ್ಲಿದ್ದರು. ಇತರೆ ವಲಯ ದಿಂದ 1 ಸ್ಥಾನಕ್ಕೆ ನಾಲ್ವರು ಸ್ಪರ್ಧಿಸಿದ್ದರು.

ಮೈಸೂರು ವಿಭಾಗ (3 ಸ್ಥಾನಗಳು): ಜಿ.ಟಿ. ದೇವೇಗೌಡ (ಮೈಸೂರು), ಬಿ.ಸಿ.ಲೋಕಪ್ಪ ಗೌಡ (ಚಿಕ್ಕಮಗಳೂರು), ಜಯಕರ ಶೆಟ್ಟಿ (ಉಡುಪಿ) ಬೆಂಗಳೂರು ವಿಭಾಗ (4 ಸ್ಥಾನ ಗಳು): ಹೆಚ್.ಎನ್.ಅಶೋಕ್ (ರಾಮ ನಗರ), ಎ.ಸಿ.ನಾಗರಾಜು (ಬೆಂಗಳೂರು ಗ್ರಾಮಾಂತರ), ರಾಮಿರೆಡ್ಡಿ (ಚಿತ್ರದುರ್ಗ), ಬಿ.ಡಿ.ಭೂಕಾಂತ (ಶಿವಮೊಗ್ಗ). ಬೆಳಗಾವಿ ವಿಭಾಗ (3 ಸ್ಥಾನಗಳು): ಜಗದೀಶ ಮಲ್ಲಿ ಕಾರ್ಜುನ ಕವಟಗಿ ಮಠ (ಬೆಳಗಾವಿ), ಬಸವ ರಾಜು ನೀ.ಅರಬಗೊಂಡ (ಹಾವೇರಿ), ಈಗಣ್ಣ ಚ.ಪಟ್ಟಣ ಶೆಟ್ಟಿ (ವಿಜಯಪುರ). ಕಲಬುರ್ಗಿ ವಿಭಾಗ (3 ಸ್ಥಾನಗಳು): ಶೇಖರ ಗೌಡ ಪಾಟೀಲ್ (ಕೊಪ್ಪಳ), ಉಮಾಕಾಂತ ನಾಗಮಾರಪಲ್ಲಿ (ಬೀದರ್), ಜೆ.ಎಂ. ಶಿವಪ್ರಸಾದ್ (ಬಳ್ಳಾರಿ). ಇತರೆ ಸಹಕಾರ ಸಂಘಗಳ ಕ್ಷೇತ್ರ: ಗದಿಗೆಪ್ಪಗೌಡ ಪಾಟೀಲ್ ನೂತನ ನಿರ್ದೇಶಕರನ್ನು ಮಹಾ ಮಂಡ ಳದ ಆಡಳಿತಾಧಿಕಾರಿ ವೈ.ಹೆಚ್.ಗೋಪಾಲ ಕೃಷ್ಣ, ಎಂಡಿ ಎಸ್.ಎನ್.ಅರುಣ್ ಕುಮಾರ್, ಕಾರ್ಯದರ್ಶಿ ಲಕ್ಷ್ಮೀಪತಯ್ಯ, ಚುನಾವಣಾ ಧಿಕಾರಿ ಸತೀಶ್‍ಚಂದ್ರ ಅಭಿನಂದಿಸಿದರು.

 

Translate »