ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ
ಮೈಸೂರು

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ

June 5, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಡಗೂರು ಎಚ್. ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ.

ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇ ಗೌಡ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದ ಲ್ಲದೆ, ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ, ಹುಣಸೂರು ಕ್ಷೇತ್ರದ ಜನರ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಮ್ರ ವಾಗಿ ಕೋರುತ್ತೇನೆ ಎಂದು ಕೇಳಿಕೊಂಡಿದ್ದಾರೆ.

ವಿಶ್ವನಾಥ್ ರಾಜೀನಾಮೆ ಬಗ್ಗೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡಿಲ್ಲವಾದರೂ, ಪಕ್ಷ ಸಂಘಟನೆ ಉದ್ದೇಶ ಮುಂದಿಟ್ಟು ಕೊಂಡು ಈ ನಿರ್ಧಾರ ಕೈಗೊಂಡಿದ್ದಾರೆ. ರಾಜೀನಾಮೆ ನಂತರ, ಪಕ್ಷ ತಮಗೆ ನೀಡಿದ್ದ ಕಾರನ್ನು ಕಚೇರಿಯ ಲ್ಲಿಯೇ ಬಿಟ್ಟು ಸ್ವಂತ ಕಾರಿನಲ್ಲಿ ತೆರಳಿದರು. ಇದಕ್ಕೂ ಮುನ್ನ ಸುದ್ದಿಗೋಷ್ಠಿಯಲ್ಲಿ ಎರಡು ಪುಟಗಳ ರಾಜೀ ನಾಮೆ ಪತ್ರದ ಪ್ರತಿಯನ್ನು ಬಿಡುಗಡೆ ಮಾಡಿ, ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ವಿರುದ್ಧ ತೀಕ್ಷ್ಣ ಮಾತುಗಳಿಂದ ಹರಿಹಾಯ್ದರು. ದೇವೇ ಗೌಡ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಅವರನ್ನು ಶ್ಲಾಘಿಸಿದರಾದರೂ, ಜನರ ಅನಿಸಿಕೆಯಂತೆ ಸರ್ಕಾರ ನಡೆಯುತ್ತಿಲ್ಲ, ಕೇವಲ ಮುಖ್ಯಮಂತ್ರಿ ಒಬ್ಬರೇ ಕೆಲಸ ಮಾಡಿದರೆ ಸಾಲದು ಎಂದರು.

ಸರ್ಕಾರದ ಸಾಧನೆ ನಿರಾಶಾದಾಯಕ: ಒಂದೆರಡು ಇಲಾಖೆ ಹೊರತುಪಡಿಸಿದರೆ ಸರ್ಕಾರದಲ್ಲಿ ನಿರೀಕ್ಷಿಸಿದ ಸಾಧನೆಗಳು ಸಾಧ್ಯವಾಗಿಲ್ಲ. ಈ ವಿಚಾರದಲ್ಲಿ ಪಕ್ಷದ ಅಧ್ಯಕ್ಷನಾಗಿ ನನಗೆ ನಿರಾಸೆ ಆಗಿದೆ ಎನ್ನಲು ಸಂಕಟವಾದರೂ, ಹೇಳುವುದು ಅನಿವಾರ್ಯವಾಗಿದೆ.

ಆದರೂ ಕುಮಾರಸ್ವಾಮಿ ಅವರು ತಮ್ಮ ಅನಾರೋಗ್ಯ ಹಾಗೂ ಮಿತ್ರರ ಕಿರುಕುಳದ ನಡುವೆಯೂ ಎಲ್ಲರ ವಿಶ್ವಾಸದಿಂದ ಶಕ್ತಿ ಮೀರಿ ಸರ್ಕಾರ ನಡೆಸುತ್ತಿದ್ದಾರೆ. ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಮನ್ವಯ ಸಮಿತಿ ಕೇವಲ ನಾಮ್-ಕೆ-ವಾಸ್ತೆ. ಅದು ಬರೀ ಸಮಿತಿಯೇ ಹೊರತು ಕೊನೆಯವರೆಗೂ ಸಮನ್ವಯ ಸಾಧಿಸಲೇ ಇಲ್ಲ. ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳು ಜಾರಿಗೊಳ್ಳಲಿಲ್ಲ.

ಸಿದ್ದರಾಮಯ್ಯ ಕೈಗೊಂಬೆ: ಸಿದ್ದರಾಮಯ್ಯ ಅವರ ಕೈಗೊಂಬೆಯಂತೆ ಸಮಿತಿ ಕಾರ್ಯ ನಿರ್ವಹಿಸಬೇಕಾದ ಪರಿಸ್ಥಿತಿ ಸೃಷ್ಟಿಯಾಗಿದೆಯೇ ಹೊರತು, ಸೌಹಾರ್ದಯುತ ವಾತಾ ವರಣದಲ್ಲಿ ಸರ್ಕಾರ ನಡೆಸಿಕೊಂಡು ಹೋಗುವ ಪ್ರಾಮಾಣಿಕ ಪ್ರಯತ್ನ ನಡೆದೇ ಇಲ್ಲ. ಪಕ್ಷದ ಅಧ್ಯಕ್ಷನಾಗಿ ನನಗಾಗಲೀ, ಕಾಂಗ್ರೆಸ್ ಪಕ್ಷದ ಅಧ್ಯಕ್ಷ ದಿನೇಶ್ ಗಂಡೂರಾವ್ ಅವರಿಗಾಗಲಿ ಸಮನ್ವಯ ಸಮಿತಿಯಲ್ಲಿ ಧ್ವನಿ ಇಲ್ಲದಂತೆ ಮಾಡಿದರು ಎಂದು ಕಿಡಿಕಾರಿದರು.

ಸಿದ್ದರಾಮಯ್ಯರ ಟಾರ್ಗೆಟಾ…!

ಮಾಜಿ ಮುಖ್ಯಮಂತ್ರಿ ಹಾಗೂ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಅವರ ತಂತ್ರಗಾರಿಕೆಗೆ ಜೆಡಿಎಸ್ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಹಾಗೂ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಬಲಿಯಾಗಲಿದ್ದಾರೆಯೇ?

ಇದು ರಾಜಕೀಯ ವಲಯದಲ್ಲಿ ಬಲವಾಗಿ ಕೇಳಿಬರುತ್ತಿದೆ, ವಿಶ್ವನಾಥ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಜಿ.ಟಿ.ದೇವೇಗೌಡರಿಗೆ ಹಬ್ಬ ಕಾದಿದೆ ಎನ್ನಲಾಗುತ್ತಿದೆ. ತಮ್ಮ ವಿರುದ್ಧ ಹರಿಹಾಯುತ್ತಿರುವ ವಿಶ್ವನಾಥ್ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸುವಂತೆ ಹಾಗೂ ತಮ್ಮ ಪ್ರತಿಷ್ಠಿತ ಕಣ ಮೈಸೂರಿನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಸೋಲಿಗೆ ಜಿಟಿಡಿ ಕಾರಣ, ಅವರನ್ನು ಮಂತ್ರಿ ಸ್ಥಾನದಿಂದ ಕೈಬಿಡಿ ಎಂದು ಮುಖ್ಯಮಂತ್ರಿ ಅವರ ಮೇಲೆ ಒತ್ತಡ ತಂದಿದ್ದಾರಾ? ಲೋಕಸಭಾ ಚುನಾವಣೆಯ ಹೀನಾಯ ಸೋಲಿನ ನಂತರ ಸರ್ಕಾರ ಉಳಿಸಿಕೊಳ್ಳಲು ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ತಂತ್ರಗಾರಿಕೆಯ ಒಂದು ಭಾಗ ಇದಾಗಿದೆಯೇ? ಕಳೆದ ಒಂದು ವಾರದಲ್ಲಿ ಮುಖ್ಯಮಂತ್ರಿ ಅವರು ಸಿದ್ದರಾಮಯ್ಯ ಅವರ ಕಾವೇರಿ ನಿವಾಸಕ್ಕೆ ತೆರಳಿ, ಮೈತ್ರಿ ಸರ್ಕಾರದ ಉಳಿವಿಗೆ ಮೂರ್ನಾಲ್ಕು ಬಾರಿ ಭೇಟಿ ಮಾಡಿ ಸುದೀರ್ಘ ಚರ್ಚೆ ಮಾಡಿದ್ದಾರೆ.

ಈ ಸಂದರ್ಭದಲ್ಲಿ ಇಬ್ಬರಿಂದ ಆಗಿರುವ ತಪ್ಪುಗಳನ್ನು ಮರೆಯುವ ಪ್ರಯತ್ನ ಮಾಡಿದ್ದಾರೆ. ಜೊತೆ ಜೊತೆಯಲ್ಲೇ ಸರ್ಕಾರ ಉಳಿಸಲು ಪರಸ್ಪರ ವಿಚಾರ ವಿನಿಮಯ ಮಾಡಿಕೊಂಡಿದ್ದಾರೆ. ಮುಖ್ಯಮಂತ್ರಿ ಹೇಳಿರುವುದಕ್ಕೆಲ್ಲಾ ತಲೆದೂಗಿಸಿರುವ ಸಿದ್ದರಾಮಯ್ಯ, ತಮಗಾಗದಿರುವ ಇಬ್ಬರು ಜೆಡಿಎಸ್ ನಾಯಕರ ತಲೆದಂಡಕ್ಕೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಇದು ಮುಖ್ಯ ಮಂತ್ರಿ ಅವರಿಗೆ ನುಂಗಲಾರದ ಬಿಸಿ ತುಪ್ಪವಾಗಿ ಪರಿಣಮಿಸಿದೆ, ಇಂತಹ ಸುದ್ದಿ ವಿಶ್ವನಾಥ್ ಕಿವಿಗೆ ತಲುಪಿ, ರಾಜೀನಾಮೆ ನೀಡಲು ಮುಂದಾದರೆಂದು ಹೇಳಲಾಗುತ್ತಿದೆ. ಹಿಂದೆ ಎರಡು-ಮೂರು ಬಾರಿ ವಿಶ್ವನಾಥ್ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿ ಮಾಡಿ ತಮ್ಮನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಿ ಎಂದು ಕೋರಿದ್ದರು. ಆದರೆ ಈ ಬಾರಿ ಸುದ್ದಿಗೋಷ್ಠಿ ಕರೆದೇ ತಮ್ಮ ನಿರ್ಧಾ ರವನ್ನು ಪ್ರಕಟಿಸಿದ್ದಲ್ಲದೆ, ಸಿದ್ದರಾಮಯ್ಯ ವಿರುದ್ಧ ಉದ್ದಕ್ಕೂ ಕಿಡಿಕಾರಿದರು.

Translate »