Tag: A.H. Vishwanath

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ದೆಹಲಿಗೆ ಪ್ರಯಾಣ
ಮೈಸೂರು

ತಾಯಿ ಚಾಮುಂಡೇಶ್ವರಿ ದರ್ಶನ ಪಡೆದ ನಂತರ ಅನರ್ಹ ಶಾಸಕ ಹೆಚ್.ವಿಶ್ವನಾಥ್ ದೆಹಲಿಗೆ ಪ್ರಯಾಣ

August 22, 2019

ಮೈಸೂರು,ಆ.21(ಆರ್‍ಕೆಬಿ)- ಅನರ್ಹ ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರು ಬುಧವಾರ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ತಾಯಿ ಚಾಮುಂಡೇಶ್ವರಿಯ ದರ್ಶನ ಪಡೆದರು. ಬಳಿಕ ದೆಹಲಿ ಯತ್ತ ಪ್ರಯಾಣ ಬೆಳೆಸಿದರು. ಮಾಜಿ ಸಚಿವ, ಕೆ.ಆರ್.ನಗರ ಶಾಸಕ ಸಾ.ರಾ. ಮಹೇಶ್ ಬುಧವಾರ ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿದ ಬೆನ್ನಲ್ಲೇ ಹೆಚ್. ವಿಶ್ವನಾಥ್ ದೆಹಲಿಯತ್ತ ಪ್ರಯಾಣ ಬೆಳೆಸಿದ್ದಾರೆ. ಸುಪ್ರೀಕೋರ್ಟ್‍ನಲ್ಲಿ ಅನರ್ಹತೆಯನ್ನು ಪ್ರಶ್ನಿಸಿ ಹಾಕಿರುವ ಅರ್ಜಿಯ ವಿಚಾರದ ಬಗ್ಗೆ ವಕೀಲರೊಂದಿಗೆ ಚರ್ಚಿಸಲು ಅವರು ದೆಹಲಿಗೆ ತೆರಳಿದ್ದಾರೆಂದು ಹೇಳಲಾಗಿದೆ. ವಿಶ್ವನಾಥ್ ಯಾವುದೇ ಆಮಿಷಕ್ಕೆ…

ನಾವು ಸದನಕ್ಕೆ ಬರುವುದಿಲ್ಲ
ಮೈಸೂರು

ನಾವು ಸದನಕ್ಕೆ ಬರುವುದಿಲ್ಲ

July 18, 2019

ಮುಂಬೈ; ಗುರುವಾರ ನಡೆಯುವ ವಿಧಾನಸಭೆ ಕಲಾಪದಲ್ಲಿ ನಾವು ಭಾಗವಹಿಸುವುದಿಲ್ಲ ಎಂದು ಅತೃಪ್ತ ಜೆಡಿಎಸ್ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ತೀರ್ಪಿನ ಬಳಿಕ ಮಾಧ್ಯಮ ದವರ ಜತೆಗೆ ಮಾತನಾಡಿದ ಅವರು, ಇತರೆ ಯಾವ ಅತೃಪ್ತ ಶಾಸಕರು ಸಹ ಸದನದಲ್ಲಿ ಭಾಗವಹಿಸುವುದಿಲ್ಲ ಎಂದರು. ಸುಪ್ರೀಂ ಕೋರ್ಟ್ ತೀರ್ಪಿನಿಂದ ಸಂವಿಧಾನದ ಆಶಯ ಎತ್ತಿ ಹಿಡಿದಂತಾಗಿದೆ. ಇದು ಮಧ್ಯಂತರ ತೀರ್ಪು ಆಗಿರುವುದರಿಂದ ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಪುನರ್ ವ್ಯಾಖ್ಯಾನ ಆಗಬೇಕಿದೆ ಎಂದರು. ಇದರ ಬಗ್ಗೆ ವಿಸ್ತೃತ ಚರ್ಚೆ ನಡೆಯಬೇಕು ಎಂದು…

ವಿಶ್ವನಾಥ್ ಸಂಪುಟ ಸೇರ್ಪಡೆ ಸಾಧ್ಯತೆ
ಮೈಸೂರು

ವಿಶ್ವನಾಥ್ ಸಂಪುಟ ಸೇರ್ಪಡೆ ಸಾಧ್ಯತೆ

June 12, 2019

ಬೆಂಗಳೂರು: ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಹಿರಿಯ ನಾಯಕ ಅಡ ಗೂರು ಎಚ್.ವಿಶ್ವನಾಥ್ ಅವರು ಸಂಪುಟಕ್ಕೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಅವರ ರಾಜೀನಾಮೆ ಅಂಗೀಕರಿಸಿ, ಆ ಸ್ಥಾನಕ್ಕೆ ಅವರದೇ ಸಮುದಾಯದ ಸಹಕಾರಿ ಸಚಿವರಾಗಿ ರುವ ಬಂಡೆಪ್ಪ ಕಾಶೆಂಪೂರ್ ಅವರನ್ನು ತರುವುದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರ ಆಲೋಚನೆ ಇದ್ದಂತಿದೆ. ಈ ಸಂಬಂಧ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡರೊಂದಿಗೆ ಕುಮಾರಸ್ವಾಮಿ ಸಮಾಲೋಚನೆ ನಡೆಸಿದ್ದು, ಈ ಬೆಳವಣಿಗೆ ನಂತರ ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಸಹ ಸಮನ್ವಯ ಸಮಿತಿ…

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ
ಮೈಸೂರು

ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಎಚ್.ವಿಶ್ವನಾಥ್ ರಾಜೀನಾಮೆ

June 5, 2019

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸೋಲಿನ ನೈತಿಕ ಹೊಣೆ ಹೊತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಅಡಗೂರು ಎಚ್. ವಿಶ್ವನಾಥ್ ರಾಜೀನಾಮೆ ನೀಡಿದ್ದಾರೆ. ಸಂಜೆ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಹೆಚ್.ಡಿ.ದೇವೇ ಗೌಡ ಅವರನ್ನು ಭೇಟಿ ಮಾಡಿ ರಾಜೀನಾಮೆ ಪತ್ರ ನೀಡಿದ್ದ ಲ್ಲದೆ, ಪಕ್ಷದ ಹೊಣೆಗಾರಿಕೆಯಿಂದ ನನ್ನನ್ನು ಬಿಡುಗಡೆ ಮಾಡಿ, ಹುಣಸೂರು ಕ್ಷೇತ್ರದ ಜನರ ಸೇವೆ ಮಾಡಲು ಅನುಕೂಲ ಮಾಡಿಕೊಡಬೇಕೆಂದು ತಮ್ಮಲ್ಲಿ ವಿನಮ್ರ ವಾಗಿ ಕೋರುತ್ತೇನೆ ಎಂದು ಕೇಳಿಕೊಂಡಿದ್ದಾರೆ. ವಿಶ್ವನಾಥ್ ರಾಜೀನಾಮೆ ಬಗ್ಗೆ ಪಕ್ಷ ಯಾವುದೇ ತೀರ್ಮಾನ ಕೈಗೊಂಡಿಲ್ಲವಾದರೂ, ಪಕ್ಷ ಸಂಘಟನೆ…

ದ್ವೇಷ, ಕಿಡಿಗೇಡಿತನ ನನ್ನ ರಕ್ತದಲ್ಲಿಲ್ಲ: ಸಿದ್ದರಾಮಯ್ಯಗೆ ವಿಶ್ವನಾಥ್ ತಿರುಗೇಟು
ಮೈಸೂರು

ದ್ವೇಷ, ಕಿಡಿಗೇಡಿತನ ನನ್ನ ರಕ್ತದಲ್ಲಿಲ್ಲ: ಸಿದ್ದರಾಮಯ್ಯಗೆ ವಿಶ್ವನಾಥ್ ತಿರುಗೇಟು

May 14, 2019

ಬೆಂಗಳೂರು: ರಾಜಕೀಯ ದ್ವೇಷ ಮತ್ತು ಕಿಡಿಗೇಡಿತನ ಬುದ್ಧಿ ತಮ್ಮ ರಕ್ತದಲ್ಲಿಲ್ಲ. ಒಂದು ವೇಳೆ ಇಂತಹ ಬುದ್ಧಿ ಇದ್ದಿದ್ದರೆ ಸಿದ್ದರಾಮಯ್ಯ ಅವರನ್ನು ಕಾಂಗ್ರೆಸ್ ಪಕ್ಷಕ್ಕೆ ಕರೆತರುತ್ತಿರಲಿಲ್ಲ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್.ವಿಶ್ವನಾಥ್ ಹೇಳಿದ್ದಾರೆ. ಇಂದು ಸುದ್ದಿಗಾರರೊಂದಿಗೆ ಮಾತ ನಾಡಿದ ಅವರು, ಹೆಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಸುಭದ್ರ ಸರ್ಕಾರ ನೀಡುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಬೇಕೆಂಬ ಬಗ್ಗೆ ಕಾಂಗ್ರೆಸ್ಸಿಗರು ಕೂಗೆಬ್ಬಿಸಿದ್ದರಿಂದ ಮೈತ್ರಿ ಸರ್ಕಾರದಲ್ಲಿ ಗೊಂದಲ ಉಂಟಾಗಿದೆ. ಮೈತ್ರಿಗೆ ಧಕ್ಕೆಯಾಗುವ ರೀತಿಯಲ್ಲಿ ಕಾಂಗ್ರೆಸ್ ನಾಯಕರು ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿದ್ದರಾಮಯ್ಯ ಅವರಿಗೆ ಮುಖ್ಯಮಂತ್ರಿಯಾಗಬೇಕೆಂಬ…

ಶಿವರಾಮೇಗೌಡರು ಮಂಡ್ಯ ಮರ್ಯಾದೆ ಹಾಳು ಮಾಡಿದ್ದಾರೆ
ಮೈಸೂರು

ಶಿವರಾಮೇಗೌಡರು ಮಂಡ್ಯ ಮರ್ಯಾದೆ ಹಾಳು ಮಾಡಿದ್ದಾರೆ

April 5, 2019

ಬೆಂಗಳೂರು: ಸಂಸದ ಎಲ್.ಆರ್. ಶಿವರಾಮೇಗೌಡರು ಸುಮಲತಾ ಅಂಬರೀಶ್ ಅವರ ಜಾತಿ ಬಗ್ಗೆ ಮಾತನಾಡಿ ಮಂಡ್ಯದ ಗೌರವವನ್ನು ಹಾಳು ಮಾಡಿದ್ದಾರೆ. ಇದನ್ನು ಒಪ್ಪಲು ಸಾಧ್ಯವಿಲ್ಲ. ಪಕ್ಷದ ರಾಜ್ಯಾಧ್ಯಕ್ಷನಾಗಿ ಅವರ ಮೇಲೆ ಕ್ರಮ ಕೈಗೊಳ್ಳುತ್ತೇನೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್. ವಿಶ್ವನಾಥ್ ಹೇಳಿದರು. ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಮಾಧ್ಯಮ ಸಂವಾದದಲ್ಲಿ ಮಾತನಾಡಿದ ಅವರು, ಮಂಡ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಒಕ್ಕಲಿಗರೇ ಇದ್ದರೂ, ಅವರು ಯಾವಾಗಲೂ ಜಾತಿ ಮಾಡಿಲ್ಲ. ಎಲ್ಲಾ ಜಾತಿಯವರೊಂದಿಗೂ ಸೌಹಾರ್ದ ಯುತವಾಗಿ ನಡೆದುಕೊಳ್ಳುತ್ತಿದ್ದಾರೆ. ಸುಮಲತಾ ಮಂಡ್ಯದ ಸೊಸೆ. ಅವರ…

ಜೀತ, ಮಲ ಹೊರುವ ಪದ್ಧತಿ ಹೋಗಲಾಡಿಸಿದವರು ಡಿ. ದೇವರಾಜ ಅರಸು
ಮೈಸೂರು

ಜೀತ, ಮಲ ಹೊರುವ ಪದ್ಧತಿ ಹೋಗಲಾಡಿಸಿದವರು ಡಿ. ದೇವರಾಜ ಅರಸು

September 28, 2018

ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎ.ಹೆಚ್.ವಿಶ್ವನಾಥ್ ಹುಣಸೂರು: ಜೀತ ಹಾಗೂ ಮಲ ಹೊರುವ ಪದ್ಧತಿ ಹೋಗ ಲಾಡಿಸಿದ ಡಿ. ದೇವರಾಜ ಅರಸು ಅವರನ್ನು ಪೌರ ಕಾರ್ಮಿಕರು ಸ್ಮರಿಸಬೇಕು ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎ.ಹೆಚ್.ವಿಶ್ವನಾಥ್ ಅಭಿಪ್ರಾಯ ಪಟ್ಟರು. ನಗರದ ನಗರಸಭಾ ಕಚೇರಿ ಸಭಾಂಗಣ ದಲ್ಲಿ ಪೌರ ಕಾರ್ಮಿಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ ಸನ್ಮಾನ ಸಮಾ ರಂಭದಲ್ಲಿ ಮಾತನಾಡಿದ ಅವರು, ಪೌರ ಕಾರ್ಮಿಕರು ಮೊದಲು ತಮ್ಮ ಅರೋಗ್ಯ ರಕ್ಷಣೆಗೆ ಮುಂದಾಗಬೇಕು. ಜೊತೆಗೆ ನಿಮ್ಮ ಮಕ್ಕಳ ವಿದ್ಯಾಭ್ಯಾಸದ ಕಡೆ…

ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ಹಿರಿದು
ಮೈಸೂರು

ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ಹಿರಿದು

September 2, 2018

ಮೈಸೂರು: ಬ್ರಾಹ್ಮಣ ಸಮುದಾಯ ಹಣ, ಆಸ್ತಿ, ಸಂಪತ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿಯೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರಶಂಸಿಸಿದರು. ಮೈಸೂರಿನ ಶಾರದವಿಲಾಸ ಕಾಲೇಜು, ಶತಮಾನೋತ್ಸವ ಭವನದಲ್ಲಿ ಸಂಧ್ಯಾ ಸುರಕ್ಷಾ ಟ್ರಸ್ಟ್ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಗಣ್ಯರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಜಾಹಗೀರ್‍ದಾರರು, ಶ್ಯಾನುಬೋಗರು, ಜಮೀನ್ದಾರರು ಬ್ರಾಹ್ಮಣರೇ ಆಗಿದ್ದರು. ಅನೇಕರಿಗೆ…

ಶಾಸಕ ವಿಶ್ವನಾಥ್‍ರ ಉದ್ಧಟತನಕ್ಕೆ ಕಾಂಗ್ರೆಸ್ ಖಂಡನೆ
ಮೈಸೂರು

ಶಾಸಕ ವಿಶ್ವನಾಥ್‍ರ ಉದ್ಧಟತನಕ್ಕೆ ಕಾಂಗ್ರೆಸ್ ಖಂಡನೆ

July 1, 2018

ಮೈಸೂರು: ಇತ್ತೀಚೆಗೆ ಹುಣಸೂರಿನಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಅಡಗೂರು ಎಚ್. ವಿಶ್ವನಾಥ್ ಅವರು ಕಾಂಗ್ರೆಸ್‍ನ ಮಹಿಳಾ ಜನಪ್ರತಿನಿಧಿಗಳೊಂದಿಗೆ ಉದ್ಧಟತನದಿಂದ ವರ್ತಿಸಿರುವುದಲ್ಲದೆ, ತಮ್ಮ ವಿರುದ್ಧ ಕೆಲವರು ರಾಜಕೀಯ ತೀಟೆ ಮಾಡುತ್ತಿದ್ದಾರೆ ಎಂದು ನೀಡಿರುವ ಹೇಳಿಕೆ ಅವರ ಪೂರ್ವಾಗ್ರಹ ಪೀಡಿತ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವಕ್ತಾರರಾದ ಹೆಚ್. ತೇಜಸ್ವಿ ತಿಳಿಸಿದ್ದಾರೆ. ಪತ್ರಿಕಾ ಹೇಳಿಕೆ ನೀಡಿರುವ ಅವರು, ವಿಶ್ವನಾಥ್ ಅವರು ತಮ್ಮ ರಾಜಕೀಯ ಜೀವನದ ಉದ್ದಕ್ಕೂ ತೀಟೆ ರಾಜಕಾರಣವನ್ನೇ ಮಾಡುತ್ತಾ ಬಂದಿದ್ದು, ಇನ್ನೊಬ್ಬರಿಗೆ ತೀಟೆ…

ಶಾಸಕ ವಿಶ್ವನಾಥರ ಮೇಲೆ  ಮಹಿಳಾ ಜನಪ್ರತಿನಿಧಿಗಳ ಆರೋಪ
ಮೈಸೂರು

ಶಾಸಕ ವಿಶ್ವನಾಥರ ಮೇಲೆ  ಮಹಿಳಾ ಜನಪ್ರತಿನಿಧಿಗಳ ಆರೋಪ

June 30, 2018

ಮೈಸೂರು:  ಶಾಸಕ ಅಡಗೂರು ಹೆಚ್.ವಿಶ್ವನಾಥ್ ಅವರು ಇತ್ತೀಚೆಗೆ ನಡೆಸಿದ ಹುಣಸೂರು ತಾಲೂಕು ಕೆಡಿಪಿ ಸಭೆಯಲ್ಲಿ ಏರು ಧ್ವನಿಯಲ್ಲಿ ಗದರಿಸುವ ಮೂಲಕ ಅವಮಾನಿಸಿದ್ದಾರೆ ಎಂದು ತಾ.ಪಂ ಅಧ್ಯಕ್ಷೆ ಪದ್ಮಮ್ಮ ಆರೋಪಿಸಿದ್ದಾರೆ. ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಿಯಮಗಳನ್ನು ಗಾಳಿಗೆ ತೂರಿ ಬೇಕಾಬಿಟ್ಟಿಯಾಗಿ ಶಾಸಕ ಎ.ಹೆಚ್.ವಿಶ್ವನಾಥ್ ಅವರು ಸಭೆ ನಡೆಸಿದರು. ಕೆಡಿಪಿ ಸಭೆಯಲ್ಲಿ ಪಾಲ್ಗೊಂಡಿದ್ದ ಕೆಲವು ಮಹಿಳಾ ಸದಸ್ಯರ ಪತಿಯಂದಿರು ಸೋಮನಹಳ್ಳಿ ಕೆರೆಗೆ ನೀರು ತುಂಬಿಸಿರುವ ಸಂಬಂಧÉ ತಪ್ಪು ಮಾಹಿತಿ ನೀಡುತ್ತಿದ್ದರು. ಇದಕ್ಕೆ ಸರಿಯಾದ…

1 2
Translate »