ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ಹಿರಿದು
ಮೈಸೂರು

ಸಂಸ್ಕಾರಯುತ ಸಮಾಜ ನಿರ್ಮಾಣದಲ್ಲಿ ಬ್ರಾಹ್ಮಣರ ಪಾತ್ರ ಹಿರಿದು

September 2, 2018

ಮೈಸೂರು: ಬ್ರಾಹ್ಮಣ ಸಮುದಾಯ ಹಣ, ಆಸ್ತಿ, ಸಂಪತ್ತಿಗಿಂತ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡುವ ಮೂಲಕ ಸಮಾಜದಲ್ಲಿ ಉತ್ತಮ ಸಂಸ್ಕಾರ ಬೆಳೆಸುತ್ತಿದೆ ಎಂದು ಜಿಲ್ಲಾ ಉಸ್ತುವಾರಿಯೂ ಆದ ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ಅವರು ಪ್ರಶಂಸಿಸಿದರು.

ಮೈಸೂರಿನ ಶಾರದವಿಲಾಸ ಕಾಲೇಜು, ಶತಮಾನೋತ್ಸವ ಭವನದಲ್ಲಿ ಸಂಧ್ಯಾ ಸುರಕ್ಷಾ ಟ್ರಸ್ಟ್ ಹಾಗೂ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಗಣ್ಯರಿಗೆ ಅಭಿನಂದನೆ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಹಿಂದೆ ಜಾಹಗೀರ್‍ದಾರರು, ಶ್ಯಾನುಬೋಗರು, ಜಮೀನ್ದಾರರು ಬ್ರಾಹ್ಮಣರೇ ಆಗಿದ್ದರು. ಅನೇಕರಿಗೆ ಅವರೇ ಭೂಮಿಯನ್ನು ನೀಡಿ ದ್ದಾರೆ. ಆದರೆ ಇಂದು ಆಸ್ತಿ, ಹಣ, ಸಂಪತ್ತಿ ಗಿಂತ ಶಿಕ್ಷಣಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡು ತ್ತಿದ್ದಾರೆ. ನಿಸ್ವಾರ್ಥಿಗಳಾಗಿ ಎಲ್ಲರೊಂದಿಗೆ ಪ್ರೀತಿ, ವಿಶ್ವಾಸ, ಅಭಿಮಾನದಿಂದ ಒಗ್ಗೂಡಿ ದ್ದಾರೆ. ಉತ್ತಮ ಶಿಕ್ಷಣ ಪಡೆಯುವ ಮೂಲಕ ವಿಶ್ವದೆಲ್ಲೆಡೆ ಉನ್ನತ ಸ್ಥಾನದಲ್ಲಿ ದ್ದಾರೆ. ಸಂಗೀತ, ಕಲೆ, ಸಾಹಿತ್ಯ ಸಂಸ್ಕøತಿ ಯನ್ನು ಉಳಿಸಿ, ಬೆಳೆಸುತ್ತಿದ್ದಾರೆ. ಶಿಕ್ಷಣವೇ ಅಭಿವೃದ್ಧಿಯ ಮೂಲಮಂತ್ರ ಎಂಬ ಸಂಸ್ಕಾರವನ್ನು ಸಮಾಜಕ್ಕೆ ನೀಡುತ್ತಿದ್ದಾರೆ ಎಂದು ಹೇಳಿದರು.

ನಮ್ಮ ತಂದೆ ಪಟೇಲರಾಗಿದ್ದಾಗ, ಸುಬ್ಬ ರಾಯರು ಶ್ಯಾನುಬೋಗರಾಗಿದ್ದರು. ಬ್ರಾಹ್ಮಣ ಕುಟುಂಬದವರಿಗೆ 75 ರೂ. ಮೌಲ್ಯದ ಸೀರೆಯನ್ನು ಉಡುಗೊರೆ ನೀಡಿ ದ್ದಕ್ಕೆ ನಮ್ಮ ಕುಟುಂಬಕ್ಕೆ ನಾಲ್ಕೂವರೆ ಎಕರೆ ಭೂಮಿಯನ್ನೇ ನೀಡಿದ್ದರು. ಮತ್ತೊಂದು ಬ್ರಾಹ್ಮಣ ಕುಟುಂಬದ ಹತ್ತಾರು ಎಕರೆ ಭೂಮಿಯನ್ನು ಬ್ಯಾಂಕ್‍ನವರು ಸಾಲದ ಬಾಬ್ತಿಗಾಗಿ ವಶಪಡಿಸಿಕೊಂಡಿದ್ದರು. ಇನ್ನುಳಿದಿದ್ದ 10 ಎಕರೆ ಭೂಮಿಯನ್ನು ಲಕ್ಷಾಂ ತರ ರೂ.ಗಳಿಗೆ ಖರೀದಿ ಮಾಡಲು ಅನೇ ಕರು ಮುಂದಾಗಿದ್ದರು. ಆ ಸಂದರ್ಭ ದಲ್ಲಿ ಸುಬ್ಬರಾಯರು ನನ್ನನ್ನು ಅವರ ಬಳಿ ಕರೆದುಕೊಂಡು ಹೋಗಿ ಪರಿಚಯ ಮಾಡಿ ಕೊಟ್ಟು, ಜಮೀನು ನೀಡುವಂತೆ ಕೇಳಿದ್ದರು. ಆಗ ಎಷ್ಟು ಕೊಡುತ್ತೀಯಾ? ಎಂದಾಗ ನಾನು 10 ಸಾವಿರ ರೂ. ಕೊಡಲು ಮಾತ್ರ ಶಕ್ತನಾಗಿದ್ದೇನೆ ಎಂದು ತಿಳಿಸಿದ್ದೆ. ಇದಕ್ಕೆ ಒಪ್ಪಿದ ಅವರು, ತಾಂಬೂಲ ನೀಡಿ, ಉತ್ತಮ ವಾಗಿ ಕೃಷಿ ಮಾಡಿ ನನಗೆ ತೋರಿಸ ಬೇಕೆಂದು ಹೇಳಿ, ಕೇವಲ 10 ಸಾವಿರ ರೂ.ಗಳಿಗೆ 10 ಎಕರೆ ಭೂಮಿ ನೀಡಿದರು ಎಂದು ಜಿಟಿಡಿ ಸ್ಮರಿಸಿಕೊಂಡರು.

ಮುಖ್ಯಮಂತ್ರಿ ಹೆಚ್.ಡಿ.ಕುಮಾರ ಸ್ವಾಮಿ ಅವರು ಬ್ರಾಹ್ಮಣ ಅಭಿವೃದ್ಧಿ ನಿಗಮ ಸ್ಥಾಪಿಸಿ, 25 ಕೋಟಿ ರೂ. ಆರಂಭಿಕ ಅನುದಾನ ನೀಡಿದ್ದಾರೆ. ಬ್ರಾಹ್ಮಣ ಸಮು ದಾಯದ ಉಪಯೋಗಕ್ಕಾಗಿ ಬೆಂಗಳೂರಿ ನಲ್ಲಿ ನಿವೇಶನವನ್ನೂ ನೀಡಿದ್ದಾರೆ. ಮಾಜಿ ಪ್ರಧಾನಮಂತ್ರಿ ಹೆಚ್.ಡಿ.ದೇವೇಗೌಡರು, ಸಚಿವ ಹೆಚ್.ಡಿ.ರೇವಣ್ಣನವರಿಗೂ ಬ್ರಾಹ್ಮಣ ಸಮುದಾಯದ ಬಗ್ಗೆ ಅತೀವ ಅಭಿಮಾನ ವಿದೆ. ದೇವಾಲಯದ ಅರ್ಚಕರಿಗೆ ವೇತನ ಹೆಚ್ಚಿಸಬೇಕೆಂದು ರೇವಣ್ಣನವರೇ ಮೊದಲು ಪ್ರಸ್ತಾಪಿಸಿದ್ದು.

ಮೈಸೂರಿನಲ್ಲೂ ಸಿಎ ನಿವೇಶನ ಸೇರಿದಂತೆ ಎಲ್ಲಾ ರೀತಿಯ ಸಹಕಾರ ನೀಡಲು ಸದಾ ಸಿದ್ಧರಿದ್ದೇವೆ ಎಂದು ಭರವಸೆ ನೀಡಿದರು.
ಮಾರ್ಗದರ್ಶಕ ಸಮುದಾಯ: ಜೆಡಿಎಸ್ ರಾಜ್ಯಾಧ್ಯಕ್ಷರಾದ ಶಾಸಕ ಅಡಗೂರು ಹೆಚ್. ವಿಶ್ವನಾಥ್ ಅವರು ಮಾತನಾಡಿ, ಭಾರ ತದ ಸನಾತನ ಧರ್ಮ, ಆಧ್ಯಾತ್ಮಿಕತೆಯನ್ನು ಉಳಿಸಿ, ಬೆಳೆಸಿಕೊಂಡು ಬರುವುದರ ಜೊತೆಗೆ ಶಿಕ್ಷಣ, ಜ್ಞಾನ, ವಿಜ್ಞಾನ, ಸಂಸ್ಕøತಿ ಯನ್ನು ಕರಗತ ಮಾಡಿಕೊಂಡಿರುವ ಬ್ರಾಹ್ಮಣ ಸಮುದಾಯ, ಅನಾರೋಗ್ಯ ಪೀಡಿತ ವಾಗಿದ್ದ ಭಾರತಕ್ಕೆ ಮಾರ್ಗದರ್ಶನ ನೀಡಿದೆ. ಇದನ್ನು ಯಾರೂ ನಿರಾಕರಿಸಲಾಗದು. ಚಂದ್ರಗುಪ್ತ ಮೌರ್ಯ ಸಾಮ್ರಾಜ್ಯ ಕಳೆದು ಕೊಂಡು ಕಾಡು ಸೇರಿದಾಗ, ಚಾಣಾಕ್ಷತೆ ಯಿಂದ ಮತ್ತೆ ಸಾಮ್ರಾಜ್ಯವನ್ನು ವಾಪಸ್ಸು ಕೊಡಿಸಿದ ಕೀರ್ತಿ ಚಾಣಕ್ಯ ಅವರದ್ದಾ ಗಿದೆ. ಎಷ್ಟೇ ಭುಜಬಲ ಹೊಂದಿದ್ದರೂ, ಶೌರ್ಯವಿದ್ದರೂ ಮಾರ್ಗದರ್ಶನವಿಲ್ಲದಿ ದ್ದರೆ ಯಾವುದೇ ಸಾಧನೆ ಅಸಾಧ್ಯ. ಆದರೆ ಕೆಲ ದಶಕಗಳಿಂದ ಬ್ರಾಹ್ಮಣ ಸಮುದಾಯ ವಿಪರೀತ ಟೀಕೆಗೆ ಗುರಿಯಾಗುತ್ತಿದೆ. ಟೀಕೆ ಯನ್ನೂ ಸಮುದಾಯ ಸಮಾಧಾನದಿಂ ದಲೇ ಸಹಿಸುತ್ತಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜ ಪೇಯಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಲಾಯಿತು. ಜಾತ್ಯಾತೀತ ವ್ಯವಸ್ಥೆ ಯನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ದ ಕೀರ್ತಿ ಪುರುಷರಾದ ವಾಜಪೇಯಿ ಅವರು, ಇಡೀ ಭಾರತವೇ ನನ್ನದು ಎಂಬ ಭಾವನೆಯಲ್ಲಿ ರಾಜಕಾರಣ ಮಾಡಿದ ಮುತ್ಸದ್ಧಿ ಎಂದು ಇದೇ ವೇಳೆ ಅವರು ಸ್ಮರಿಸಿಕೊಂಡರು.
ಅಭಿನಂದನೆ: ಸಮಾರಂಭದಲ್ಲಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎ.ಹೆಚ್.ವಿಶ್ವನಾಥ್ ಅವರನ್ನು ಅಭಿನಂದಿಸಲಾಯಿತು.

ಇದೇ ಸಂದರ್ಭದಲ್ಲಿ ಎಸ್‍ಎಸ್ ಎಲ್‍ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು.

ಅಖಿಲ ಕರ್ನಾಟಕ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷ ಬಿ.ವಿ.ಮಂಜುನಾಥ್, ಜಿಲ್ಲಾ ಬ್ರಾಹ್ಮಣ ಮಹಾಸಭಾದ ಅಧ್ಯಕ್ಷ ನಟರಾಜ ಜೋಯಿಸ್, ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಉದ್ಯಮಿ ಜಿ.ರವಿ, ಎಂ.ಎಲ್.ಕೃಷ್ಣಸ್ವಾಮಿ, ಎಂ.ನರಸಿಂಹನ್, ಡಿ.ಎಸ್.ಹೊನ್ನಪ್ಪ, ಮಹೇಶ್ ಶೆಣೈ, ಡಿ.ಎನ್.ಸುರೇಶ್, ನಂ.ಶ್ರೀಕಂಠ ಕುಮಾರ್, ಸುಶೀಲಾ, ವಿಜಯಲಕ್ಷ್ಮೀ, ಮಂಗಳಾ ಜೋಯಿಸ್, ಅನಂತ ಪ್ರಸಾದ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Translate »