ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ
ಕೊಡಗು

ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆ ಆರಂಭ

September 2, 2018

ಮಡಿಕೇರಿ:  ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಉದ್ಘಾಟನಾ ಕಾರ್ಯಕ್ರಮವು ನಗರದ ಮುಖ್ಯ ಅಂಚೆ ಕಚೇರಿಯಲ್ಲಿ ಶನಿವಾರ ನಡೆಯಿತು. ಜಿಲ್ಲಾ ಅಂಚೆ ಕಚೇರಿಯ ಸೂಪರಿಡೆಂಟ್ ಎಸ್.ಆರ್.ನಾಗೇಂದ್ರ ಮಾತನಾಡಿ, ಪ್ರತಿ ಗ್ರಾಮೀಣ ಅಂಚೆ ಕಚೇರಿಗಳಲ್ಲೂ ಬ್ಯಾಂಕಿಂಗ್ ಸೇವೆ ಕಲ್ಪಿಸಬೇಕು ಎಂಬ ಉದ್ದೇಶದಿಂದ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯು ಸೆಪ್ಟೆಂಬರ್ 1 ರಿಂದ ರಾಷ್ಟ್ರಾ ದ್ಯಂತ ಆರಂಭಗೊಳ್ಳುತ್ತಿದೆ ಎಂದರು.

ಆರ್ಥಿಕ ಸ್ವಾಯತ್ತತೆ ಸೌಲಭ್ಯವನ್ನು ಕಲ್ಪಿಸುವ ನಿಟ್ಟಿನಲ್ಲಿ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಸರಳ ವ್ಯವಹಾರ ಪಡೆ ಯಲು ಈ ಬ್ಯಾಂಕ್ ಸೇವೆ ಅನುಕೂಲ ವಾಗಲಿದೆ. ಜೊತೆಗೆ ನಗದು ರಹಿತ ವಹಿ ವಾಟು ಮಾಡಲು ಈ ಬ್ಯಾಂಕಿಂಗ್ ಸೇವೆ ಸಹಕಾರಿಯಾಗಿದೆ.

ಗ್ರಾಹಕರಿಗೆ ಮೊಬೈಲ್ ಬ್ಯಾಂಕಿಂಗ್, ಉಳಿ ತಾಯ ಖಾತೆ, ಚಾಲ್ತಿ ಖಾತೆ, ನೇರ ನಗದು ವ್ಯವಹಾರ, ವಿಮಾ ಸೌಲಭ್ಯ ಹೊಂದಲು ಅಂಚೆ ಪಾವತಿ ಬ್ಯಾಂಕಿಂಗ್ ಸೇವೆ ಪ್ರಯೋ ಜನಕಾರಿಯಾಗಿದೆ ಎಂದು ಅವರು ಮಾಹಿತಿ ನೀಡಿದರು.

ಆಧಾರ್ ಕಾರ್ಡ್ ಮತ್ತು ಮೊಬೈಲ್ ಸಂಖ್ಯೆ ನೀಡಿ ಅಂಚೆ ಪಾವತಿ ಬ್ಯಾಂಕಿಂಗ್ ಖಾತೆ ತೆರೆಯಬಹುದಾಗಿದೆ ಎಂದ ಅವರು, ಡಿಸೆಂಬರ್ ಅಂತ್ಯದೊಳಗೆ ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ಸೌಲ ಭ್ಯಗಳು ದೊರೆಯಬೇಕು ಎಂಬ ಉದ್ದೇಶ ದಿಂದ ಏಕ ಕಾಲದಲ್ಲಿ ದೇಶಾದ್ಯಂತ ಆರಂಭಿ ಸಲಾಗುತ್ತಿದೆ ಎಂದು ಅವರು ನುಡಿದರು.

ಭಾರತೀಯ ಸ್ಟೇಟ್ ಬ್ಯಾಂಕಿನ ಹಿರಿಯ ಅಧಿಕಾರಿ ದಿನೇಶ್ ಪೈ ಅವರು ಮಾತ ನಾಡಿ, ಮನೆ ಮನೆಗೆ ಬ್ಯಾಂಕಿಂಗ್ ಸೇವೆ ಕಲ್ಪಿಸು ವಂತಾಗಲು ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಸೇವೆ ಅನುಕೂಲ ವಾಗಿದೆ ಎಂದರು. ಡಿವೈಎಸ್‍ಪಿ ಸುಂದರ್ ರಾಜ್ ಮಾತ ನಾಡಿ, ಭಾರತೀಯ ಅಂಚೆ ಇಲಾಖೆ ವತಿಯಿಂದ ಸಾರ್ವಜನಿಕರಿಗೆ ಹೆಚ್ಚಿನ ಸೇವೆ ಗಳು ಲಭ್ಯವಾಗುತ್ತಿದೆ. ಆ ನಿಟ್ಟಿನಲ್ಲಿ ಅಂಚೆ ಪಾವತಿ ಬ್ಯಾಂಕಿಂಗ್ ಸೇವೆಯು ಸಾರ್ವಜನಿಕರಿಗೆ ಬಹಳ ಉಪ ಯುಕ್ತವಾಗಿದೆ ಎಂದರು.

ಭಾರತೀಯ ಅಂಚೆ ಪಾವತಿ ಬ್ಯಾಂಕಿಂಗ್ ಶಾಖೆಯ ವ್ಯವಸ್ಥಾಪಕರಾದ ನಿದಿನ್.ಕೆ. ಪ್ರಸಾದ್, ಬಿಎಸ್‍ಎನ್‍ಎಲ್ ಲಿಂಗಪ್ಪಗೌಡ ಇತರರು ಇದ್ದರು. ಸುಂಟಿಕೊಪ್ಪ ಅಂಚೆ ಕಚೇರಿಯ ಪೋಸ್ಟ್ ಮಾಸ್ಟರ್ ಶ್ರೀನಿ ವಾಸ್ ಸ್ವಾಗತಿಸಿದರು. ಅನಿತಾ ಕುಮಾರಿ ಪ್ರಾರ್ಥಿಸಿದರು, ಕಲಾವತಿ ನಿರೂಪಿಸಿರು. ಪೋಸ್ಟ್ ಮಾಸ್ಟರ್ ಸೀತಮ್ಮ ವಂದಿಸಿದರು.

Translate »