ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಬಿಗಿ ಭದ್ರತೆಯಲ್ಲಿ ಮತಯಂತ್ರ, ನಾಳೆ ಮತ ಎಣಿಕೆ
ಚಾಮರಾಜನಗರ

ಚಾಮರಾಜನಗರ, ಕೊಳ್ಳೇಗಾಲ ನಗರಸಭೆ ಚುನಾವಣೆ ಬಿಗಿ ಭದ್ರತೆಯಲ್ಲಿ ಮತಯಂತ್ರ, ನಾಳೆ ಮತ ಎಣಿಕೆ

September 2, 2018

ಸೋಲು-ಗೆಲುವಿನ ಲೆಕ್ಕಾಚಾರ, ಅಭ್ಯರ್ಥಿಗಳಲ್ಲಿ ಢವಢವ, ಬೆಟ್ಟಿಂಗ್ ಭರಾಟೆ
ಚಾಮರಾಜನಗರ: ಜಿಲ್ಲೆಯ ಚಾಮ ರಾಜನಗರ ಹಾಗೂ ಕೊಳ್ಳೇಗಾಲ ನಗರ ಸಭೆಯ 60 ಸದಸ್ಯ ಸ್ಥಾನಗಳಿಗೆ ಶುಕ್ರವಾರ ಶಾಂತಿಯುತ ಮತದಾನ ನಡೆದಿದೆ.

ಚಾಮರಾಜನಗರದಲ್ಲಿ ಶೇ.72.03, ಕೊಳ್ಳೇಗಾಲದಲ್ಲಿ ಶೇ.73.71 ರಷ್ಟು ಮತ ದಾನ ನಡೆದಿದ್ದು, ಮತದಾರರು ವಿದ್ಯು ನ್ಮಾನ ಮತಯಂತ್ರದಲ್ಲಿ ತಮ್ಮ ನಿರ್ಧಾ ರದ ಮುದ್ರೆ ಒತ್ತಿದ್ದಾರೆ. ಮತಯಂತ್ರ ಗಳು ಈಗ ಪೊಲೀಸರ ಸರ್ಪಗಾವಲಿನ ಲ್ಲಿದ್ದು, ಎಲ್ಲರ ಚಿತ್ತ ಮತ ಎಣಿಕೆ ದಿನ ವಾದ ಸೆಪ್ಟೆಂಬರ್ 3ರ ಮೇಲಿದೆ.

ಜಿಲ್ಲಾ ಕೇಂದ್ರವಾದ ಚಾಮರಾಜನಗರ ನಗರಸಭೆಯ 31 ವಾರ್ಡ್‍ನ ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ 132 ಅಭ್ಯರ್ಥಿ ಗಳು ಸ್ಪರ್ಧಿಸಿದ್ದರು. ಕೊಳ್ಳೇಗಾಲ ನಗರ ಸಭೆಯ 31 ವಾರ್ಡ್‍ನ ಪೈಕಿ 6ನೇ ವಾರ್ಡ್‍ನಿಂದ ಬಿಎಸ್‍ಪಿ ಅಭ್ಯರ್ಥಿ ಗಂಗಮ್ಮ ಅವಿರೋಧವಾಗಿ ಆಯ್ಕೆ ಆಗಿ ದ್ದಾರೆ. 9ನೇ ವಾರ್ಡ್‍ನಿಂದ ಬಿಎಸ್‍ಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಎಸ್.ರಮೇಶ್ ಅಪಘಾತದಲ್ಲಿ ಮೃತರಾದ ಹಿನ್ನಲೆಯಲ್ಲಿ ವಾರ್ಡ್‍ನ ಮತದಾನವನ್ನು ಮುಂದೂಡ ಲಾಗಿದೆ. ಉಳಿದ 29 ಸದಸ್ಯ ಸ್ಥಾನಕ್ಕೆ ಆಯ್ಕೆ ಬಯಸಿ 101 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಚಾಮರಾಜನಗರ ನಗರಸಭಾ ವ್ಯಾಪ್ತಿಯ 53,714 ಮತದಾರರ ಪೈಕಿ 38,692 ಮತದಾರರು ಮತದಾನ ಮಾಡಿದ್ದಾರೆ. ಕೊಳ್ಳೇ ಗಾಲ ನಗರಸಭಾ ವ್ಯಾಪ್ತಿಯ 41,892 ಮತದಾರರ ಪೈಕಿ 30,877 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದಾರೆ. ಈ ಎರಡೂ ನಗರಸಭೆಯ 60 ಸದಸ್ಯ ಸ್ಥಾನಗಳಿಗೆ ಆಯ್ಕೆ ಬಯಸಿ ಒಟ್ಟಾರೆ ಸ್ಪರ್ಧಿಸಿದ್ದ 233 ಅಭ್ಯರ್ಥಿಗಳ ರಾಜಕೀಯ ಹಣೆಬರಹವನ್ನು ಒಟ್ಟಾರೆ 69,569 ಮತದಾರರು ವಿದ್ಯುನ್ಮಾನ ಮತಯಂತ್ರದಲ್ಲಿ ಮುದ್ರೆ ಒತ್ತಿದ್ದಾರೆ.

ಬಿಗಿ ಭದ್ರತೆಯಲ್ಲಿ ಮತಯಂತ್ರಗಳು: ಚಾಮರಾಜನಗರ ನಗರಸಭೆಯ ಮತ ಯಂತ್ರಗಳನ್ನು ನಗರದ ಸರ್ಕಾರಿ ಪಾಲಿ ಟೆಕ್ನಿಕ್ ಕಾಲೇಜಿನಲ್ಲಿ, ಕೊಳ್ಳೇಗಾಲ ಮತ ಯಂತ್ರಗಳನ್ನು ಕೊಳ್ಳೇಗಾಲ ಪಟ್ಟಣದ ಸರ್ಕಾರಿ ಎಂಜಿಎಸ್‍ವಿ ಜೂನಿಯರ್ ಕಾಲೇಜಿನ ಕೊಠಡಿಯಲ್ಲಿ ಬಿಗಿ ಭದ್ರತೆ ಯಲ್ಲಿ ಇರಿಸಲಾಗಿದೆ.

ಮತಯಂತ್ರಗಳನ್ನು ಇರಿಸಿರುವ ಕೊಠ ಡಿಯ ಕಿಟಕಿಗಳು ಹಾಗೂ ಬಾಗಿಲುಗ ಳನ್ನು ಪ್ಲೈವುಡ್ ಷೀಟ್‍ನಿಂದ ಭದ್ರಪಡಿಸ ಲಾಗಿದೆ. ಬಾಗಿಲಿಗೆ ಬೀಗ ಜಡಿದು ಸೀಲ್ ಮಾಡಲಾಗಿದೆ. ಕೊಠಡಿಗೆ ಹಾಗೂ ಇಡೀ ಕಾಲೇಜಿನ ಸುತ್ತಲೂ ದಿನದ 24 ಗಂಟೆಯೂ ಪೊಲೀಸರ ಸರ್ಪಗಾವಲನ್ನು ಹಾಕಲಾಗಿದೆ. ಮೂರು ಪಾಳಿಯದಲ್ಲಿ ಇನ್ಸ್‍ಪೆಕ್ಟರ್, ಇಬ್ಬರು ಸಬ್‍ಇನ್ಸ್‍ಪೆಕ್ಟರ್, 16 ಪೊಲೀ ಸರು ಹಾಗೂ ಡಿಎಆರ್ ತುಕಡಿಯನ್ನು ಬಂದೋಬಸ್ತ್‍ಗೆ ನಿಯೋಜಿಸಲಾಗಿದೆ. ಇದಲ್ಲದೇ ಸಿಸಿ ಕ್ಯಾಮರಾಗಳ ಕಣ್ಗಾವಲಿ ನಲ್ಲಿ ಮತಯಂತ್ರಗಳನ್ನು ಇರಿಸಲಾಗಿದೆ.

ಲೆಕ್ಕಾಚಾರ: ಯಾವ ವಾರ್ಡ್‍ನಲ್ಲಿ ಎಷ್ಟು ಮತ ಚಲಾವಣೆ ಆಗಿದೆ. ಯಾವ ಅಭ್ಯ ರ್ಥಿಗೆ ಎಷ್ಟು ಮತಗಳು ಬರಬಹುದು. ನಮ್ಮ ಅಭ್ಯರ್ಥಿಗೆ ಎಷ್ಟು ಮತಗಳು ಬರ ಬಹುದು ಎಂಬ ಲೆಕ್ಕಾಚಾರ ವಾರ್ಡ್ ನಲ್ಲಿ ಹಾಗೂ ರಾಜಕೀಯ ಪಕ್ಷಗಳ ಮುಖಂಡರಲ್ಲಿ ನಡೆಯುತ್ತಿದೆ.

ಇಂತಹ ವಾರ್ಡ್‍ನಲ್ಲಿ ಈ ಅಭ್ಯರ್ಥಿ ಗೆಲ್ಲುತ್ತಾನೆ. ಈ ವಾರ್ಡ್‍ನಲ್ಲಿ ನಮ್ಮ ಪಕ್ಷ ಗೆಲ್ಲುತ್ತದೆ. ನಮ್ಮ ಪಕ್ಷಕ್ಕೆ ಬಹುಮತ ಬಂದು ಅಧಿಕಾರ ಹಿಡಿಯುತ್ತದೆ ಎಂದು ಪ್ರಮುಖ ಪಕ್ಷಗಳ ಮುಖಂಡರು ಆಶಾ ಭಾವನೆ ಹೊಂದಿದ್ದಾರೆ. ಪತ್ರಕರ್ತರಿಗೆ ಕರೆ ಮಾಡಿ ನಿಮ್ಮ ಸಮೀಕ್ಷೆ ಏನು ಹೇಳುತ್ತದೆ? ನಮ್ಮ ಪಕ್ಷಕ್ಕೆ ಎಷ್ಟು ಸೀಟು ಬರಬಹುದು? ಬಹುಮತ ಯಾವ ಪಕ್ಷಕ್ಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಪ್ರಮುಖ ಪಕ್ಷಗಳ ಮುಖಂಡರು ಕೇಳು ವುದು ಮಾಮೂಲಿ ಆಗಿದೆ.

ಅಭ್ಯರ್ಥಿಗಳಲ್ಲಿ ಢವಢವ: ಪ್ರಮುಖ ಅಭ್ಯರ್ಥಿಗಳಲ್ಲಿ ಢವಢವ ಆರಂಭ ವಾಗಿದೆ. ಚುನಾವಣೆಯನ್ನು ಪ್ರತಿಷ್ಠೆ ಯಾಗಿ ತೆಗೆದುಕೊಂಡಿದ್ದ ಕೆಲವು ಅಭ್ಯ ರ್ಥಿಗಳು ಗೆಲುವಿಗಾಗಿ ಎಲ್ಲಾ ರೀತಿ ಯಲ್ಲೂ, ಎಲ್ಲಾ ಪಥದಲ್ಲೂ ಕಸರತ್ತು ನಡೆಸಿದ್ದರು. ಹಣವನ್ನು ನೀರಿನಂತೆ ಚಲ್ಲಿದ ಉದಾಹರಣೆಗೆ ಅನೇಕ ವಾರ್ಡ್‍ಗಳನ್ನು ನೀಡಬಹುದಾಗಿದೆ. ಇಂತಹ ಅಭ್ಯರ್ಥಿಗಳ ಸೋಲು-ಗೆಲು ವಿನ ಲೆಕ್ಕಾಚಾರದಲ್ಲಿ ತೊಡಗಿದ್ದಾರೆ. ಇವರ ಎದೆ ಢವಢವ ಎಂದು ಹೊಡೆ ದುಕೊಳ್ಳಲು ಆರಂಭಿಸಿದೆ.
ಬೆಟ್ಟಿಂಗ್ ಭರಾಟೆ: ಕೆಲವು ಪ್ರತಿಷ್ಠಿತ ವಾರ್ಡ್‍ಗಳಲ್ಲಿ ಅಭ್ಯರ್ಥಿಯ ಸೋಲು-ಗೆಲುವಿನ ಬಗ್ಗೆ ಬೆಟ್ಟಿಂಗ್ ನಡೆಯುತ್ತಿದೆ ಎಂದು ತಿಳಿದು ಬಂದಿದೆ. ಚಾಮರಾಜ ನಗರಕ್ಕಿಂತ ಕೊಳ್ಳೇಗಾಲದಲ್ಲಿ ಬೆಟ್ಟಿಂಗ್ ಭರಾಟೆ ಜೋರಾಗಿ ಇದೆ ಎನ್ನಲಾಗಿದೆ.

Translate »