ಅನರ್ಹತೆ ವಿಚಾರ: ಕಾಂಗ್ರೆಸ್ 10 ಮಂದಿ ಶಾಸಕರಿಗೆ ಸ್ಪೀಕರ್ ತುರ್ತು ನೋಟಿಸ್
ಮೈಸೂರು

ಅನರ್ಹತೆ ವಿಚಾರ: ಕಾಂಗ್ರೆಸ್ 10 ಮಂದಿ ಶಾಸಕರಿಗೆ ಸ್ಪೀಕರ್ ತುರ್ತು ನೋಟಿಸ್

July 23, 2019

ಬೆಂಗಳೂರು: ಸಮ್ಮಿಶ್ರ ಸರ್ಕಾರ ಪತನದ ಅಂಚಿನಲ್ಲಿ ರುವ ಸಂದರ್ಭದಲ್ಲೇ ಸ್ಪೀಕರ್ ರಮೇಶ್ ಕುಮಾರ್ ಕಾಂಗ್ರೆಸ್‍ನ 10 ಮಂದಿ ಶಾಸ ಕರ ಅನರ್ಹತೆ ವಿಚಾರ ಕುರಿತು ತುರ್ತು ನೋಟಿಸ್ ಜಾರಿ ಮಾಡಿದ್ದಾರೆ.

ಸಿಎಲ್‍ಪಿ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ದಿನೇಶ್‍ಗುಂಡೂರಾವ್ ಅವರು ಜು.11ರಂದು ಮತ್ತು ಜು.18 ರಂದು 2 ಹಂತದಲ್ಲಿ ಸ್ಪೀಕರ್ ಅವರಿಗೆ ದೂರು ನೀಡಿದ್ದು, ಪಕ್ಷದ ಶಿಸ್ತು ಉಲ್ಲಂ ಘಿಸಿ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿರುವ ಶಾಸಕರಾದ ರಮೇಶ್ ಜಾರಕಿಹೊಳಿ, ಮಹೇಶ್ ಕುಮಟಳ್ಳಿ, ಪ್ರತಾಪ್‍ಗೌಡ ಪಾಟೀಲ್, ಬಿ.ಸಿ. ಪಾಟೀಲ್, ಶಿವರಾಮ್ ಹೆಬ್ಬಾರ್, ಎಸ್.ಟಿ.ಸೋಮಶೇಖರ್, ಬೈರತಿ ಬಸವರಾಜ್, ಮುನಿರತ್ನ, ಸುಧಾಕರ್ ಹಾಗೂ ಎಂ.ಟಿ.ಬಿ.ನಾಗರಾಜ್ ಅವರುಗಳನ್ನು
ಅನರ್ಹಗೊಳಿಸುವಂತೆ ದೂರು ನೀಡಿದ್ದರು. ದೂರು ಆಧರಿಸಿ ಜು.18ರಂದು ತುರ್ತು ನೋಟಿಸ್ ನೀಡಿರುವ ಸ್ಪೀಕರ್ ಅವರು 3 ದಿನಗಳ ಒಳಗಾಗಿ ನೋಟಿಸ್‍ಗೆ ಉತ್ತರ ನೀಡಬೇಕು ಮತ್ತು ನಾಳೆ (ಜು.23) ವಿಧಾನಸೌಧದ ಮೊದಲ ಮಹಡಿಯ 119ರ ಸಂಖ್ಯೆಯ ಕೊಠಡಿ ಯಲ್ಲಿ ನಡೆಯುವ ವಿಚಾರಣೆಗೆ ಹಾಜರಾಗಬೇಕೆಂದು ಸೂಚಿಸಿದ್ದಾರೆ. 10 ಷೆಡ್ಯೂಲ್ ಕರ್ನಾಟಕ ವಿಧಾನಸಭೆಯ ನಿಯಮಾವಳಿ 6ರ ಅನುಸಾರ ಅನರ್ಹತೆ ಪ್ರಕರಣ ಕುರಿತು ವಿಚಾರಣೆ ನಡೆಯಲಿದ್ದು, ಖುದ್ದಾಗಿ ಹಾಜರಾಗುವಂತೆ ಸೂಚನೆ ನೀಡಿದ್ದಾರೆ.

Translate »