ಚಂದ್ರಯಾನ-2 ಯಶಸ್ವಿ ಉಡಾವಣೆ
ಮೈಸೂರು

ಚಂದ್ರಯಾನ-2 ಯಶಸ್ವಿ ಉಡಾವಣೆ

July 23, 2019

ಶ್ರೀಹರಿಕೋಟ: ಭಾರತದ ಮಹಾತ್ವಕಾಂಕ್ಷೆಯ ಚಂದ್ರಯಾನ-2 ಗಗನ ನೌಕೆ ನಭಕ್ಕೆ ಜಿಗಿದಿದೆ. ಜು.15ರಂದು ಉಡಾಯನದ ವೇಳೆ ಕಂಡು ಬಂದಿದ್ದ ತಾಂತ್ರಿಕ ದೋಷಗಳನ್ನು ಸರಿಪಡಿಸಲಾಗಿದ್ದು, ಇಂದು (ಸೋಮವಾರ) ಮಧ್ಯಾಹ್ನ ಸರಿಯಾಗಿ 2.43ಕ್ಕೆ ವ್ಯೋಮ ನೌಕೆಯನ್ನು ಹೊತ್ತ `ಬಾಹುಬಲಿ’ ರಾಕೆಟ್ ಆಂಧ್ರ ಪ್ರದೇಶದ ಶ್ರೀಹರಿಕೋಟದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಬಾನಂಗಳಕ್ಕೆ ಜಿಗಿಯಿತು.

ಇಸ್ರೋ ಅಧ್ಯಕ್ಷ ಕೆ.ಶಿವನ್ ಹೇಳಿದಂತೆ `ಚಂದ್ರಯಾನ-2′ ಕೋಟಿ ಕೋಟಿ ಕನಸುಗಳನ್ನು ಹೊತ್ತು ಚಂದ್ರನಲ್ಲಿಗೆ ಸಾಗುತ್ತಿದೆ. ಜು.15ರಂದು ಉಡಾಯನ ಗೊಳ್ಳಬೇಕಿದ್ದ ಬಾಹುಬಲಿ ತಾಂತ್ರಿಕ ದೋಷದಿಂದ ಜುಲೈ 22ಕ್ಕೆ ಮುಂದೂ ಡಲಾಗಿತ್ತು. ಎಲ್ಲವೂ ಅಂದುಕೊಂಡಂತೆ ಆದರೆ ಸೆಪ್ಟಂಬರ್ 12ಕ್ಕೆ ಅಥವಾ 13ಕ್ಕೆ ಚಂದ್ರನ ಮೇಲೆ ಬಾಹುಬಲಿ ಕಾಲಿಡಲಿ ದ್ದಾನೆ. ನಿಗದಿತ ಕಕ್ಷೆಗೆ ಸಾಗುತ್ತಿರುವ ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಯಶಸ್ವಿ ಉಡಾಯನದ ನಂತರ ಇಸ್ರೋ ಅಧ್ಯಕ್ಷ ಕೆ.ಶಿವನ್ ಸುದ್ದಿಗೋಷ್ಠಿ ನಡೆಸಿದರು. ಚಂದ್ರಯಾನ 2 ಯಶಸ್ವಿ ಉಡಾವಣೆಯಾ ಗಿದ್ದು, ನಿಗದಿತ ಕಕ್ಷೆ ಸೇರಿದೆ. ಜುಲೈ 15 ರಂದು ಕಂಡುಬಂದ ತಾಂತ್ರಿಕ ದೋಷವನ್ನು ನಂತರದ 24 ಗಂಟೆಯಲ್ಲಿ ಸರಿಪಡಿಸಲಾಯಿತು. ಚಂದ್ರಯಾನ 2 ಯೋಜನೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ವಂದನೆಗಳನ್ನು ಸಲ್ಲಿಸುತ್ತೇನೆ. ಜಿಎಸ್‍ಎಲ್‍ವಿ ಮಾರ್ಕ್ 3 ಯಶಸ್ವಿಯಾಗಿ ಚಂದ್ರಯಾನ 2ನ್ನು ಬಾಹ್ಯಾಕಾಶದ ಭೂಕಕ್ಷೆಗೆ ಸೇರಿಸಿದೆ ಎಂಬುದನ್ನು ತಿಳಿಸಲು ತುಂಬಾ ಖುಷಿಯಾಗುತ್ತಿದೆ. ಚಂದ್ರನೆಡೆಗೆ ಭಾರತದ ಐತಿಹಾಸಿಕ ಪ್ರಯಾಣ ಆರಂಭವಾಗಿದೆ ಎಂದರು.

ತುಂಟ ಹುಡುಗ: ಎರಡು ಪ್ರಾಯೋಗಿಕ ಹಾಗೂ ಒಂದು ಯಶಸ್ವಿ ಕಾರ್ಯಾಚರಣೆಯ ನಂತರ, ಇಸ್ರೋದ ಮಹತ್ವ ಕಾಂಕ್ಷೆಯ ಚಂದ್ರಯಾನ-2 ಉಪಗ್ರಹವನ್ನು ಹೊತ್ತು ಗರ್ಜಿಸುತ್ತಾ ಆಗಸದತ್ತ ಚಿಮ್ಮಿದ ಜಿಎಸ್‍ಎಲ್‍ವಿ-ಎಂಕೆ-3 ಉಡಾಯನ ನೌಕೆಯನ್ನು ಕಳೆದ ವರ್ಷವಷ್ಟೇ ಕಾರ್ಯಾರಂಭಗೊಳಿಸಲಾಗಿತ್ತು. ಮುಂದಿನ ದಿನಗಳಲ್ಲಿ ಇಸ್ರೋ, ತನ್ನೆಲ್ಲಾ ಕನಸಿನ, ಸವಾಲಿನ ಹಾಗೂ ಮಹತ್ವಾ ಕಾಂಕ್ಷೆಯ ಯೋಜನೆಗಳಿಗೆ ಬಳಸಲಿದೆ. 2022ರಲ್ಲಿ ಒಂದು ವಾರದ ಅವಧಿಗೆ ಮೂವರು ಗಗನಯಾತ್ರಿ ಗಳನ್ನು ಹೊತ್ತು ನಭಕ್ಕೆ ಹೊರಡಲಿರುವ ಮಾನವ ಸಹಿತ ಉಪಗ್ರಹದ ಯೋಜನೆಗೆ ಕೂಡ ಇದೇ ಉಡಾಯನ ನೌಕೆ ಬಳಕೆಯಾಗಲಿದೆ. ಈ ವಾಹನ 2 ದೃಢವಾದ ಸ್ಟ್ರಾಪ್- ಆನ್, 1 ಲಿಕ್ವಿಡ್ ಬೂಸ್ಟರ್ ಹಾಗೂ ದೇಶೀಯ ವಾಗಿ ತಯಾರಿಸಲ್ಪಟ್ಟ ಸಂಕೀರ್ಣ ಕ್ರಯೋಜೆನಿಕ್ ಮೇಲ್ಭಾಗವನ್ನು ಒಳಗೊಂ ಡಿದೆ. 43.43 ಮೀ ಎತ್ತರದ ಜಿಎಸ್‍ಎಲ್‍ವಿ ಎಂಕೆ 3 ಅನ್ನು 4 ಟನ್ ತೂಕದ ಉಪ ಗ್ರಹಗಳನ್ನು ಜಿಯೋಸಿಂ ಕ್ರೋನಸ್ ಟ್ರಾನ್ಸ್‍ಫರ್ ಆರ್ಬಿಟ್ (ಜಿಟಿಒ) ಅಥವಾ 10 ಟನ್ ತೂಕದ ಉಪಗ್ರಹವನ್ನು ಭೂಮಿಯ ಕೆಳ ಕಕ್ಷೆ (ಎಲ್‍ಇಒ)ಗೆ ಕರೆದೊಯ್ಯುವ ಸಾಮಥ್ರ್ಯದೊಂದಿಗೆ ವಿನ್ಯಾಸಗೊಳಿಸಲಾಗಿದೆ. ಇದು ಜಿಎಸ್‍ಎಲ್‍ವಿ ಎಂಕೆ -2 ಸಾಮಥ್ರ್ಯದ ದುಪ್ಪಟ್ಟಾಗಿದೆ. ಜಿಎಸ್‍ಎಲ್-ಎಂಕೆ-2ರ ಮೊದಲ ಪ್ರಾಯೋಗಿಕ ಯೋಜನೆಯಾದ ಎಲ್‍ವಿಎಂ 3-ಎಕ್ಸ್ /ಕೇರ್, 2014ರ ಡಿಸೆಂಬರ್ 18ರಂದು ಶ್ರೀಹರಿಕೋಟಾದಲ್ಲಿ ಯಶಸ್ವಿ ಉಡಾವಣೆಗೊಂಡಿತ್ತು. ಈ ವಾಹನ ಆಗಸಕ್ಕೇರಿ, ವಾತಾವರಣವನ್ನು ಪರಿಶೀಲಿಸಿ, ಪ್ಯಾರಾಚೂಟ್‍ಗಳನ್ನು ನಿಗದಿಯಂತೆ ಕೆಳಗಿಸಿ, ಬಂಗಾಳ ಕೊಲ್ಲಿ ಸಮುದ್ರಕ್ಕೆ ನೆಗೆದಿತ್ತು ಎಂದು ಇಸ್ರೋ ತಿಳಿಸಿದೆ. ಇದಾದ ನಂತರ ಜಿಎಸ್‍ಎಲ್‍ವಿ-ಎಂಕೆ 3ಯ ಮೊದಲ ಅಭಿವೃದ್ಧಿ ವಾಹನವನ್ನು ತಯಾರಿಸಲಾಗಿತ್ತು. ಜಿಎಸ್‍ಎಲ್‍ವಿ-ಎಂಕೆ 3-ಡಿ1 2017ರ ಜೂನ್ 5ರಂದು ಜಿಎಸ್ ಎಟಿ-19 ಉಪಗ್ರಹವನ್ನು ಯಶಸ್ವಿಯಾಗಿ ಜಿಟಿಒ ಕಕ್ಷೆಗೆ ಸೇರಿಸಿತ್ತು. 2018ರ ನವೆಂಬರ್ 14ರಂದು 2ನೇ ಅಭಿವೃದ್ಧಿ ವಾಹನವಾದ ಜಿಎಸ್‍ಎಲ್‍ವಿ ಎಂಕೆ 3 ಡಿ-2 ಯಶಸ್ವಿಯಾದ ನಂತರ, ರೂಪುಗೊಂಡಿದ್ದೇ, ಈ ‘ತುಂಟ ಹುಡುಗ’ ಜಿಎಸ್‍ಎಲ್‍ವಿ ಎಂಕೆ 3.ಈ ಹಿಂದೆ ಚಂದ್ರಯಾನ -1 ಉಪಗ್ರಹವನ್ನು ಪಿಎಸ್‍ಎಲ್‍ವಿ ವಾಹನದ ಮೂಲಕ ಇಸ್ರೋ ಯಶಸ್ವಿ ಉಡಾವಣೆ ಮಾಡಿತ್ತು. ಆದರೆ, ರಷ್ಯಾ ತನ್ನ ಉತ್ಪನ್ನಗಳನ್ನು ಒದಗಿಸಲು ಹಿಂದೇಟು ಹಾಕಿದಾಗ, ಇಸ್ರೋ ದೇಶಿ ತಂತ್ರಜ್ಞಾನ ಬಳಸಿ ವಾಹನ ತಯಾರಿಸಲು ಮುಂದಾಗಿತ್ತು. ನಂತರ ಜಿಎಸ್‍ಎಲ್‍ವಿ ಎಂಕೆ-3 ವಾಹನವನ್ನು ತಯಾರಿಸಲು ಮುಂದಾಗಿತ್ತಾದರೂ, ಅದು ಎರಡು ಬಾರಿ ವಿಫಲಗೊಂಡಿತ್ತು. ನಂತರ, ಇಸ್ರೋ ಜಿಎಸ್‍ಎಲ್ ಎಂಕೆ-2 ವಾಹನವನ್ನು ತಯಾರಿಸಿದ್ದು, ಇದು ನಾಲ್ಕು ಯಶಸ್ವಿ ಯೋಜನೆಗಳನ್ನು ಪೂರೈಸಿದೆ.

Translate »