ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’
ಮೈಸೂರು

ಚಂದಿರನ ನೆಲದಲ್ಲಿ ಭಾರತದ ‘ವಿಕ್ರಮ’

September 7, 2019

ಬೆಂಗಳೂರು,ಸೆ.6- ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ (ಇಸ್ರೋ) ಮುಕುಟಕ್ಕೆ ಮಗ ದೊಂದು ಸಾಧನೆಯ ಗರಿ ಸೇರ್ಪಡೆಯಾಗುವ ಗಳಿಗೆ ಬಂದೇ ಬಿಟ್ಟಿದೆ. 2 ದಿನದಿಂದ ಅತ್ಯಂತ ಸಮೀಪ ದಿಂದ ಚಂದ್ರನನ್ನೇ ದಿಟ್ಟಿಸಿ ನೋಡುತ್ತಿರುವ ಭಾರತದ ಉಪಗ್ರಹ `ವಿಕ್ರಂ ಲ್ಯಾಂಡರ್’, ಸೆ.7ರ ಶನಿವಾರ ನಸುಕಿನ 1.55ರಲ್ಲಿ ಚಂದ್ರನ ಮೇಲೆ ಕಾಲೂರಲಿದೆ. ಆ ಅದ್ಭುತ ಕ್ಷಣವನ್ನು ಕಣ್ತುಂಬಿಕೊಳ್ಳಲು ಭಾರತ ವಷ್ಟೇ ಅಲ್ಲ, ಇಡೀ ಜಗತ್ತೇ ಎದುರು ನೋಡುತ್ತಿದೆ.

ಈವರೆಗೆ ಮೂರು ದೇಶಗಳು ಚಂದ್ರನನ್ನು ಮುಟ್ಟಿ ಬಂದಿದ್ದರೂ, ಚಂದಮಾಮನ ದಕ್ಷಿಣ ಧ್ರುವದತ್ತ ಈವರೆಗೆ ಯಾರೂ ಕಣ್ಣು ಹಾಯಿಸಿಲ್ಲ. ಈಗ ಭಾರತದ ಪ್ರತಿಷ್ಠಿತ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೊ, ಕೈಗೊಂಡಿರುವ ಚಂದ್ರಯಾನ-2ರ ಮಹತ್ವಾಕಾಂಕ್ಷಿ ಯೋಜನೆಯಲ್ಲಿ ಚಂದ್ರನ ಬಳಿಗೆ ತೆರಳಿರುವ ವಿಕ್ರಂ ಲ್ಯಾಂಡರ್ ಉಪಗ್ರಹ ಈ ಕೊರತೆಯನ್ನು ನೀಗಲಿದೆ. ವಿಕ್ರಂ ಲ್ಯಾಂಡರ್‍ನ ಉದರದೊಳಗಿರುವ `ರೋವರ್ ಪ್ರಗ್ಯಾನ್’ ರೋಬೋಟ್, ಚಂದ್ರನ ಅಂಗಳದಲ್ಲಿ 200 ಮೀಟರ್ ಅತ್ತಿತ್ತ ಸಂಚರಿಸಿ ಸಂಶೋಧನೆ ಕೈಗೊಳ್ಳ ಲಿದೆ. ಇದರೊಂದಿಗೆ 2019 ಸೆಪ್ಟೆಂಬರ್ 7ವಿಶ್ವದ ಬಾಹ್ಯಾ ಕಾಶ ಸಾಧನೆಯ ಪುಟಗಳಲ್ಲಿ ಸೆ.7 ಅತ್ಯಂತ ಮಹತ್ವದ ದಿನವಾಗಿ ಭಾರತದ ಹೆಸರಿನಲ್ಲಿ ದಾಖ ಲಾಗಲಿದೆ. ಚಂದ್ರಯಾನ-2ರ ವಿಕ್ರಮ್ ಲ್ಯಾಂಡರ್ ನನ್ನು ಚಂದ್ರನ ಮೇಲೆ ಬಹಳ ಜೋಪಾನವಾಗಿ ಇಳಿಸಲೆಂದೇ ಇಸ್ರೋದ ನೂರಾರು ವಿಜ್ಞಾನಿಗಳು, ತಂತ್ರಜ್ಞರು, ಕಳೆದ 47 ದಿನಗಳಿಂದ ಅವಿರತ ಶ್ರಮಿಸಿ ದ್ದಾರೆ. ಶನಿವಾರ ಮುಂಜಾನೆಯ ಮೊದಲ ಪಾದ ದಲ್ಲಿಯೇ ಉಪಗ್ರಹವನ್ನು ಚಂದ್ರನ ಮೇಲೆ ಇಳಿಸಲಿ ದ್ದಾರೆ. ಈ ರೋಮಾಂಚಕ ಕ್ಷಣವನ್ನು ಭಾರತದ ಹೆಮ್ಮೆಯ ವಿಜ್ಞಾನಿಗಳ ಜತೆಗೂಡಿಯೇ ಕಣ್ತುಂಬಿ ಕೊಳ್ಳಬೇಕೆಂದು ಪ್ರಧಾನಿ

ನರೇಂದ್ರ ಮೋದಿ ಅವರೂ ಬೆಂಗಳೂರಿನಲ್ಲಿನ ಇಸ್ರೊ ಪ್ರಧಾನ ಕಚೇರಿಗೆ ಶುಕ್ರವಾರ ರಾತ್ರಿ ಬಂದಿಳಿದಿದ್ದಾರೆ. ಅವರ ಜತೆಗೆ ದೇಶದ ವಿವಿಧ ರಾಜ್ಯಗಳ ಪ್ರೌಢಶಾಲೆಗಳು 70 ವಿಜ್ಞಾನಪ್ರಿಯ ವಿದ್ಯಾರ್ಥಿಗಳೂ ಆ ಕ್ಷಣವನ್ನು ಸಂಭ್ರಮಿಸಲು ಕಾತುರರಾಗಿದ್ದಾರೆ. ನಾಸಾ ವಿಜ್ಞಾನಿಗಳಿಗೂ, ಭಾರತದ ವಿಕ್ರಮ್ ಲ್ಯಾಂಡರ್ ಚಂದ್ರನ ದಕ್ಷಿಣ ಧ್ರುವದಲ್ಲಿ ಇಳಿಯು ವುದು ಮತ್ತು ಪ್ರಗ್ಯಾನ್ ರೋವರ್ ಸಂಚರಿಸುವ ಬಗ್ಗೆ ವಿಪರೀತ ಕುತೂಹಲವಿದೆ. ಈವರೆಗೆ ಯಾವುದೇ ದೇಶದ ಬಾಹ್ಯಾಕಾಶ ಸಂಸ್ಥೆಯೂ ಚಂದ್ರನ ದಕ್ಷಿಣ ಧ್ರುವ ಪ್ರವೇಶಿಸಿಲ್ಲ. ಅಲ್ಲೇನಿದೆ? ಆ ಪ್ರದೇಶ ಹೇಗಿದೆ? ಎಂಬುದೂ ತಿಳಿದಿಲ್ಲ. `ಸಂಪೂರ್ಣ ಹೊಸ ಪ್ರದೇಶ ದಲ್ಲಿ ವಿಕ್ರಂ ಲ್ಯಾಂಡರ್ ಇಳಿಯುತ್ತಿದ್ದು, ಭಾರೀ ಕುತೂಹಲವಿದೆ’ ಎಂದು ಜಾನ್ ಹಾಪ್ಕಿನ್ಸ್ ವಿವಿಯ ಭೌತಶಾಸ್ತ್ರ ಲ್ಯಾಬೋರೇಟರಿಯ ಖಗೋಳ ವಿಜ್ಞಾನಿ ಬ್ರೆಟ್ ಡೆನೆವಿ ಪ್ರತಿಕ್ರಿಯಿಸಿದ್ದಾರೆ. ಉಪಗ್ರಹಗಳ ಮೂಲಕ ಚಂದ್ರನ ನೆಲದ ಬಗ್ಗೆ ಸಾಕಷ್ಟು ಶೋಧ ನಡೆದಿದ್ದರೂ, ಲ್ಯಾಂಡರ್ ಇಳಿಸಿ ಶೋಧ ನಡೆಸುವುದು ಹೆಚ್ಚಿನ ಮಾಹಿತಿ ನೀಡುತ್ತದೆ. ಚಂದ್ರಯಾನ-2 ಯೋಜನಾ ವೆಚ್ಚ ಬಹಳ ಮಿತವಾದುದಾಗಿದೆ. 2014 ಹಾಲಿವುಡ್ ಸಿನೆಮಾ ಇಂಟರ್‍ಸ್ಟೆಲ್ಲರ್ ನಿರ್ಮಾಣಕ್ಕಿಂತಲೂ ಕಡಿಮೆಯದ್ದಾಗಿದೆ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದ್ದಾರೆ.

ಚಂದ್ರನ ನೆಲದಲ್ಲಿ ಬೀಳಲಿದೆ ಅಶೋಕ ಚಕ್ರದ ಗುರುತು!
ವಿಕ್ರಂ ಲ್ಯಾಂಡರ್ ಮತ್ತೆ ಇಂಧನ ಉರಿಸುವ ಮೂಲಕ ಚಂದ್ರನ ಮೇಲ್ಮೈನತ್ತ ನಿಧಾನವಾಗಿ ಸಾಗಲಿದೆ. ಚಂದ್ರನ ಅತೀ ಸಮೀಪ ಸಾಗಿದ ಬಳಿಕ ಕೆಳಮುಖವಾಗಿ ಲ್ಯಾಂಡ್ ಆಗಲಿದೆ. ಬಳಿಕ ನಿಧಾನವಾಗಿ ಅದರ ಒಡಲಿನ ಬಾಗಿಲು ತೆರೆದು ಕೊಳ್ಳಲಿದೆ. ಇದುವರೆಗೂ ವಿಕ್ರಂನ ಉದರದೊಳಗೆ ಅಡಗಿ ಕುಳಿತಿದ್ದ ಆರು ಚಕ್ರಗಳ ಪುಟ್ಟ `ರೋವರ್-ಪ್ರಗ್ಯಾನ್’ ರೋಬೊ ಮೆಲ್ಲಗೆ ಹೊರಬಂದು ತನ್ನ ಸೌರಫಲಕಗಳನ್ನು ತೆರೆದಿಡಲಿದೆ. ನಂತರ ಜಾರು ಹಲಗೆಯ ಮೇಲೆ ನಿಧಾನವಾಗಿ ಚಕ್ರ ಉರುಳಿ ಸುತ್ತಾ ಪ್ರಗ್ಯಾನ್ ಚಂದ್ರನ ನೆಲವನ್ನು ಸೋಕಲಿದೆ. ಇದಿಷ್ಟು ಪ್ರಕ್ರಿಯೆಗೆ 4 ತಾಸು ತಗಲುತ್ತದೆ. ಚಂದ್ರ ನಲ್ಲಿ ಗುರುತ್ವಾಕರ್ಷಣೆ ತೀರಾ ಕಡಿಮೆ. ಭೂಮಿಯ ಒಟ್ಟು ಗುರುತ್ವ ಬಲದ ಶೇ.16.6ರಷ್ಟಿದೆ.

ಆ ಬಳಿಕ ಪ್ರಗ್ಯಾನ್‍ನ ಸಂಶೋಧನಾ ಕಾರ್ಯ ಶುರುವಾಗಲಿದೆ. ರೋವರ್ ಚಂದ್ರನ ಮೇಲ್ಮೈ ಚಿತ್ರಗಳನ್ನು ತೆಗೆದು ಭೂಮಿಗೆ ರವಾನಿಸಲಿದೆ. ಚಂದಮಾಮನ ಒಡಲಲ್ಲಿ ಲಭ್ಯವಿರುವ ಜಲ-ಖನಿಜ ಸಂಪನ್ಮೂಲಗಳ ಬಗ್ಗೆ ಪರಿಶೀಲಿಸಲಿದೆ.

ಜೀವಿತಾವಧಿ 14 ದಿನ: 20 ಕೆ.ಜಿ. ಭಾರವಿರುವ ರೋವರ್ ಚಂದ್ರನ ಮೇಲೆ 100-200 ಮೀಟರ್ ದೂರ ಕ್ರಮಿಸಿ, ಅತ್ತಿತ್ತ ಸುತ್ತಾಡಿ 15 ನಿಮಿಷಗಳ ಒಳಗೆ ಆರ್ಬಿಟರ್ ಮೂಲಕ ಭೂಮಿಗೆ ತಾನು ಸಂಗ್ರಹಿಸಿದ ಡೇಟಾ ಮತ್ತು ಫೆÇೀಟೋಗಳನ್ನು ರವಾನಿಸಲಿದೆ.

ವಿಕ್ರಮ್ ಮತ್ತು ರೋವರ್ ಪ್ರಗ್ಯಾನ್ ಜೀವಿತಾವಧಿ ಕೇವಲ ಒಂದು ಚಂದ್ರ ದಿನ ಮಾತ್ರ. 1 ಚಂದ್ರ ದಿನ ಎಂದರೆ ಭೂಮಿ ಲೆಕ್ಕದಲ್ಲಿ 14 ದಿನಗಳು. ರೋವರ್‍ನ ಹಿಂಬದಿಯ ಒಂದು ಚಕ್ರದಲ್ಲಿ ಭಾರತದ ರಾಷ್ಟ್ರೀಯ ಚಿಹ್ನೆ `ಅಶೋಕ ಚಕ್ರ’, ಮತ್ತೊಂದು ಚಕ್ರದಲ್ಲಿ ಇಸ್ರೋದ ಲೊಗೋ ಕೆತ್ತಲಾಗಿದೆ. ರೋವರ್ ಸಂಚರಿಸಿದಾಗ ಅಶೋಕ ಚಕ್ರ ಮತ್ತು ಇಸ್ರೋ ಲಾಂಛನ ಚಂದ್ರನ ಮೇಲೆ ಅಚ್ಚಾಗಲಿದೆ. ಈವರೆಗೆ 3 ದೇಶಗಳಷ್ಟೇ ಚಂದ್ರನಲ್ಲಿ ರೋವರ್ ಇಳಿಸಿವೆ. 1970ರ ನ.17ರಂದು ರಷ್ಯಾ ಮೊದಲ ಬಾರಿ ರಿಮೋಟ್ ಚಾಲಿತ ರೋಬೋಟ್ (ಲುನೋ ಖೋದ್) ಇಳಿಸಿತ್ತು. ಬಳಿಕ ಅಮೆರಿಕ ಮತ್ತು ಚೀನ ಈ ಸಾಧನೆಗೈದಿತ್ತು. ಭಾರತ 4ನೇ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ.

Translate »