ಮೈಸೂರು, ಸೆ.7- ಮೈಸೂರಿನ ಅಶೋಕ ರಸ್ತೆಯ ಮಹದೇಶ್ವರ ದೇವಸ್ಥಾನದ ಬಳಿ ನಗರಪಾಲಿಕೆ ಅನುದಾನ 40 ಲಕ್ಷ ರೂ. ವೆಚ್ಚದಲ್ಲಿ ಪ್ರಗತಿಯಲ್ಲಿರುವ ಒಳಚರಂಡಿ ಕೊಳವೆ ಕಾಮಗಾರಿಯನ್ನು ಚಾಮರಾಜ ಕ್ಷೇತ್ರದ ಶಾಸಕ ಎಲ್.ನಾಗೇಂದ್ರ ಶನಿವಾರ ಪರಿಶೀಲನೆ ನಡೆಸಿದರು. ದಸರಾಗೆ ಕೆಲವೇ ದಿನಗಳು ಬಾಕಿ ಇದ್ದು, ವಿವಿಧ ಭಾಗ ದಿಂದ ಪ್ರವಾಸಿಗರು ಭೇಟಿ ನೀಡುವ ಹಿನ್ನೆಲೆಯಲ್ಲಿ ಅಶೋಕ ರಸ್ತೆಯಲ್ಲಿ ಕೈಗೆತ್ತಿ ಕೊಂಡಿರುವ ಒಳಚರಂಡಿ ಕಾಮಗಾರಿಯನ್ನು ದಸರಾ ಆರಂಭಕ್ಕೆ ಮುನ್ನವೇ ಮುಗಿ ಸುವಂತೆ ಗುತ್ತಿಗೆದಾರರಿಗೆ ಹಾಗೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ವೇಳೆ ನಗರಪಾಲಿಕೆ ಸದಸ್ಯರಾದ ಸತೀಶ್, ರಮಣಿ ಹಾಗೂ ಅಧಿಕಾರಿಗಳಾದ ಎಕ್ಸಿಕ್ಯೂಟಿವ್ ಇಂಜಿನಿಯರ್ ಮಹೇಶ್, ಅಸಿಸ್ಟೆಂಟ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಜಗದೀಶ್, ಮುಖಂಡರಾದ ಭದ್ರಿ ನಾಗೇಶ್, ಪನ್ನಾಲಾಲ್, ಮಹಾವೀರ್, ಬಡಾ ವಣೆಯ ನಿವಾಸಿಗಳು ಹಾಗೂ ಇನ್ನಿತರರು ಹಾಜರಿದ್ದರು.