ಐಎಂಎ ಹಗರಣ: ಎದೆನೋವು ಎಂದ ಮನ್ಸೂರ್ ಖಾನ್‍ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ
ಮೈಸೂರು

ಐಎಂಎ ಹಗರಣ: ಎದೆನೋವು ಎಂದ ಮನ್ಸೂರ್ ಖಾನ್‍ಗೆ ಜಯದೇವ ಆಸ್ಪತ್ರೆಯಲ್ಲಿ ಆರೋಗ್ಯ ತಪಾಸಣೆ

July 23, 2019

ಬೆಂಗಳೂರು: ಬಹುಕೋಟಿ ಐಎಂಎ ಹಗರಣದ ಮುಖ ಆರೋಪಿ ಮನ್ಸೂರ್ ಖಾನ್‍ನನ್ನು ಜು.21ರಂದು ಎದೆ ನೋವು ಮತ್ತು ಹೃದಯ ಬಡಿತದ ತಪಾಸಣೆಗಾಗಿ ಆಸ್ಪತ್ರೆಗೆ ಕರೆದೊಯ್ದು ಪರೀಕ್ಷೆ ನಡೆಸಲಾಗಿದೆ.

ಮನ್ಸೂರ್ ಖಾನ್‍ನನ್ನು ಜಯದೇವ ಇನ್ಸ್ಟಿಟ್ಯೂಟ್ ಆಫ್ ಕಾರ್ಡಿಯೋ ವಾಸ್ಕುಲರ್ ಸೈನ್ಸಸ್‍ಗೆ ಕರೆದೊಯ್ಯಲಾಯಿತು. ಸಂಸ್ಥೆಯ ನಿರ್ದೇಶಕ ಸಿ.ಎನ್.ಮಂಜು ನಾಥ್ ಅವರ ಪ್ರಕಾರ, ಆತಂಕ ಮತ್ತು ಒತ್ತಡವು ಅವರ ಆರೋಗ್ಯದ ಏರುಪೇರಿಗೆ ಕಾರಣವಾಗಿದೆ. ಜು.20 ರಂದು ವಿಶೇಷ ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂ ಎಲ್‍ಎ) ಅಡಿಯಲ್ಲಿ ಖಾನ್‍ನನ್ನು ಜಾರಿ ನಿರ್ದೇಶನಾಲಯ (ಇಡಿ) 3 ದಿನಗಳ ಕಾಲ ವಶಕ್ಕೆ ಪಡೆದಿತು ಇಡಿ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾಗ ಎದೆ ನೋವು ಉಂಟಾಗುತ್ತಿದೆ ಎಂದು ಮನ್ಸೂರ್ ಹೇಳಿದ್ದ ಹಿನ್ನೆಲೆಯಲ್ಲಿ ಅಧಿಕಾರಿಗಳು ಆತನನ್ನು ಜಯದೇವ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ನಡೆಸಿದ್ದಾರೆ.

ಇಸಿಜಿ ಸೇರಿದಂತೆ ಹಲವು ತಪಾಸಣೆ ನಡೆಸಲಾಗಿದೆ. ಆಸ್ಪತ್ರೆಗೆ ದಾಖಲಿಸುವಂತೆ ವೈದ್ಯರು ಸೂಚಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಐ ಮಾನಿಟರಿ ಅಡ್ವೈಸರಿ (ಐಎಂಎ) ಮಾಲೀಕ ಹಾಗೂ ಸಂಸ್ಥಾಪಕ, ಮನ್ಸೂರ್ ಖಾನ್ ಸಾವಿರಾರು ಕೋಟಿ ರೂ. ವಂಚಿಸಿದ್ದ ಪ್ರಕರಣದಲ್ಲಿ ಖಾನ್ ವಿರುದ್ಧ ಹಲ ವಾರು ದೂರುಗಳು ದಾಖಲಾದ ನಂತರ ಕಳೆದ ತಿಂಗಳು ಭಾರತದಿಂದ ಪರಾರಿ ಯಾಗಿದ್ದನು. ಅದಾಗಿ ಇತ್ತೀಚೆಗೆ ಭಾರತಕ್ಕೆ ಹಿಂತಿರುಗಿದ್ದ ಖಾನ್ ಅನ್ನು ಇಡಿ ಅಧಿಕಾರಿಗಳು ದೆಹಲಿ ವಿಮಾನ ನಿಲ್ದಾಣದಲ್ಲಿ ವಶಕ್ಕೆ ಪಡೆದಿದ್ದರು.

Translate »