ಅತೃಪ್ತ ಶಾಸಕರಿಗೆ ಅನರ್ಹತೆ ಎಚ್ಚರಿಕೆ
ಮೈಸೂರು

ಅತೃಪ್ತ ಶಾಸಕರಿಗೆ ಅನರ್ಹತೆ ಎಚ್ಚರಿಕೆ

July 23, 2019

ಬೆಂಗಳೂರು: ಅಧಿವೇಶನಕ್ಕೆ ಬಂದು ವಿಶ್ವಾಸಮತದ ಪರ ಮತ ಚಲಾಯಿಸದಿದ್ದರೆ ಶಾಸಕ ಸ್ಥಾನದಿಂದ ಅನರ್ಹರಾಗುತ್ತೀರಿ ಎಂದು ಜಲ ಸಂಪ ನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಅತೃಪ್ತ ಶಾಸಕರಿಗೆ ಕೊನೆ ಎಚ್ಚರಿಕೆ ನೀಡಿದ್ದಾರೆ.

ಇಂದು ಮಾಧ್ಯಮಗಳ ಮೂಲಕ ಅತೃಪ್ತ ಶಾಸಕರನ್ನುದ್ದೇಶಿಸಿ ಮಾತ ನಾಡಿದ ಅವರು, ಸಿದ್ದರಾಮಯ್ಯ ಮಂಡಿ ಸಿದ್ದ ನಿಲುವಳಿ ಸೂಚನೆಗೆ ‘ನಿಮ್ಮ ಶಾಸಕರಿಗೆ ನೀವು ವಿಪ್ ನೀಡಲು ಯಾವುದೇ ತಡೆಯಾಜ್ಞೆ ಇಲ್ಲ’ ಎಂದು ಸ್ಪೀಕರ್ ರಮೇಶ್‍ಕುಮಾರ್ ರೂಲಿಂಗ್ ನೀಡಿದ್ದಾರೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ನೀವು ಮಂತ್ರಿಗಳಾಗಬೇ ಕೆಂದು ಇರುವವರು, ಬಿಜೆಪಿಯವರು ನಿಮಗೆ ಮಂಗನ ಟೋಪಿ ಹಾಕಿದ್ದಾರೆ. ನೀವು ಅಧಿವೇಶನಕ್ಕೆ ಬಂದು ಮತ ಚಲಾಯಿಸದೇ ಇದ್ದರೆ ಸಂವಿಧಾನದ ನಿಯಮ 164ಬಿ ಅಡಿ ಶಾಸಕ ಸ್ಥಾನ ದಿಂದ ಅನರ್ಹರಾಗುತ್ತೀರಿ. ನೀವು ಮುಂಬೈನಲ್ಲಿದ್ದೀರೋ, ಗೋವಾದಲ್ಲಿ ದ್ದೀರೋ ಎಲ್ಲಾದರೂ ಇರಿ ಸಂವಿ ಧಾನದ ನಿಯಮ 164ಬಿಯನ್ನು ಓದಿ ಅರ್ಥ ಮಾಡಿಕೊಳ್ಳಿ. ಇದು ನಿಮಗೆ ಎಚ್ಚರಿಕೆಯಲ್ಲ, ಮಾಹಿತಿ ಎಂದರು.

Translate »