`ಮೈತ್ರಿ’ ಉಳಿವಿಗೆ ಸಂಪುಟ ಪುನರ್ರಚನೆ
Uncategorized, ಮೈಸೂರು

`ಮೈತ್ರಿ’ ಉಳಿವಿಗೆ ಸಂಪುಟ ಪುನರ್ರಚನೆ

July 4, 2019

ಬೆಂಗಳೂರು, ಜು. 3(ಕೆಎಂಶಿ)-ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯ ಮಂತ್ರಿ ಎಚ್.ಡಿ. ಕುಮಾರಸ್ವಾಮಿ ತಮ್ಮ ಮಂತ್ರಿಮಂಡಲ ವನ್ನು ಮತ್ತೊಮ್ಮೆ ಪುನರ್ ರಚಿಸಲು ಮುಂದಾಗಿದ್ದಾರೆ.

ಅಮೆರಿಕಾ ಪ್ರವಾಸದಿಂದ ಹಿಂತಿರುಗು ತ್ತಿದ್ದಂತೆ ಆರು ಹೊಸ ಮುಖಗಳಿಗೆ ಸಂಪುಟ ದಲ್ಲಿ ಅವಕಾಶ ಮಾಡಿಕೊಡಲು ತೀರ್ಮಾ ನಿಸಿದ್ದಾರೆ. ಆಪರೇಷನ್ ಕಮಲದ ಮೂಲಕ ಸರ್ಕಾರ ಉರುಳಿಸಲು ಬಿಜೆಪಿ ವರಿ ಷ್ಠರೇ ಮುಂದಾಗಿರುವ ಹಿನ್ನೆಲೆಯಲ್ಲಿ ತಂತ್ರಕ್ಕೆ ಪ್ರತಿತಂತ್ರದ ಮೊದಲ ಭಾಗ ಇದಾಗಿದೆ. ಸರ್ಕಾರ ಉಳಿಸಲು ಕಾಂಗ್ರೆಸ್-ಜೆಡಿಎಸ್‍ನ ಐವರು ಸಚಿವರು ಸ್ವಯಂ ಪ್ರೇರಿತರಾಗಿ ತಮ್ಮ ಸ್ಥಾನ ತ್ಯಜಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಂತ್ರಿಮಂಡಲದಲ್ಲಿ ಒಂದು ಸ್ಥಾನ ಖಾಲಿ ಇದ್ದು, ಮತ್ತೆ ಐದು ಸ್ಥಾನಗಳು ತೆರವಾಗುವುದರಿಂದ ಆ ಸ್ಥಾನಗಳನ್ನು ಬಿಜೆಪಿ ಬಾಗಿಲು ಬಡಿ ದಿರುವ ಅತೃಪ್ತ ಶಾಸಕರಿಗೆ ಅವಕಾಶ ನೀಡಿ, ಆಪರೇಷನ್ ಕಮಲಕ್ಕೆ ಬ್ರೇಕ್ ಹಾಕಲು ಸಿದ್ಧತೆ ನಡೆಸಿದ್ದಾರೆ. ಸಚಿವರಾದ ಸಾ.ರಾ. ಮಹೇಶ್, ಎಸ್.ಆರ್. ಶ್ರೀನಿವಾಸ (ಜೆಡಿಎಸ್), ಕೃಷ್ಣಬೈರೇಗೌಡ, ಯು.ಟಿ. ಖಾದರ್ ಹಾಗೂ ಶಿವಶಂಕರ ರೆಡ್ಡಿ ಸಚಿವ ಸ್ಥಾನ ತ್ಯಜಿಸಲು ಸಿದ್ಧರಿದ್ದಾರೆ. ಕುಮಾರ ಸ್ವಾಮಿ ಅವರಿಗಿಂತ ಕಾಂಗ್ರೆಸ್ ವರಿಷ್ಠರಿಗೆ ಈ ಸರ್ಕಾರ ಉಳಿಯಬೇಕಿದೆ, ಪಕ್ಷದ ಅಧ್ಯಕ್ಷರ ಆದೇಶದಂತೆ ಸಿಎಲ್‍ಪಿ ನಾಯಕ ಸಿದ್ದರಾಮಯ್ಯ ಮುಂದಾಳತ್ವದಲ್ಲಿ ಪ್ರತಿ ತಂತ್ರಗಾರಿಕೆ ನಡೆಯುತ್ತಿದೆ. ಪ್ರವಾಸದಲ್ಲಿ ರುವ ಮುಖ್ಯಮಂತ್ರಿ ಅವರು ಅಲ್ಲಿಂದಲೇ ತಮ್ಮ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್.ಡಿ. ದೇವೇಗೌಡ, ಕಾಂಗ್ರೆಸ್ ನಾಯಕ ಸಿದ್ದ ರಾಮಯ್ಯ, ಎಐಸಿಸಿ ಪ್ರಧಾನ ಕಾರ್ಯ ದರ್ಶಿ ಹಾಗೂ ರಾಜ್ಯ ಉಸ್ತುವಾರಿ ಕೆ.ಸಿ. ವೇಣುಗೋಪಾಲ್, ಉಪಮುಖ್ಯ ಮಂತ್ರಿ ಡಾ|| ಜಿ. ಪರಮೇಶ್ವರ್, ಸಂಪುಟದ ಹಿರಿಯ ಸಹೋದ್ಯೋಗಿಗಳ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ. ಅಷ್ಟೇ ಅಲ್ಲದೆ, ತಮಗೆ ಬಂದಿರುವ ಮಾಹಿತಿ ಆಧರಿಸಿ ಕಾಂಗ್ರೆಸ್ ಮತ್ತು ಜೆಡಿಎಸ್‍ನ ಅತೃಪ್ತ ಶಾಸಕರ ಜೊತೆ ಸದಾ ಸಮಾಲೋಚನೆ ನಡೆಸಿ ಅವರ ಮನವೊಲಿಕೆ ಪ್ರಯತ್ನ ಮಾಡು ತ್ತಿದ್ದಾರೆ. ಅದರಲ್ಲಿ ಕೆಲವರಿಗೆ ಮಂತ್ರಿ ಸ್ಥಾನದ ಭರವಸೆ ನೀಡಿದ್ದಾರೆ, ಮುಖ್ಯಮಂತ್ರಿ ಅವರು ನೀಡಿರುವ ಭರವಸೆಯನ್ನು ಬಳ್ಳಾರಿಯ ನಾಗೇಂದ್ರ ಅವರು ಮಾಧ್ಯಮದ ಮುಂದೆಯೇ ಬಹಿರಂಗಪಡಿಸಿ, ನಾನು ಬಿಜೆಪಿ ಸೇರುವುದಿಲ್ಲ, ಜುಲೈ 11 ರೊಳಗಾಗಿ ಮಂತ್ರಿಯಾಗುತ್ತೇನೆ ಎಂದು ಆತ್ಮ ವಿಶ್ವಾಸದಿಂದ ಹೇಳಿಕೊಂಡಿದ್ದಾರೆ.

ಮತ್ತೊಂದೆಡೆ ಶಾಸಕ ಸ್ಥಾನಕ್ಕೆ ರಾಜೀ ನಾಮೆ ನೀಡಿರುವ ಆನಂದ್ ಸಿಂಗ್, ಮಾಧ್ಯಮಗಳಿಗೆ ರಾಜೀನಾಮೆ ಪತ್ರ ಸಲ್ಲಿ ಸಿರುವ ಕಾಂಗ್ರೆಸ್‍ನ ಬಂಡಾಯ ನಾಯಕ ರಮೇಶ್ ಜಾರಕಿಹೊಳಿ ಜೊತೆಯೂ ಸಮಾಲೋಚನೆ ನಡೆಸಿ ಅವರನ್ನೂ ಕುಮಾರಸ್ವಾಮಿ ಮನವೊಲಿಸುತ್ತಿ ದ್ದಾರೆ. ಜುಲೈ 7ರ ಬೆಳಿಗ್ಗೆಯೇ ಪ್ರವಾಸ ಮುಗಿಸಿ ಹಿಂತಿರುಗುತ್ತೇನೆ. ತಕ್ಷಣವೇ ನಿಮ್ಮನ್ನು ಭೇಟಿಯಾಗಿ ಸಮಸ್ಯೆ ಪರಿ ಹರಿಸುತ್ತೇನೆ, ತಾಳ್ಮೆಯಿಂದಿರಿ ಎಂದು ಈ ಶಾಸಕರಿಗೆ ಭರವಸೆ ನೀಡಿದ್ದಾರೆ.

ಸಮ್ಮಿಶ್ರ ಸರ್ಕಾರಕ್ಕೆ ಏನೂ ಅಪಾಯವಿಲ್ಲ
ಬೆಂಗಳೂರು:ಸಮ್ಮಿಶ್ರ ಸರ್ಕಾರಕ್ಕೆ ಯಾವ ಅಪಾಯವೂ ಇಲ್ಲ, ಕೆಲವು ಶಾಸಕರ ಕುಂದು ಕೊರತೆಗಳನ್ನು ಶೀಘ್ರದಲ್ಲೇ ಪರಿಹರಿಸಲಾಗುವುದು ಎಂದು ಸಚಿವ ಡಿ.ಕೆ.ಶಿವಕುಮಾರ್ ಇಂದಿಲ್ಲಿ ತಿಳಿಸಿದ್ದಾರೆ. ಸುದ್ದಿಗಾರ ರೊಂದಿಗೆ ಮಾತನಾಡಿದ ಅವರು, ಅಮೆರಿಕಾ ಪ್ರವಾಸದಿಂದ ಮುಖ್ಯ ಮಂತ್ರಿ ಹಿಂತಿರುಗಿದ ನಂತರ ಇದೇ 9 ಹಾಗೂ 10 ರಂದು ಜಿಲ್ಲಾವಾರು ಶಾಸಕರ ಸಭೆ ನಡೆಸಲಾಗುವುದು. ಸರ್ಕಾರಕ್ಕೆ ಏನೋ ಆಗುತ್ತದೆ ಎಂಬ ಕಪೋಲ ಕಲ್ಪಿತ ಮಾತುಗಳನ್ನು ಆಡುವುದು ಬೇಡ, ಶಾಸಕರ ಕುಂದು ಕೊರತೆಗಳಿಗೆ ಮುಖ್ಯಮಂತ್ರಿಯೇ ಪರಿಹಾರ ಸೂಚಿಸಲಿದ್ದಾರೆ ಎಂದರು. ಈ ಮಧ್ಯೆ, ಇನ್ನೂ ಮೂವರು ಶಾಸಕರು ರಾಜೀನಾಮೆ ನೀಡುತ್ತಾರೆ ಎಂಬ ವದಂತಿ ಹಿನ್ನೆಲೆಯಲ್ಲಿ ಸುದ್ದಿಗಾರರ ಪ್ರಶ್ನೆಗಳಿಗೆ ಒಮ್ಮೆಲೇ ರೇಗಿದ ಸ್ಪೀಕರ್ ರಮೇಶ್ ಕುಮಾರ್, ತಮ್ಮ ಕಚೇರಿ ಹಾಗೂ ರಾಜ್ಯಪಾಲರಿಗೆ ರಾಜೀನಾಮೆ ನೀಡಿರುವ ಶಾಸಕರು ಪುರುಸೊತ್ತಿದ್ದರೆ ರಾಷ್ಟ್ರಪತಿಗಳಿಗೂ ನೀಡಲಿ ಎಂದು ಗದರಿದರು.

Translate »