ಸಂಸದ ಪ್ರತಾಪ್ ಸಿಂಹರ ಮೂಲಕವೇ ರೈಲ್ವೇ ಇಲಾಖೆ ಅನುಮತಿ ಪಡೆದು ಗೂಡ್ಸ್‍ಶೆಡ್ ರಸ್ತೆ ಅಭಿವೃದ್ಧಿಪಡಿಸುತ್ತೇನೆ
ಮೈಸೂರು

ಸಂಸದ ಪ್ರತಾಪ್ ಸಿಂಹರ ಮೂಲಕವೇ ರೈಲ್ವೇ ಇಲಾಖೆ ಅನುಮತಿ ಪಡೆದು ಗೂಡ್ಸ್‍ಶೆಡ್ ರಸ್ತೆ ಅಭಿವೃದ್ಧಿಪಡಿಸುತ್ತೇನೆ

July 4, 2019

ಮೈಸೂರು, ಜು.3(ಆರ್‍ಕೆ)-ಸಂಸದ ಪ್ರತಾಪ್ ಸಿಂಹ ಅವರ ಮೂಲಕವೇ ರೈಲ್ವೇ ಇಲಾಖೆ ಅನು ಮತಿ ಪಡೆದು, ರೈಲ್ವೇ ಗೂಡ್ಸ್‍ಶೆಡ್ ರಸ್ತೆ ಅಭಿವೃದ್ಧಿ ಕಾಮಗಾರಿಯನ್ನು ಪೂರ್ಣಗೊಳಿಸುವುದಾಗಿ ನರಸಿಂಹರಾಜ ಕ್ಷೇತ್ರದ ಶಾಸಕರೂ ಆದ ಮಾಜಿ ಸಚಿವ ತನ್ವೀರ್ ಸೇಠ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮೈಸೂರು ನಗರದ ಬನ್ನಿಮಂಟಪ `ಎ’ ಕೈಗಾ ರಿಕಾ ಬಡಾವಣೆಯಲ್ಲಿ ಮೈಸೂರು-ಬೆಂಗಳೂರು ರೈಲ್ವೇ ಹಳಿಯ ಪಕ್ಕ, ಸಮಾನಾಂತರವಾಗಿ ರೈಲ್ವೆ ಕೆಳ ಸೇತುವೆವರೆಗೆ ಗೂಡ್ಸ್ ಲಾರಿಗಳು ಸಂಚರಿ ಸಲೆಂದು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಿಂದ ರಸ್ತೆ ಅಭಿವೃದ್ಧಿಪಡಿಸುವ ಯೋಜನೆ ಯನ್ನು ಅನುಷ್ಠಾನಗೊಳಿಸಲು ನಾನು ಪ್ರಯತ್ನಿ ಸುತ್ತಿದ್ದೇನೆ ಎಂದು ತಮ್ಮ ಮನೆಯಲ್ಲಿ ಭೇಟಿ ಮಾಡಿದ `ಮೈಸೂರು ಮಿತ್ರ’ನಿಗೆ ತಿಳಿಸಿದರು. ರೈಲು ಬೋಗಿಗಳಲ್ಲಿ ಬರುವ ಅಕ್ಕಿ, ಗೋಧಿ, ಸಕ್ಕರೆ ಸೇರಿ ದಂತೆ ನಾನಾ ಆಹಾರ ಪದಾರ್ಥ, ರಾಸಾಯನಿಕ ಗೊಬ್ಬರ, ಸಿಮೆಂಟ್ ಇತ್ಯಾದಿ ಸರಕನ್ನು ತುಂಬಿ ಕೊಂಡು ಲಾರಿಗಳು ಮೈಸೂರು ನಗರ ಪ್ರವೇಶಿ ಸದೆ, ರಿಂಗ್ ರಸ್ತೆ ಮೂಲಕ ಹಾದು ಹೋದರೆ ಬನ್ನಿಮಂಟಪದ ಜೋಡಿ ತೆಂಗಿನ ಮರ ರಸ್ತೆಯ ಸಂಚಾರ ಒತ್ತಡ ಕಡಿಮೆಯಾಗಿ, ಅಪಘಾತಗಳಾಗ ದಿರಲಿ ಎಂಬ ಸಾರ್ವಜನಿಕರ ಹಿತಾಸಕ್ತಿಯಿಂದ ರೈಲು ಹಳಿ ಪಕ್ಕದಲ್ಲಿ ಲಾರಿಗಳ ಸಂಚಾರಕ್ಕೆ ಪ್ರತ್ಯೇಕ ರಸ್ತೆ ಅಭಿವೃದ್ಧಿಪಡಿಸಲು ಮುಡಾಗೆ ನಾನೇ ಪ್ರಸ್ತಾವನೆ ಸಲ್ಲಿಸಿದ್ದೆ ಎಂದು ತನ್ವೀರ್ ಸೇಠ್ ತಿಳಿಸಿದರು.

1.56 ಕಿಮೀ ಉದ್ದದ ರೈಲ್ವೇ ಗೂಡ್ಸ್‍ಶೆಡ್ ರಸ್ತೆ ಕಾಮಗಾರಿಗೆ ಅಂದಾಜು 995 ಲಕ್ಷ ರೂ. ಗಳಿಗೆ ಮುಡಾ 2014ರ ಜೂನ್ 26ರಂದು ಸರ್ಕಾರದಿಂದ ಆಡ ಳಿತಾತ್ಮಕ ಅನುಮೋದನೆ ಪಡೆದು 2016ರ ನವೆಂಬರ್ 16ರಂದು ಕಾಮಗಾರಿ ಆರಂಭಿಸಲಾಯಿತು. ಗುತ್ತಿಗೆ ಪಡೆದಿದ್ದ ಮೆ|| ದಶರಥ ರಾಮರೆಡ್ಡಿ ಸಂಸ್ಥೆ, 2017ರ ಆಗಸ್ಟ್ 15ರಲ್ಲಿ ರಸ್ತೆ ಕಾಮಗಾರಿಯನ್ನು ಬಹುತೇಕ ಪೂರ್ಣಗೊಳಿಸಿದೆ ಎಂದು ತಿಳಿಸಿದರು. ರೈಲ್ವೇ ಇಲಾ ಖೆಯ ತಕರಾರಿರುವುದರಿಂದ ಮೇದರ್ ಬ್ಲಾಕ್‍ನ ರೈಲ್ವೇ ಕೆಳ ಸೇತುವೆ ಕಡೆ ಹಾಗೂ ಮೇಟ ಗಳ್ಳಿ ಭಾಗದ

ರೈಲ್ವೆ ಗೂಡ್ಸ್‍ಶೆಡ್ ಕಡೆ (ರಸ್ತೆಯ ಎರಡೂ ತುದಿಯಲ್ಲಿ) 996 ಮೀಟರ್ ಉದ್ದದ ರಸ್ತೆ ಅಭಿವೃದ್ಧಿ ಕಾಮಗಾರಿ ನೆನೆಗುದಿಗೆ ಬಿದ್ದಿದೆ. ಪ್ರತಿನಿತ್ಯ ರೈಲ್ವೇ ವ್ಯಾಗನ್‍ಗಳಿಂದ ಬರುವ ಜೀವನಾವಶ್ಯಕ ಆಹಾರ ಸಾಮಗ್ರಿ ಗಳಾದ ಅಕ್ಕಿ, ಗೋಧಿ, ಸಕ್ಕರೆ ಮತ್ತು ರಾಸಾಯನಿಕ ಗೊಬ್ಬರ, ಸಿಮೆಂಟ್ ಇತರ ಅವಶ್ಯಕ ಸಾಮಗ್ರಿಗಳನ್ನು ಮೈಸೂರು ಮತ್ತು ಸುತ್ತಮುತ್ತಲಿನ ಸ್ಥಳಗಳಿಗೆ ಲಾರಿಗಳ ಮೂಲಕ ಸಾಗಣೆ ಮಾಡಲು ರೈಲ್ವೆ ಗೂಡ್ಸ್‍ಶೆಡ್ ರಸ್ತೆ ಅವಶ್ಯಕವಾಗಿದೆ ಎಂದೂ ತನ್ವೀರ್‍ಸೇಠ್ ಸ್ಪಷ್ಟಪಡಿಸಿದ್ದಾರೆ.

ಉಳಿದ ರಸ್ತೆ ನಿರ್ಮಿಸಲು ಮುಡಾದಲ್ಲಿ ಅನುದಾನ ಮೀಸಲಿರಿಸಲಾಗಿದೆ. ರೈಲ್ವೆ ಇಲಾಖೆಯು ತನಗೆ ಸೇರಿದ ಜಾಗ ಹಾಗೂ ಮೇಲಾಗಿ ಸುರಕ್ಷತೆಗೆ ಧಕ್ಕೆಯಾಗಲಿದೆ ಎಂಬ ಕಾರಣಕ್ಕೆ ಬಾಕಿ ರಸ್ತೆ ಅಭಿವೃದ್ಧಿಗೆ ಅವಕಾಶ ಕೊಡದೆ ಅನಗತ್ಯ ತಕರಾರು ಮಾಡುತ್ತಿದೆ ಎಂದ ಅವರು, ಈ ಹಿಂದೆ ಸಿಐಟಿಬಿಯು ಬಡಾವಣೆ ರಚಿಸುವಾಗ ರೈಲು ಹಳಿ ಪಕ್ಕದಲ್ಲಿ ರಸ್ತೆಗಾಗಿ ಜಾಗ ಬಿಟ್ಟಿದೆ. ಮಹಾನಗರ ಯೋಜನೆ (ಸಿಡಿಪಿ)ಯಲ್ಲೂ ಅದು ರಸ್ತೆ ಎಂದೇ ಮೀಸಲಿರಿಸಲಾಗಿದೆ. ಹೀಗಿರುವಾಗ ಅಲ್ಲಿ ಉದ್ದೇಶಿತ ರಸ್ತೆ ಕಾಮಗಾರಿ ಮಾಡಲು ಅಡ್ಡಿಪಡಿಸುತ್ತಿರುವುದೇಕೆ? ಎಂದು ಶಾಸಕರು ಪ್ರಶ್ನಿಸಿದರು.

ಈ ಹಿಂದೆ ಹಲವು ಬಾರಿ ಮುಡಾ ಆಯುಕ್ತರು ಹಾಗೂ ನಾನು ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾಗಿದ್ದ ರಾಜಕುಮಾರ್ ಲಾಲ್ ಅವರೊಂದಿಗೆ ಸಮಾಲೋಚಿ ಸಿದ್ದೆವು. ಅಲ್ಲದೆ ಸಂಸದ ಪ್ರತಾಪ್ ಸಿಂಹ ರಿಗೂ ಈ ಬಗ್ಗೆ ನಾನು ಮಾತನಾಡಿ ದಾಗ, ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದರಾ ದರೂ ಅನುಮತಿ ಮಾತ್ರ ದೊರೆತಿಲ್ಲ. ಈಗಿನ ಡಿಆರ್‍ಎಂ ಅಪರ್ಣಾ ಗರ್ಗ್ ಅವರೊಂದಿಗೂ ಸಭೆ ನಡೆಸಿದ್ದೇವೆ. ಈ ಹಿಂದಿನ ಡಿಸಿ ಸಿ.ಶಿಖಾ ಅವರೂ ಈ ಸಂಬಂಧ ಚರ್ಚೆ ನಡೆಸಿದ್ದರು ಎಂದು ನುಡಿದರು.

ಇದೀಗ ತಾವು ಮತ್ತೊಮ್ಮೆ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಮಾತ ನಾಡಿ, ಡಿಆರ್‍ಎಂ ಜೊತೆಗೆ ಮತ್ತೊಂದು ಸಭೆ ನಿಗದಿಗೊಳಿಸಿ ಉದ್ದೇಶಿತ ರಸ್ತೆಯ ಅನುಕೂಲತೆ, ಅನಿವಾರ್ಯತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟು ಶತಾಯ ಗತಾಯ ರೈಲ್ವೆ ಗೂಡ್ಸ್ ಶೆಡ್ ರಸ್ತೆಯ ಕಾಮಗಾರಿಯನ್ನು ಪೂರ್ಣಗೊಳಿಸು ತ್ತೇನೆಂದು ಸೇಠ್ ವಿಶ್ವಾಸ ವ್ಯಕ್ತಪಡಿಸಿದರು.

ಗೇಜ್ ಪರಿವರ್ತನೆಯ ನಂತರ ಸಿಐಟಿಬಿ ರಸ್ತೆಗೆ ಕಾಯ್ದಿರಿಸಿದ್ದ ಜಾಗ ತೀರಾ ಕಿರಿದಾ ಗಿದ್ದು, ಅಲ್ಲಲ್ಲಿ ಮಣ್ಣನ್ನು ರಾಶಿ ಹಾಕ ಲಾಗಿದೆ. ಅದರಿಂದ ಗೂಡ್ಸ್ ಲಾರಿಗಳು ಬನ್ನಿಮಂಟಪದ ಜೋಡಿ ತೆಂಗಿನ ಮರ ರಸ್ತೆಯಲ್ಲೇ ಸಂಚರಿಸುವುದು ಅನಿ ವಾರ್ಯವಾಗಿದೆ. ಪರಿಣಾಮ ಜೋಡಿ ತೆಂಗಿನ ಮರ ರಸ್ತೆಯಲ್ಲಿ ವಾಹನಗಳ ಸಂಚಾರ ದಟ್ಟಣೆ ಹೆಚ್ಚಾಗಿರುವುದರಿಂದ ಅಪಘಾತ ಸಂಭವಿಸಲು ಕಾರಣವಾಗು ತ್ತಿದೆ. ರೈಲ್ವೆ ಹಳಿ ಪಕ್ಕದ ಸಮಾನಾಂತರ ರಸ್ತೆ ಅಭಿವೃದ್ಧಿಯಾಗಬೇಕೆಂದು ರೈಲ್ವೆ ಗೂಡ್ಸ್ ಶೆಡ್ ಲಾರಿ ಮಾಲೀಕರು, ಚಾಲಕರ ಸಂಘದ ಪದಾಧಿಕಾರಿಗಳು ಇತ್ತೀಚೆಗೆ ಪ್ರತಿಭಟನೆ ಮಾಡಿ ಒತ್ತಾಯಿಸಿದ್ದನ್ನು ಇಲ್ಲಿ ಸ್ಮರಿಸಬಹುದಾಗಿದೆ. ಈಗಾಗಲೇ ತನ್ವೀರ್ ಸೇಠ್ ಅವರು ಸಾರ್ವಜನಿಕರ ಅನುಕೂಲ ಕ್ಕಾಗಿ ಹೈವೇ ಸರ್ಕಲ್‍ನಿಂದ ಜೆಎಸ್‍ಎಸ್ ಮಹಿಳಾ ಹಾಸ್ಟೆಲ್ ಮಾರ್ಗವಾಗಿ ರೈಲ್ವೆ ಕೆಳ ಸೇತುವೆವರೆಗೆ ಬನ್ನಿಮಂಟಪದ ಜೋಡಿ ತೆಂಗಿನ ಮರ ರಸ್ತೆ ಅಭಿವೃದ್ಧಿ ಪಡಿಸಿದ್ದಾರೆ.

ಹಳ್ಳ-ಕೊಳ್ಳಗಳಿಂದ ಕೂಡಿದ್ದು, ಕಿರಿದಾಗಿದ್ದ ರಸ್ತೆಯಲ್ಲಿ ಚರಂಡಿ ನೀರು ಸದಾ ಹರಿದು ಕೊಚ್ಚೆಗುಂಡಿಯಾಗುತ್ತಿದ್ದ ಜೋಡಿ ತೆಂಗಿನ ಮರ ರಸ್ತೆಯಲ್ಲಿ ಲಾರಿ, ಕಾರುಗಳು, ದ್ವಿಚಕ್ರ ವಾಹನಗಳು ಓಡಾಡುವುದೇ ದುಸ್ಸಾಹಸವಾಗುತ್ತಿತ್ತು. ಹಲವು ಬಾರಿ ಅಪಘಾತಗಳು ಸಂಭವಿಸಿ, ಸಾಕಷ್ಟು ಅಮಾಯಕರು ಪ್ರಾಣ ಕಳೆದು ಕೊಂಡಿದ್ದರು. ಹಲವು ಶಾಸಕರು, ಮೇಯರ್ ಗಳು, ಕಾರ್ಪೊರೇಟರ್‍ಗಳಿಗೆ ಮನವಿ ಸಲ್ಲಿಸಿದರೂ ಏನೂ ಪ್ರಯೋಜನವಾಗ ಲಿಲ್ಲ. ಕೊನೆಗೆ ಶಾಸಕ ತನ್ವೀರ್ ಸೇಠ್ ಆಸ್ಥೆ ವಹಿಸಿ ಜೋಡಿ ತೆಂಗಿನ ಮರ ರಸ್ತೆಯನ್ನು ಅಭಿವೃದ್ಧಿಪಡಿಸಿದರು. ಕಾಮಗಾರಿ ನಡೆಯುತ್ತಿ ದ್ದಾಗ ತಾವೇ ಖುದ್ದು ನಿಂತು ಪರಿಶೀಲಿಸಿ, ಗುಣಮಟ್ಟದ ಕಾಮಗಾರಿಗೆ ಕಾರಣರಾದರು. ಆ ಕಾರಣಕ್ಕಾಗಿ ಈ ರಸ್ತೆ ಎಷ್ಟೇ ಭಾರೀ ವಾಹನ ಸಂಚಾರವಿದ್ದರೂ ಇನ್ನೂ ಗಟ್ಟಿಮುಟ್ಟಾಗಿದೆ. ಅದಕ್ಕೆ ತನ್ವೀರ್ ಸೇಠ್ ಅವರ ಕಾಳಜಿಯೂ ಕಾರಣ ಎನ್ನಬಹುದು.

Translate »