ಸರ್ಕಾರದಿಂದಲೇ ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ
ಮೈಸೂರು

ಸರ್ಕಾರದಿಂದಲೇ ಜಯಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವ ಆಚರಣೆ

July 4, 2019

ಬೆಂಗಳೂರು, ಜು. 3(ಕೆಎಂಶಿ)- ಮೈಸೂರು ಮಹಾರಾಜ ಜಯ ಚಾಮರಾಜೇಂದ್ರ ಒಡೆಯರ್ ಜನ್ಮ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವರೂ ಆದ ಜಲಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ಇಂದಿಲ್ಲಿ ಪ್ರಕಟಿಸಿದರು.

ಇದೇ 18ಕ್ಕೆ ಒಡೆಯರ್ ಅವರು ಜನಿಸಿ, 100 ವರ್ಷಗಳು ತುಂಬ ಲಿವೆ, ಈ ಹಿನ್ನೆಲೆಯಲ್ಲಿ ಮೈಸೂರು ಮತ್ತು ಬೆಂಗಳೂರಿನಲ್ಲಿ ಅವರ ಜನ್ಮ ಶತಮಾನೋತ್ಸವ ಕಾರ್ಯಕ್ರಮ ವನ್ನು ನಡೆಸಲು ತೀರ್ಮಾನಿಸಲಾ ಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ರಾಜ ವಂಶಸ್ಥೆ ಪ್ರಮೋದಾದೇವಿ ಒಡೆ ಯರ್ ಅವರ ಅನುಮತಿಯನ್ನೂ ಪಡೆಯಲಾಗಿದ್ದು, ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿದೇಶ ಪ್ರವಾಸದಿಂದ ಹಿಂದಿರುಗಿದ ನಂತರ ಇದೇ 22ರಂದು ಅಥವಾ ಮತ್ತೊಂದು ದಿನಕ್ಕೆ ಸಮಯ ನಿಗದಿಪಡಿಸ ಲಾಗುವುದು ಎಂದರು.

ಜಯಚಾಮರಾಜೇಂದ್ರ ಒಡೆ ಯರ್ ಅವರು ರಾಜ್ಯಕ್ಕೆ ಮಹತ್ವದ ಕೊಡುಗೆಗಳನ್ನು ನೀಡಿದ್ದಾರೆ. ಅವರ ದೂರದೃಷ್ಟಿಯಿಂದ ನಿರ್ಮಿಸಿದ ಅಣೆ ಕಟ್ಟೆ ಮತ್ತು ನಗರಗಳು ಇಂದಿಗೂ ಜೀವನಾಡಿಗಳಾಗಿವೆ. ಜನ್ಮ ಶತ ಮಾನೋತ್ಸವ ಕಾರ್ಯಕ್ರಮವನ್ನು ನಡೆಸುವ ವಿಷಯದಲ್ಲಿ ಮೈಸೂರು ರಾಜವಂಶಸ್ಥರು ಸೇರಿದಂತೆ ಹಲ ವರ ಸಲಹೆ ಪಡೆಯಲಾಗುವುದು, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕ್ರಮ ನಡೆಸಲಾಗುವುದು.

ಕನ್ನಡದ ಹೆಸರಿನಲ್ಲಿ ಸರ್ಕಾರ ಮತ್ತು ಸಾರ್ವಜನಿಕರಿಂದ ದೇಣಿಗೆ ಪಡೆದು ನುಂಗಿ ಹಾಕುವ ಸಂಘ ಸಂಸ್ಥೆಗಳಿಗೆ ಕಡಿವಾಣ ಹಾಕಲು ಇನ್ನು ಮುಂದೆ ಅರ್ಜಿಗಳ ಆಧಾ ರದ ಮೇಲೆ ಹಣ ಕೊಡುವ ಪರಿಪಾಠವನ್ನು ಬಂದ್ ಮಾಡಲು ತೀರ್ಮಾನಿಸಲಾಗಿದೆ. 18 ವರ್ಷ ಒಳಗಿನವರು, ಹದಿನೆಂಟು ವರ್ಷ ಮೇಲಿನವರ ತಂಡಗಳು ಆಯಾ ಪ್ರದೇಶಗಳ ಸಂಸ್ಕೃತಿ ಪ್ರತಿ ಬಿಂಬಿಸುವ ಕಾರ್ಯಕ್ರಮ ಮಾಡ ಲಿದೆ. ಹೊರ ರಾಜ್ಯ ಹಾಗೂ ಹೊರ ದೇಶಗಳಲ್ಲಿ ಕನ್ನಡ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಾರ್ಯಕ್ರಮ ಗಳನ್ನು ಹಲವರು ಮಾಡುತ್ತಾರೆ. ಅಂತಹವರಿಗೆ ನೆರವಿನ ಅಗತ್ಯವಿದ್ದರೆ ಮುಖ್ಯಮಂತ್ರಿಗಳು ತಮ್ಮ ವಿವೇಚನಾ ನುಸಾರ ನೆರವು ನೀಡಲಿದ್ದಾರೆ ಎಂದರು. ಇದೇ ಸಂದರ್ಭದಲ್ಲಿ ಮೇಕೆದಾಟು ಯೋಜನೆಗೆ ಸಂಬಂಧಿಸಿದಂತೆ ಪ್ರಸ್ತಾಪ ಮಾಡಿದ ಸಚಿವರು, ಡಿಪಿಆರ್‍ಗೆ ತ್ವರಿತ ಒಪ್ಪಿಗೆ ನೀಡುವಂತೆ ಕೇಂದ್ರದ ಮೇಲೆ ಒತ್ತಡ ತರಲಾಗಿದೆ. 400 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸುವ ಹಾಗೂ ಕುಡಿಯುವ ನೀರೂ ಒದಗಿಸುವ ಮೇಕೆದಾಟು ಅಣೆಕಟ್ಟು ನಿರ್ಮಾಣ ಯೋಜನೆಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಈಗಾಗಲೇ ಸಮಗ್ರ ಯೋಜನಾ ವರದಿಯನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಿದೆ. ರಾಜ್ಯವನ್ನು ಪ್ರತಿನಿಧಿಸುತ್ತಿರುವ ಕೇಂದ್ರ ಸಚಿವರಾದ ಸದಾನಂದಗೌಡ, ನಿರ್ಮಲಾ ಸೀತಾರಾಮನ್ ಸೇರಿದಂತೆ ನಾಲ್ಕು ಮಂದಿ ಕೇಂದ್ರ ಸಚಿವರಿಗೆ, ಸಂಸದರಿಗೆ, ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಈ ಮೊದಲು ಮೇಕೆದಾಟು ಅಣೆಕಟ್ಟೆಯಿಂದ 300 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿ ಸುವ ಯೋಚನೆ ಇತ್ತು. ಈಗ ಅದು 400ಕ್ಕೇರಿದೆ. ಬೆಂಗಳೂರಿಗೆ ಅಗತ್ಯವಿರುವ ಕುಡಿಯುವ ನೀರು ಒದಗಿಸಲು ಮೇಕೆದಾಟು ಯೋಜನೆ ಅನುಷ್ಠಾನ ಬದಲಿಗೆ ಲಿಂಗನಮಕ್ಕಿ ಜಲಾಶಯದ ನೀರು ತರುವ ಪ್ರಸ್ತಾವಕ್ಕೆ ಪ್ರತಿಕ್ರಿಯಿಸಲಿಲ್ಲ.

Translate »