ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಜನಸ್ಪಂದನಾ ಕಾರ್ಯಕ್ರಮ
ಮೈಸೂರು

ಇಂದು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಿಂದ ಜನಸ್ಪಂದನಾ ಕಾರ್ಯಕ್ರಮ

July 4, 2019

ಮೈಸೂರು,ಜು.3(ಎಸ್‍ಬಿಡಿ)- ಮೈಸೂರಿನ ಜೆ.ಕೆ.ಮೈದಾನದಲ್ಲಿ ನಾಳೆ (ಜು.4) ಜನಸ್ಪಂದನಾ ಕಾರ್ಯಕ್ರಮ ಹಮ್ಮಿಕೊಂಡಿರುವ ಹಿನ್ನೆಲೆಯಲ್ಲಿ ಇಂದು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇ ಗೌಡರು ಸಿದ್ಧತೆ ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ನಗರಪಾಲಿಕೆ ಹಾಗೂ ನಗರಾಭಿ ವೃದ್ಧಿ ಪ್ರಾಧಿಕಾರ (ಮುಡಾ) ವ್ಯಾಪ್ತಿಯ ನಾಗರಿಕರ ಸಮಸ್ಯೆಗಳನ್ನು ಒಂದೇ ಸೂರಿ ನಡಿ ಆಲಿಸಿ, ಸ್ಥಳದಲ್ಲೇ ಪರಿಹರಿಸುವ ಉದ್ದೇಶದಿಂದ ಜನಸ್ಪಂದನಾ ಕಾರ್ಯ ಕ್ರಮ ಹಮ್ಮಿಕೊಳ್ಳಲಾಗಿದ್ದು, ಗುರುವಾರ ಬೆಳಿಗ್ಗೆ 9ರಿಂದ ಸಾರ್ವಜನಿಕರು ತಮ್ಮ ಅಹವಾಲು ಸಲ್ಲಿಸಿ, ಪರಿಹಾರ ಕಂಡು ಕೊಳ್ಳಬಹುದು ಎಂದರು.

ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಒಳಚರಂಡಿ ಸಮಸ್ಯೆ, ಕಸ ವಿಲೇವಾರಿ ಮತ್ತು ನೈರ್ಮಲ್ಯ ನಿರ್ವಹಣೆ, ಖಾತಾ ನೋಂದಣಿ, ವರ್ಗಾವಣೆಗೆ, ನಕ್ಷೆ ಉಲ್ಲಂ ಘಿಸಿ ಕಟ್ಟಡ ನಿರ್ಮಾಣ, ಸರ್ಕಾರಿ ಜಾಗ ಒತ್ತುವರಿ, ಅನಧಿಕೃತ ಕಟ್ಟಡಗಳು, ಬೀದಿ ದೀಪ, ಉದ್ಯಾನವನಗಳ ನಿರ್ವಹಣೆ, ಬೀದಿ ನಾಯಿ, ಬಿಡಾಡಿ ದನ, ಕುದುರೆ, ಕೋತಿಗಳ ಹಾವಳಿ, ಬಡತನ ನಿರ್ಮೂ ಲನಾ ಕೋಶದ ಯೋಜನೆಗಳು, ವೃದ್ಧರು, ವಿಕಲಾಂಗಚೇತನರಿಗೆ ನೀಡಲಾಗುವ ಧನ ಸಹಾಯ, ಕೇಂದ್ರ ಹಾಗೂ ರಾಜ್ಯ ಸರ್ಕಾ ರದ ಸೌಲಭ್ಯಗಳು, ಡಾ.ಬಿ.ಆರ್.ಅಂಬೇ ಡ್ಕರ್ ಅಭಿವೃದ್ಧಿ ನಿಗಮ, ವಾಲ್ಮೀಕಿ ನಿಗಮ, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ನಿಗಮಗಳಿಂದ ನೀಡಲಾಗುವ ಸಾಲಸೌಲಭ್ಯ, ಸಬ್ಸಿಡಿಯಲ್ಲಿ ವಾಹನ ವಿತರಣೆ, ಉದ್ದಿಮೆ ಪರವಾನಗಿ ಹೀಗೆ ಯಾವುದೇ ವಿಷಯಗಳಿಗೆ ಸಂಬಂಧಿಸಿದ ಸಮಸ್ಯೆಗಳಿ ದ್ದರೂ ಸಾರ್ವಜನಿಕರು ಅಹವಾಲು ಸಲ್ಲಿಸಬಹುದು ಎಂದು ಜಿಟಿಡಿ ತಿಳಿಸಿದರು.

ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯದ ಮೂಲಕ ಸಮಸ್ಯೆಗಳನ್ನು ಬೇರುಮಟ್ಟದಿಂದ ತಿಳಿಯುತ್ತಿದ್ದಾರೆ. ಸಚಿವರು, ಅಧಿಕಾರಿಗಳು ಜನಸ್ಪಂದನಾ, ಗ್ರಾಮ ವಾಸ್ತವ್ಯ ಮಾಡುವಂತೆಯೂ ಸೂಚಿ ಸಿದ್ದಾರೆ. ಲೋಕೋಪಯೋಗಿ ಸಚಿವ ರಾದ ಹೆಚ್.ಡಿ.ರೇವಣ್ಣ ಅವರೊಂದಿಗೆ ವಿವಿಧ ಅಭಿವೃದ್ಧಿ ಕಾಮಗಾರಿಗಳ ಸ್ಥಳ ಪರಿಶೀಲನೆ, ಆಷಾಢ ಶುಕ್ರವಾರ ಆಚರಣೆ ಪೂರ್ವಭಾವಿ ಸಭೆ ನಡೆಸಲಾಗಿದೆ. 2 ದಿನಗಳಿಂದ ಮೈಸೂರು ನಗರ ವ್ಯಾಪ್ತಿಯ ಕೃಷ್ಣರಾಜ, ಚಾಮರಾಜ ಹಾಗೂ ಚಾಮ ರಾಜ ಕ್ಷೇತ್ರಗಳ ವೀಕ್ಷಣೆ ಮಾಡಿ, ಸಾರ್ವ ಜನಿಕ ಸಮಸ್ಯೆಗಳನ್ನು ತಿಳಿದಿದ್ದೇವೆ. ಇದೀಗ ಜನಸ್ಪಂದನಾ ಕಾರ್ಯಕ್ರಮದಲ್ಲೂ ಸಾಕಷ್ಟು ಸಮಸ್ಯೆಗಳು ತಿಳಿಯುತ್ತವೆ. ಪಾಲಿಕೆ ಮೇಯರ್, ಉಪಮೇಯರ್, ಜಿಲ್ಲಾಧಿಕಾರಿಗಳು, ನಗರ ವ್ಯಾಪ್ತಿಯ ಎಲ್ಲಾ ಶಾಸಕರು, ಪಾಲಿಕೆ, ಮುಡಾ ಆಯುಕ್ತರು, ಕಾರ್ಪೊರೇಟರ್‍ಗಳು, ಎಲ್ಲಾ ವಲಯ ಕಚೇರಿ ಸಹಾಯಕ ಆಯುಕ್ತರು, ಕರ್ನಾ ಟಕ ನೀರು ಸರಬರಾಜು ಹಾಗೂ ಒಳಚ ರಂಡಿ, ವಾಣಿವಿಲಾಸ ವಾಟರ್‍ವಕ್ರ್ಸ್ ಸೇರಿದಂತೆ ಎಲ್ಲಾ ಅಧಿಕಾರಿಗಳೂ ಜನ ಸ್ಪಂದನಾ ಕಾರ್ಯಕ್ರಮದಲ್ಲಿ ಇರುತ್ತಾರೆ. ಪಾಲಿಕೆ ಹಾಗೂ ಮುಡಾ ಕಚೇರಿಗಳೇ ಇಲ್ಲಿಗೆ ಸ್ಥಳಾಂತರವಾಗುತ್ತವೆ. ವಿವಿಧ ಕಾರಣಗಳಿಂದ ಮುಡಾ ಹಾಗೂ ಪಾಲಿಕೆ ಕಚೇರಿಗಳಿಗೆ ಅಲೆದಾಡುತ್ತಿರುವ ಸಾರ್ವ ಜನಿಕರು ಇಲ್ಲಿ ಪರಿಹಾರ ಕಂಡುಕೊ ಳ್ಳಬಹುದು. ಸ್ಥಳದಲ್ಲೇ ಪರಿಹರಿಸಲಾಗದ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳಿಗೆ ಗಡುವು ನೀಡಿ, ವರದಿ ಪಡೆಯಲಾಗು ವುದು ಎಂದು ಅವರು ಸ್ಪಷ್ಟಪಡಿಸಿದರು.

ಪರಿಶೀಲನೆ ಸಂದರ್ಭದಲ್ಲಿ ಜಿಲ್ಲಾಧಿ ಕಾರಿ ಅಭಿರಾಮ್ ಜಿ.ಶಂಕರ್, ಮುಡಾ ಆಯುಕ್ತ ಪಿ.ಎಸ್.ಕಾಂತರಾಜು, ನಗರ ಪಾಲಿಕೆ ಹೆಚ್ಚುವರಿ ಆಯುಕ್ತ ಶಿವಾ ನಂದಮೂರ್ತಿ, ತಹಶಿಲ್ದಾರ್ ರಮೇಶ್‍ಬಾಬು ಇನ್ನಿತರ ಅಧಿಕಾರಿಗಳು ಹಾಜರಿದ್ದರು.

Translate »