ವಿಶ್ವಾಸ ಮತಯಾಚನೆಗೆ ಸಿದ್ಧ
ಮೈಸೂರು

ವಿಶ್ವಾಸ ಮತಯಾಚನೆಗೆ ಸಿದ್ಧ

July 13, 2019

ಬೆಂಗಳೂರು,ಜು.12(ಕೆಎಂಶಿ)-ಅತೃಪ್ತ ಶಾಸಕರ ರಾಜೀನಾಮೆ ಪ್ರಕರಣ ಇತ್ಯರ್ಥವಾಗದೇ ಉಳಿದಿರುವ ಬೆನ್ನಲ್ಲೇ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ವಿಧಾನಸಭೆಯಲ್ಲಿಂದು ಸ್ವಯಂ ಪ್ರೇರಿತರಗಿ ವಿಶ್ವಾಸ ಮತಯಾಚನೆ ಮಾಡುವುದಾಗಿ ಪ್ರಕಟಿಸಿ, ಪ್ರತಿಪಕ್ಷ ಬಿಜೆಪಿಯ ಸವಾಲಿಗೆ ಪ್ರತಿ ಸವಾಲು ಎಸೆದಿದ್ದಾರೆ.

ಮಳೆಗಾಲದ ವಿಧಾನಸಭಾ ಅಧಿವೇಶನ ಆರಂಭದ ದಿನವೇ ಸಭಾಧ್ಯಕ್ಷ ರಮೇಶ್ ಕುಮಾರ್ ಅಗಲಿದ ನಾಯಕರಿಗೆ
ಶ್ರದ್ಧಾಂಜಲಿ ಸಲ್ಲಿಸಿ, ಇದನ್ನು ಬೆಂಬಲಿಸಿ, ಮಾತನಾಡುವಂತೆ ನೀಡಿದ ಸಮಯವನ್ನು ಮುಖ್ಯ ಮಂತ್ರಿಯವರು ಸಮರ್ಥವಾಗಿ ಬಳಕೆ ಮಾಡಿಕೊಂಡು ವಿಶ್ವಾಸ ಮತಯಾಚನೆ ಮಾಡುವ ಮೂಲಕ ಇಡೀ ಸದನವನ್ನೇ ಹುಬ್ಬೇರಿಸುವಂತೆ ಮಾಡಿದರು.

ಸಭಾಧ್ಯಕ್ಷರ ಅನುಮತಿ ಕೋರುತ್ತಾ ಮುಖ್ಯ ಮಂತ್ರಿಯವರು ಕೆಲವು ಶಾಸಕರ ನಿರ್ಧಾರಗಳಿಂದ ರಾಜ್ಯದಲ್ಲಿ ಸರ್ಕಾರಕ್ಕೆ ಬಹುಮತ ಇಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿಯಲ್ಲಿ ನಾನು ವಿಶ್ವಾಸ ಮತಯಾಚನೆ ಮಾಡಲು ನಿರ್ಧರಿಸಿದ್ದೇನೆ. ಸದನದ ಬೆಂಬಲ ವಿದ್ದಾಗ ಮಾತ್ರ ನಾನು ಈ ಸ್ಥಾನದಲ್ಲಿ ಮುಂದು ವರಿಯಬಹುದು ಎಂದರು. ಶಾಸಕರ ರಾಜೀ ನಾಮೆಯ ನಂತರ ಸರ್ಕಾರ ಸುಭದ್ರವಾಗಿಲ್ಲ ಎಂಬ ಭಾವನೆ ಇದೆ. ಈ ಗೊಂದಲವನ್ನು ಪರಿಹರಿಸುವ ಅಗತ್ಯವೂ ಇದೆ. ನಾನು ಅಧಿಕಾರಕ್ಕೆ ಅಂಟಿಕೊಂಡು ಕುಳಿತಿಲ್ಲ. ರಾಜಕೀಯದಲ್ಲಿ ಸೋಲು, ಗೆಲುವು ಇದ್ದೇ ಇರುತ್ತದೆ. ಸದನದಲ್ಲಿ ಬಹುಮತ ದೊರೆತರೆ ಅಧಿಕಾರದಲ್ಲಿ ಮುಂದುವರಿಯುತ್ತೇನೆ. ಇಲ್ಲದಿ ದ್ದರೆ, ಕಾನೂನು ರೀತಿ ಹೊರಬರುತ್ತೇನೆ. ವಿಶ್ವಾಸ ಮತಯಾಚನೆಗೆ ತಾವು ಸಮಯ ನಿಗದಿ ಮಾಡಬೇಕೆಂದು ಮನವಿ ಮಾಡಿ ಕೊಳ್ಳುತ್ತಾ ಅಧ್ಯಕ್ಷರು ತಂದ ವಂದನಾ ನಿರ್ಣಯದ ಮೇಲೆ ಚರ್ಚೆಯಲ್ಲಿ ಪಾಲ್ಗೊಂಡರು. ಮುಖ್ಯಮಂತ್ರಿಯವರು ವಿಶ್ವಾಸ ಮತ ಯಾಚನೆ ಮಾಡುವ ಸಂದರ್ಭದಲ್ಲೇ ಸುಪ್ರೀಂಕೋರ್ಟ್ ಅತೃಪ್ತ ಶಾಸಕರ ಅರ್ಜಿ ವಿಚಾರಣೆಗೆ ಕೈಗೆತ್ತಿಕೊಂಡಿತ್ತು. ಇದ್ಯಾ ವುದನ್ನೂ ಗಮನಕ್ಕೆ ತೆಗೆದುಕೊಳ್ಳದೇ ಕುಮಾರಸ್ವಾಮಿ ತಮಗೆ ಬಲ ಇದೆಯೋ ಇಲ್ಲವೋ ಎಂದು ತಿಳಿದುಕೊಳ್ಳಲು ಸ್ವಯಂ ಪ್ರೇರಿತವಾಗಿ ವಿಶ್ವಾಸ ಮತ ಯಾಚನೆಗೆ ಮುಂದಾದರು. ಅವರು ಅಧಿಕಾರ ವಹಿಸಿ ಕೊಂಡ ದಿನದಿಂದಲೂ ಮಿತ್ರ ಪಕ್ಷದ ಕೆಲವು ಮುಖಂಡರು ಹಾಗೂ ಪ್ರತಿಪಕ್ಷದವರಿಂದ ಮುಜುಗರಕ್ಕೆ ಒಳಗಾಗಿದ್ದರು. ಈ ಹಿಂದೆ ಆರು ಭಾರಿ ಆಪರೇಷನ್ ಕಮಲ ವಿಫಲವಾ ಗುವಂತೆ ನೋಡಿಕೊಂಡ ಮುಖ್ಯಮಂತ್ರಿಯವರು ಈ ಭಾರಿ ಅದು ಅತಿರೇಕಕ್ಕೆ ಹೋಗಿದೆ.

ಮಿತ್ರ ಪಕ್ಷ ಕಾಂಗ್ರೆಸ್‍ಗೆ ಅಧಿಕಾರ ಬೇಕಿದ್ದರೆ, ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ತಂತ್ರಗಾರಿಕೆ ನಡೆಸಲಿ ಎಂಬ ತಂತ್ರವೂ ಇರಬಹುದು ಮತ್ತೊಂದೆಡೆ ಪ್ರತಿಪಕ್ಷ ತಮ್ಮ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಬಹುದು. ಇದು ವಾದ-ವಿವಾದಕ್ಕೆ ಎಡೆಮಾಡಿ ಕೊಟ್ಟಂತಾಗುತ್ತದೆ. ಒಂದು ವೇಳೆ ರಾಜ್ಯಪಾಲರೇ ವಿಶ್ವಾಸ ಮತ ಯಾಚಿಸುವಂತೆ ಆದೇಶ ನೀಡುವುದಲ್ಲದೆ, ಗಡುವಿನ ವೇಳೆಯಲ್ಲೇ ಈ ಕಾರ್ಯ ಪೂರ್ಣಗೊಳಿಸುವಂತೆ ಸೂಚಿಸಬಹುದು.

ಇದರ ಬದಲು ನಾನೇ ವಿಶ್ವಾಸ ಮತ ಯಾಚಿಸಿದರೆ, ಇಂತಹ ಸನ್ನಿವೇಶಗಳೇ ಎದುರಾಗುವುದಿಲ್ಲ ಎಂಬ ಹಿನ್ನೆಲೆಯಲ್ಲಿ ಕಠಿಣ ನಿರ್ಧಾರ ತೆಗೆದುಕೊಂಡಿದ್ದಾರೆ. ವಿಧಾನ ಸಭಾ ಅಧಿವೇಶನ ಆರಂಭಕ್ಕೂ ಮುನ್ನ ಮುಖ್ಯಮಂತ್ರಿಯವರು ತಮ್ಮ ತಂದೆ ಹಾಗೂ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರನ್ನು ಭೇಟಿ ಮಾಡಿ, ಸುದೀರ್ಘ ಚರ್ಚೆ ನಡೆಸಿದರು. ಆನಂತರ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಕೆಲವು ಶಾಸಕರನ್ನು ದೂರವಾಣಿ ಮೂಲಕ ಸಂಪರ್ಕಿಸಿ, ಚರ್ಚೆ ಮಾಡಿದ್ದಾರೆ. ಇದಾದ ನಂತರ ವಿಧಾನಸಭೆಯಲ್ಲಿ ಏಕಾಏಕಿ ತಮ್ಮ ನಿರ್ಣಯವನ್ನು ಮಂಡಿಸಿದ್ದಾರೆ.

Translate »