ಬ್ಯಾಸ್ಕೆಟ್‍ಬಾಲ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಹಾಸನದ ಬಾಲಕ ಮನೋಜ್ ಆಯ್ಕೆ
ಹಾಸನ

ಬ್ಯಾಸ್ಕೆಟ್‍ಬಾಲ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಹಾಸನದ ಬಾಲಕ ಮನೋಜ್ ಆಯ್ಕೆ

July 14, 2019

ಪ್ರಥಮ ಪಿಯು ವಿದ್ಯಾರ್ಥಿಯ ಎತ್ತರ 6.6 ಅಡಿ
ಹಾಸನ, ಜು.13- ಶಿಕ್ಷಣದ ಜತೆಗೇ ಕ್ರೀಡೆ ಯತ್ತಲೂ ಅಪಾರ ಆಸಕ್ತಿ ಹೊಂದಿದ್ದ ಹಾಸನದ ಬಾಲಕ ಮನೋಜ್ ಬ್ಯಾಸ್ಕೆಟ್‍ಬಾಲ್‍ನ ಪೈಭಾ ಅಂಡರ್ 16 ಮೆನ್ಸ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಆಯ್ಕೆಯಾಗಿದ್ದಾನೆ.

ಜೀವನ ನಿರ್ವಹಣೆಗಾಗಿ ನಗರದ ಆರ್.ಸಿ. ರಸ್ತೆಯಲ್ಲಿ ಮೊಬೈಲ್ ಕ್ಯಾಂಟಿನ್ ನಡೆಸುತ್ತಿರುವ ಮಂಜುನಾಥ್-ರೂಪಾ ದಂಪತಿ ಪುತ್ರನಾದ ಮನೋಜ್ ಈಗಿನ್ನೂ 16 ವರ್ಷದ ವಿದ್ಯಾರ್ಥಿ. ಆದರೆ, ಎತ್ತರ ದಲ್ಲಿ ಮಾತ್ರ 6.6 ಅಡಿ ದಾಟಿದ್ದಾನೆ. ಆತನ ಈ ಎತ್ತರದ ದೇಹವೇ ಬ್ಯಾಸ್ಕೆಟ್‍ಬಾಲ್ ನಲ್ಲಿ ಯಶಸ್ಸು ಕಾಣಲು ಅನುಕೂಲ ಮಾಡಿಕೊಟ್ಟಿದೆ. ಇತ್ತೀಚೆಗೆ ಎಫ್‍ಐಬಿಎ ಅಂಡರ್ 16 ಏಷ್ಯನ್ ಚಾಂಪಿಯನ್‍ಷಿಪ್ ಬ್ಯಾಸ್ಕೆಟ್‍ಬಾಲ್ ಪಂದ್ಯಾವಳಿಯಲ್ಲಿ ಚಾಂಪಿ ಯನ್ ಆಗಿ ಹೊರಹೊಮ್ಮಿದ ಭಾರತದ ತಂಡದಲ್ಲಿದ್ದ ಮನೋಜ್‍ಗೆ ಈಗ ವಿಶ್ವ ಮಟ್ಟದ ಪಂದ್ಯಾವಳಿಯಲ್ಲಿ ಭಾಗವಹಿಸುವ ಅವಕಾಶ ಹುಡುಕಿಕೊಂಡು ಬಂದಿದೆ.

ಈ ಪಂದ್ಯಾವಳಿಗೆ ತೆರಳಲಿರುವ ಭಾರತ ತಂಡದಲ್ಲಿ ಮನೋಜ್ ಸೇರಿದಂತೆ ಕರ್ನಾಟಕದ ಇಬ್ಬರು ಆಯ್ಕೆಯಾಗಿದ್ದಾರೆ. ಈವರೆಗೂ ಹಾಸನ ಜಿಲ್ಲಾ ಕ್ರೀಡಾಂಗಣ ದಲ್ಲಿ ತರಬೇತಿ ಪಡೆದಿರುವ ಮನೋಜ್, ಈಗ ವಿಶ್ವ ಚಾಂಪಿಯನ್‍ಷಿಪ್ ಪಂದ್ಯಾವಳಿ ಗಾಗಿ ಬೆಂಗಳೂರು ಹಾಗೂ ಚೀನಾದಲ್ಲಿ ನಡೆಯುವ ತರಬೇತಿ ಶಿಬಿರಕ್ಕೆ ಆಗಸ್ಟ್‍ನಲ್ಲಿ ತೆರಳಬೇಕಿದೆ. ಆನಂತರದಲ್ಲಿ ವಲ್ರ್ಡ್ ಚಾಂಪಿಯನ್‍ಷಿಪ್ ದಿನ ನಿಗದಿಯಾಗಲಿದೆ.

ಭಾನುವಾರ ಸುದ್ದಿಗಾರರ ಜತೆ ಮಾತನಾ ಡಿದ ಮನೋಜ್, ಬಾಂಗ್ಲಾದೇಶದಲ್ಲಿ ನಡೆದ ಏಷ್ಯನ್ ಕೂಟದಲ್ಲಿಯೂ ಭಾಗವಹಿಸಿದ್ದೆ. ಪೈಭಾ ಅಂಡರ್ 16 ಮೆನ್ಸ್ ವಲ್ರ್ಡ್ ಚಾಂಪಿಯನ್‍ಶಿಪ್‍ಗೆ ಆಯ್ಕೆ ಯಾಗಿರುವುದಕ್ಕೆ ಸಂತಸವಾಗಿದೆ. ಒಳ್ಳೆಯ ತರಬೇತುದಾರರು ನಮಗೆ ಸಿಕ್ಕಿದ್ದಾರೆ. ಪ್ರಪಂಚದ ಹಲವು ದೇಶಗಳ ತಂಡಗಳು ವಲ್ರ್ಡ್ ಚಾಂಪಿಯನ್‍ಶಿಪ್‍ನಲ್ಲಿ ಸೆಣಸಲಿವೆ. ಕಠಿಣ ಸ್ಪರ್ಧೆ ಇದ್ದರೂ ನಾವೂ ಉತ್ತಮ ಆಟವಾಡುತ್ತೇವೆ ಎಂಬ ಭರವಸೆ ಇದೆ ಎಂದು ಹೇಳಿದ.

ಸದ್ಯ ಧಾರವಾಡದಲ್ಲಿ ಪ್ರಥಮ ಪಿಯು ವ್ಯಾಸಂಗ ಮಾಡುತ್ತಿದ್ದೇನೆ. ಮೊದಲಿನಿಂ ದಲೂ ಕ್ರೀಡೆಯಲ್ಲಿ ಆಸಕ್ತಿ ಇತ್ತು. ಹಾಸನ ದಲ್ಲಿ ಜಿಲ್ಲಾ ಕ್ರೀಡಾಂಗಣಕ್ಕೆ ಹೋದಾಗ ಅಲ್ಲಿ ಬ್ಯಾಸ್ಕೆಟ್‍ಬಾಲ್ ಆಡುತ್ತಿದ್ದವರನ್ನು ನೋಡಿ ನನಗೂ ಆಡಬೇಕು ಎಂಬ ಆಸೆ ಹುಟ್ಟಿತು. ಅಲ್ಲಿನ ಕೋಚ್ ಸುಬ್ರಹ್ಮಣ್ಯ ಅವರು ಉತ್ತಮ ಸಲಹೆ ನೀಡಿ ಕಲಿಸಿ ಕೊಟ್ಟಿದ್ದಾರೆ. ಧಾರವಾಡದಲ್ಲಿಯೂ ಉತ್ತಮ ಕೋಚಿಂಗ್ ಸಿಕ್ಕಿದೆ. ಎಲ್ಲರ ಆಶೀರ್ವಾದದಿಂದ 4 ನ್ಯಾಷನಲ್ ಲೆವೆಲ್, 5 ಸ್ಟೇಟ್ ಲೆವೆಲ್ ಪಂದ್ಯಾವಳಿಗಳಲ್ಲಿ ಭಾಗ ವಹಿಸಿದ್ದೇನೆ. ತಂದೆ-ತಾಯಿ ಸಹಕಾರ ದಿಂದ ಉತ್ತಮ ಸಾಧನೆ ಮಾಡಲು ಸಾಧ್ಯ ವಾಗುತ್ತಿದೆ ಎಂದು ಕ್ರೀಡಾ ಜೀವನದ ಬೆಳವಣಿಗೆಯ ವಿಚಾರ ಹಂಚಿಕೊಂಡರು.

ಬ್ಯಾಸ್ಕೆಟ್‍ಬಾಲ್ ಆಟ ನಮಗೇನೂ ಅಷ್ಟು ಇಷ್ಟ ಇರಲಿಲ್ಲ. ಆದರೆ ಮನೋಜ್‍ಗೆ ಅದ ರಲ್ಲೇ ಹೆಚ್ಚು ಆಸÀಕ್ತಿ. ಹಾಗಾಗಿ ಹಠತೊಟ್ಟು ಕಲಿತು ಇಂದು ಈ ಮಟ್ಟದ ಸಾಧನೆ ಮಾಡಿ ದ್ದಾನೆ. ನಮಗೆಲ್ಲ ಸಂತೋಷವಾಗಿದೆ. ನಾವೇನೂ ಆರ್ಥಿಕವಾಗಿ ಸಬಲರಲ್ಲ.
ಮೊಬೈಲ್ ಕ್ಯಾಂಟೀನ್ ಇಟ್ಟುಕೊಂಡು ಜೀವನ ಸಾಗಿಸುತ್ತಿದ್ದೇವೆ. ಈಗ ಮನೋಜ್ ವಿದೇಶಕ್ಕೆ ಹೋಗುವ ವೆಚ್ಚವನ್ನು ಸರಕಾರ ಭರಿಸುತ್ತಿದೆ. ಮೊದಲು ನಗರದ ರಾಯಲ್ ಅಪೋಲೊ ಶಾಲೆಯಲ್ಲಿ ಶಿಕ್ಷಣ ಪಡೆದ. ಕ್ರೀಡೆಯಲ್ಲಿ ಹೆಚ್ಚು ಆಸಕ್ತಿ ಇದ್ದುದರಿಂದ ಧಾರವಾಡಕ್ಕೆ ಹೋದ ಎಂದು ಮನೋಜ್ ತಾಯಿ ರೂಪಾ ಪ್ರತಿಕ್ರಿಯಿಸಿದರು.

Translate »