ಮೋದಿ ಭಜನೆಗೆ ದೆಹಲಿಗೆ ಹೋಗಲು ರೈಲು ವ್ಯವಸ್ಥೆ ಮಾಡಿಕೊಡಲು ಸಿದ್ಧ
ಮೈಸೂರು

ಮೋದಿ ಭಜನೆಗೆ ದೆಹಲಿಗೆ ಹೋಗಲು ರೈಲು ವ್ಯವಸ್ಥೆ ಮಾಡಿಕೊಡಲು ಸಿದ್ಧ

June 27, 2019

ಕರೀಗುಡ್ಡ: ದೂರದ ದೆಹಲಿಯಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಭಜನೆಯನ್ನು ಇಲ್ಲಿ ಮಾಡಿದರೆ ಏನು ಪ್ರಯೋಜನವಿಲ್ಲ. ಭಜನೆ ಮಾಡಲು ದೆಹಲಿಗೆ ಹೋಗಲು ಬಯಸುವ ವರಿಗೆ ರೈಲಿನಲ್ಲಿ ತಾವೇ ಕಳುಹಿಸಿಕೊಡಲು ಸಿದ್ಧವಿರುವುದಾಗಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಗಿ ಹೇಳಿದ್ದಾರೆ.

ಮಾನ್ವಿ ತಾಲೂಕಿನ ಕರೀಗುಡ್ಡದಲ್ಲಿಂದು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ಮುಂದೆ ಮೋದಿ ಭಜನೆ ಮಾಡಿದರೆ ಏನಾಗುತ್ತದೆ. ನಿಮಗೆ ಅಷ್ಟೊಂದು ಇಷ್ಟವಿದ್ದರೆ ನೀವೇ ಮೋದಿ ಬಳಿಗೆ ಹೋಗಿ, ಹೋಗಲು ಸಾಧ್ಯವಿಲ್ಲ ಎಂದಾದರೆ ರೈಲು ವ್ಯವಸ್ಥೆ ಮಾಡಿಕೊಡುತ್ತೇನೆ. ಇಲ್ಲವಾದಲ್ಲಿ ರಾಜ್ಯ ಸರ್ಕಾರವೇ ಇದರ ಖರ್ಚು, ವೆಚ್ಚ ಭರಿಸಲಿದೆ ಎಂದರು. ಮೋದಿಗೆ ಮತ ಹಾಕಿ ದವರು ನಮಗೆ ಕೆಲಸ ಮಾಡಬೇಕು ಎಂದು ಹೇಳುವುದು ಎಷ್ಟು ಸರಿ. ಯಾವ ನಿರೀಕ್ಷೆ ಇಟ್ಟುಕೊಂಡು ಮೋದಿ ಅವರಿಗೆ ಮತ ಹಾಕಿದ್ದಾರೋ ಗೊತ್ತಿಲ್ಲ. ಮತ ಹಾಕಿದ ನಂತರ ಅವರೇ ನಮ್ಮ ಸಮಸ್ಯೆಗಳನ್ನು ಪರಿಹರಿಸಬೇಕು ಎಂಬ ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ತಪ್ಪು ಎನ್ನುವುದಾದರೆ ಇನ್ನು ಮುಂದೆ ಈ ರೀತಿ ಮಾತನಾಡುವುದಿಲ್ಲ ಎಂದರು.

Translate »