`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಜನಸಾಗರ
ಮೈಸೂರು

`ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ಕ್ಕೆ ಜನಸಾಗರ

February 9, 2019

ಕುತೂಹಲಭರಿತ ವಿದ್ಯಾರ್ಥಿಗಳು, ಪೋಷಕರಿಗೆ ಹವಾ ನಿಯಂತ್ರಿತ ಒಂದೇ ಸೂರಿನಡಿ ನೂರಾರು ಶಿಕ್ಷಣ ಸಂಸ್ಥೆಗಳಿಂದ ಶೈಕ್ಷಣಿಕ ಸೌಲಭ್ಯಗಳ ಭರಪೂರ ಮಾಹಿತಿ

ಮೈಸೂರು: ಬಹು ನಿರೀಕ್ಷಿತ `ಸ್ಟಾರ್ ಆಫ್ ಮೈಸೂರ್ ಶೈಕ್ಷಣಿಕ ಮೇಳ’ವು ಸಾಂಸ್ಕøತಿಕ ನಗರಿ ಹಾಗೂ ಶೈಕ್ಷಣಿಕ ಕೇಂದ್ರ ಎಂದೇ ವಿಶ್ವಾದ್ಯಂತ ಹೆಸರಾಗಿರುವ ಮೈಸೂರಿನಲ್ಲಿ ಇಂದು ಶುಭಾರಂಭಗೊಂಡಿತು.

ಮೈಸೂರಿನ ಮಹಾರಾಜ ಕಾಲೇಜು ಮೈದಾನ ದಲ್ಲಿ ಏರ್ಪಡಿಸಿರುವ ಮೂರು ದಿನಗಳ ಈ ಶೈಕ್ಷಣಿಕ ಮೇಳವನ್ನು ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ಜಿ.ಹೇಮಂತ್ ಕುಮಾರ್ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಈ ವೇಳೆ ವಿದ್ಯಾವಿಕಾಸ ಶಿಕ್ಷಣ ಟ್ರಸ್ಟ್ ಅಧ್ಯಕ್ಷರೂ ಆದ ಮಾಜಿ ಶಾಸಕ ವಾಸು, ಜೆಎಸ್‍ಎಸ್ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ ಬಿ.ಜಿ.ಸಂಗ ಮೇಶ್ವರ್, ಜೆಎಸ್‍ಎಸ್ ಸ್ವಾಯತ್ತ ವಿಶ್ವವಿದ್ಯಾನಿಲ ಯದ ಕುಲಪತಿ ಡಾ. ಬಿ.ಸುರೇಶ ಹಾಗೂ `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಉಪಸ್ಥಿತರಿದ್ದರು.

ಇದಕ್ಕೂ ಮೊದಲು ಇಂಡಿಯನ್ ಸೈನ್ಸ್ ಕಾಂಗ್ರೆಸ್ ಅಸೋಸಿಯೇಷನ್ (ISಅಂ) ಅಧ್ಯಕ್ಷರಾದ ಮೈಸೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಕುಲಪತಿ ಪ್ರೊ. ಕೆ.ಎಸ್.ರಂಗಪ್ಪ ಅವರು ಟೇಪು ಕತ್ತರಿಸುವ ಮೂಲಕ `ಸ್ಟಾರ್ ಆಫ್ ಮೈಸೂರ್ ಎಜುಕೇಷನ್ ಫೇರ್‍ಗೆ ಚಾಲನೆ ನೀಡಿದರು. ನಂತರ ಮಾತನಾ ಡಿದ ಪ್ರೊ. ರಂಗಪ್ಪ, ಮೈಸೂರು ನಗರದಲ್ಲಿ ಈ ಬೃಹತ್ ಶೈಕ್ಷಣಿಕ ಮೇಳ ಆಯೋಜಿಸಿರುವುದು ಇತಿಹಾಸದಲ್ಲೇ ಪ್ರಥಮ ಪ್ರಯೋಗ. ಮೈಸೂರು ನಗರ ಹಾಗೂ ಸುತ್ತಲಿನ ಜಿಲ್ಲೆಗಳ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಶಿಕ್ಷಣ ಮಾಹಿತಿ ಪಡೆಯಲು ಈ ಮೇಳ ವರದಾನವಾಗಿದೆ ಎಂದರು.

ಪ್ರೊ. ಹೇಮಂತಕುಮಾರ್ ಮಾತನಾಡಿ, ಅತೀ ಅಗತ್ಯವಾದ ಶೈಕ್ಷಣಿಕ ಮಾಹಿತಿ ಒದಗಿಸಲು ಹಾಗೂ ಒತ್ತಡದ ಇಂದಿನ ದಿನಗಳಲ್ಲಿ ಗುಣಾತ್ಮಕ ಶಿಕ್ಷಣ ಮಾಹಿತಿ ಪಡೆಯುವಲ್ಲಿ ಮೇಳ ಅತೀ ಮಹತ್ವದ್ದಾ ಗಿದೆ. `ಸ್ಟಾರ್ ಆಫ್ ಮೈಸೂರ್’ ಅಂತಾರಾಷ್ಟ್ರೀಯ ಮಟ್ಟದ ಎಜುಕೇಷನ್ ಫೇರ್ ಏರ್ಪಡಿಸಿರುವುದು ಶ್ಲಾಘನೀಯ ಎಂದರು. ಒಂದೇ ಸೂರಿನಡಿ ಶಾಲಾ-ಕಾಲೇಜು ಹಾಗೂ ಶೈಕ್ಷಣಿಕ ಕೋರ್ಸ್ ಆಯ್ಕೆ ಮಾಡಿ ಕೊಳ್ಳಲು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಈ ಶೈಕ್ಷಣಿಕ ಮೇಳವು ಸುವರ್ಣಾವಕಾಶ ಕಲ್ಪಿಸಿದೆ ಎಂದು ಪ್ರಶಂಸಿಸಿದರು.

ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕರಾದ ಶಾರದಾ ವಿಲಾಸದ ತಾತಯ್ಯ, ಬನುಮಯ್ಯದ ಡಿ.ಬನುಮಯ್ಯ ಅವರಂತಹವರ ಕೊಡುಗೆ ಹಾಗೂ ಶಿಕ್ಷಣ ಸಂಸ್ಥೆಗಳ ಇತಿಹಾಸವನ್ನು ಮೆಲುಕು ಹಾಕಿದ ಮಾಜಿ ಶಾಸಕರು, ಪ್ರತಿಷ್ಠಿತ ವಿದ್ಯಾವಿಕಾಸ ಸಂಸ್ಥೆ ಸಂಸ್ಥಾಪಕರೂ ಆದ ವಾಸು ಅವರು, ಸಿಬಿಎಸ್‍ಇ ಶಾಲೆಗಳನ್ನು ತೆರೆಯಲು ಅಡ್ಡಿಪಡಿಸಿದ್ದು, ಅಂತಿಮವಾಗಿ ಕೇಂದ್ರೀಯ ವಿದ್ಯಾಲಯಕ್ಕೆ ಅನುಮತಿ ನೀಡಿದ್ದನ್ನು ಸ್ಮರಿಸಿದರು.

ಪ್ರೊ. ಬಿ.ಜಿ.ಸಂಗಮೇಶ್ವರ್ ಮಾತನಾಡಿ, ಇಂತಹ ಪ್ರತಿಷ್ಠಿತ ಮೇಳದಲ್ಲಿ ಜೆಎಸ್‍ಎಸ್ ಶಿಕ್ಷಣ ಸಂಸ್ಥೆಗಳೂ ಭಾಗವಹಿಸಿರುವುದು ಸಂತಸ ತಂದಿದೆ. ತಮ್ಮ ಅಧ್ಯಯನಕ್ಕೆ ಶಿಕ್ಷಣ ಸಂಸ್ಥೆಗಳನ್ನು ಆಯ್ಕೆ ಮಾಡಿಕೊಳ್ಳಲು ಈ ಶೈಕ್ಷಣಿಕ ಮೇಳ ವಿದ್ಯಾರ್ಥಿಗಳಿಗೆ ಉತ್ತಮ ವೇದಿಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.

ಈ ಮೇಳವು ಶಿಕ್ಷಣ ಮಹೋತ್ಸವದಂತಿದೆ. ಅಷ್ಟೇ ಅಲ್ಲದೆ, ವಿದ್ಯಾರ್ಥಿ ಜೀವನದ ಹಬ್ಬವಾಗಿಯೂ ಪರಿಣಮಿಸಿದೆ ಎಂದು `ಸ್ಟಾರ್ ಆಫ್ ಮೈಸೂರ್’ ಮತ್ತು `ಮೈಸೂರು ಮಿತ್ರ’ ಪ್ರಧಾನ ಸಂಪಾದಕ ಕೆ.ಬಿ.ಗಣಪತಿ ಅಭಿಪ್ರಾಯಪಟ್ಟರು. ಶಿಕ್ಷಣ ಕ್ಷೇತ್ರದಲ್ಲಿ ಆಗುತ್ತಿರುವ ಬದಲಾವಣೆಗಳು, ಮಹತ್ವದ ಬಗ್ಗೆ ತಿಳಿದುಕೊಳ್ಳಲು `ಸ್ಟಾರ್ ಆಫ್ ಮೈಸೂರ್’ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಅವಕಾಶ ಒದಗಿಸಿದೆ. ಶಿಕ್ಷಣ ಸಂಸ್ಥೆಗಳ ನಡುವೆ ಸ್ಪರ್ಧೆ ಏರ್ಪ ಡಿಸುವುದು ಮೇಳದ ಉದ್ದೇಶವಲ್ಲ. ಬದಲಾಗಿ ಇಂದು ಶಿಕ್ಷಣ ದಲ್ಲಿ ಏನಾಗುತ್ತಿದೆ ಎಂಬುದರ ಬಗ್ಗೆ ಮಾಹಿತಿ ನೀಡುವುದು ಪ್ರಮುಖ ಧ್ಯೇಯ ಎಂದು ಗಣಪತಿ ನುಡಿದರು. ಶೈಕ್ಷಣಿಕ ಮೇಳ ಉದ್ಘಾಟನೆಗೆ ತಡವಾಗಿ ಮನವಿ ಮಾಡಿದರೂ ಸಮ್ಮತಿಸಿ ಆಗಮಿಸಿದ್ದಕ್ಕೆ ಪ್ರೊ. ಕೆ.ಎಸ್.ರಂಗಪ್ಪ ಹಾಗೂ ಪ್ರೊ. ಜಿ.ಹೇಮಂತ ಕುಮಾರ್ ಅವರಿಗೆ ಕೆಬಿಜಿ ಇದೇ ಸಂದರ್ಭ ವಂದನೆ ಸಲ್ಲಿಸಿದರು.

`ಸ್ಟಾರ್ ಆಫ್ ಮೈಸೂರ್’ ವ್ಯವಸ್ಥಾಪಕ ಸಂಪಾದಕ ವಿಕ್ರಂ ಮುತ್ತಣ್ಣ, ವಿಶ್ವ ಮಟ್ಟದ ಶೈಕ್ಷಣಿಕ ಮೇಳ ಆಯೋಜಿಸಲು ನಾವು ಪ್ರಯತ್ನಿಸಿದ್ದೇವೆ ಎಂದರು. ಸುತ್ತೂರು ಮಠಾಧೀಶ ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾ ಸ್ವಾಮೀಜಿ, ಜಿಲ್ಲಾ ಉಸ್ತು ವಾರಿ ಸಚಿವ ಜಿ.ಟಿ.ದೇವೇಗೌಡ ಹಾಗೂ ಶಾಸಕ ಎಸ್.ಎ.ರಾಮ ದಾಸ್ ಅವರಿಗೆ ಕಾರಣಾಂತರದಿಂದ ಈ ಶೈಕ್ಷಣಿಕ ಮೇಳದಲ್ಲಿ ಭಾಗವಹಿಸಲಾಗಿಲ್ಲವಾದರೂ, ಅವರು ನೀಡಿದ ಸಹಕಾರ ಹಾಗೂ ಪ್ರೋತ್ಸಾಹಕ್ಕೆ ಅವರಿಗೆ ಧನ್ಯವಾದ ಸಲ್ಲಿಸುವುದಾಗಿ ಹೇಳಿದರು.

ಭಾರತ್ ಸ್ಕೌಟ್ಸ್ ಅಂಡ್ ಗೈಡ್ಸ್ ಮೈದಾನದ ಬದಲಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಶೈಕ್ಷಣಿಕ ಮೇಳ ಆಯೋಜಿಸಲು ತಮಗೆ ಸಲಹೆ ನೀಡಿದ ಪ್ರೊ. ಜಿ.ಹೇಮಂತ ಕುಮಾರ್ ಅವರಿಗೂ ವಿಕ್ರಂ ಮುತ್ತಣ್ಣ ಇದೇ ಸಂದರ್ಭ ಕೃತಜ್ಞತೆ ಸಲ್ಲಿಸಿದರು. ನಂತರ ಅತಿಥಿಗಳು, ಗಣ್ಯರು, ಹವಾನಿಯಂತ್ರಿತ ಸೂರಿನಡಿ ಶಿಕ್ಷಣ ಸಂಸ್ಥೆಗಳ ಆಕರ್ಷಕ ಸ್ಟಾಲ್‍ಗಳಿಗೂ ತೆರಳಿ ಅವರು ನೀಡುತ್ತಿರುವ ಮಾಹಿತಿ ಹಾಗೂ ಒದಗಿಸುತ್ತಿರುವ ಅತ್ಯಾಧುನಿಕ ಸೌಲಭ್ಯಗಳನ್ನು ವೀಕ್ಷಿಸಿದರು. ಈ ಸಂದರ್ಭ ಶಿಕ್ಷಣ ಸಂಸ್ಥೆಗಳ ಪ್ರತಿನಿಧಿಗಳು ತಮ್ಮ ಮಳಿಗೆಗಳಿಗೆ ಭೇಟಿ ನೀಡಿದ ಗಣ್ಯರಿಗೆ ವಿವರಣೆ ನೀಡಿದ ರಲ್ಲದೇ, ಸೆಲ್ಫಿ ತೆಗೆದುಕೊಳ್ಳುತ್ತಿದ್ದುದು ಸಾಮಾನ್ಯವಾಗಿತ್ತು.

Translate »