ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ!
ಮೈಸೂರು

ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ!

February 9, 2019

ಮೈಸೂರು: ಮೈಸೂ ರಿನ ಜಿಲ್ಲಾ ಅಂಗವಿಕಲರ ಪುನರ್ವಸತಿ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ ಇದ್ದು, ಇದನ್ನು ನೀಗಿಸಿದಲ್ಲಿ ಕೇಂದ್ರ ಮತ್ತಷ್ಟು ಪರಿಣಾಮ ಕಾರಿಯಾಗಿ ವಿಕಲಚೇತನರಿಗೆ ಸೇವೆ ನೀಡಲು ಸಾಧ್ಯವಾಗುತ್ತದೆ ಎಂದು ವಿಕಲಚೇತನರ ಹಾಗೂ ಹಿರಿಯ ನಾಗರಿ ಕರ ಸಬಲೀಕರಣ ಇಲಾಖೆಯ ಜಿಲ್ಲಾ ಕಲ್ಯಾಣಾಧಿಕಾರಿ ಜಿ.ಎಸ್. ಅಭಿಕುಮಾರ್ ಅಭಿಪ್ರಾಯಪಟ್ಟರು.

ಮೈಸೂರಿನ ತಿಲಕನಗರದಲ್ಲಿರುವ ಮೈಸೂರು ಜಿಲ್ಲಾ ಅಂಗವಿಕಲರ ಪುನರ್ವ ಸತಿ ಕೇಂದ್ರದಲ್ಲಿ (ಡಿಡಿಆರ್‍ಸಿ) ಶುಕ್ರವಾರ ಹಮ್ಮಿಕೊಂಡಿದ್ದ ಕೇಂದ್ರದ 7ನೇ ವಾರ್ಷಿ ಕೋತ್ಸವ ಉದ್ಘಾಟಿಸಿ ಮಾತನಾಡಿದ ಅವರು, ಹಲವು ಇತಿಮಿತಿಗಳ ನಡುವೆ ಪುನರ್ವ ಸತಿ ಕೇಂದ್ರದ ಸಿಬ್ಬಂದಿ ವಿಕಲಚೇತನ ಸಮು ದಾಯಕ್ಕೆ ಉತ್ತಮ ಸೇವೆ ನೀಡುತ್ತಿದ್ದಾರೆ. ಇಲ್ಲಿನ ಖಾಲಿ ಹುದ್ದೆಗಳನ್ನು ಭರ್ತಿ ಮಾಡಿ ದರೆ ವಿಕಲಚೇತನ ಸಮುದಾಯಕ್ಕೆ ಇನ್ನಷ್ಟು ಪರಿಣಾಮಕಾರಿ ಸೇವೆ ಲಭ್ಯವಾಗಲಿದೆ. ಈ ನಿಟ್ಟಿನಲ್ಲಿ ನಾವು ಕಾರ್ಯಪ್ರವೃತ್ತರಾಗ ಬೇಕಿದೆ ಎಂದು ಹೇಳಿದರು.

ಇಂದಿನ ದಿನಗಳಲ್ಲಿ ಸಾಮಾನ್ಯ ಮಕ್ಕಳನ್ನು ನೋಡಿಕೊಳ್ಳುವುದು ಕೂಡ ಪೋಷಕರಿಗೆ ತ್ರಾಸದಾಯಕ ಕೆಲಸವಾಗಿದೆ. ಅಂತಹ ದರಲ್ಲಿ ವಿಕಲಚೇತನ ಮಕ್ಕಳನ್ನು ಬೆಳೆಸುವ ಪೋಷಕರು ನಿಜಕ್ಕೂ ಸವಾಲಿನ ಕೆಲಸ ದಲ್ಲಿ ನಿತ್ಯ ತೊಡಗಿದ್ದಾರೆ ಎನ್ನಬಹುದು. ವಿಕಲಚೇತನರ ಕಾಯ್ದೆ-2016ರ ಪ್ರಕಾರ 21 ವಿಕಲಾಂಗ ವಿಧಗಳನ್ನು ಪಟ್ಟಿ ಮಾಡ ಲಾಗಿದೆ. ಈ ಸಮಸ್ಯೆಗೆ ತುತ್ತಾದವರು ಮೈಸೂ ರಿನ ಪುನರ್ವಸತಿ ಕೇಂದ್ರದ ನೆರವು ಪಡೆದು ಕೊಂಡಿದ್ದಾರೆ. ಕೇಂದ್ರಕ್ಕೆ ಸಾಧ್ಯವಿರುವ ಎಲ್ಲಾ ನೆರವನ್ನು ನಮ್ಮ ಇಲಾಖೆ ವತಿಯಿಂದ ನೀಡಲಾಗುವುದು ಎಂದು ಪ್ರಕಟಿಸಿದರು.

ಪುನರ್ವಸತಿ ಕೇಂದ್ರದ ಸದಸ್ಯ ಕಾರ್ಯ ದರ್ಶಿ ಆರ್.ಕಲ್ಪನಾ ಮಾತನಾಡಿ, ವೈದ್ಯ ಕೀಯ ತಪಾಸಣೆ, ಅರಿವು, ಸಾಧನ-ಸಲ ಕರಣೆ ವಿತರಣಾ ಕಾರ್ಯಕ್ರಮ ಸೇರಿದಂತೆ 2018ರ ಡಿಸೆಂಬರ್‍ವರೆಗೆ ಕೇಂದ್ರದ ವತಿ ಯಿಂದ ಒಟ್ಟು 527 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಕೇಂದ್ರದಲ್ಲಿ ಪ್ರತಿದಿನ 40ಕ್ಕೂ ಹೆಚ್ಚು ಅಂಗವಿಕಲ ಮಕ್ಕಳಿಗೆ ವಿವಿಧ ತರಬೇತಿ ನೀಡಲಾಗುತ್ತಿದೆ. ಕೇಂದ್ರದ ವತಿ ಯಿಂದ ಮೂರು ವಿಕಲಾಂಗ ಮಕ್ಕ ಳಿಗೆ ಶಸ್ತ್ರಚಿಕಿತ್ಸೆಗೆ ನೆರವು ನೀಡಿದ್ದು, ಮೂವರೂ ಅಂಗವೈಕಲ್ಯ ಸಮಸ್ಯೆಯಿಂದ ಮುಕ್ತ ರಾಗಿದ್ದಾರೆ ಎಂದು ತಿಳಿಸಿದರು.

ಇದೇ ವೇಳೆ ಗ್ರಾಮ ಪುನರ್ವಸತಿ ಕಾರ್ಯಕರ್ತರಾದ (ವಿಆರ್‍ಡಬ್ಲ್ಯೂ) ಹುಣಸೂರು ತಾಲೂಕಿನ ಗೋವಿಂದನ ಹಳ್ಳಿ ಗ್ರಾಪಂ ವ್ಯಾಪ್ತಿಯ ವಸಂತ, ತಿ.ನರಸೀ ಪುರ ತಾಲೂಕಿನ ಕೇತುಪುರ ಗ್ರಾಪಂ ವ್ಯಾಪ್ತಿಯ ಡಿ.ಮಹದೇವಮ್ಮ, ಕೆಆರ್ ನಗರ ತಾಲೂಕಿನ ಮನಗುವಳ್ಳಿ ಗ್ರಾಪಂ ವ್ಯಾಪ್ತಿಯ ಎಂ.ಎನ್.ನಾಗೇಶ್ ಹಾಗೂ ಹಿನಕಲ್ ಗ್ರಾಪಂ ವ್ಯಾಪ್ತಿಯ ಜಾಕಿರ್ ಪಾಷ ಅವ ರನ್ನು ಸನ್ಮಾನಿಸಲಾಯಿತು (ವಿಆರ್‍ಡಬ್ಲ್ಯೂ ಗಳಾಗಿ ವಿಕಲಚೇತನರನ್ನೇ ಆಯ್ಕೆ ಮಾಡಿ ಕೊಳ್ಳಲಾಗುತ್ತದೆ). ನಗರಪಾಲಿಕೆ ಸದಸ್ಯ ಆರ್.ರಂಗಸ್ವಾಮಿ, ಭಾರತೀಯ ರೆಡ್ ಕ್ರಾಸ್ ಸೊಸೈಟಿ ಮೈಸೂರು ಶಾಖೆ ಉಪ ಸಭಾಪತಿ ಪ್ರೊ.ಎಂ.ಮಹದೇವಪ್ಪ, ಸಹ ಕಾರ್ಯದರ್ಶಿ ಬಿ.ಎಸ್.ವನಜಾ, ಸದಸ್ಯ ವಿ.ಆನಂದ್, ಮಹಿಳಾ ಮತ್ತು ಮಕ್ಕಳ ಅಭಿ ವೃದ್ಧಿ ಇಲಾಖೆ ಉಪ ನಿರ್ದೇಶಕಿ ಕೆ.ಪದ್ಮಾ, ಮೈಸೂರು ಜಿಲ್ಲಾ ವಿಕಲಚೇತನರ ಕ್ಷೇಮಾ ಭಿವೃದ್ಧಿ ಸಂಘದ ಗೌರವಾಧ್ಯಕ್ಷ ಎನ್. ಶ್ರೀಧರ್ ದೀಕ್ಷಿತ್, ನಿವೃತ್ತ ಜಿಲ್ಲಾ ಅಂಗ ವಿಕಲರ ಕಲ್ಯಾಣಾಧಿಕಾರಿ ಬಲರಾಮ್ ಮತ್ತಿತರರು ಹಾಜರಿದ್ದರು.

Translate »