ಸಂಚಾರ ಮುಕ್ತ ರಸ್ತೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್
ಮೈಸೂರು

ಸಂಚಾರ ಮುಕ್ತ ರಸ್ತೆಯಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್

December 9, 2020

ಮೈಸೂರು, ಡಿ.8(ಆರ್‍ಕೆ)-ಮದುವೆಗೆ ಮುಂಚೆ ಫೋಟೋ-ವಿಡಿಯೋ ಶೂಟ್ ಮಾಡಿಸುವುದು ಇಂದಿನ ನವಜೋಡಿ ಗಳಿಗೆ ಒಂದು ಕ್ರೇಜ್ ಆಗಿದೆ.

ಅದಕ್ಕಾಗಿ ಅವರು ಸುಂದರ ಸ್ಥಳಗಳನ್ನು ಆಯ್ಕೆ ಮಾಡುವ ಜೊತೆಗೆ ಸಂಚಾರ ವಿಲ್ಲದ ಜಾಗವನ್ನೂ ಆಯ್ಕೆ ಮಾಡಿಕೊಳ್ಳು ವುದುಂಟು. ಸಾಂಸ್ಕøತಿಕ ನಗರಿ ಮೈಸೂ ರಲ್ಲಿ ಅಗಲವಾದ ರಸ್ತೆಗಳು, ಅರಮನೆ ಯಂತಹ ಪಾರಂಪರಿಕ ಸ್ಮಾರಕಗಳು, ನೈಸರ್ಗಿಕ ತಾಣಗಳಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗತೊಡಗಿದೆ.

ವಿವಿಧ ಬಣ್ಣಗಳ ಉಡುಪು ಧರಿಸಿ ಅದಕ್ಕೆ ತಕ್ಕಂತಹ ಜಾಗಗಳಲ್ಲಿ ಫೋಟೋ ತೆಗೆಯುವುದು, ವೀಡಿಯೋ ಚಿತ್ರೀಕರಣ ಮಾಡುವುದು ಸಾಮಾನ್ಯವಾಗಿದೆಯಲ್ಲದೆ, ಅದಕ್ಕಾಗಿ ಅಡಚಣೆಯಾಗಬಾರದೆಂದು ಸಂಚಾರಮುಕ್ತ ದಿನವನ್ನೇ ಅದಕ್ಕೆ ಆಯ್ಕೆ ಮಾಡಿಕೊಳ್ಳುವುದೂ ಉಂಟು.

ಸಾಮಾನ್ಯ ದಿನಗಳಲ್ಲಿ ಆಟೋ, ಕಾರು, ಬೈಕ್, ಸ್ಕೂಟರ್, ಬಸ್‍ಗಳ ಓಡಾಟವಿರು ತ್ತದೆ. ಆ ದಟ್ಟ ವಾಹನ ಸಂಚಾರದಲ್ಲಿ ಮುಕ್ತವಾಗಿ ಫೋಟೋಶೂಟ್ ಮಾಡ ಲಾಗದು ಎಂಬುದನ್ನು ಮನಗಂಡ ನವ ಜೋಡಿಗಳು, ಕರ್ನಾಟಕ ಬಂದ್ ಅಥವಾ ಭಾರತ ಬಂದ್‍ನಂತಹ ದಿನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಇಲ್ಲವೆ ಜನ, ವಾಹನ ಸಂಚಾರವಿಲ್ಲದ ಸಮಯ ಆಯ್ಕೆ ಮಾಡು ತ್ತಾರೆ. ಆ ಹಿನ್ನೆಲೆಯಲ್ಲಿ ಭಾರತ್ ಬಂದ್ ಇದ್ದ ಕಾರಣ ಇಂದು ನವಜೋಡಿಗಳು ಬೆಳಿಗ್ಗೆಯೇ ಮೈಸೂರಿನ ಅರಮನೆ ಉತ್ತರ ದ್ವಾರದ ಚಾಮರಾಜ ಒಡೆಯರ್ ಪ್ರತಿಮೆ ಸರ್ಕಲ್‍ನಲ್ಲಿ ಪ್ರೀ ವೆಡ್ಡಿಂಗ್ ಫೋಟೋ ವೀಡಿಯೋ ಶೂಟ್ ಮಾಡುತ್ತಿದ್ದುದು ಕಂಡು ಬಂದಿತು. ಡಿ. 5ರಂದು ಕರೆಯಲಾಗಿದ್ದ ಕರ್ನಾಟಕ ಬಂದ್ ದಿನವೂ ಕಪಲ್‍ಗಳು ಅರಮನೆ ಶ್ರೀ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಬಳಿ ಫೋಟೋ ಶೂಟ್ ಮಾಡಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ಮೈಸೂರಿನ ಹೊರಗಡೆ ನದಿ ದಂಡೆ ಯಲ್ಲಿ ಅಥವಾ ಬೆಟ್ಟಗುಡ್ಡದ ನೈಸರ್ಗಿಕ ಮಡಿಲಲ್ಲಿ ಫೋಟೋ ಶೂಟ್ ಮಾಡಿ ದರೆ ಅಪಾಯ ಸಂಭವಿಸಬಹುದು. ತಿ.ನರಸೀಪುರ ತಾಲೂಕಿನ ಮುಡುಕು ತೊರೆ ಬಳಿ ಕಾವೇರಿ ನದಿಯಲ್ಲಿ ತೆಪ್ಪದ ಮೇಲೆ ನಿಂತು ಫೋಟೋ ಶೂಟ್ ಮಾಡು ತ್ತಿದ್ದಾಗ ನವಂಬರ್ 9ರಂದು ನಡೆದ ದುರಂತ ನಮ್ಮ ಕಣ್ಣ ಮುಂದಿದೆ. ಇಂತಹ ಪ್ರೀ ವೆಡ್ಡಿಂಗ್ ಫೋಟೋ ಶೂಟ್ ಅಥವಾ ವೀಡಿಯೋ ಚಿತ್ರೀಕರಣ ಮಾಡುವಾಗ ಸುರ ಕ್ಷತೆ ಕಡೆಗೂ ಗಮನ ಹರಿಸಬೇಕಾಗಿದೆ.

Translate »