ಬೀದಿಬದಿ ವ್ಯಾಪಾರಿ, ವಸತಿಹೀನರಿಗೆ ಉಚಿತ ಬೆಡ್‍ಶೀಟ್ ವಿತರಣೆ
ಮೈಸೂರು

ಬೀದಿಬದಿ ವ್ಯಾಪಾರಿ, ವಸತಿಹೀನರಿಗೆ ಉಚಿತ ಬೆಡ್‍ಶೀಟ್ ವಿತರಣೆ

December 9, 2020

ಮೈಸೂರು, ಡಿ.8(ಎಂಟಿವೈ)- ಮೈಸೂರಿನ ವಿವಿಧ ರಸ್ತೆಗಳ ಬದಿಯಲ್ಲಿ ಮಲಗುವ ವಸತಿಹೀನರಿಗೆ ಹಾಗೂ ಮುಂಜಾನೆ ರಸ್ತೆಬದಿ ವ್ಯಾಪಾರಿಗಳಿಗೆ ಕೆಎಂಪಿಕೆ ಚಾರಿ ಟಬಲ್ ಟ್ರಸ್ಟ್‍ನಿಂದ ಆರಂಭಿಸಿದ `ಹೊದಿಕೆ ವಿತರಣಾ ಅಭಿಯಾನ’ಕ್ಕೆ ಮಂಗಳವಾರ ರಾಜ್ಯ ಮಹಿಳಾ ಅಯೋಗದ ಅಧ್ಯಕ್ಷೆ ಪ್ರಮೀಳಾ ನಾಯ್ಡು ಅವರು ಪೌರಕಾರ್ಮಿಕರಿಗೆ ಹೊದಿಕೆ ನೀಡುವ ಮೂಲಕ ಚಾಲನೆ ನೀಡಿದರು.

ಚಾಮುಂಡಿಬೆಟ್ಟದಲ್ಲಿ ಮಂಗಳವಾರ ಬೆಳಿಗ್ಗೆ ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಪೌರಕಾರ್ಮಿಕರಿಗೆ ಹೊದಿಕೆ ವಿತರಿಸಿ ಬಳಿಕ ಮಾತನಾಡಿದರು.

ಕೊರೊನಾ ಲಾಕ್‍ಡೌನ್ ವೇಳೆ ನಾವೆಲ್ಲರೂ ಮನೆ ಯೊಳಗೆ ಸುರಕ್ಷಿತವಾಗಿದ್ದರೆ, ವಸತಿಹೀನರು ಬಹಳ ಸಂಕಷ್ಟ ಅನುಭವಿಸಿದರು. ಬಹಳಷ್ಟು ಕಡೆ ಪುನರ್ವಸತಿ ಕೇಂದ್ರ ತೆರೆದು ಆಶ್ರಯ ಕಲ್ಪಿಸಿದ್ದರೂ ತೊಂದರೆ ಅನು ಭವಿಸಿದ್ದಾರೆ. ಸೋಂಕಿನ ಆರಂಭದ ದಿನಗಳಲ್ಲಿ ಹಾಗೂ ಮಿತಿ ಮೀರಿದ ಪ್ರಮಾಣದಲ್ಲಿ ಕಂಡು ಬಂದ ಸಂದರ್ಭ ದಲ್ಲೂ ಪೌರಕಾರ್ಮಿಕರು ಜೀವಭಯವಿಲ್ಲದೇ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರಾಜ್ಯ ಸರ್ಕಾರ ಪೌರಕಾರ್ಮಿಕರು ಸೇರಿದಂತೆ ಎಲ್ಲಾ ನಾಗರಿಕರು, ಬೀದಿಬದಿ ವ್ಯಾಪಾರಿಗಳು, ನಿರಾಶ್ರಿತರಿಗೆ ಹಲವಾರು ಯೋಜನೆ ಗಳನ್ನು ಜಾರಿಗೆ ತಂದಿದೆ. ಅದರ ಉಪಯೋಗ ಮಾಡಿ ಕೊಳ್ಳಲು ಮುಂದಾಗಬೇಕು ಎಂದು ಸಲಹೆ ನೀಡಿದರು.

ಸಮಾಜ ಸೇವಕ ಡಿ.ಟಿ.ಪ್ರಕಾಶ್ ಮಾತನಾಡಿ, ಸಾಂಸ್ಕೃತಿಕ ನಗರಿ ಎಲ್ಲರಿಗೂ ಆಶ್ರಯ ನೀಡಿದೆ. ಕೆಲವರು ವಿವಿಧ ಕಾರಣಗಳಿಂದ ವಸತಿಹೀನರಾಗಿದ್ದಾರೆ. ಮಳೆ, ಗಾಳಿ, ಚಳಿ ಎನ್ನದೇ ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ, ದೇವಾಲಯ, ಸರ್ಕಾರಿ ಕಟ್ಟಡಗಳ ಮುಂಭಾಗ ರಾತ್ರಿ ಮಲಗಿರುವುದನ್ನು ಕಾಣಬಹುದಾಗಿದೆ. ಮೈಸೂರಿನಲ್ಲಿ ಹಲವರು ನಿರಾಶ್ರಿತ ರಿದ್ದು, ಮಾನವೀಯತೆಯಿಂದ ಅವರಿರುವ ಸ್ಥಳಕ್ಕೆ ಹೋಗಿ ಹೊದಿಕೆ ನೀಡಲು ಟ್ರಸ್ಟ್ ಅಭಿಯಾನ ಹಮ್ಮಿಕೊಂಡಿದೆ. ಇದಕ್ಕೆ ನಾಗರಿಕರು ಕೈಜೋಡಿಸಬೇಕು ಎಂದು ಕೋರಿದರು.

ಯುವ ಮುಖಂಡ ಎನ್.ಎಂ.ನವೀನ್‍ಕುಮಾರ್ ಮಾತ ನಾಡಿ, ಸರ್ಕಾರ ಹಲವು ಯೋಜನೆ ಜಾರಿಗೆ ತಂದರೂ ಬೀದಿಬದಿ ವ್ಯಾಪಾರಸ್ಥರು, ಅಶಕ್ತರಿಗೆ ನಿರಾಶ್ರಿತರಿಗೆ ಸಮರ್ಪಕವಾಗಿ ತಲುಪುತ್ತಿಲ್ಲ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಈ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸು ವುದಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು. ನಗರÀದಲ್ಲಿ ಪುನರ್ವಸತಿ ಕೇಂದ್ರಗಳು ಕೇವಲ ಬಂಧಿಖಾನೆ ಎಂಬ ಕಲ್ಪನೆ ನಿರಾಶ್ರಿತರಲ್ಲಿ ಬರಬಾರದು. ಅದೊಂದು ಮನಃ ಪರಿವರ್ತನ ಕೇಂದ್ರವಾಗಿ ಕಾಣುವಂತೆ ಕಾರ್ಯಕ್ರಮ ರೂಪಿಸಬೇಕು ಎಂದು ಸಲಹೆ ನೀಡಿದರು. ಈ ಸಂದರ್ಭ ಜಿಎಸ್‍ಎಸ್ ಫೌಂಡೇಷನ್ ಅಧ್ಯಕ್ಷ ಶ್ರೀಹರಿ ದ್ವಾರಕನಾಥ್, ಪಾಲಿಕೆ ಮಾಜಿ ಸದಸ್ಯ ಎಂ.ಡಿ.ಪಾರ್ಥಸಾರಥಿ, ಜೀವ ಧಾರ ರಕ್ತನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಉದ್ಯಮಿ ಅಪೂರ್ವ ಸುರೇಶ್, ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಂ ಅಯ್ಯಂಗಾರ್, ಮುಖಂಡರಾದ ಅಜಯ್ ಶಾಸ್ತ್ರಿ, ಜೋಗಿ ಮಂಜು, ರಾಕೇಶ್ ಭಟ್, ಎಸ್.ಎನ್.ರಾಜೇಶ್, ಜಿ.ರಾಘವೇಂದ್ರ, ರಾಕೇಶ್ ಕುಂಚಿಟಿಗ, ಸುಚೇಂದ್ರ, ನವಿಲು ನಾಗರಾಜ್, ಚಕ್ರಪಾಣಿ ಮತ್ತಿತರರಿದ್ದರು.

Translate »