ಬೆಂಗಳೂರು, ಡಿ.8(ಕೆಎಂಶಿ)-ಯುವ ಜನಾಂಗವನ್ನು ದಾರಿ ತಪ್ಪಿಸುತ್ತಿರುವ ಹುಕ್ಕಾ ಬಾರ್ ಸೇರಿದಂತೆ ಮನ ರಂಜನಾ ಕೇಂದ್ರಗಳನ್ನು ಮುಚ್ಚಿಸುವುದಾಗಿ ಗೃಹಸಚಿವ ಬಸವ ರಾಜ್ ಬೊಮ್ಮಾಯಿ ವಿಧಾನಸಭೆಯಲ್ಲಿ ಪ್ರಕಟಿಸಿದ್ದಾರೆ. ಪ್ರಶ್ನೋತ್ತರ ವೇಳೆಯಲ್ಲಿ ಕಾಂಗ್ರೆಸ್‍ನ ಈಶ್ವರ್ ಖಂಡ್ರೆ ಮಾಡಿದ ಪ್ರಸ್ತಾಪಕ್ಕೆ ಹಲವು ಸದಸ್ಯರು ಮಾದಕದ್ರವ್ಯಗಳ ಸೇವನೆ ತಡೆ ಗಟ್ಟಲು ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿ ಸಿದ ಸಂದರ್ಭದಲ್ಲಿ ಮಧ್ಯೆ ಪ್ರವೇಶಿಸಿ ಮಾತ ನಾಡಿದ ಗೃಹಸಚಿವರು, ಬೆಂಗಳೂರು ಮತ್ತು ಮೈಸೂರಿನಲ್ಲಿ ಹುಕ್ಕಾಬಾರ್‍ಗಳು ತಲೆ ಎತ್ತಿ ಯುವಕರು ಮಾದಕ ವ್ಯಸನಿ ಗಳಾಗಲು ಕಾರಣವಾಗುತ್ತಿವೆ. ಇಂಥ ಕೇಂದ್ರ…