ಮೈಸೂರು ಯಾದವಗಿರಿ ಕೊಳಚೆ ಪ್ರದೇಶದ ಸೀಟ್ ಮನೆಗಳ ತೆರವು
ಮೈಸೂರು

ಮೈಸೂರು ಯಾದವಗಿರಿ ಕೊಳಚೆ ಪ್ರದೇಶದ ಸೀಟ್ ಮನೆಗಳ ತೆರವು

April 20, 2021

ಮೈಸೂರು,ಏ.19(ಪಿಎಂ)- ಮೈಸೂರಿನ ಮಹಾನಗರ ಪಾಲಿಕೆ ವಾರ್ಡ್ 18ರ ವ್ಯಾಪ್ತಿಯ ಯಾದವಗಿರಿ ಕೊಳಚೆ ಪ್ರದೇಶದ (ಹಾಸನ ರೈಲ್ವೆ ಹಳಿ ಪಕ್ಕ) ಸೀಟ್ ಮನೆಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿ ವತಿಯಿಂದ ತೆರವುಗೊಳಿಸಲಾಯಿತು.

ಇಲ್ಲಿನ ನಿವಾಸಿಗಳ ವಿರೋಧದ ನಡುವೆಯೂ ಪೊಲೀಸ್ ಭದ್ರತೆಯೊಂದಿಗೆ ಕೊಳಗೇರಿ ಅಭಿವೃದ್ಧಿ ಮಂಡಳಿ ಕಾರ್ಯಪಾಲಕ ಇಂಜಿನಿಯರ್ ಜಿ.ಹರೀಶ್ ನೇತೃತ್ವದಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು. ಮೈಸೂರು ನಗರದ ಕೆಸರೆ ಸರ್ವೇ ನಂ. 484/1 ಮತ್ತು 484/2 ಬಡಾವಣೆಯಲ್ಲಿ ಜೆಎನ್ ನರ್ಮ್ ಬಿಎಸ್ ಯುಪಿ ಯೋಜನೆಯಡಿ ನಿರ್ಮಿಸಿರುವ ಮನೆಗಳಿಗೆ ಇಲ್ಲಿನ ಕೊಳಚೆ ಪ್ರದೇಶದ ನಿವಾಸಿಗಳಿಗೆ ಮನೆಗಳನ್ನು ಹಂಚಿಕೆ ಮಾಡಿರುವ ಹಿನ್ನೆಲೆಯಲ್ಲಿ ಯಾದವಗಿರಿ ಕೊಳಚೆ ಪ್ರದೇಶದ ಸೀಟ್ ಮನೆಗಳನ್ನು ತೆರವುಗೊಳಿಸಲಾಯಿತು.

ನಮಗೆ ಇನ್ನು ಕೆಲವು ದಿನ ಸಮಯ ಕೊಡಬೇಕು. ಕೋವಿಡ್ ಸೋಂಕು ನಡುವೆ ಬೇರೆ ಕಡೆಗಳಿಗೆ ಹೋಗಲು ಸಾಧ್ಯವಿಲ್ಲ. ಕೆಸರೆಯಲ್ಲಿ ನೀಡಿರುವ ಮನೆಗಳಿಗೆ ಸಮ ರ್ಪಕ ಮೂಲಭೂತ ಸೌಲಭ್ಯ ಕಲ್ಪಿಸಿಲ್ಲ. ಈ ನಡುವೆ ಏಕಾಏಕಿ ತೆರವು ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂದು ಹಲವು ನಿವಾಸಿಗಳು ಆರೋಪಿಸಿದರೆ, ಕೊಳಗೇರಿ ಅಭಿವೃದ್ಧಿ ಮಂಡಳಿ ಅಧಿಕಾರಿಗಳು ಈಗಾಗಲೇ ಸಾಕಷ್ಟು ಕಾಲಾವಕಾಶ ನೀಡಲಾಗಿದೆ. ಆದರೂ ಕೆಲವರು ಸ್ಥಳಾಂ ತರಗೊಳ್ಳಲು ಹಿಂದೇಟು ಹಾಕುತ್ತಿದ್ದಾರೆ ಎಂದು ಪ್ರತ್ಯಾರೋಪ ಮಾಡಿದರು.

ಇದೇ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಕಾರ್ಯಪಾಲಕ ಇಂಜಿನಿಯರ್ ಜಿ.ಹರೀಶ್, ಯಾದವ ಗಿರಿ ಸ್ಲಂ ಪ್ರದೇಶದಲ್ಲಿನ 78 ಫಲಾನುಭವಿಗಳಿಗೆ ಸಂಸ ದರು ಹಾಗೂ ಶಾಸಕರು ಜನವರಿ 31ರಂದೇ ಲಾಟರಿ ಮೂಲಕ ಕೆಸರೆಯಲ್ಲಿ ನಿರ್ಮಿಸಿರುವ ನರ್ಮ್ ಮನೆ ಗಳನ್ನು ಇಲ್ಲಿನ ಕುಟುಂಬಗಳಿಗೆ ಹಂಚಿಕೆ ಮಾಡಿದ್ದಾರೆ. ಅವರಿಗೆ ಸ್ಥಳಾಂತರಗೊಳ್ಳಲು ಕಾಲಾವಕಾಶ ಸಹ ನೀಡಲಾಗಿತ್ತು. ಮೂಲಭೂತ ಸೌಲಭ್ಯಗಳನ್ನು ಕೆಸರೆ ಯಲ್ಲಿ ಮಾಡಿಕೊಡಲಾಗಿದೆ ಎಂದರು.

ಇಂದು ಇಲ್ಲಿ 28 ಮನೆಯವರು ಕೋರ್ಟ್‍ನಲ್ಲಿ ತಡೆ ಯಾಜ್ಞೆ ತಂದಿದ್ದಾರೆ. ಆ 28 ಮನೆಗಳನ್ನು ಹೊರತು ಪಡಿಸಿ, ಉಳಿದ 50 ಮನೆಗಳ ತೆರವು ಕಾರ್ಯಾಚರಣೆ ಯನ್ನು ಮಾಡಲಾಗುತ್ತಿದೆ. ಯಾರನ್ನೂ ಬೀದಿಗೆ ಹಾಕಿಲ್ಲ. ನಿನ್ನೆಯೇ ಇಲ್ಲಿನ 20 ಕುಟುಂಬಗಳು ಕೆಸರೆಯ ಮನೆಗಳಿಗೆ ಹೋಗಿದ್ದಾರೆ. ಉಳಿದ 30 ಕುಟುಂಬಗಳು ಹೊಂದಿರುವ ಮನೆಗಳನ್ನು ತೆರವು ಮಾಡಲಾಗುತ್ತಿದೆ ಎಂದು ಹೇಳಿದರು.
ಕೆಸರೆಯಲ್ಲಿ ನೀಡಿರುವ ಮನೆಗಳಿಗೆ ಸರಿಯಾದ ಮೂಲಸೌಲಭ್ಯ ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಮೂಲಭೂತ ಸೌಲಭ್ಯ ಇಲ್ಲವಾಗಿದ್ದರೆ ಈಗಾಗಲೇ 20 ಕುಟುಂಬಗಳು ಅಲ್ಲಿಗೆ ಏಕೆ ಹೋಗುತ್ತಿತ್ತು. ಹೋಗ ಬಾರದು ಎನ್ನುವವರು ಏನಾದರೂ ನೆಪ ಹುಡುಕುತ್ತಾರೆ. ಲಾಟರಿ ಮೂಲಕ ಹಂಚಿಕೆಯಾದ ಬಳಿಕವೇ ಹಂಚಿಕೆ ಪತ್ರ ನೀಡಿದ್ದೇವೆ. ಮಾನವೀಯತೆ ದೃಷ್ಟಿಯಿಂದ ಕಾಲಾವಕಾಶ ನೀಡಿಯೇ ತೆರವು ಮಾಡುತ್ತಿದ್ದೇವೆ. ಏಕಾಏಕಿ ತೆರವು ಮಾಡುತ್ತಿಲ್ಲ ಎಂದು ತಿಳಿಸಿದರು.

ಸದರಿ ಸ್ಲಂ ನಿವಾಸಿ ಅನಿಲ್‍ಕುಮಾರ್ ಮಾತನಾಡಿ, ಇಲ್ಲಿನ ಅರಳೀಕಟ್ಟೆ ಜಾಗದಲ್ಲಿ ಸೀಟ್ ಮನೆಗಳನ್ನು ಹಾಕಿಕೊಂಡು ವಾಸವಾಗಿದ್ದೆವು. 2010-11ರಲ್ಲಿ ಅಂದಿನ ಕರ್ನಾಟಕ ಕೊಳಚೆ ನಿರ್ಮೂಲನ ಮಂಡಳಿಯು ನಾವು ಸೀಟ್ ಮನೆಗಳನ್ನು ಹಾಕಿಕೊಂಡು ವಾಸ ವಾಗಿದ್ದ ಜಾಗದಲ್ಲೇ ಮನೆಗಳನ್ನು ನಿರ್ಮಿಸಿ ಪುನರ್‍ವಸತಿ ಕಲ್ಪಿಸುವುದಾಗಿ ತಿಳುವಳಿಕೆ ಪತ್ರ ನೀಡಿ ತೆರವು ಮಾಡಿಸಿದರು. ಆ ಬಳಿಕ ಈಗ ವಾಸ ವಾಗಿರುವ ಜಾಗದಲ್ಲಿ ಸೀಟ್ ಮನೆಗಳನ್ನು ನಿರ್ಮಿಸಿ ಕೊಂಡು ವಾಸವಾಗಿದ್ದೇವೆ. ಈ ನಡುವೆ ಅರಳೀಕಟ್ಟೆ ಜಾಗದಲ್ಲಿ ಮನೆ ನಿರ್ಮಿಸುವ ಯೋಜನೆ ಏನಾ ಯಿತು ಎಂಬುದರ ಬಗ್ಗೆ ಯಾವುದೇ ಮಾಹಿತಿ ನೀಡುತ್ತಿಲ್ಲ ಎಂದು ದೂರಿದರು.

Translate »