ಹಾಸನ: ನಗರದ ವಿವಿಧ ಚರ್ಚ್ ಗಳಲ್ಲಿ ಮಂಗಳವಾರ ಬೆಳಿಗ್ಗೆ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ, ಭಕ್ತಿ-ಭಾವದಿಂದ ಆಚರಿಸಲಾಯಿತು. ನಗರದ ಎನ್.ಆರ್. ವೃತ್ತ, ಹಳೆ ಮುನ್ಸಿಪಲ್ ಶಾಲೆ ಹಿಂಭಾಗದ ಚರ್ಚ್‍ನಲ್ಲಿ ಮಕ್ಕಳು ಮತ್ತು ಹಿರಿಯರು ಮೇಣದ ಬತ್ತಿ ಇಟ್ಟು ಪ್ರಾರ್ಥಿಸಿದರು.
ಅರಸೀಕೆರೆ ವರದಿ: ನಗರದ ರೈಲ್ವೆ ಕಾಲೋನಿ ಯಲ್ಲಿರುವ ಕ್ಯಾಥೋಲಿಕ್ ಚರ್ಚ್‍ನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗಿತ್ತು.
ಪಾದ್ರಿ ವಿಲಿಯಂ ಅವರ ನೇತೃತ್ವದಲ್ಲಿ ವಿಶೇಷ ಪಾರ್ಥನಾ ಕಾರ್ಯಕ್ರಮಗಳು ನಡೆದವು. ಚರ್ಚಿನ ಆವರಣದಲ್ಲಿ ಸಾಂತಾಕ್ಲಾಸ್ ಪ್ರತಿಮೆ ಮತ್ತು ಏಸುಕ್ರಿಸ್ತರ ಜನ್ಮ ಸಂದರ್ಭ ಬಿಂಬಿಸುವ ಗೋದಲಿ ನಿರ್ಮಾಣ ಸಾರ್ವಜನಿಕರ ಮನಸೂರೆ ಗೊಂಡಿತು. ಸಂಪೂರ್ಣ ವಿದ್ಯುತ್ ದೀಪ ಗಳ ಅಲಂಕಾರದಿಂದ ಕಂಗೊಳಿಸುತ್ತಿದ್ದ ದೇವಾಲಯದ ಹೊರಾಂಗಣ ಮತ್ತು ಒಳಾಂಗಣವು ಭಕ್ತಾದಿಗಳಲ್ಲಿನ ಭಕ್ತಿ-ಭಾವವನ್ನು ಇಮ್ಮಡಿಗೊಳಿಸಿತು.
ಬೇಲೂರು ವರದಿ: ಕ್ರಿಸ್‍ಮಸ್ ಹಬ್ಬದ ಅಂಗವಾಗಿ ಪಟ್ಟಣದ ಜೆಪಿ ನಗರದಲ್ಲಿ ರುವ ಸೇಂಟ್ ಮಿಕಾಲೇನ್ ಚರ್ಚ್‍ನ ಆವರಣವನ್ನು ಬಣ್ಣದ ವಿದ್ಯುತ್ ದೀಪ ಗಳಿಂದ ಅಲಂಕರಿಸಲಾಗಿತ್ತು. ಅಲ್ಲದೆ, ಬಣ್ಣ ಬಣ್ಣದ ನಕ್ಷತ್ರಾಕಾರದ ದೀಪಗಳು ಹಾಗೂ ಏಸುಕ್ರಿಸ್ತ ಜನ್ಮಸ್ಥಳದ ಸ್ತಬ್ದ ಚಿತ್ರವು ನೋಡುಗರನ್ನು ಆಕರ್ಷಿಸುತ್ತಿತ್ತು.
ಕ್ರಿಸ್‍ಮಸ್ ಹಬ್ಬದ ಅಂಗವಾಗಿ ಕ್ರೈಸ್ತ ಸಮುದಾಯದವರು ಹೊಸ ಬಟ್ಟೆ ಗಳನ್ನು ಧರಿಸಿ ಬಂದು ಚರ್ಚ್‍ನಲ್ಲಿ ಪ್ರಾರ್ಥನೆ ಸಲ್ಲಿಸಿದರು. ಹಬ್ಬದ ಶುಭಾ ಷಯ ವಿನಿಮಯ ಮಾಡಿಕೊಂಡರು.