Tag: Christmas

ಜಿಲ್ಲೆಯ ವಿವಿಧೆಡೆ ಕ್ರಿಸ್‍ಮಸ್ ಸಂಭ್ರಮ  ಬಣ್ಣ ಬಣ್ಣದ ದೀಪಗಳಿಂದ ಮಿನುಗುಟ್ಟಿದ ಚರ್ಚ್‍ಗಳು
ಹಾಸನ

ಜಿಲ್ಲೆಯ ವಿವಿಧೆಡೆ ಕ್ರಿಸ್‍ಮಸ್ ಸಂಭ್ರಮ ಬಣ್ಣ ಬಣ್ಣದ ದೀಪಗಳಿಂದ ಮಿನುಗುಟ್ಟಿದ ಚರ್ಚ್‍ಗಳು

December 26, 2018

ಹಾಸನ: ನಗರದ ವಿವಿಧ ಚರ್ಚ್ ಗಳಲ್ಲಿ ಮಂಗಳವಾರ ಬೆಳಿಗ್ಗೆ ಕ್ರಿಸ್‍ಮಸ್ ಹಬ್ಬವನ್ನು ಸಂಭ್ರಮ, ಭಕ್ತಿ-ಭಾವದಿಂದ ಆಚರಿಸಲಾಯಿತು. ನಗರದ ಎನ್.ಆರ್. ವೃತ್ತ, ಹಳೆ ಮುನ್ಸಿಪಲ್ ಶಾಲೆ ಹಿಂಭಾಗದ ಚರ್ಚ್‍ನಲ್ಲಿ ಮಕ್ಕಳು ಮತ್ತು ಹಿರಿಯರು ಮೇಣದ ಬತ್ತಿ ಇಟ್ಟು ಪ್ರಾರ್ಥಿಸಿದರು. ಅರಸೀಕೆರೆ ವರದಿ: ನಗರದ ರೈಲ್ವೆ ಕಾಲೋನಿ ಯಲ್ಲಿರುವ ಕ್ಯಾಥೋಲಿಕ್ ಚರ್ಚ್‍ನಲ್ಲಿ ಕ್ರಿಸ್ ಮಸ್ ಹಬ್ಬದ ಪ್ರಯುಕ್ತ ವಿಶೇಷ ವಿದ್ಯುತ್ ದೀಪಗಳ ಅಲಂಕಾರವನ್ನು ಮಾಡಲಾಗಿತ್ತು. ಪಾದ್ರಿ ವಿಲಿಯಂ ಅವರ ನೇತೃತ್ವದಲ್ಲಿ ವಿಶೇಷ ಪಾರ್ಥನಾ ಕಾರ್ಯಕ್ರಮಗಳು ನಡೆದವು. ಚರ್ಚಿನ ಆವರಣದಲ್ಲಿ ಸಾಂತಾಕ್ಲಾಸ್…

ಗುಂಡ್ಲುಪೇಟೆಯಲ್ಲಿ ಕ್ರಿಸ್‍ಮಸ್ ಸಡಗರ
ಚಾಮರಾಜನಗರ

ಗುಂಡ್ಲುಪೇಟೆಯಲ್ಲಿ ಕ್ರಿಸ್‍ಮಸ್ ಸಡಗರ

December 26, 2018

ಗುಂಡ್ಲುಪೇಟೆ: ಪಟ್ಟಣ ಮತ್ತು ತಾಲೂಕಿನಾದ್ಯಂತ ಕ್ರೈಸ್ತ ಬಾಂಧವರು ಕ್ರಿಸ್ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿಗಳಿಂದ ಆಚರಿಸಿದರು. ಪಟ್ಟಣದ ನಿರ್ಮಲ ಆಶ್ರಮ ಮತ್ತು ಕಾನ್ವೆಂಟ್, ಊಟಿ ವೃತ್ತ, ಮಡಹಳ್ಳಿ ರಸ್ತೆ ಹಾಗೂ ಜನತಾ ಕಾಲೋನಿಯ ಚರ್ಚು ಗಳಲ್ಲಿ ಸೋಮವಾರ ಸಂಜೆಯಿಂದಲೇ ಸಾಮೂಹಿಕ ಪ್ರಾರ್ಥನೆಯನ್ನು ನೆರ ವೇರಿಸಲಾಯಿತು. ಕ್ರೈಸ್ತ ಆಡಳಿತದ ಶಾಲೆ ಗಳಲ್ಲಿ ವಿದ್ಯಾರ್ಥಿಗಳು ಹಾಗೂ ಪಾಲಕ ರೊಂದಿಗೆ ಕೇಕ್ ಕತ್ತರಿಸಿ ವಿತರಣೆ ಮಾಡಿ ಹಬ್ಬವನ್ನು ಸಂಭ್ರಮದಿಂದ ಆಚರಣೆ ಮಾಡಿ ದರು. ಪಟ್ಟಣದ ಕೇರಳ ರಸ್ತೆಯಲ್ಲಿರುವ ನಿರ್ಮಲ ಆಶ್ರಮದಲ್ಲಿ ಏಸುಕ್ರಿಸ್ತನ ಜನ…

ವೀರಾಜಪೇಟೆಯಲ್ಲಿ ಕ್ರಿಸ್‍ಮಸ್ ಸಂಭ್ರಮ
ಕೊಡಗು

ವೀರಾಜಪೇಟೆಯಲ್ಲಿ ಕ್ರಿಸ್‍ಮಸ್ ಸಂಭ್ರಮ

December 26, 2018

ವೀರಾಜಪೇಟೆ:  ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುವ ಮೂಲಕ ಡಿ.24 ರಂದು ರಾತ್ರಿ ಪ್ರಭು ಏಸು ಕ್ರಿಸ್ತನ ಜನನವನ್ನು ಕೊಂಡಾಡಲಾಯಿತು. ಸಂತ ಅನ್ನಮ್ಮ ದೇವಾಲಯದಲ್ಲಿ ರಾತ್ರಿ 11 ಗಂಟೆಯಿಂದ ಪ್ರಾರಂಭಗೊಂಡ ಗೀತೆಗಾಯನ ದೊಂದಿಗೆ ಬಲಿ ಪೂಜೆ ಯನ್ನು ನೆರವೇರಿಸಲಾಯಿತು. ಈ ಸಂದರ್ಭ ಪ್ರಧಾನ ಧರ್ಮಗುರು ಗಳಾದ ಮದುಲೈ ಮುತ್ತು ಅವರು ತಮ್ಮ ಹಿತವಚನ ನೀಡಿ ಕೊಡಗಿನ ಎಲ್ಲಾ ಜನ ರಲ್ಲಿ ಉತ್ತಮ ಬಾಂಧವ್ಯದಿಂದ ಕ್ರಿಸ್‍ಮಸ್ ಹಬ್ಬವು ಪ್ರತಿಯೊಬ್ಬರಿಗೂ ಶಾಂತಿ…

ಕ್ರೈಸ್ತ ಬಾಂಧವರಿಂದ ಭಕ್ತಿ ಭಾವ, ಸಂಭ್ರಮದ ಕ್ರಿಸ್‍ಮಸ್ ಪ್ರಾರ್ಥನೆ
ಮೈಸೂರು

ಕ್ರೈಸ್ತ ಬಾಂಧವರಿಂದ ಭಕ್ತಿ ಭಾವ, ಸಂಭ್ರಮದ ಕ್ರಿಸ್‍ಮಸ್ ಪ್ರಾರ್ಥನೆ

December 25, 2018

ಮೈಸೂರು: ಸೇಂಟ್ ಫಿಲೋಮಿನಾ ಚರ್ಚ್ ಸೇರಿದಂತೆ ಮೈಸೂರಿನ ವಿವಿಧ ಚರ್ಚ್‍ಗಳಲ್ಲಿ ಸೋಮವಾರ ರಾತ್ರಿಯಿಂದಲೇ ಕ್ರೈಸ್ತ ಬಾಂಧವರ ಪವಿತ್ರ ಹಬ್ಬ ಕ್ರಿಸ್‍ಮಸ್ ಸಂಭ್ರಮ, ಸಡಗರ ಮುಗಿಲು ಮುಟ್ಟಿತ್ತು. ಸೇಂಟ್ ಫಿಲೋ ಮಿನಾ ಚರ್ಚ್‍ನಲ್ಲಿ ಇಂದು ರಾತ್ರಿ 11 ರಿಂದ 12ರ ಸಮಯದಲ್ಲಿ ಕ್ರೈಸ್ತಬಾಂಧವರು ಬಾಲಯೇಸುವಿಗೆ ವಿಶೇಷ ಪೂಜೆ ಸಲ್ಲಿಸಿ, ಭಕ್ತಿಯ ಪರಕಾಷ್ಠೆ ಮೆರೆದರು. ರಾತ್ರಿಯಿಂದಲೇ ವಿವಿಧ ಬಡಾವಣೆಗಳಿಂದ ತಂಡೋಪತಂಡವಾಗಿ ಆಗಮಿಸುತ್ತಿದ್ದ ಕ್ರೈಸ್ತ ಬಾಂಧವರು ಕರೋಲ್ ಗೀತೆಗಳನ್ನು ಹಾಡುತ್ತ, ಯೇಸುವಿನ ಗುಣಗಾನ ಮಾಡಿದರು. ಇದರಿಂದಾಗಿ ಸೇಂಟ್ ಫಿಲೋಮಿನಾ ಚರ್ಚ್ ಆವರಣದಲ್ಲಿ…

Translate »