ವೀರಾಜಪೇಟೆಯಲ್ಲಿ ಕ್ರಿಸ್‍ಮಸ್ ಸಂಭ್ರಮ
ಕೊಡಗು

ವೀರಾಜಪೇಟೆಯಲ್ಲಿ ಕ್ರಿಸ್‍ಮಸ್ ಸಂಭ್ರಮ

December 26, 2018

ವೀರಾಜಪೇಟೆ:  ಸಂತ ಅನ್ನಮ್ಮ ದೇವಾಲಯದಲ್ಲಿ ಕ್ರಿಸ್ ಮಸ್ ಹಬ್ಬವನ್ನು ಶ್ರದ್ಧಾ ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುವ ಮೂಲಕ ಡಿ.24 ರಂದು ರಾತ್ರಿ ಪ್ರಭು ಏಸು ಕ್ರಿಸ್ತನ ಜನನವನ್ನು ಕೊಂಡಾಡಲಾಯಿತು.

ಸಂತ ಅನ್ನಮ್ಮ ದೇವಾಲಯದಲ್ಲಿ ರಾತ್ರಿ 11 ಗಂಟೆಯಿಂದ ಪ್ರಾರಂಭಗೊಂಡ ಗೀತೆಗಾಯನ ದೊಂದಿಗೆ ಬಲಿ ಪೂಜೆ ಯನ್ನು ನೆರವೇರಿಸಲಾಯಿತು.
ಈ ಸಂದರ್ಭ ಪ್ರಧಾನ ಧರ್ಮಗುರು ಗಳಾದ ಮದುಲೈ ಮುತ್ತು ಅವರು ತಮ್ಮ ಹಿತವಚನ ನೀಡಿ ಕೊಡಗಿನ ಎಲ್ಲಾ ಜನ ರಲ್ಲಿ ಉತ್ತಮ ಬಾಂಧವ್ಯದಿಂದ ಕ್ರಿಸ್‍ಮಸ್ ಹಬ್ಬವು ಪ್ರತಿಯೊಬ್ಬರಿಗೂ ಶಾಂತಿ ನೆಮ್ಮದಿಯನ್ನುಂಟುಮಾಡಲಿ ಹಾಗೂ ಕೊಡಗಿನಲ್ಲಿ ಈ ವರ್ಷ ಸುರಿದ ಮಹಾ ಮಳೆಯಿಂದ ಮನೆ ಆಸ್ತಿ ಕಳೆದುಕೊಂಡ ಸಂತ್ರಸ್ತರಿಗೆ ಮೊದಲಿನಂತೆ ಎಲ್ಲಾ ಭೂಮಿ ಆಸ್ತಿಯನ್ನು ದೇವರು ನೀಡುವಂತಾಗಲಿ ಎಂದು ಹಾರೈಸಿದರು.

ಕ್ರಿಸ್‍ಮಸ್ ಆಚರಣೆ ವೇಳೆ ಧರ್ಮ ಗುರು ರೋಶನ್ ಬಾಬು ಮತ್ತು ಇತರ ಧರ್ಮಗುರುಗಳು ಸೇರಿದಂತೆ ಗ್ರಾಮೀಣ ಪ್ರದೇಶದ ಕ್ರೈಸ್ತ ಬಾಂಧವರು ಹಾಗೂ ಸಾರ್ವಜನಿಕರು ಅಧಿಕ ಸಂಖ್ಯೆಯಲ್ಲಿ ನೆರೆದಿದ್ದರು. ಈ ಸಂದರ್ಭ ಭಕ್ತಾದಿಗಳಿಗೆ ಕೇಕ್ ವಿತರಿಸಲಾಯಿತು.

Translate »