ಸೋಮವಾರಪೇಟೆಯಲ್ಲಿ ಪರಿಸರ ಅರಿವು ಮ್ಯಾರಥಾನ್
ಕೊಡಗು

ಸೋಮವಾರಪೇಟೆಯಲ್ಲಿ ಪರಿಸರ ಅರಿವು ಮ್ಯಾರಥಾನ್

December 26, 2018

ಸೋಮವಾರಪೇಟೆ: ಇಲ್ಲಿನ ಪಯೋನಿಯರ್ಸ್ ಟೆನ್ನಿಸ್ ಕ್ಲಬ್ ಆಶ್ರಯ ದಲ್ಲಿ ವಿದ್ಯಾರ್ಥಿಗಳು ಹಾಗೂ ಕ್ಲಬ್‍ನ ಸದಸ್ಯ ರಿಗೆ “ರನ್ನಿಂಗ್ ಫಾರ್ ಎ ಬೆಟರ್ ಟುಮಾರೋ” ಹೆಸರಿನ ಮ್ಯಾರಾಥಾನ್ ನಡೆಯಿತು.ಸಮೀಪದ ಬೇಳೂರು ಬಳಿಯಲ್ಲಿ ಮ್ಯಾರಾ ಥಾನ್‍ಗೆ ಕ್ಲಬ್ ಅಧ್ಯಕ್ಷ ಪಿ.ಕೆ. ರವಿ ಚಾಲನೆ ನೀಡಿದರು. ನಂತರ ಮಾತನಾಡಿ, ಪರಿಸ ರಕ್ಕೆ ಇಂದು ಸಾಕಷ್ಟು ಹಾನಿಯಾಗುತ್ತಿದ್ದು, ಮುಂದಿನ ಪೀಳಿಗೆಗೂ ಉತ್ತಮ ಪರಿಸರ ಉಳಿಸುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿ ಕೊಳ್ಳಲಾಗಿದೆ ಎಂದು ತಿಳಿಸಿದರು.

ಮ್ಯಾರಥಾನ್‍ನ ಪ್ರೌಢಶಾಲಾ ವಿಭಾಗ ದಲ್ಲಿ ಕೃಷ್ಣ (ಪ್ರ) ಶ್ರೇಯಸ್ (ದ್ವಿ) ಹಾಗೂ ನಿಶ್ವಂತ್(ತೃ) ಸ್ಥಾನ ಗಳಿಸಿದರು. ಬಾಲಕೀ ಯರ ವಿಭಾಗದಲ್ಲಿ ಅಂಕಿತ(ಪ್ರ), ದೀಪಿಕ(ದ್ವಿ) ಹಾಗೂ ನಿಶಾ ದಾಸ್ (ತೃ) ಸ್ಥಾನ ಗಳಿಸಿದರು.

ಪಯೋನಿಯರ್ಸ್ ಟಿನ್ನಿಸ್ ಕ್ಲಬ್ ಬಾಲ ಕರ ವಿಭಾಗದಲ್ಲಿ ಎ. ಸವೀನ್ ಪ್ರವೀಣ್(ಪ್ರ), ಪ್ರಥಮ್ ಕಿರಣ್(ದ್ವಿ) ಹಾಗೂ ಸಿದಂಶು (ತೃ) ಸ್ಥಾನ ಗಳಿಸಿದರು. ಬಾಲಕೀಯರ ವಿಭಾಗದಲ್ಲಿ ಸಿಮ್ರಾನ್ ನವೀನ್(ಪ್ರ), ಭೂಮಿಕ(ದ್ವಿ) ಹಾಗೂ ನಿಶ್ಮ(ತೃ) ಸ್ಥಾನ ಗಳಿಸಿದರು.

ಪುರುಷರ ವಿಭಾಗದಲ್ಲಿ ಕೆ.ಡಿ. ಕುಮಾರ್ (ಪ್ರ), ಕೆ.ಟಿ. ಸಂದೀಪ್( ದ್ವಿ) ಹಾಗೂ ಸಿ.ಆರ್. ಪ್ರದೀಪ್ (ತೃ) ಸ್ಥಾನ ಗಳಿಸಿದರು. ಮಹಿಳೆ ಯರ ವಿಭಾಗದಲ್ಲಿ ಬಬಿತಾ ಕುಮಾರ್ (ಪ್ರ), ಅಮೃತಾ ಕಿರಣ್(ದ್ವಿ) ಹಾಗೂ ಪ್ರಜಾ (ತೃ) ಸ್ಥಾನ ಗಳಿಸಿದರು. 18 ವರ್ಷದ ಯುವಕರ ವಿಭಾಗದಲ್ಲಿ ಸತ್ಯಜಿತ್(ಪ್ರ), ಹರ್ಷದೀತ್ ದಾಸ್(ದ್ವಿ) ಹಾಗೂ ಸಿದ್ಧಾರ್ಥ್ ಮತ್ತು ಶ್ರೇಯಸ್ (ತೃ) ಸ್ಥಾನ ಗಳಿಸಿದರು. ಯುವತಿಯರ ವಿಭಾಗದಲ್ಲಿ ರಚನಾ ಹರೀಶ್ (ಪ್ರ), ಶ್ರೇಯ(ದ್ವಿ) ಸ್ಥಾನ ಗಳಿಸಿದರು. 12 ವರ್ಷ ಒಳಪಟ್ಟ ಬಾಲಕರ ವಿಭಾಗದಲ್ಲಿ ಹೃತ್ವಿಕ್ (ಪ್ರ), ಸ್ವಾಗತ್(ದ್ವಿ) ಸ್ಥಾನ ಗಳಿಸಿದರು.

ಕ್ಲಬ್‍ನ ಕಾರ್ಯದರ್ಶಿ ಬಿ. ನವೀನ್, ಕ್ರೀಡಾ ಕಾರ್ಯದರ್ಶಿ ಪ್ರವೀಣ್, ಸಹ ಕಾರ್ಯ ದರ್ಶಿ ಚಂದ್ರಾಜ್, ಖಜಾಂಚಿ ಬಿ.ಎಂ. ಸುದ ರ್ಶನ್, ಪ್ರಮುಖರಾದ ಉದಯ್ ಉದ್ದೂ ರಯ್ಯ, ಎಸ್.ಬಿ. ಯಶ್ವಂತ್, ಬಿ.ಎಸ್. ಅನಂತ್‍ರಾಮ್, ರವೀಂದ್ರ ಸೇರಿದಂತೆ ಕ್ಲಬ್‍ನ ಸದಸ್ಯರು ಪಾಲ್ಗೊಂಡಿದ್ದರು.

Translate »