ಚೌಡ್ಲು ಬೆಟ್ಟಕ್ಕೆ ಬೆಂಕಿ; ಮೂರು ಎಕರೆ ಕುರುಚಲು ಕಾಡು ಭಸ್ಮ
ಕೊಡಗು

ಚೌಡ್ಲು ಬೆಟ್ಟಕ್ಕೆ ಬೆಂಕಿ; ಮೂರು ಎಕರೆ ಕುರುಚಲು ಕಾಡು ಭಸ್ಮ

February 24, 2019

ಸೋಮವಾರಪೇಟೆ: ಸಮೀಪದ ಚೌಡ್ಲು ಬೆಟ್ಟಕ್ಕೆ ಬೆಂಕಿ ಬಿದ್ದು ಸುಮಾರು ಮೂರು ಎಕರೆ ಯಷ್ಟು ಕುರುಚಲು ಕಾಡು ಭಸ್ಮವಾಗಿರುವ ಘಟನೆ ಗುರು ವಾರ ಮಧ್ಯಾಹ್ನ ನಡೆದಿದೆ.

ಚೌಡ್ಲು ಗ್ರಾಮಕ್ಕೆ ಹೊಂದಿ ಕೊಂಡಿರುವ ಬೆಟ್ಟದ ಸುತ್ತ ಬೆಂಕಿ ಹರಡುತ್ತಿರುವು ದನ್ನು ಗಮನಿಸಿದ ಚೌಡ್ಲು ಗ್ರಾಮದ ಮಹೇಶ್ ತಿಮ್ಮಯ್ಯ ಹಾಗು ಅವರ ತಂಡ, ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಸುರೇಶ್ ಶೆಟ್ಟಿ ಹಾಗು ಕಾರ್ಯಕರ್ತರು ಸ್ಥಳಕ್ಕೆ ತೆರಳಿ ಕಾಫಿ ತೋಟಗಳಿಗೆ ಬೆಂಕಿ ಹರಡದಂತೆ ಬೆಂಕಿ ನಂದಿಸಿದ್ದಾರೆ. ನಂತರ ಸ್ಥಳಕ್ಕೆ ಅರಣ್ಯ ಇಲಾಖೆಯ ಸಿಬ್ಬಂದಿಗಳು ತೆರಳಿ ಬೆಂಕಿ ಹರಡದಂತೆ ಕ್ರಮಕೈಗೊಂಡಿದ್ದಾರೆ. ಚೌಡ್ಲು ಗ್ರಾಮಕ್ಕೆ ಹೊಂದಿಕೊಂಡಿರುವ ಬೆಟ್ಟದ ಸುತ್ತ ನೂರಾರು ಎಕರೆಯಷ್ಟು ಕಾಫಿ ತೋಟವಿದ್ದು, ಬಿಸಿಲಿಗೆ ತೋಟಗಳಲ್ಲಿ ತರಗೆಲೆ ಒಣಗಿದ್ದು, ಅಕಸ್ಮಾತ್ ಬೆಂಕಿ ಹತ್ತಿದರೆ, ಭಾರೀ ನಷ್ಟವಾಗುವ ಸಂಭವವಿತ್ತು. ಸ್ವಲ್ಪದರಲ್ಲೇ ಅನಾಹುತ ತಪ್ಪಿದೆ ಎಂದು ಸುರೇಶ್ ಶೆಟ್ಟಿ ಹೇಳಿದ್ದಾರೆ.

Translate »