ಏರ್ ಶೋ ವೇಳೆ ಯಲಹಂಕ ವಾಯು ನೆಲೆಯಲ್ಲಿ ಅಗ್ನಿ ದುರಂತ
ಮೈಸೂರು

ಏರ್ ಶೋ ವೇಳೆ ಯಲಹಂಕ ವಾಯು ನೆಲೆಯಲ್ಲಿ ಅಗ್ನಿ ದುರಂತ

February 24, 2019

ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಏರ್ ಶೋ ಸಮೀಪ ಭಾರೀ ಬೆಂಕಿ ಅವಘಡ ಸಂಭವಿಸಿ, ನೂರಾರು ಕೋಟಿ ರೂ. ಮೌಲ್ಯದ ಕಾರು ಮತ್ತು ದ್ವಿಚಕ್ರ ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿವೆ.

ಗೇಟ್ ನಂಬರ್ 5ರ ಬಳಿ ಶನಿವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಅನಾ ಹುತ ಸಂಭವಿಸುತ್ತಿ ದ್ದಂತೆ ಬೆಂಗಳೂರು ನಗರದ ವಿವಿಧೆಡೆ ಹಾಗೂ ಸಮೀಪದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ 25ಕ್ಕೂ ಹೆಚ್ಚು ಅಗ್ನಿ ಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಏಕಕಾಲದಲ್ಲಿ ಬೆಂಕಿ ನಂದಿಸುವ ಕಾರ್ಯ ನಡೆಸಿದವು. ಆದರೂ, ಭಾರೀ ಗಾಳಿ ಬೀಸುತ್ತಿದ್ದ ರಿಂದ ಅಗ್ನಿಶಾಮಕದಳದವರು ಬೆಂಕಿ ನಂದಿಸಲು ಸುದೀರ್ಘ ಕಾಲ ಕ್ರಮಿಸಬೇಕಾಯಿತು. ಬೆಂಕಿಯ ಜ್ವಾಲೆ ಕಾರಿನಿಂದ ಕಾರಿಗೆ ದೊಡ್ಡ ಪ್ರಮಾಣದ ನಷ್ಟಕ್ಕೆ ಕಾರಣವಾಯಿತು. ಕರ್ನಾಟಕದಲ್ಲಿ ಇತ್ತೀಚೆಗೆ ನಡೆದ ದೊಡ್ಡ ಅಗ್ನಿ ದುರಂತ ವಾಗಿದ್ದರೂ, ಯಾವುದೇ ಸಾವು-ನೋವು ಸಂಭವಿಸಿಲ್ಲ. ಘಟನೆಗೆ ಸಂಬಂಧಿಸಿದಂತೆ ಗೃಹ ಸಚಿವ ಎಂ.ಬಿ. ಪಾಟೀಲ್ ತನಿಖೆಗೆ ಆದೇಶಿಸಿದ್ದರೆ, ಇದರ ಮಧ್ಯೆಯೇ ಕೇಂದ್ರ ಸರ್ಕಾರ ಅಗ್ನಿ ದುರಂತಕ್ಕೆ ಸಂಬಂಧಿಸಿದಂತೆ ವರದಿ ಕೇಳಿದೆ. ವಾಯುನೆಲೆ ಯಲ್ಲಿ ಏರೋ ಇಂಡಿಯಾ ತಾಲೀಮು ವೇಳೆ ಸೂರ್ಯ ಕಿರಣ್ ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಪೈಲಟ್ ಮೃತ ಪಟ್ಟಿದ್ದ ಬೆನ್ನಲ್ಲೇ ಈ ದುರ್ಘಟನೆ ನಡೆದಿದೆ.

ಇದರ ಪರಿಣಾಮ ಕೆಲ ಕಾಲ ಏರ್ ಶೋ ಸ್ಥಗಿತಗೊಳಿಸ ಲಾಗಿತ್ತು. ಅಗ್ನಿ ಶಾಮಕ ಇಲಾಖೆ ತನಿಖೆ ಆರಂಭಿ ಸಿದ್ದು, ಕಿಡಿಗೇಡಿಗಳು ಸಿಗರೇಟ್ ಸೇದಿ ಒಣ ಹುಲ್ಲಿನ ಮೇಲೆ ಎಸೆದ ಪರಿಣಾಮ ಅಗ್ನಿ ಸಂಭವಿಸಿದೆಯೇ ಇಲ್ಲವೆ, ಬಿಸಿಲಿನ ಬೇಗೆಗೆ ಒಣ ಹುಲ್ಲು ಹೊತ್ತಿಕೊಂಡು ಈ ಘಟನೆ ನಡೆದಿದೆಯೇ ಅಥವಾ ಯಾವುದಾದರೂ ಕಾರಿನ ಇಂಜಿನ್ ಸ್ಫೋಟಗೊಂಡು ಈ ದುರ್ಘಟನೆ ನಡೆದಿದೆಯೇ ಎಂಬುದರ ಬಗ್ಗೆ ತನಿಖೆ ಆರಂಭ ಗೊಂಡಿದೆ. ಗೇಟ್ ನಂಬರ್ 5ರಲ್ಲಿ ಸಂಭವಿಸಿದ ಭಾರೀ ಅಗ್ನಿ ಅನಾಹುತದಿಂದಾಗಿ ಪಾರ್ಕಿಂಗ್ ಬಳಿ ನಿಲ್ಲಿಸಿದ್ದ ಕಾರುಗಳು ಒಂದೊಂದಾಗಿಯೇ ಸುಟ್ಟು ಕರಕಲಾಗ ತೊಡಗಿದ್ದವು. ಈ ಸಂದರ್ಭದಲ್ಲಿ ಸಿಲಿಂಡರ್ ಹೊಂದಿದ್ದ ಕಾರುಗಳ ಸ್ಫೋಟ ದಿಂದಾಗಿ ಅಧಿಕ ಕಾರುಗಳು ಬೆಂಕಿಗಾಹುತಿಯಾದವು. ಈ ಶಬ್ದಕ್ಕೆ ಬೆಚ್ಚಿಬಿದ್ದ ಜನರು ದಿಕ್ಕಾಪಾಲಾಗಿ ಓಡತೊಡಗಿದ್ದರೆಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಕೊನೆಯ ಎರಡು ದಿನವಾದ ಇಂದು ಮತ್ತು ನಾಳೆ ಸಾರ್ವಜನಿಕರ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗಿತ್ತು. ಲೋಹದ ಹಕ್ಕಿಗಳನ್ನು ಕಾತುರದಿಂದ ನೋಡಲು ಮಕ್ಕಳನ್ನೂ ಕರೆದುಕೊಂಡು ಬಂದಿದ್ದ ಪೋಷಕರು ವಿಮಾನ ಹಾರಾಟ ನೋಡು ನೋಡುತ್ತಿದ್ದಂತೆ ಬಾನಿನಲ್ಲಿ ಕಪ್ಪು ಮೋಡ ಕವಿದಿದ್ದನ್ನು ಕಂಡು ದಿಗ್ಭ್ರಾಂತರಾದರು.

ಆದರೆ ಸ್ವಲ್ಪ ಸಮಯದ ನಂತರ ತಮ್ಮ ಕಾರುಗಳು ಸುಟ್ಟು ಬೆಂಕಿಯ ಜ್ವಾಲೆ ಆವರಿಸಿದೆ ಎಂದು ಏರ್ ಶೋ ಬಿಟ್ಟು ತಮ್ಮ ಕಾರುಗಳನ್ನು ಬಚಾವು ಮಾಡಲು ಮುಂದಾದರು. ಅಷ್ಟರಲ್ಲೇ ಕಾರುಗಳು ಸುಟ್ಟು ಕರಕಲಾಗಿದ್ದವು. ಬೆಂಕಿ ಸಂಭವಿಸುತ್ತಿದ್ದಂತೆ ಸ್ಥಳಕ್ಕೆ ಬಂದ ಅಗ್ನಿ ಶಾಮಕ ಸಿಬ್ಬಂದಿ ಮತ್ತು ಪೊಲೀಸರು ಮುಂದಿನ ಸಾಲಿನ ಅಳಿದುಳಿದ ಕಾರುಗಳ ಗಾಜುಗಳನ್ನು ಒಡೆದು, ಹೊರಕ್ಕೆ ತರುವ ಪ್ರಯತ್ನ ಮಾಡಿದರು. ಇದರಿಂದ ಒಂದಿಷ್ಟು ಮಾಲೀಕರು ಉಸಿರಾಡುವಂತಾಯಿತು.

Translate »