ಬೆಂಗಳೂರು: ಯಲಹಂಕ ವಾಯುನೆಲೆಯಲ್ಲಿ ನಡೆಯುತ್ತಿರುವ ಏರೋ ಇಂಡಿಯಾ ಏರ್ ಶೋ ಸಮೀಪ ಭಾರೀ ಬೆಂಕಿ ಅವಘಡ ಸಂಭವಿಸಿ, ನೂರಾರು ಕೋಟಿ ರೂ. ಮೌಲ್ಯದ ಕಾರು ಮತ್ತು ದ್ವಿಚಕ್ರ ವಾಹನಗಳು ಬೆಂಕಿಯ ಕೆನ್ನಾಲಿಗೆಗೆ ಸಿಲುಕಿ ಭಸ್ಮವಾಗಿವೆ. ಗೇಟ್ ನಂಬರ್ 5ರ ಬಳಿ ಶನಿವಾರ ಮಧ್ಯಾಹ್ನ ಅಗ್ನಿ ಅವಘಡ ಸಂಭವಿಸಿದ್ದು, 300ಕ್ಕೂ ಹೆಚ್ಚು ಕಾರುಗಳು ಸುಟ್ಟು ಭಸ್ಮವಾಗಿವೆ. ಬೆಂಕಿ ಅನಾ ಹುತ ಸಂಭವಿಸುತ್ತಿ ದ್ದಂತೆ ಬೆಂಗಳೂರು ನಗರದ ವಿವಿಧೆಡೆ ಹಾಗೂ ಸಮೀಪದ ದೇವನಹಳ್ಳಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿದ್ದ 25ಕ್ಕೂ ಹೆಚ್ಚು…
ಬೆಂಗಳೂರಲ್ಲಿ ಲೋಹದ ಹಕ್ಕಿಗಳ ಹಾರಾಟ `ಏರ್ ಶೋ’ಗೆ ಚಾಲನೆ!
February 21, 2019ಬೆಂಗಳೂರು: ಸೂರ್ಯಕಿರಣ್ ಆಗಸದಿಂದ ಧರೆಗುರುಳಿದ ಕಹಿ ನೆನಪಿನ ನಡುವೆ ಇಂದು ಏರ್ ಶೋ-2019ಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ಯಲಹಂಕ ವಾಯು ನೆಲೆಯಲ್ಲಿ ದೇಶ-ವಿದೇಶದ ಯುದ್ಧ ವಿಮಾನಗಳ ಸಾಹಸದ ನಡುವೆಯೇ ನಭೋ ಮಂಡಲದಲ್ಲಿ ತ್ರಿವರ್ಣ ಧ್ವಜದ ಚಿತ್ತಾರ ಮೂಡಿಸುತ್ತಿದ್ದ ಸೂರ್ಯ ಕಿರಣ್ ಇಲ್ಲದೆಯೇ ಈ ಬಾರಿಯ ಏರ್ ಶೋ ಆರಂಭಗೊಂಡಿದೆ. ಆಗಸದಲ್ಲಿ ಯುದ್ಧ ವಿಮಾನಗಳ ಘರ್ಜನೆ ಕಿವಿಗಡಚಿಕ್ಕುವಂತಿತ್ತು. ಗ್ಲೋಬ್ ಮಾಸ್ಟರ್ ದೈತ್ಯ ವಿಮಾನ, ಎಚ್‍ಎಎಲ್‍ನ ಅತ್ಯಂತ ಪುಟ್ಟ ವಿಮಾನಗಳು ಸ್ವೀಡನ್ ಗ್ರೈಪೇನ್ ಯುದ್ಧ ವಿಮಾನಗಳು ವಿವಿಧ ಸಾಹಸ ಪ್ರದರ್ಶನಗಳ…
ಯುದ್ಧ ವಿಮಾನಗಳು ಪರಸ್ಪರ ಡಿಕ್ಕಿ: ಪೈಲಟ್ ಸಾವು
February 20, 2019ಬೆಂಗಳೂರು: ಯಲಹಂಕದ ವಾಯುನೆಲೆಯಲ್ಲಿ ಏರ್ ಶೋ ತಾಲೀಮಿನಲ್ಲಿ ತೊಡಗಿಕೊಂಡಿದ್ದ ಎರಡು ಯುದ್ಧವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು, ಒಬ್ಬ ಪೈಲಟ್ ಸ್ಥಳ ದಲ್ಲೇ ಸಾವನ್ನಪ್ಪಿದ್ದು, ಇನ್ನಿಬ್ಬರು ಪ್ರಾಣಾ ಪಾಯದಿಂದ ಪಾರಾಗಿದ್ದಾರೆ. ನಾಳೆಯಿಂದ ಆರಂಭಗೊಳ್ಳಲಿರುವ ಏರ್ ಶೋಗೆ ವಾಯು ಸೇನೆಗೆ ಸೇರಿದ ಸೂರ್ಯ ಕಿರಣ್ ಲಘು ಯುದ್ಧ ವಿಮಾನಗಳು ಯಲಹಂಕ ಸಮೀಪದ ಘಂಟಿ ಗಾನಹಳ್ಳಿ ಬಳಿ ತಾಲೀಮಿನಲ್ಲಿ ನಿರತವಾಗಿದ್ದ ಸಂದರ್ಭದಲ್ಲಿ ಏಕಾಏಕಿ ಪರಸ್ಪರ ಡಿಕ್ಕಿ ಹೊಡೆದುಕೊಂಡವು. ತಕ್ಷಣವೇ ವಿಮಾನಗಳು ಭೂಮಿಗೆ ಅಪ್ಪಳಿಸಿದವು. ಆದರೆ ಈ ಸಂದರ್ಭದಲ್ಲಿ ಎರಡೂ ವಿಮಾನಗಳ ಪೈಲಟ್‍ಗಳು…
ಬೆಂಗಳೂರು ಏರ್ ಶೋ ಮೇಲೆ ಉಗ್ರರ ಕರಿನೆರಳು ಸಾಧ್ಯತೆ: ಪೊಲೀಸರು ಹೈ ಅಲರ್ಟ್
February 19, 2019ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ನಡೆದ ಉಗ್ರರ ದಾಳಿಯ ಎಫೆಕ್ಟ್ ಬೆಂಗಳೂರಿನಲ್ಲಿ ನಡೆಯೋ ಏರ್ ಶೋ ಗೂ ತಟ್ಟಿದೆ. ಫೆ. 20 ರಿಂದ ನಗ ರದ ಯಲಹಂಕದಲ್ಲಿ ನಡೆಯುವ ಏರ್ ಶೋಗೆ ಇನ್ನಿಲ್ಲದ ಭದ್ರತೆ ಜೊತೆಗೆ ಐಬಿ, ಏರ್‍ಫೆÇೀರ್ಸ್ ಇಂಟಲಿಜನ್ಸ್, ಸ್ಟೇಟ್ ಇಂಟಲಿಜನ್ಸ್, ಬೆಂಗಳೂರು ಪೆÇಲೀಸರು ಸೇರಿ ದಂತೆ ವಿವಿಧ ಟೀಂಗಳು ಸಿಲಿಕಾನ್ ಸಿಟಿ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಿವೆ. ಉಗ್ರರ ಕರಿನೆರಳು ಬೀಳುವ ಸಾಧ್ಯತೆ ಇದ್ದು, ಈಗಾಗಲೇ ಬೆಂಗಳೂರು ಪೆÇಲೀಸರು ಅಲರ್ಟ್…
ಬೆಂಗಳೂರಿನಲ್ಲೇ ಏರೋ ಇಂಡಿಯಾ 2019
September 9, 2018ಬೆಂಗಳೂರು: ಕರ್ನಾಟಕ ರಾಜ್ಯದ ಪ್ರತಿಷ್ಠೆ ಎಂದೇ ಹೇಳಲಾಗುತ್ತಿರುವ ‘ಏರೋ ಇಂಡಿಯಾ 2019’ನ್ನು ಬೆಂಗಳೂರಿನಲ್ಲಿಯೇ ನಡೆಸಲಾಗುತ್ತದೆ ಎಂದು ಕೇಂದ್ರ ಸರ್ಕಾರ ಶನಿವಾರ ಸ್ಪಷ್ಟಪಡಿಸಿದೆ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪ್ರತೀವರ್ಷ ನಡೆಸಲಾಗುತ್ತಿದ್ದ ವೈಮಾನಿಕ ಪ್ರದರ್ಶನ ಏರೋ ಇಂಡಿಯಾವನ್ನು ಈ ಬಾರಿ ಉತ್ತರ ಪ್ರದೇಶದ ಲಖನೌಗೆ ಸ್ಥಳಾಂತರ ಮಾಡಲಾಗುತ್ತಿದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಇದಕ್ಕೆ ರಾಜ್ಯ ತೀವ್ರ ವಿರೋಧ ವ್ಯಕ್ತಪಡಿಸಿತ್ತು. ಇದಕ್ಕೆ ಇಂಬು ನೀಡುವಂತೆ ಇತ್ತೀಚೆಗಷ್ಟೇ ಬೆಂಗಳೂರಿಗೆ ಭೇಟಿ ನೀಡಿದ್ದ ರಕ್ಷಣಾ ಸಚಿವೆ ಸೀತಾರಾಮನ್ ಅವರು ಕೂಡ ಹೇಳಿಕೆಯನ್ನು ನೀಡಿದ್ದರು….