ಬೆಂಗಳೂರು ಏರ್ ಶೋ ಮೇಲೆ ಉಗ್ರರ ಕರಿನೆರಳು ಸಾಧ್ಯತೆ: ಪೊಲೀಸರು ಹೈ ಅಲರ್ಟ್
ಮೈಸೂರು

ಬೆಂಗಳೂರು ಏರ್ ಶೋ ಮೇಲೆ ಉಗ್ರರ ಕರಿನೆರಳು ಸಾಧ್ಯತೆ: ಪೊಲೀಸರು ಹೈ ಅಲರ್ಟ್

February 19, 2019

ಬೆಂಗಳೂರು: ಜಮ್ಮು ಕಾಶ್ಮೀರದ ಪುಲ್ವಾಮಾ ದಲ್ಲಿ ನಡೆದ ಉಗ್ರರ ದಾಳಿಯ ಎಫೆಕ್ಟ್ ಬೆಂಗಳೂರಿನಲ್ಲಿ ನಡೆಯೋ ಏರ್ ಶೋ ಗೂ ತಟ್ಟಿದೆ. ಫೆ. 20 ರಿಂದ ನಗ ರದ ಯಲಹಂಕದಲ್ಲಿ ನಡೆಯುವ ಏರ್ ಶೋಗೆ ಇನ್ನಿಲ್ಲದ ಭದ್ರತೆ ಜೊತೆಗೆ ಐಬಿ, ಏರ್‍ಫೆÇೀರ್ಸ್ ಇಂಟಲಿಜನ್ಸ್, ಸ್ಟೇಟ್ ಇಂಟಲಿಜನ್ಸ್, ಬೆಂಗಳೂರು ಪೆÇಲೀಸರು ಸೇರಿ ದಂತೆ ವಿವಿಧ ಟೀಂಗಳು ಸಿಲಿಕಾನ್ ಸಿಟಿ ಮೇಲೆ ಹದ್ದಿನ ಕಣ್ಣಿಟ್ಟಿದ್ದು, ಈಗಾಗಲೇ ಕಾರ್ಯಾಚರಣೆ ಪ್ರಾರಂಭಿಸಿವೆ. ಉಗ್ರರ ಕರಿನೆರಳು ಬೀಳುವ ಸಾಧ್ಯತೆ ಇದ್ದು, ಈಗಾಗಲೇ ಬೆಂಗಳೂರು ಪೆÇಲೀಸರು ಅಲರ್ಟ್ ಆಗಿದ್ದಾರೆ. ಏರ್ ಶೋ ನಡೆ ಯುವ ಸುತ್ತಮುತ್ತಲಿನ ಪೆÇಲೀಸ್ ಠಾಣೆಗಳಾದ ಯಲಹಂಕ, ಯಲ ಹಂಕ ನ್ಯೂ ಟೌನ್, ಬಾಗಲೂರು, ಚಿಕ್ಕಜಾಲ ಸೇರಿದಂತೆ 4 ಪೆÇಲೀಸ್ ಠಾಣಾ ವ್ಯಾಪ್ತಿಯ ಎಲ್ಲಾ ಪೆÇಲೀಸ್ ಠಾಣಾ ವ್ಯಾಪ್ತಿಗಳ, ಪಿಜಿಗಳು, ಅಪಾರ್ಟ್‍ಮೆಂಟ್‍ಗಳು, ನಿರ್ಮಾಣ ಹಂತದ ಕಟ್ಟಡ ಮಾಲೀಕರಿಗೆ ಹೊಸದಾಗಿ ಬಂದು ನೆಲೆಸಿರುವ ವ್ಯಕ್ತಿಗಳ ಪೂರ್ಣ ಮಾಹಿತಿ ಕೊಡು ವಂತೆ ನೋಟಿಸ್ ನೀಡಿದ್ದಾರೆ. ನಗರದಲ್ಲಿ ಎಲ್ಲ ಅನುಮಾನಾಸ್ಪದ ವ್ಯಕ್ತಿಗಳ ಮೇಲೂ ಪೆÇಲೀಸರು ಮತ್ತು ತನಿಖಾಧಿಕಾರಿಗಳು ಕಣ್ಣಿಟ್ಟಿದ್ದಾರೆ. ಎನ್‍ಐಎ ಸೇರಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆಗಳ ಜೊತೆ ಸಂಪರ್ಕದಲ್ಲಿದ್ದಾರೆ.

Translate »