ಬಿಎಸ್‍ಎನ್‍ಎಲ್ ನೌಕರರ ಮುಷ್ಕರ
ಮೈಸೂರು

ಬಿಎಸ್‍ಎನ್‍ಎಲ್ ನೌಕರರ ಮುಷ್ಕರ

February 19, 2019

ಮೈಸೂರು: ವೇತನ ಹೆಚ್ಚಳ, 4ಜಿ ಸ್ಪೆಕ್ಟ್ರಮ್ ಹಂಚಿಕೆ ಸೇರಿದಂತೆ ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸು ವಂತೆ ಆಗ್ರಹಿಸಿ ಭಾರತೀಯ ಸಂಚಾರ ನಿಗಮ ಲಿಮಿಟೆಡ್ (ಬಿಎಸ್‍ಎನ್‍ಎಲ್) ನೌಕರರು ಇಂದಿನಿಂದ ಮೂರು ದಿನಗಳ ಮುಷ್ಕರ ಆರಂಭಿಸಿದ್ದಾರೆ. ಆಲ್ ಯೂನಿಯನ್ಸ್ ಅಂಡ್ ಅಸೋಸಿ ಯೇಷನ್ಸ್ ಆಫ್ ಬಿಎಸ್‍ಎನ್‍ಎಲ್ (ಎಯುಎಬಿ) ಮುಷ್ಕರಕ್ಕೆ ಕರೆ ನೀಡಿರುವ ಹಿನ್ನೆಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಹಾಗೂ ನಜರ್‍ಬಾದ್‍ನಲ್ಲಿರುವ ಬಿಎಸ್‍ಎನ್‍ಎಲ್ ಕಚೇರಿಗಳ ಬಳಿ ನೌಕರರು ಪ್ರತಿಭಟನಾ ಧರಣಿ ನಡೆಸಿದರು. ಶೇ.15 ರಷ್ಟು ವೇತನ ಹೆಚ್ಚಿಸಬೇಕು. ಮ್ಯಾನೇಜ್‍ಮೆಂಟ್ ನೀಡಿರುವ ಪ್ರಸ್ತಾವನೆಯಂತೆ ಬಿಎಸ್‍ಎನ್‍ಎಲ್‍ಗೆ 4ಜಿ ಸ್ಪೆಕ್ಟ್ರಮ್ ಹಂಚಿಕೆ ಮಾಡಿ ಸಂಪರ್ಕ ಜಾಲ ವಿಸ್ತರಿಸಬೇಕು. ಸರ್ಕಾರಿ ನಿಯಮ ದಂತೆ ಪಿಂಚಣಿ ನೀಡಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಹಾಗೂ ಮೊಬೈಲ್ ಟವರ್‍ಗಳ ಆಪರೇಷನ್ ಮತ್ತು ನಿರ್ವಹಣೆ ಜವಾಬ್ದಾರಿಯನ್ನು ಸಂಸ್ಥೆಯೇ ಮಾಡ ಬೇಕೇಂದು ಧರಣಿನಿರತರು ಒತ್ತಾಯಿಸುತ್ತಿದ್ದರು. ಬಿಎಸ್‍ಎನ್‍ಎಲ್ ನೌಕರರಿಗೆ ಸೇವಾ ಭದ್ರತೆ ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು. ಮುಷ್ಕರದ ಅವಧಿಯೊಳಗೆ ಬೇಡಿಕೆ ಈಡೇರಿಸದಿದ್ದಲ್ಲಿ ತೀವ್ರ ಸ್ವರೂಪದ ಪ್ರತಿಭಟನೆ ನಡೆಸಲಾಗುವುದು ಎಂದೂ ನೌಕರರು ಎಚ್ಚರಿಕೆ ನೀಡಿದರು. ನಾಗೇಂದ್ರ, ಆರ್. ಗಣೇಶ್, ಎನ್. ಸುಬ್ರಹ್ಮಣ್ಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೈಸೂರು ನಗರ ಮತ್ತು ಜಿಲ್ಲೆಯ 100ಕ್ಕೂ ಹೆಚ್ಚು ನೌಕರರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಪರಿಣಾಮ ಬಿಎಸ್‍ಎನ್‍ಎಲ್ ಕಚೇರಿಗಳು, ಸೇವಾ ಕೇಂದ್ರಗಳಲ್ಲಿ ಕೆಲಸ ಸ್ಥಗಿತಗೊಂಡಿದ್ದು, ಗ್ರಾಹಕರ ಸ್ಥಿರ ಹಾಗೂ ಮೊಬೈಲ್ ಸಂಪರ್ಕ ಸೇವೆ ಮೇಲೆ ವ್ಯತಿರಿಕ್ತ ಪರಿಣಾಮ ಉಂಟಾಗಿದೆ. ಜಯಲಕ್ಷ್ಮಿಪುರಂ ಹಾಗೂ ನಜರ್‍ಬಾದ್ ಠಾಣೆಗಳ ಪೊಲೀಸರು ಧರಣಿ ನಿರತ ಸ್ಥಳಗಳಲ್ಲಿ ಬಂದೋಬಸ್ತ್ ವ್ಯವಸ್ಥೆ ಮಾಡಿದ್ದಾರೆ.

Translate »