ಶಾಂತಿ ಇಲ್ಲದ ಮೇಲೆ ‘ಪೀಸ್ ಬಸ್ ಸೇವೆ’ಗೂ ಅರ್ಥವಿಲ್ಲ:  ಭಾರತ-ಪಾಕ್ ನಡುವಿನ ಬಸ್ ಸಂಚಾರ ಸ್ಥಗಿತ!
ಮೈಸೂರು

ಶಾಂತಿ ಇಲ್ಲದ ಮೇಲೆ ‘ಪೀಸ್ ಬಸ್ ಸೇವೆ’ಗೂ ಅರ್ಥವಿಲ್ಲ: ಭಾರತ-ಪಾಕ್ ನಡುವಿನ ಬಸ್ ಸಂಚಾರ ಸ್ಥಗಿತ!

February 19, 2019

ಶ್ರೀನಗರ: ಪುಲ್ವಾಮ ಭಯೋತ್ಪಾದಕ ದಾಳಿಯ ನಂತರ ಭಾರತ ಎಲ್ಲೆಲ್ಲಿ ಸಾಧ್ಯವಾಗುತ್ತದೋ ಅಲ್ಲೆಲ್ಲಾ ಪಾಕಿಸ್ತಾನದ ಉಸಿರುಕಟ್ಟಿಸುವ ಕೆಲಸ ಮಾಡುತ್ತಿದೆ. ಒಂದೆಡೆ ವ್ಯಾಪಾರ ವಹಿವಾಟುಗಳ ವಿಷಯದಲ್ಲಿ ಪಾಕಿಸ್ತಾನಕ್ಕೆ ಹೊಡೆತ ನೀಡುತ್ತಿದ್ದರೆ. ಮತ್ತೊಂದೆಡೆ ಭಾರತ-ಪಾಕ್ ನಡುವೆ ಸೌಹಾರ್ದತೆಗಾಗಿ ಪ್ರಾರಂಭಿಸಲಾಗಿದ್ದ ಪೀಸ್ ಬಸ್ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ. ವಾರಕ್ಕೆ ಒಮ್ಮೆ ಸಂಚರಿಸುತ್ತಿದ್ದ ಶ್ರೀನಗರ-ಮುಜಾಫರಾಬಾದ್ ನಡುವಿನ ಬಸ್ ಸಂಪರ್ಕವನ್ನು ಸಂಪೂರ್ಣ ಸ್ಥಗಿತಗೊಳಿಸಲಾಗಿದ್ದು ಪಾಕಿಸ್ತಾನಕ್ಕೆ ಮತ್ತೊಂದು ಹೊಡೆತ ನೀಡಲಾಗಿದೆ. ಇದರ ಜೊತೆಗೆ ಪೂಂಚ್ ಜಿಲ್ಲೆಯಿಂದ ಪಾಕಿಸ್ತಾನದೊಂದಿಗೆ ನಡೆಯುತ್ತಿದ್ದ ವ್ಯಾಪಾರವನ್ನೂ ಸಹ ಸ್ಥಗಿತಗೊಳಿಸಲಾಗಿದೆ.

Translate »