ಆನ್‍ಲೈನ್ ಮೂಲಕ ನಕ್ಷೆ  ಅನುಮೋದನೆ ವ್ಯವಸ್ಥೆ ಮಾಡಿ
ಮೈಸೂರು

ಆನ್‍ಲೈನ್ ಮೂಲಕ ನಕ್ಷೆ ಅನುಮೋದನೆ ವ್ಯವಸ್ಥೆ ಮಾಡಿ

February 19, 2019

ಮೈಸೂರು: ಕಟ್ಟಡಗಳ ನಕ್ಷೆ ಅನು ಮೋದನೆ [Building Plan Approval] ಪ್ರಕ್ರಿಯೆಗೆ ಆನ್‍ಲೈನ್ ಪದ್ಧತಿ ಜಾರಿಗೆ ತನ್ನಿ ಎಂದು ಮೈಸೂರು ಮಹಾನಗರ ಪಾಲಿಕೆ ನೂತನ ಆಯುಕ್ತರಾದ ಶಿಲ್ಪಾನಾಗ್ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಭಾನುವಾರ ಮಧ್ಯಾಹ್ನವಷ್ಟೇ ಅಧಿಕಾರ ವಹಿಸಿಕೊಂಡಿದ್ದ ಅವರು, ಇಂದು ಪಾಲಿಕೆ ಹಳೇ ಕೌನ್ಸಿಲ್ ಸಭಾಂಗಣದಲ್ಲಿ ಅಧಿಕಾರಿಗಳೊಂ ದಿಗೆ ಪ್ರಥಮ ಸಭೆ ನಡೆಸಿದರು. ಮೊದಲು ಎಲ್ಲಾ ಅಧಿಕಾರಿ ಗಳನ್ನು ಪರಿಚಯ ಮಾಡಿಕೊಂಡ ಅವರು, ಮೈಸೂರು ಮಹಾನಗರ ಪಾಲಿಕೆ ಕಾರ್ಯ ವ್ಯಾಪ್ತಿ, ಯಾವ ಯಾವ ವಿಭಾಗಗಳಿವೆ, ಎಷ್ಟು ಮಂದಿ ಅಧಿಕಾರಿಗಳು ಹಾಗೂ ಸಪೋರ್ಟಿಂಗ್ ಸ್ಟಾಫ್‍ಗಳ ಕಾರ್ಯವೈಖರಿ ಕುರಿತಂತೆ ಅಗತ್ಯ ಮಾಹಿತಿ ಪಡೆದುಕೊಂಡರು.

ನಗರ ಯೋಜನಾ ಶಾಖೆಯಲ್ಲಿ ಕಟ್ಟಡಗಳಿಗೆ ಪ್ಲಾನ್ ಅಪ್ರೂವಲ್ ಮತ್ತು ಲೈಸೆನ್ಸ್ ನೀಡುವುದಕ್ಕೆ ಆನ್‍ಲೈನ್ ವ್ಯವಸ್ಥೆ ಮಾಡಿ ಸಾರ್ವಜನಿಕರು ಅಗತ್ಯ ದಾಖಲೆ ಗಳೊಂ ದಿಗೆ ಆನ್‍ಲೈನ್ ನಲ್ಲೇ ಅರ್ಜಿ ಸಲ್ಲಿಸಿ, ಲೈಸೆನ್ಸ್ ಪಡೆ ಯಲು ಅನುಕೂಲ ಮಾಡಿಕೊಡಬೇಕು ಎಂದು ಶಿಲ್ಪಾನಾಗ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಮೈಸೂರು ನಗರ ನಿರ್ವಹಣೆಗೆ ಖರ್ಚಾಗುವ ಹಣ ಹಾಗೂ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಆರ್ಥಿಕ ಸಂಪ ನ್ಮೂಲ ಗಳ ಸ್ಥೂಲ ಪರಿಚಯ ಮಾಡಿಕೊಂಡ ಅವರು ನಾಗರಿಕ ರಿಗೆ ಉತ್ತಮ ಹಾಗೂ ತ್ವರಿತ ಸೌಲಭ್ಯ ನೀಡುವುದು ಪಾಲಿಕೆ ಆದ್ಯ ಕರ್ತವ್ಯವಾಗಿರುವುದರಿಂದ ಸಂಪನ್ಮೂಲ ಕ್ರೊಢೀ ಕರಣಕ್ಕೂ ಒತ್ತು ನೀಡಬೇಕಾಗಿದೆ ಎಂದು ಸಲಹೆ ನೀಡಿದರು.

ಬೇಸಿಗೆ ಆರಂಭವಾಗಿರುವುದರಿಂದ ಕುಡಿಯುವ ನೀರು ಸರಬರಾಜಿಗೆ ಒತ್ತು ನೀಡಿ, ಸ್ವಚ್ಛತೆ, ಒಳಚರಂಡಿ, ಬೀದಿ ದೀಪ ನಿರ್ವಹಣೆಯಲ್ಲಿ ಲೋಪವಾಗದಂತೆ ನೋಡಿ ಕೊಳ್ಳಿ. ಲೋಕಸಭಾ ಚುನಾವಣೆ ಸಮೀಪಿಸುತ್ತಿರುವುದ ರಿಂದ ಪ್ರಗತಿಯಲ್ಲಿರುವ ಕಾಮಗಾರಿಗಳನ್ನು ಶೀಘ್ರ ಪೂರ್ಣ ಗೊಳಿಸಿ ಎಂದು ನೂತನ ಆಯುಕ್ತರು ತಾಕೀತು ಮಾಡಿದರು.

ಲ್ಯಾನ್ಸ್‍ಡೌನ್ ಮತ್ತು ದೇವರಾಜ ಮಾರುಕಟ್ಟೆ ಕಟ್ಟಡ ಗಳ ಸ್ಥಿತಿ-ಗತಿಗಳು, ಈವರೆಗೆ ನಡೆದಿರುವ ಬೆಳವಣಿಗೆ ಗಳು, ತಜ್ಞರ ಸಮಿತಿಗಳು ನೀಡಿರುವ ವರದಿಗಳ ಬಗ್ಗೆಯೂ ಇಂಜಿನಿಯರ್‍ಗಳಿಂದ ತಿಳಿದುಕೊಂಡ ಶಿಲ್ಪಾನಾಗ್ ಅವರು, ಎಲ್ಲಾ ವಲಯ ಕಚೇರಿಗಳಲ್ಲಿ ಸಾರ್ವಜನಿಕರ ಸಮಸ್ಯೆ ಗಳು, ಅರ್ಜಿಗಳಿಗೆ ಸ್ಪಂದಿಸಿ ತ್ವರಿತಗತಿಯಲ್ಲಿ ವಿಲೇವಾರಿ ಮಾಡುವ ಮೂಲಕ ಪಾಲಿಕೆ ಕಾರ್ಯವೈಖರಿಯ ಗುಣ ಮಟ್ಟ ಹೆಚ್ಚಿಸಬೇಕೆಂದು ಇದೇ ಸಂದರ್ಭ ಅಧಿಕಾರಿ ಗಳಿಗೆ ಕಿವಿಮಾತು ಹೇಳಿದರು. ಚುನಾವಣಾ ಸಿದ್ಧತೆ ಸಂಬಂಧಿಸಿದಂತೆ ಪ್ರತ್ಯೇಕ ಸಭೆ ನಡೆಸುತ್ತೇನೆ. ಅಗತ್ಯ ಎಲ್ಲಾ ಅಂಕಿ- ಅಂಶಗಳನ್ನೂ ತಯಾರಿಸಿಕೊಂಡು ಸಿದ್ಧರಾಗಿರಿ ಎಂದೂ ಕಮಿಷ್ನರ್ ತಿಳಿಸಿದರು.

ನಗರಪಾಲಿಕೆ ಸೂಪರಿಂಟೆಂಡಿಂಗ್ ಇಂಜಿನಿಯರ್ ಜಿ.ಆರ್.ಸುರೇಶ್, ಎಕ್ಸಿಕ್ಯೂಟಿವ್ ಇಂಜಿನಿಯರ್‍ಗಳಾದ ನಾಗರಾಜ್, ಮಹೇಶ್, ನಗರ ಯೋಜನಾ ಜಂಟಿ ನಿರ್ದೇ ಶಕ ರಮೇಶ, ಪಶುಪಾಲನಾ ಉಪನಿರ್ದೇಶಕ ಡಾ. ಸುರೇಶ, ಆರೋಗ್ಯಾಧಿಕಾರಿ ಡಾ.ನಾಗರಾಜ್, ಕಂದಾ ಯಾಧಿಕಾರಿ ಕುಮಾರ್ ನಾಯಕ್ ಸೇರಿದಂತೆ ಎಲ್ಲಾ ವಿಭಾಗಗಳ ಮುಖ್ಯಸ್ಥರು ಸಭೆಯಲ್ಲಿ ಹಾಜರಿದ್ದರು.

Translate »