ಸಿಂಗಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಉತ್ಸವ
ಮೈಸೂರು

ಸಿಂಗಾಪುರದಲ್ಲಿ ನಾಡಪ್ರಭು ಕೆಂಪೇಗೌಡರ ಉತ್ಸವ

February 19, 2019

ಮೈಸೂರು: ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ದಶಮಾ ನೋತ್ಸವದ ಅಂಗವಾಗಿ ಫೆ.23ರಂದು ಸಿಂಗಾಪುರದಲ್ಲಿ ಆಯೋಜಿಸಿರುವ `ನಾಡಪ್ರಭು ಕೆಂಪೇಗೌಡರ 2ನೇ ಅಂತಾ ರಾಷ್ಟ್ರೀಯ ಉತ್ಸವ’ ಹಾಗೂ `ಕನ್ನಡೋ ತ್ಸವ’ಕ್ಕೆ ಮೈಸೂರು ನಗರ ಮತ್ತು ಜಿಲ್ಲೆ ಯಿಂದ ನೂರಾರು ಮಂದಿ ಸೋಮ ವಾರ ಪ್ರಯಾಣ ಬೆಳೆಸಿದರು.

ಮೈಸೂರಿನ ಕುವೆಂಪುನಗರದ ಬಂದಂ ತಮ್ಮ ಕಾಳಮ್ಮ ಸಮುದಾಯ ಭವನದ ಬಳಿ ಅವರನ್ನು ಶಾಸಕ ಎಲ್.ನಾಗೇಂದ್ರ ಬೀಳ್ಕೊಟ್ಟರು. ಮೈಸೂರು ಮಹಾನಗರ ಪಾಲಿಕೆ ಸದಸ್ಯರಾದ ಕೆ.ವಿ.ಶ್ರೀಧರ್, ಶಿವಕುಮಾರ್, ಕೆವಿಸಿ ಇಂಟರ್‍ನ್ಯಾಷ ನಲ್ ಸ್ಕೂಲ್‍ನ ಅಧ್ಯಕ್ಷ ಕೆ.ಸಿ.ಎನ್.ಚಂದ್ರ ಶೇಖರ್, ವಿಶ್ವ ಒಕ್ಕಲಿಗರ ಮಹಾ ವೇದಿಕೆಯ ಮೈಸೂರು ಶಾಖೆ ಸಂಚಾಲಕ ಸಿದ್ದರಾಜು ಸೇರಿದಂತೆ ನೂರಾರು ಮಂದಿ ಸಿಂಗಾಪುರಕ್ಕೆ ಪ್ರವಾಸ ಕೈಗೊಂಡಿ ದ್ದಾರೆ. ಇಂದು ಬೆಂಗಳೂರಿಗೆ ಖಾಸಗಿ ಬಸ್‍ನಲ್ಲಿ ತೆರಳಿರುವ ಪ್ರಯಾಣಿಕರು ಬಳಿಕ ವಿಮಾನದ ಮೂಲಕ ಸಿಂಗಾ ಪುರ್‍ನತ್ತ ಪ್ರಯಾಣಿಸಲಿದ್ದಾರೆ.

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಪರಿಚಯಿಸುವ ಮುಖ್ಯ ಉz್ದÉೀಶ ದೊಂದಿಗೆ ಏರ್ಪಡಿಸಿರುವ ಉತ್ಸವ ಇದಾಗಿದ್ದು, ಇದೇ ವೇಳೆ ಖ್ಯಾತ ಚಲನ ಚಿತ್ರ ನಟ ಅಂಬರೀಷ್ ಅವರಿಗೆ ನುಡಿ ನಮನ ಸಲ್ಲಿಸಲಾಗುತ್ತದೆ. ಸಾವಿರಾರು ಕನ್ನಡಿಗರು, ನೃತ್ಯ, ನಾಟಕ, ಜನಪದ ನೃತ್ಯಗಳ ಮೂಲಕ ಸಿಂಗಪೂರದಲ್ಲಿ ಕನ್ನಡ ಕಂಪು ಚೆಲ್ಲಲಿದ್ದಾರೆ.

Translate »